Friday, October 7, 2022
Powertv Logo
Homeಸಿನಿಮಾಹೊಸ ಚಿತ್ರದ ಸುಳಿವು ಬಿಟ್ಟುಕೊಟ್ಟ ಶಿವಣ್ಣ ; ಬರಲಿದೆಯಾ ಅಂಡಮಾನ್ -2?

ಹೊಸ ಚಿತ್ರದ ಸುಳಿವು ಬಿಟ್ಟುಕೊಟ್ಟ ಶಿವಣ್ಣ ; ಬರಲಿದೆಯಾ ಅಂಡಮಾನ್ -2?

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ನಟನೆಯ ದ್ರೋಣ ತೆರೆಮೇಲೆ ಬರೋಕೆ ಸಿದ್ಧವಾಗ್ತಿದೆ. ಇದರ ಬೆನ್ನಲ್ಲೇ ಅವರ ಮುಂದಿನ ಚಿತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. 

ಶಿವಣ್ಣ ಟ್ವಿಟರ್​ನಲ್ಲಿ ತಮ್ಮ ಹೊಸ ಸಿನಿಮಾದ ಗೆಟಪ್‌ವೊಂದರ ಫೋಟೋವನ್ನು ಪೋಸ್ಟ್ ಮಾಡಿ ಇದು ನನ್ನ ಮುಂದಿನ ಚಿತ್ರದ ಸುಳಿವು ಎಂದು ಬರೆದುಕೊಂಡಿದ್ದಾರೆ. ಇನ್ನು ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಪೋಸ್ಟ್​ನಲ್ಲಿ ನೌಕಾಪಡೆಯ ಬಿಳಿಬಣ್ಣದ ಕ್ಯಾಪ್ ಧರಿಸಿ ಕ್ಯಾಪ್ಟನ್​ನಂತೆ ಕಾಣುತ್ತಿದ್ದು, ಈ ಫೋಟೋ ನೋಡಿದ ಹಲವರು ಇದು ‘ಆರ್​ಡಿಎಕ್ಸ್‘ ಚಿತ್ರಕ್ಕೆ ಸಂಬಂಧಿಸಿದ್ದು ಎಂದಿದ್ದಾರೆ.

‘ಆರ್​ಡಿಎಕ್ಸ್ ‘ ಸಿನಿಮಾದ ಮುಹೂರ್ತ ಈಗಾಗಲೆ ನಡೆದಿದ್ದು, ಅದರಲ್ಲಿ ಶಿವರಾಜ್​ಕುಮಾರ್ ಪೊಲೀಸ್ ಆಫೀಸರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ಶೇಡ್ ಕೂಡ ಇದ್ದು ಅದಿನ್ನು ರಿವೀಲ್ ಆಗಿಲ್ಲ. ಆದರೆ, ನೌಕಾಪಡೆಯ ಕ್ಯಾಪ್ಟನ್​ ಅಲ್ಲ ಅನ್ನೋದು ಕೂಡ ಚಿತ್ರತಂಡ ಖಚಿತ ಪಡಿಸಿದೆ. ಹೀಗಾಗಿ ಹೊಸ ಸಿನಿಮಾ ಯಾವ್ದು ಅನ್ನೋ ಕುತೂಹಲ ಎಲ್ಲರದ್ದು. ಅಂಡಮಾನ್ -2 ಇರಬಹುದೇ? 

LEAVE A REPLY

Please enter your comment!
Please enter your name here

- Advertisment -

Most Popular

Recent Comments