ರಾಜಧಾನಿಯಲ್ಲಿ ಮತ್ತೆ ಆರೋಗ್ಯ ತುರ್ತು ಪರಿಸ್ಥಿತಿ ಆತಂಕ!

0
237

ನವದೆಹಲಿ : ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ದಿನೇ ದಿನೇ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು, ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯಾಗುವ ಪರಿಸ್ಥಿತಿ ಎದುರಾಗಿದೆ.
ದೆಹಲಿ ಮತ್ತು ಆಸುಪಾಸಿನ ವಿವಿಧ ಪ್ರದೇಶದಲ್ಲಿ ವಾಯು ಸೂಚ್ಯಂಕ ಬುಧವಾರ 440 ರಿಂದ 470ರಷ್ಟು ದಾಖಲಾಗಿದೆ. ವಾಯು ಸೂಚ್ಯಂಕ 500ರ ಗಡಿ ದಾಟಿದರೆ ಅಪಾಯಕಾರಿ ಎಂದು ಪರಿಗಣಿಸಿ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಲಾಗುತ್ತದೆ.
ಈ ತಿಂಗಳ ಆರಂಭದ ಐದು ದಿನ (ನವೆಂಬರ್ 1 ರಿಂದ ನವೆಂಬರ್ 5ರ ವರೆಗೆ ) ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು.
ಕೃಷಿ ತ್ಯಾಜ್ಯ ಸುಡುವಿಕೆ ಕಾರಣ : ದಿಲ್ಲಿಯಲ್ಲಿ ವಾಯುಮಾಲಿನ್ಯ ಈ ವರ್ಷ ಅಪಾಯದ ಮಟ್ಟ ಮೀರಿ ತೀವ್ರವಾಗಿ ಕಾಡುವುದಕ್ಕೆ ಮೂಲ ಕಾರಣ ಪಂಜಾಬ್​, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ಕೃಷಿ ಕಳೆಗಳನ್ನು ಸುಡುತ್ತಿರುವುದು ಎಂದು ಹೇಳಲಾಗಿದೆ. ಇದರಿಂದ ಮಾಲಿನ್ಯ ಪ್ರಮಾಣ ಶೇಕಡಾ 44-55 ರಷ್ಟು ಹೆಚ್ಚಾಗುತ್ತಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಪ್ರಶಾಂತ್​ ಜಿ ಹೇಳಿದ್ದಾರೆ
ಕೇಂದ್ರ ಸರ್ಕಾರಕ್ಕೆ ಸುಪ್ರಿಂ ತರಾಟೆ : ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳದಿರುವ ಬಗ್ಗೆ ಸುಪ್ರಿಂ ಕೊರ್ಟ್​ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಡಿದೆ. ವಾಯು ಮಾಲಿನ್ಯದಿಂದ ಉತ್ತರ ಭಾರತದ ರಾಜ್ಯಗಳು ತತ್ತರಿಸುತ್ತಿರುವಾಗ ಅಸಡ್ಡೆ ಸಲ್ಲದು ಎಂದು ಸಿಜೆಐ ರಂಜನ್​ ಗೊಗೋಯ್ ನೇತೃತ್ವದ ನ್ಯಾಯಪೀಠವು ಹೇಳಿದೆ.
ಸರ್ಕಾರದ ಪರ ಸಾಲಿಸಿಟರ್​ ಜನರಲ್ ತುಷಾರ್​ ಮೆಹ್ತಾ ಅವರು ವಾಯು ಮಾಲಿನ್ಯ ನಿಯಂತ್ರಣಕ್ಕೆ ಜಪಾನ್​ ವಿಶ್ವವಿದ್ಯಾಲಯವೊಂದು ಹೈಡ್ರೋಜನ್​ ಆಧಾರಿತ ಇಂಧನ ತಂತ್ರಜ್ಞನವನ್ನು ಅಭಿವೃದ್ಧಿ ಪಡಿಸಿದ್ದು, ಇದರ ಬಳಕೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದಾಗ , ನ್ಯಾಯಪೀಠವು , ತಡಮಾಡದೇ ಈ ಬಗ್ಗೆ ಕ್ರಮ ಕೈಗೊಳ್ಳಿ. ಈ ತಂತ್ರಜ್ಞಾನದ ಜಾರಿಯ ಕುರಿತಂತೆ ಡಿಸೆಂಬರ್​ 3ರೊಳಗೆ ಮಾಹಿತಿ ನೀಡಿ ಎಂದು ನಿರ್ದೇಶನ ನೀಡಿತು.

LEAVE A REPLY

Please enter your comment!
Please enter your name here