Home ರಾಜ್ಯ ‘ಅವಧಿ ಮುಗಿದಿರುವ ಔಷಧಗಳ ರಾಶಿ ತೊಂದರೆಯಾಗುವ ಮುನ್ನ ಕ್ಲೀನ್ ಮಾಡಿಸಿದ ಪಾಲಿಕೆ’

‘ಅವಧಿ ಮುಗಿದಿರುವ ಔಷಧಗಳ ರಾಶಿ ತೊಂದರೆಯಾಗುವ ಮುನ್ನ ಕ್ಲೀನ್ ಮಾಡಿಸಿದ ಪಾಲಿಕೆ’

ಶಿವಮೊಗ್ಗ: ಖಾಲಿ ಜಾಗವೊಂದರಲ್ಲಿ ಅವಧಿ ಮುಗಿದಿರುವ ರಾಶಿಗಟ್ಟಲೇ, ಔಷಧಗಳನ್ನು ಬೀಸಾಡಿ ಹೋಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ನಗರದ ಗೋಪಾಳಗೌಡ ಬಡಾವಣೆಯಲ್ಲಿಯೇ ಈ ಘಟನೆ ನಡೆದಿದ್ದು, ಇಲ್ಲಿನ ಡಿವಿಜಿ ವೃತ್ತದ ಕೇಕ್ ಕೆಫೆ ಹಿಂಭಾಗದ ಖಾಲಿ ಜಾಗದಲ್ಲಿ ಈ ರೀತಿ ಅವಧಿ ಮುಗಿದಿರುವ ಔಷಧಗಳು, ಮಾತ್ರೆಗಳು ಹಾಗೂ ಇಂಜೆಕ್ಷನ್ ಗಳ ರಾಶಿಯನ್ನು ಸುರಿದು ಹೋಗಲಾಗಿದೆ.  ನಗರದ ಯಾವುದೋ ಮೆಡಿಕಲ್ ಶಾಪ್ ನ ಔಷಧಗಳೆಂದು ಹೇಳಲಾಗುತ್ತಿದ್ದು, ಯಾರು ಇಲ್ಲಿ ತಂದು ಔಷಧಗಳ ರಾಶಿ ಸುರಿದು ಹೋಗಿದ್ದಾರೆ ಎಂಬುದು ತನಿಖೆ ನಡೆಸಬೇಕಿದೆ.  ಇದು ಸ್ಪಷ್ಟವಾಗಿ, ಪರಿಸರ ಮಾಲಿನ್ಯದ ಕಾನೂನು ಉಲ್ಲಂಘನೆಯಾಗಿದ್ದು, ಸ್ಥಳಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಔಷಧ ನಿಯಂತ್ರಣಾಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.  ಅಲ್ಲದೇ, ಕೂಡಲೇ ಜೆಸಿಬಿ ತರಿಸಿ, ಔಷಧಗಳ ರಾಶಿಯನ್ನು ತೆಗೆಸಿ, ಸ್ಥಳವನ್ನು ಶುಚಿಗೊಳಿಸಿದ್ದಾರೆ.

ಇನ್ನೂ ಅವಧಿ ಮುಗಿದಿರುವ ಔಷಧಗಳನ್ನ ಪ್ರತ್ಯೇಕವಾಗಿ ಒಣ ಹಾಗೂ ಹಸಿ ಕಸವೆಂದು ಬೇರ್ಪಡಿಸಬೇಕೆಂಬ ಪಾಲಿಕೆಯ ನಿಯಮವಿದ್ದರೂ ಕೂಡ, ನಿಯಮವನ್ನು ಮೀರಿ ಇಲ್ಲಿ ಔಷಧಗಳ ರಾಶಿ ತಂದು ಹಾಕಲಾಗಿದೆ.  ಹಸು, ನಾಯಿ, ಸೇರಿದಂತೆ, ಯಾವುದಾದರೂ ಪ್ರಾಣಿಗಳು ಇವನ್ನು ಸೇವಿಸಿದರೂ, ಪ್ರಾಣಕ್ಕೆ ಹಾನಿಯಾಗಲಿದ್ದು, ಬೇರ್ಪಡಿಸಿದ ಈ ರೀತಿ ಔಷಧಗಳನ್ನ ಶುಶೃತ ಫೌಂಡೇಷನ್ ಸಂಸ್ಥೆಗೆ ನಿರ್ವಹಣೆಗೆ ನೀಡಬೇಕು.  ಆದರೂ, ನಿಯಮ ಉಲ್ಲಂಘಿಸಿ, ಯಾವುದೋ ಔಷಧಂಗಡಿ ಮಾಲೀಕರು ಇಲ್ಲಿ ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ.  ಅದರಂತೆ, ಈ ಔಷಧಗಳ ರಾಶಿಯಲ್ಲಿ ಇವೆ, ಬಿಪಿ, ಹಾಗೂ ಅಸಿಡಿಟಿ, ಹೊಟ್ಟೆನೋವಿಗೆ ಸಂಬಂಧಪಟ್ಟ ಮಾತ್ರೆಗಳು, ಸಿರಪ್ ಗಳಿದ್ದು, ಯಾರಿಗಾದರೂ ತೊಂದರೆಯಾಗುವ ಮುನ್ನವೇ, ಪಾಲಿಕೆ ಆಯುಕ್ತರು ಸ್ಥಳವನ್ನು ಕ್ಲೀನ್ ಮಾಡಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

‘ಗದಗನಲ್ಲಿ ಕಾಲೇಜ್ ಓಪನ್ ರೂಲ್ಸ್ ಬ್ರೇಕ್’

ಗದಗ: 10 ತಿಂಗಳ ನಂತರ ರಾಜ್ಯದಲ್ಲಿ ಪದವಿ ಕಾಲೇಜುಗಳು ಸಂಪೂರ್ಣ ಆರಂಭವಾಗಿವೆ. ಆದರೆ ಗದಗ ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಸರ್ಕಾರದ ಕೊರೋನಾ ರೂಲ್ಸ್ ಗಳು ಪಾಲನೆ ಆಗುತ್ತಿಲ್ಲ. ಚಿಕ್ಕ...

‘ವಿಶ್ವ ಹಿಂದು ಪರಿಷತ, ಭಜರಂಗದಳ ನೇತೃತ್ವದಲ್ಲಿ ನಿಧಿ ಸಂಗ್ರಹಣೆ’

ಗದಗ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಗದಗ ಜಿಲ್ಲೆಯಲ್ಲಿ ಕೂಡ ನಿಧಿ ಸಂಗ್ರಹಣೆ ಕಾರ್ಯ ನಡೆಯಿತು. ವಿಶ್ವ ಹಿಂದು ಪರಿಷತ, ಭಜರಂಗದಳ ನೇತೃತ್ವದಲ್ಲಿ ನಿಧಿ ಸಂಗ್ರಹಣೆಗೆ ಮುಂದಾಗಿದ್ದಾರೆ. ನಗರದ ಜೋಡು ಮಾರುತೇಶ್ವರ ದೇವಸ್ಥಾನದಲ್ಲಿ...

ಸಿಎಂ ಅವರ ಸಿಡಿ ಇದ್ರೆ ಕೊಡಿ, ಸುಮ್ನೆ ಹೆದರಿಸುವದು ಏಕೆ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ರಾಜಕಾರಣದಲ್ಲಿ ಆಸೆ ಇರುವದು ತಪ್ಪಲ್ಲ. ಆದರೆ ಬಹಿರಂಗ ಹೇಳಿಕೆ ನೀಡುವದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಶಾಸಕ ಅಸಮಾಧಾನವನ್ನು ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ. ಆದರೆ...

‘ಹುಬ್ಬಳ್ಳಿ ಚನ್ನಮ್ಮ ವೃತ್ತದ ಮೇಲು ರಸ್ತೆ ನಿರ್ಮಾಣ ಶಿಲಾನ್ಯಾಸ’

ಹುಬ್ಬಳ್ಳಿ: 298 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 63, 218 ಹಾಗೂ 4 ನ್ನು ಸಂಪರ್ಕಿಸುವ 3.6 ಕೀ.ಮೀ ಉದ್ದದ ಚೆನ್ನಮ್ಮ ವೃತ್ತದ ಮೇಲು ರಸ್ತೆ, 25 ಕೋಟಿ ವೆಚ್ಚದಲ್ಲಿ ಕಲಘಟಗಿ ರಾಷ್ಟ್ರೀಯ...

Recent Comments