Home ರಾಜ್ಯ ‘ಸಂಸದ ರಾಘವೇಂದ್ರ ಬಳಿ ತಮ್ಮ ಅಳಲು ತೋಡಿಕೊಂಡ ಪೌರಕಾರ್ಮಿಕರು’

‘ಸಂಸದ ರಾಘವೇಂದ್ರ ಬಳಿ ತಮ್ಮ ಅಳಲು ತೋಡಿಕೊಂಡ ಪೌರಕಾರ್ಮಿಕರು’

ಶಿವಮೊಗ್ಗ: ಸ್ವಾಮಿ ನಿನ್ನೆ ಮೊನ್ನೆ ಸೇರಿಕೊಂಡವರಿಗೆ ಪರ್ಮನೆಂಟ್ ಆಗಿದೆ.  ನಮಗೂ ಮಾಡಿ.  ನಮ್ಮ ಮಕ್ಕಳು ಸಣ್ಣವರಿದ್ದಾಗಿನಿಂದಲೂ, ಕೆಲಸ ಮಾಡುತ್ತಿದ್ದೇವೆ.  ಆದರೂ ನಮ್ ಕಡೆ ಯಾರು ನೋಡ್ತಾ ಇಲ್ಲ.  ಹೀಗೆ ಸಿ.ಎಂ. ಪುತ್ರ ಮತ್ತು ಸಂಸದ ಬಿ.ವೈ. ರಾಘವೇಂದ್ರ ಬಳಿ, ಶಿವಮೊಗ್ಗ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.   

ಇಂದು ಶಿವಮೊಗ್ಗದ ಗಾಂಧಿ ಪಾರ್ಕ್ ನಲ್ಲಿ, ಪೌರ ಕಾರ್ಮಿಕರನ್ನು ಸಂಸದ ಬಿ.ವೈ. ರಾಘವೇಂದ್ರ ಭೇಟಿ ಮಾಡಿದ ಸಂದರ್ಭದಲ್ಲಿ, ಪೌರ ಕಾರ್ಮಿಕರು ತಮ್ಮ ಮನವಿಯನ್ನು ಸಲ್ಲಿಸಿದರು. ನಮಗೂ ಪರ್ಮನೆಂಟ್ ಮಾಡಿ ಎಂದು ಅಳಲು ತೋಡಿಕೊಂಡ ಪೌರ ಕಾರ್ಮಿಕರು, ಈಗಾಗಲೇ, 250 ಪರ್ಮನೆಂಟ್ ಪೌರ ಕಾರ್ಮಿಕರಿದ್ದಾರೆ.  ಅವರ ಜೊತೆ ನಮಗೂ ಸೇರಿಸಿ .  ಅವರ ಹಾಗೆ ನಾವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ ತಮ್ಮ ಅಳಲನ್ನು ಹೇಳಿಕೊಂಡರು.  ಈ ವೇಳೆ ಭರವಸೆ ನೀಡಿದ ಸಂಸದ ರಾಘವೇಂದ್ರ, ಪೌರ ಕಾರ್ಮಿಕರು ಎಂದಿಗೂ ಒಳ್ಳೆಯದು ಮಾತನಾಡಿ.  ಅಲ್ಲದೇ, ಡಿ. 28 ರಂದು ನಗರಾಭಿವೃದ್ಧಿ ಸಚಿವ ಭೈರತಿ ಬಸರವರಾಜ್ ಅವರು, ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ.  ಈ ವೇಳೆ ಅವರ ಬಳಿ ನಿಮ್ಮ ಕಷ್ಟ ಮಾತನಾಡಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಇದಕ್ಕೂ ಸುಮ್ಮನಾಗದ ಪೌರಕಾರ್ಮಿಕರು, ನಮಗೆ ಸರ್ಕಾರಿ ರಜೆ ಕೂಡ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಕಳೆದ ಹತ್ತಾರು ವರ್ಷಗಳಿಂದ ಕೆಲಸ ಮಾಡಿದರೂ ಕೂಡ, ನಮಗೆ ಭದ್ರತೆ ಇಲ್ಲ ಎಂದು ಪೌರ ಕಾರ್ಮಿಕರ ಅಳಲು ತೋಡಿಕೊಂಡರು.  ಆದಷ್ಟು ಬೇಗ ನಮಗೆ ಸರ್ಕಾರದಿಂದ ಸೇವಾ ಭದ್ರತೆ ಒದಗಿಸಿಕೊಡಿ.  500 ರೂ. ನಿಂದ ನಾವು ಇದುವರೆಗೂ ಕೆಲಸ ಮಾಡಿಕೊಂಡು ಬರುತ್ತಿದ್ದರೂ, ಇದುವರೆಗೂ ನಮಗೆ ಭದ್ರತೆಯಾಗಲೀ, ಪರ್ಮನೆಂಟ್ ಆಗಲೀ ಮಾಡಿಲ್ಲ.  ಈಗಲಾದರೂ ಮಾಡಿಕೊಡಿ ಸ್ವಾಮಿ ಅಂತಾ ಸಂಸದರ ಬಳಿ, ಮನವಿ ಮಾಡಿಕೊಂಡರು.

LEAVE A REPLY

Please enter your comment!
Please enter your name here

- Advertisment -

Most Popular

ಕರೋನಾ ಲಸಿಕೆ ಬಂದಿರುವುದು ಸಂತೋಷ : ಯು.ಟಿ.ಖಾದರ್

ಬೆಂಗಳೂರು: ಕೊರೋನಾ ಲಸಿಕೆ ವಿತರಣಾ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಖಾರವಾಗಿ ಟ್ವೀಟ್ ಮಾಡಿದ್ದಾರೆ. ಕೊರೊನಾ ಲಸಿಕೆ ಬಂದಿರುವುದು ಸಂತೋಷ. ಆದರೆ ಮೊದಲು ಗ್ರೂಪ್ ಡಿ ನೌಕರರ ಮೇಲೆ ಯಾಕೆ ಪ್ರಯೋಗ ಮಾಡಬೇಕು....

‘ರಾಜ್ಯದಲ್ಲಿ ಕೊರೋನಾ ಲಸಿಕೆ ವಿತರಣೆ’

ಕಲಬುರಗಿ: ಕಲಬುರಗಿಯಲ್ಲಿ ನಗರದ ಜಿಮ್ಸ್ ಕಾಲೇಜಿನಲ್ಲಿ ಸಂಸದ ಉಮೇಶ್ ಜಾಧವ್ ಕೊವಿಡ್ ವ್ಯಾಕ್ಸಿನ್ ಗೆ ಚಾಲನೆ ನೀಡಿದರು. ಜಿಲ್ಲೆಯ 8 ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ ಗೆ ಚಾಲನೆ ನೀಡಲಾಯಿತು. ಒಂದು ಕೇಂದ್ರದಲ್ಲಿ 100...

‘ಡಿ ಗ್ರೂಪ್‌ ನೌಕರ ಚಂದ್ರಶೇಖರ್‌ಗೆ ಮೊದಲ ಲಸಿಕೆ ವಿತರಣೆ’

ಬೆಂಗಳೂರು: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಸಿಕಾ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಅಟೆಂಡರ್ ನಾಗರತ್ನಾಗೆ ಲಸಿಕೆ ನೀಡಿ  ಹೂ ಗುಚ್ಛ ನೀಡಿ ಅಭಿನಂದಿಸಿದರು. ಜೊತೆ ಆರೋಗ್ಯ...

‘ಲಸಿಕೆ ವಿತರಣೆಗೆ ಚಾಲನೆ ಕೊಟ್ಟ ಪ್ರಧಾನಿ ಮೋದಿ’

ಬೆಂಗಳೂರು: ಜಗತ್ತಿನ ಅತಿ ದೊಡ್ಡ ಕೊವಿಡ್ ಲಸಿಕೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದರು. ಅತಿ ಕಡಿಮೆ ದಿನದಲ್ಲಿ ಮಹಾಮಾರಿ ಕೊರೋನಾ ಗೆ ವಿಜ್ಞಾನಿಗಳು ಎರಡು ಲಸಿಕೆಯನ್ನು ಸಿದ್ಧ ಪಡಿಸಿದ್ದಾರೆ....

Recent Comments