ಟ್ವಿಟರ್​ನಲ್ಲಿ ಹೆಸರು ಬದಲಾಯಿಸಿಕೊಂಡ ಪ್ರಧಾನಿ ಮೋದಿ..!

0
162

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಅವರು ಟ್ವಿಟರ್​ನಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಯಾಕೆ ಬದಲಾಯಿಸಿಕೊಂಡ್ರು, ಏನಂತ ಬದಲಾಯಿಸಿಕೊಂಡ್ರು ಅಂತ ಅಚ್ಚರಿಯಾಗ್ತಿದ್ಯಾ..? ಮೋದಿ ಹಾಗೂ ಅಮಿತ್​ ಶಾ ಅವರ ಟ್ವಿಟರ್​ ಹೆಸರಿನ ಮುಂದೆ ‘ಚೌಕಿದಾರ್​’ ಅಂತ ಸೇರಿಸಲಾಗಿದೆ. ಹಿಂದೆ ನರೇಂದ್ರ ಮೋದಿ ಅಂತಷ್ಟೇ ಇತ್ತು. ಈಗ ಚೌಕಿದಾರ್ ನರೇಂದ್ರ ಮೋದಿ ಅಂತ ಮಾಡಲಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ ಪ್ರಧಾನಿಯವರು ನಿನ್ನೆಯಷ್ಟೇ ‘ಮೇ ಭೀ ಚೌಕಿದಾರ್’ ಅಭಿಯಾನಕ್ಕೆ ಚಾಲನೆ ನೀಡಿದ್ದರು. ‘ಮೇ ಭೀ ಚೌಕಿದಾರ್’ ಅನ್ನೋ ಟ್ಯಾಗ್​ಲೈನ್​ ಅಡಿಯಲ್ಲಿ ಪ್ರಧಾನಿ ಟ್ವಿಟರ್​ಗೆ ಅಪ್​ಲೋಡ್​ ಮಾಡಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ತಮ್ಮನ್ನು ತಾವು ಚೌಕೀದಾರ್​ ಅಂದ ಮೋದಿ, ದೇಶದ ಹಿತಾಸಕ್ತಿಗಳನ್ನು ಕಾಯುವ ಚೌಕೀದಾರ ನಾನು ಅಂತ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here