Home ಸಿನಿ ಪವರ್ ಸ್ಯಾಂಡಲ್ ವುಡ್ `ಎಳೆಯರು ಗೆಳೆಯರು’ ಡೈರೆಕ್ಟರ್ `ಚೌಕಾಬಾರ’ದಲ್ಲಿ ಬ್ಯುಸಿ..!

`ಎಳೆಯರು ಗೆಳೆಯರು’ ಡೈರೆಕ್ಟರ್ `ಚೌಕಾಬಾರ’ದಲ್ಲಿ ಬ್ಯುಸಿ..!

`ಎಳೆಯರು ನಾವು ಗೆಳೆಯರು’ ಅನ್ನೋ ಮಕ್ಕಳ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿ,  ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾಕ್ಕೇ ರಾಜ್ಯಪ್ರಶಸ್ತಿ ಪಡೆದ ವಿಕ್ರಮ್ ಸೂರಿ ಇದೀಗ ನವಿರಾದ ಪ್ರೇಮಕಥೆ ಹೇಳಲು ಹೊರಟಿದ್ದಾರೆ. ಅದುವೇ ಚೌಕಾಬಾರ!

ಮಣಿರಾವ್​ ಅವರ ಭಾವನಾ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ವಿಕ್ರಮ್ ಅವರ ಪತ್ನಿ ನಮಿತಾ ರಾವ್ ನಾಯಕಿಯಾಗಿ ನಟಿಸುವುದರ ಜೊತೆಗೆ ಬಂಡವಾಳ ಕೂಡ ಹಾಕುತ್ತಿದ್ದಾರೆ. ವಿಕ್ರಮ್ ಸೂರಿ – ನಮಿತಾ ರಾವ್ ದಂಪತಿಯ ` ನಮಿ ನಿರ್ಮಿತಿ’ ಬ್ಯಾನರ್​ನಲ್ಲಿ ಚಿತ್ರ ನಿರ್ಮಾಣವಾಗ್ತಿದೆ. 

ಚೌಕಾಬಾರ ಯುವಪೀಳಿಗೆ ಮತ್ತವರ ಸ್ನೇಹ – ಪ್ರೀತಿ ಪರಿಕಲ್ಪನೆ ಸುತ್ತ ಸುತ್ತುವ ಚಿತ್ರ. ನಾಲ್ವರು ಸ್ನೇಹಿತರ ನಡುವೆ ನಡೆಯುವ ಕಥೆಯಿದು. ಕಥಾವಸ್ತು ಮತ್ತು ಪಾತ್ರಗಳಿಗೆ ಹೊಂದಾಣಿಕೆಯಾಗುವಂತೆ ಶೀರ್ಷಿಕೆ ಇಟ್ಟಿದ್ದೇವೆ.  ಕಾದಂಬರಿಯ ಭಾವನ ಪಾತ್ರದಲ್ಲಿ ನಮಿತಾ ರಾವ್ ನಟಿಸುತ್ತಿದ್ದಾರೆ. ರಂಗಭೂಮಿ ಕಲಾವಿದ ಪ್ರಭಂಜನ್ ವಿಹಾನ್ ಈ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಡ್ತಿದ್ದಾರೆ. ಎರಡನೇ ನಾಯಕಿಯಾಗಿ ಕಾವ್ಯ ರಮೇಶ್, ಎರಡನೇ ನಾಯಕನಾಗಿ ಸುಜಯ್ ಹೆಗಡೆ ಅಭಿನಯಿಸುತ್ತಿದ್ದಾರೆ ಎಂದು  ಚಿತ್ರ, ಚಿತ್ರದಲ್ಲಿನ ಪಾತ್ರದ ಬಗ್ಗೆ ಹೇಳಿದ್ದಾರೆ ಡೈರೆಕ್ಟರ್ ವಿಕ್ರಮ್ ಸೂರಿ.

ನಿರ್ಮಾಪಕಿ + ನಾಯಕಿ : ಸಿಲ್ಲಿಲಲ್ಲಿ ಹಾಸ್ಯಧಾರವಾಹಿ ಖ್ಯಾತಿಯ ನಟಿ ನಮಿತಾರಾವ್ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. 2014ರಲ್ಲಿ ತೆರೆಕಂಡ ವೆಂಕಟಾಚಲ ನಿರ್ದೇಶನದ `ಚಿತ್ರಮಂದಿರದಲ್ಲಿ’ ಎಂಬ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ನಾಯಕಿಯಾಗಿ ಎಂಟ್ರಿಕೊಟ್ಟಿದ್ದ ನಮಿತಾ ರಾವ್​ ಬೆಳ್ಳಿತೆರೆ ಮತ್ತು ಕಿರುತೆರೆ ಎರಡಲ್ಲೂ ತಮ್ಮದೇಯಾದ ಛಾಪುಮೂಡಿಸಿದ್ದಾರೆ.   

 ಚೌಕಾಬಾರದ ತಮ್ಮ ಪಾತ್ರದ ಬಗ್ಗೆ ಮಾತನಾಡಿರೋ ನಮಿತಾ ರಾವ್,  “ ಭಾವನ ಪಾತ್ರದಲ್ಲಿ ನಾನು ನಟಿಸ್ತಿದ್ದೀನಿ. ಮನೆಯಲ್ಲಿ ಮುದ್ದಾಗಿ ಬೆಳೆದ ಹುಡ್ಗಿ… ಬೋಲ್ಡ್​ & ಬ್ಯೂಟಿಫುಲ್ ಹುಡ್ಗಿ… ಜೊತೆಗೆ ನೇರ ಮಾತುಗಾರ್ತಿ’’ ಅಂತ ತಿಳಿಸಿದ್ದಾರೆ.

ಒಟಿಟಿಯಲ್ಲಿ ರಿಲೀಸ್ : ಕೊರೋನಾ ಲಾಕ್​ಡೌನ್​ ಮುನ್ನವೇ ಸಿನಿಮಾ ಸೆಟ್ಟೇರಿದ್ದು, ಶೇ.80ರಷ್ಟು ಚಿತ್ರೀಕರಣ ಮುಗಿದಿದೆ. ಇನ್ನು ಏಳೆಂಟು ದಿನಗಳ ಶೂಟಿಂಗ್ ಬಾಕಿಯಿದೆ. ದಾಂಡೇಲಿ, ಕಾರವಾರ ಸುತ್ತಮುತ್ತ ಚಿತ್ರೀಕರಿಸುವ ಪ್ಲ್ಯಾನ್​ನಲ್ಲಿದೆ ಚಿತ್ರತಂಡ. ಸೆಪ್ಟೆಂಬರ್  ಅಥವಾ ಅಕ್ಟೋಬರ್​ನಲ್ಲಿ ಬಾಕಿ ಶೂಟಿಂಗ್ ಮುಗಿಸಿ, ಆದಷ್ಟು ಬೇಗ ಒಟಿಟಿಯಲ್ಲಿ ರಿಲೀಸ್ ಮಾಡಲು ಉದ್ದೇಶಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments