ದೀಪಾವಳಿಗೆ ಬಂತು ಬಾಯಲ್ಲಿ ಸಿಡಿಯುವ ಟೇಸ್ಟಿ ಪಟಾಕಿ!

0
387

ದೀಪಾವಳಿ ಹಬ್ಬಕ್ಕೆ ಇನ್ನೇನು ಕೌಂಟ್ ಡೌನ್ ಶುರುವಾಗಿದೆ. ಬೆಳಕಿನ ಹಬ್ಬ ಬಂತೆಂದರೆ ಸಾಕು ಎಲ್ಲೆಲ್ಲೂ ಪಟಾಕಿಗಳದ್ದೇ ಸದ್ದು. ಆದರೆ ಈ ಬಾರಿ ದೀಪಾವಳಿಗೆ ನೀವು ನಿಮ್ಮ ಫೇವರೇಟ್ ​ಪಟಾಕಿಯನ್ನು ವಿಭಿನ್ನವಾಗಿ ಸಿಡಿಸಬಹುದು! ಆದ್ರೆ ಸ್ವಲ್ಪ ಟ್ವಿಸ್ಟ್ ಏನಂದ್ರೆ ಇದು ಬಾಯಲ್ಲಿ ಸಿಡಿಯುತ್ತೆ…ಓ ಗಾಡ್​​…!
ಹೌದು, ಪಟಾಕಿ ಎಂದೊಡನೆ ತಟ್ಟನೆ ನೆನಪಾಗೋದು ಪಟ್ ಪಟ್ ಪಟ್ ಅಂತ ಹೊಡೆಯೋ ಬಿಜಲಿ, ಜೋರಾದ ಶಬ್ಧದಿಂದ ಎಲ್ಲರನ್ನು ಬೆರಗಾಗಿಸೋ ಲಕ್ಷ್ಮಿ ಬಾಂಬ್, ಹೈಡ್ರೋಜನ್ ಬಾಂಬ್ ಹಾಗೂ ಸರ ಪಟಾಕಿ. ಇನ್ನೊದೆಂಡೆ ಮೈ ಮರೆಸುವ ರಾಕೆಟ್ ಹಾಗೂ ಸುರ-ಸುರ ಬತ್ತಿ.
ಅಯ್ಯೋ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಸಿಕ್ಕಾಪಟ್ಟೆ ಸೌಂಡು ಮಾಡೋ ಪಟಾಕಿ ಹೊಡೆಯೋ ಹಾಗಿಲ್ಲ ಅಂತ ಬೇಸರಗೊಂಡಿರುವವರಿಗೆ ಈಗ ವಿಭಿನ್ನ ಪಟಾಕಿಗಳು ಥ್ರಿಲ್ ನೀಡಲಿವೆ.


ಯೆಸ್​, ಸುರ್ ಸುರ್ ಕಟ್ಟಿ ಚಾಕೊಲೇಟ್ಸ್ , ಚಾಕೋ ರಾಕೆಟ್, ಎಲಾಚಿ ಆಟೋ ಬಾಂಬ್ , ಚಾಕೋ ಚಕ್ರ, ಬಟರ್ ಸ್ಕಾಚ್ ಫ್ಲವರ್ ಪಾಟ್.. ಹೀಗೆ ವೆರೈಟಿ ವೆರೈಟಿ ಪಟಾಕಿಗಳು ಎಂಟ್ರಿಯಾಗಿವೆ! ನಿಜ ಇವೆಲ್ಲವೂ ಬಾಯಲ್ಲಿ ನೀರುತರಿಸೋ ಟೇಸ್ಟಿ ಚಾಕೊಲೇಟ್ಸ್. ಇದೇ ಮೊದಲ ಬಾರಿಗೆ ಬೆಂಗಳೂರಿನ ನಗರದ ಆಬ್ರಿ ಸಂಸ್ಥೆಯೊಂದು ಹೀಗೆ ಪಟಾಕಿ ಮಾದರಿಯಲ್ಲಿ ಚಾಕೋಲೆಟ್​ ತಯಾರಿಸಿ ಜನರಲ್ಲಿ ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಿದೆ.
‘ಪಟಾಕಿ ಹೊಡೆದು ಪರಿಸರಕ್ಕೆ ಹಾನಿ ಮಾಡಬೇಡಿ, ನಿಮ್ಮ ಕಣ್ಣನ್ನು ನೀವು ಸಂರಕ್ಷಿಸಿ ಕೊಳ್ಳಿ. ಪಟಾಕಿ ಸಿಡಿಸಿ ದೀಪಾವಳಿ ಆಚರಿಸೋ ಬದಲು ಸ್ವಲ್ಪ ವಿಭಿನ್ನವಾಗಿ ಸೆಲಬ್ರೇಟ್ ಮಾಡಿ. ಹಬ್ಬಕ್ಕೆ ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್​ಗಳಾಗಿ ಈ ಚಾಕೋ ಚಾಕೊಲೇಟ್​​ಗಳನ್ನು ಕೊಟ್ಟು ಪರಿಸರಸ್ನೇಹಿ ದೀಪಾವಳಿ ಆಚರಿಸಿ ಅಂತ ಆಬ್ರಿ ಸಂಸ್ಥೆಯವರು ಒಂದೊಳ್ಳೆ ಮೆಸೇಜ್ ಕೊಟ್ಟಿದ್ದಾರೆ.
ಅಂದಹಾಗೆ ಚಾಕೊಲೇಟ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡೋ ಚಾಕೊಲೇಟುಗಳು ಈಗ ಪಟಾಕಿ ಮಾದರಿಯಲ್ಲಿ ಲಗ್ಗೆಯಿಟ್ಟು, ಎಲ್ಲರನ್ನೂ ಮೋಡಿ ಮಾಡಿವೆ,
-ಸ್ವಾತಿ ಪುಲಗಂಟಿ

LEAVE A REPLY

Please enter your comment!
Please enter your name here