Home P.Special ಮಗನ ಕನಸಿಗೆ 'ಹೆಗಲು' ಕೊಟ್ಟ ಮಹಾತಾಯಿ : 8ನೇ ಕ್ಲಾಸ್​ ವಿದ್ಯಾರ್ಥಿಯನ್ನು 8ಕಿ.ಮೀ ಹೊತ್ತುಕೊಂಡು ಹೋಗುವ...

ಮಗನ ಕನಸಿಗೆ ‘ಹೆಗಲು’ ಕೊಟ್ಟ ಮಹಾತಾಯಿ : 8ನೇ ಕ್ಲಾಸ್​ ವಿದ್ಯಾರ್ಥಿಯನ್ನು 8ಕಿ.ಮೀ ಹೊತ್ತುಕೊಂಡು ಹೋಗುವ ಅಮ್ಮ!

ಚಿತ್ರದುರ್ಗ : ಜಗತ್ತಿನಲ್ಲಿ ತಾಯಿ ಪ್ರೀತಿಗೆ ಸರಿಸಾಟಿ ಯಾವುದಿದೆ ಹೇಳಿ ? ಮಮತೆ, ತ್ಯಾಗ, ಪ್ರೀತಿಗೆ ಮತ್ತೊಂದು ಹೆಸರೇ ತಾಯಿ.  ಅಮ್ಮನ ಪ್ರೀತಿ ಆಕಾಶಕ್ಕೂ ಎತ್ತರ, ಭೂಮಿಗಿಂತ ಭಾರ. ಇಲ್ಲೊಬ್ಬ ತಾಯಿ ತನ್ನ ಮಗನ ಜೀವನ ರೂಪಿಸಲು ಪಡುತ್ತಿರುವ ಕಷ್ಟ ನೋಡಿದ್ರೆ ನಿಮ್ಮ ಕಣ್ಣಾಲಿಗಳು ತೇವಗೊಳ್ಳುತ್ತವೆ. ಆಕೆಯ ಛಲ ಸ್ಫೂರ್ತಿಯಾಗುತ್ತದೆ. 

ಹುಟ್ಟತ್ತಲೇ ಮಗ ವಿಶೇಷಚೇತನ. ಮೂರು ವರ್ಷದ ಹಿಂದೆಯೇ ಗಂಡ ಕೂಡ ತೀರಿ ಹೋಗಿದ್ದಾರೆ. ಮೂರು ಮಕ್ಕಳ ಹೊಟ್ಟೆ ತುಂಬಿಸಲು ಕೈಯಲ್ಲಿರೋದು ಆ ತಾಯಿಗೆ ಕೂಲಿ-ನಾಲಿ ಕೆಲಸ ಮಾತ್ರ! ಇಷ್ಟೆಲ್ಲಾ ಕಷ್ಟಗಳ ನಡುವೆ ತನ್ನ ವಿಶೇಷ ಚೇತನ ಮಗುವಿನ ಓದಿಗಾಗಿ ಪ್ರತಿದಿನ ಸುಮಾರು ಎಂಟು ಕಿಲೋ ಮೀಟರ್ ಆತನನ್ನು ಹೆಗಲ ಮೇಲೆಯೇ ಹೊತ್ತುಕೊಂಡು ಹೋಗುತ್ತಿದ್ದಾರೆ ಈ ಮಹಾತಾಯಿ. 

ಮಗನಿಗಾಗಿ ‘ಹೆಗಲು’ಕೊಟ್ಟ ತಾಯಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಡುದರಹಳ್ಲಿಯ ಜಯಲಕ್ಷ್ಮಿ. ಇವರಿಗೆ ಮೂರು ಜನ ಮಕ್ಕಳು . ಮೊದಲ ಮಗ ವಿಶೇಷಚೇತನ. ಹೆಸರು ರಾಜೇಶ್ ಅಂತ. ಎಂಟನೇ ತರಗತಿ ವಿದ್ಯಾರ್ಥಿ.  ಓದಿನಲ್ಲಿ ಆಸಕ್ತಿ, ತುಡಿತ.  ಸ್ವಗ್ರಾಮದಲ್ಲಿ ಕೇವಲ ಏಳನೇ ತರಗತಿವರೆಗೆ ಮಾತ್ರ ಕಲಿಕೆಗೆ ಅವಕಾಶವಿದ್ದು ,ಮುಂದಿನ ವಿದ್ಯಾಭ್ಯಾಸಕ್ಕೆ ಬೇರೆಡೆ ಶಾಲೆಗೆ ಸೇರುವುದು ಅನಿವಾರ್ಯವಾಗಿತ್ತು.

ದೂರದ ಮಿರಾಸಾಬಿಹಳ್ಳಿ ರಾಣಿಕೆರೆ ಹೈಸ್ಕೂಲಿಗೆ ಎಂಟನೇ ತರಗತಿಗೆ ಸೇರಿಸಲಾಯಿತು . ಓಡಾಡಲು ರಾಜೇಶ್ ವಿಶೇಷಚೇತನ. ಸಾರಿಗೆ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಹಾಗಂತ ಮಗನ ಕನಸನ್ನು ನುಚ್ಚುನೂರು ಮಾಡಲು ತಾಯಿ ಸಿದ್ಧರಿಲ್ಲ. ಪ್ರತಿದಿನ ತನ್ನ ಮಗನನ್ನು 8 ಕಿ ಮೀ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಬರುತ್ತಾರೆ! ಮಗನ ಕನಸಿಗೆ ನೀರೆರೆಯುತ್ತಿರುವ ಈ ತಾಯಿ ನಿಜಕ್ಕೂ ಗ್ರೇಟ್ ಅಲ್ವೇನ್ರೀ? ಅಮ್ಮ ನಿಮಗೊಂದು ಸಲಾಂ.

 

 

LEAVE A REPLY

Please enter your comment!
Please enter your name here

- Advertisment -

Most Popular

ಸಿದ್ಧರಾಮಯ್ಯ ಟ್ವೀಟ್​ಗೆ ಕಿಡಿ ಕಾರಿದ ಈಶ್ವರಪ್ಪ..!

ಶಿವಮೊಗ್ಗ: ಬೆಂಗಳೂರು ಗಲಭೆ ಸಂಬಂಧ ವಿಪಕ್ಷ ನಾಯಕ ಸಿದ್ಧರಾಮಯ್ಯ ಟ್ವೀಟ್​ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ ಕಾರಿದ್ದಾರೆ. ಹಿಂದೂ ಗುರುಗಳು, ಮುಸ್ಲಿಂ ಹಿರಿಯರು ಶಾಂತಿ ಸ್ಥಾಪನೆಗೆ ಪ್ರಯತ್ನ ಮಾಡಿ ಎಂದು ಸಿದ್ಧರಾಮಯ್ಯ...

ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಪತ್ರ ಚಳುವಳಿ..!

ಕೊಪ್ಪಳ : ಪತ್ರಕರ್ತರ ಮೇಲೆ ನಡೆಯುವ ಹಲ್ಲೆಗಳು ತಡೆಗೆ ಕಾಯ್ದೆ ರೂಪಿಸಬೇಕು ಎಂದು ಕೊಪ್ಪಳ ಮೀಡಿಯಾ ಕ್ಲಬ್ ಪತ್ರಕರ್ತರು ಪತ್ರ ಚಳುವಳಿ ಆರಂಭಿಸಿದ್ದಾರೆ. ಪದೇ ಪದೇ ಪತ್ರಕರ್ತರ ಮೇಲೆ ಒಂದಲ್ಲ ಒಂದು ರೀತಿಯ ಹಲ್ಲೆಗಳು...

ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ರಾಜಕೀಯ ಕೈವಾಡ : ನಳೀನ್​ ಕಮಾರ್ ಕಟೀಲು

ಹುಬ್ಬಳ್ಳಿ : ಕೆ.ಜಿ ಹಳ್ಳಿ ಘಟನೆಯಲ್ಲಿ ಸರ್ಕಾರಿ ಆಸ್ತಿ ಪಾಸ್ತಿಗಳನ್ನು ಹಾನಿ ಮಾಡಲಾಗಿದೆ, ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಕಠಿಣ ಕ್ರಮಗೈಗೊಳ್ಳಬೇಕು. ಇದು ರಾಜಕೀಯ ಹುನ್ನಾರ, ರಾಜ್ಯದಲ್ಲಿ ಗಲಭೆ ಎಬ್ಬಿಸುವ...

ಕೆ.ಜಿ ಹಳ್ಳಿ ಗಲಭೆಗೆ ಗುಪ್ತಚರ ಇಲಾಖೆ ದುರ್ಬಲವಾಗಿರುವುದೇ ಕಾರಣ : ತನ್ವೀರ್ ಸೇಠ್

ಮೈಸೂರು : ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆಗೆ ರಾಜ್ಯದ ಗುಪ್ತಚರ ಇಲಾಖೆ ದುರ್ಬಲವಾಗಿರುವುದೇ ಕಾರಣ ಎಂದು ಮೈಸೂರಿನ ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಆರೋಪಿಸಿದ್ದಾರೆ.  ರಾಜ್ಯದಲ್ಲಿ ಗುಪ್ತಚರ ಇಲಾಖೆ ತುಂಬಾ ವೀಕ್ ಆಗಿದೆ. ಮುಂದೆ...

Recent Comments