ಪ್ರೇಮ ವಿವಾಹಕ್ಕೆ ಜಾತಿ, ಅಂತಸ್ತು, ಮೇಲು ಕೀಳುಗಳು ಅಡ್ಡಿ ಆಗೋದು ಸರ್ವೇ ಸಾಮಾನ್ಯ.ಇನ್ನೂ ಜಾತಿ, ಅಂತಸ್ತು ನಿಂದ ಪೋಷಕರು ಪ್ರೀತಿಯನ್ನು ವಿರೋಧಿಸಿದ್ದು ನೀವೆಲ್ಲಾ ನೋಡಿರ್ತಿರಾ.. ಆದ್ರೆ , ಇವರಿಬ್ಬರ ಪ್ರೀತಿ ಇದ್ಯಾವುದೂ ಅಡ್ಡಿ ಬರ್ಲಿಲ್ಲ.. ಇವರ ಪ್ರೀತಿಗೆ ಅಡ್ಡಿಯಾದ ಕಾರಣ ಕೇಳಿದ್ರೆ ನಿಮ್ಗೂ ಶಾಕ್ ಆಗುತ್ತೆ.
ಪ್ರೀತಿ ಅಂದ್ರೇನೆ ಹಾಗೆ. ಅದು ಯಾವಾಗ ಹುಟ್ಟುತ್ತೆ, ಹೇಗೆ ಬೆಳೆಯುತ್ತೆ ಎಂಬುದು ಗೊತ್ತಾಗುವುದೇ ಇಲ್ಲ. ಪ್ರೇಮಲೋಕಕ್ಕೆ ಎಂಟ್ರಿ ಆಗುತ್ತಿದ್ದಂತೆ ಸುತ್ತಲಿನ ಲೋಕವೇ ಸುಂದರವಾಗಿ ಬಿಡುತ್ತದೆ, ಅದಕ್ಕೆ ಕಣ್ಣಿಲ್ಲ, ಅದು ಜಾತಿ ನೋಡಲ್ಲ, ಆಸ್ತಿ ಅಂತಸ್ತು ನೋಡಲ್ಲ, ವಯಸ್ಸು ನೋಡಲ್ಲ, ಅಂತರವೂ ನೋಡಲ್ಲ, ಮುದ್ದಾಗಿ ಕಾಣ್ತೀರೋ ಈ ಜೋಡಿ ಕೂಡ ಪರಸ್ಪರ ಪ್ರೀತಿಸಿ ಮದುವೆಯಾಗಿತ್ತು..
ಸಾಮಾನ್ಯವಾಗಿ ಪ್ರೀತಿಗೆ ಜಾತಿ, ಆಸ್ತಿ ಅಂತಸ್ತು ಅಡ್ಡಿ ಬರುತ್ತೆ ಆದ್ರೆ ಇಲ್ಲಿ ‘ಅಂತರ’ ಅಡ್ಡಿ ಬಂದಿದೆ, ಅಂದಹಾಗೆ ದಾವಣಗೆರೆ ಮೂಲದ ಪ್ರತಾಪ್ ತನ್ನ ಸಂಬಂಧಿಕಳೇ ಆದ, ತನಗಿಂತ ಐದು ವರ್ಷ ಹಿರಿಯಳಾದ ತನಗಿಂತ ಎತ್ತರ ಇರೋ ಲಲಿತಾ ಎಂಬಾಕೆಯನ್ನ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ, ಹೈಟ್ ಮತ್ತು ವಯಸ್ಸಿನ ಅಂತರದಿಂದ ಈ ಪ್ರೀತಿಗೆ ಮನೆಯಲ್ಲಿ ಒಪ್ಪಿಗೆ ಸಿಗಲಿಲ್ಲ ಹೀಗಾಗಿ ಆರು ತಿಂಗಳ ಹಿಂದೆ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದಾರೆ… ಆದ್ರೆ ಇದೀಗ ಪ್ರತಾಪ್ನ ಈ ಜೋಡಿಗೆ ಇನ್ನಿಲ್ಲದ ಕಿರಕುಳ ನೀಡುತ್ತಿದ್ದಾರಂತೆ. ಅಂತೆಯೇ ರಿಜಿಸ್ಟರ್ ಮದುವೆ ಆಗಲು ಸಹ ಅಧಿಕಾರಿಗಳಿಗೆ ಹಣದ ಆಮಿಷವೊಡ್ಡಿ ಅಡ್ಡಗಾಲು ಹಾಕುತ್ತಿದ್ದಾರೆ ಅಂತ ಪ್ರತಾಪ್ ಆರೋಪಿಸುತ್ತಿದ್ದಾರೆ.
ಈಗಾಗಲೇ ಗರ್ಭಿಣಿ ಆಗಿರುವ ಲಲಿತಾ ಪತಿಯ ಜೊತೆ ನೆಮ್ಮದಿಯ ಬದುಕು ನಡೆಸಲು ಮಾವ ಅಂದರೆ ಪ್ರತಾಪನ ತಂದೆ ಹನುಮಂತಪ್ಪ ಬಿಡುತ್ತಿಲ್ಲ ಅಂತ ಲಿಲಿತಾ ಆರೋಪಿಸುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ಬೆದರಿಕೆ ಒಡ್ಡುತ್ತಿದ್ದು ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದಾರೆ. ಹೀಗಾಗಿ, ನಿತ್ಯ ಭಯ ಭೀತಿಯಿಂದ ಬದುಕು ನಡೆಸುವಂತಾಗಿದ್ದು ಪೊಲೀಸ್ರು ರಕ್ಷಣೆ ಕೊಡಬೇಕು ಅಂತ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ನವಜೋಡಿ ಚಿತ್ರದುರ್ಗದ ಎಸ್ಪಿ ಅರುಣ್ ಅವರಿಗೆ ದೂರು ನೀಡಿದ್ದು, ಎಸ್ಪಿ ಅರುಣ್ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಹೀಗಾಗಿ, ಪೊಲೀಸರು ನವ ಜೋಡಿಗೆ ಬೆದರಿಕೆ ಒಡ್ಡುತ್ತಿರುವ ಪೋಷಕರ ಮನವೊಲಿಸಿ, ಪ್ರೇಮಿಗಳಿಗೆ ನೆಮ್ಮದಿಯಿಂದ ಬಾಳಲು ಅನುವು ಮಾಡಿಕೊಡಬೇಕಿದೆ.
-ಸುನೀಲ್ ರೆಡ್ಡಿ, ಚಿತ್ರದುರ್ಗ