ಚಿತ್ರದುರ್ಗ : ನಗರದ ಗೋನೂರು ಬಳಿ ಇರೋ ಸಮಾಜಕಲ್ಯಾಣ ಇಲಾಖೆಯ ನೀರಾಶ್ರಿತರ ಕೇಂದ್ರದಲ್ಲಿ ಮಾಹಾಮಾರಿ ಕರೋನಾ ಹಬ್ಬುತ್ತಿರೋ ಹಿನ್ನಲೆಯಲ್ಲಿ ಇಲ್ಲಿನ ನೀರಾಶ್ರಿತರಿಗೆ ಪ್ರತಿದಿನ ಮಾಸ್ಕ್ ದರಿಸಲು ಸೂಚನೆ ನೀಡಲಾಗಿದೆ.ಅದರಂತೆ ಪ್ರತಿನಿತ್ಯ ನಾವು ಮಾಸ್ಕ್ ದರಿಸಿ ಸಮಾಜಿಕ ಅಂತರಕಾಪಾಡಿ ಕೊಂಡು ದಿನ ಕೆಲಸ ಮಾಡ್ತ ಇದ್ದಾರೆ ಇಲ್ಲಿನ ನಿರಾಶ್ರಿತರು.
ಕರೋನಾ ಹರಡುವ ಭೀತಿಯಲ್ಲಿ ಈ ಕೇಂದ್ರದಲ್ಲಿ ಆರೋಗ್ಯ ಕಾಪಾಡಿಕೊಳ್ಳೊ ವಿಚಾರದಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ.ಕರೋನಾ ವೈರಸ್ ವಿರುದ್ದ ರೋಗನಿರೋದಕ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರತಿನಿತ್ಯ ಇಲ್ಲಿನ ಸಿಬ್ಬಂದಿ ಹಾಗು ನಿರಾಶ್ರಿತರಿಗೆ ಹರ್ಬಲ್ ಕಷಾಯ ನೀಡಲಾಗುತ್ತಿದೆ.ಲಾಕ್ ಡೌನ್ ಆದ ದಿನದಿಂದ ಇಲ್ಲಿಯವರೆಗೆ ಹೊರಗಿನವರಿಗೆ ಪ್ರವೇಶಕ್ಕೆ ನಿರ್ಭಂದ ಹಾಕಲಾಗಿದೆ ಅಂತ ಈ ಕೇಂದ್ರದ ಸೂಪರ್ ಡೆಂಟ್ ಮಹಾದೇವಯ್ಯ ಹೇಳೀದ್ದಾರೆ.
ಓಟ್ಟಾರೆ ಕೋರೋನಾ ವಿಚಾರದಲ್ಲಿ ಸರಕಾರಗಳು ಕಟ್ಟುನಿಟ್ಟಿನ ಸೂಚನೆಗಳನ್ನ ನೀಡ್ತಾ ಇದ್ರು ವಿದ್ಯವಂತರು ಮಾತ್ರ ಆವಿದ್ಯವಂತರ ಹಾಗೆ ವರ್ತನೆ ಮಾಡೋ ಈ ಟೈಂ ನಲ್ಲಿ ಪ್ರತಿನಿತ್ಯ ಮಾಸ್ಕ್ ಧರಿಸಿ ಸಮಾಜಿಕ ಅಂತರ ಕಾಪಾಡಿಕೊಂಡು ಇರೋ ಇಲ್ಲಿನ ನಿರಾಶ್ರಿತರ ಸಾಮಾಜಿಕ ಕಳಕಳಿ ಇತರಿಗೂ ಮಾದರಿಯಾಗಿದೆ
ಸುನೀಲ್ ರೆಡ್ಡಿ ಪವರ್ ಟಿವಿ,ಚಿತ್ರದುರ್ಗ