Monday, January 17, 2022
Powertv Logo
HomePower Specialಜೀವ ಸಂಕುಲಕ್ಕೆ ಆಪತ್ತು ತರಲಿದ್ಯಾ ಚೀನಾದ ಈ ಪ್ರಯೋಗ?

ಜೀವ ಸಂಕುಲಕ್ಕೆ ಆಪತ್ತು ತರಲಿದ್ಯಾ ಚೀನಾದ ಈ ಪ್ರಯೋಗ?

ಈ ಜಗತ್ತಿನಲ್ಲಿ ದೊಡ್ಡಮಟ್ಟದಲ್ಲಿ ಪ್ರಕೃತಿಗೆ ವಿರುದ್ಧವಾಗಿ ನಡೆಯುವ ದೇಶ ಯಾವುದಾದ್ರೂ ಇದ್ರೆ ಅದು ಚೀನಾ ಮಾತ್ರ. ಸಾಧಾರಣವಾಗಿ ವಿಶ್ವದ ಎಲ್ಲಾ ರಾಷ್ಟ್ರಗಳು ಪ್ರಕೃತಿಗೆ ಕೊಂಚ ಮಾರಕವಾದ ನಿಲುವನ್ನ ಅನುಸರಿಸುತ್ತಲೇ ಇವೆ. ಆದ್ರೆ ಹೇಗಾದ್ರು ಮಾಡಿ ಪ್ರಕೃತಿಯನ್ನ ನಾಶ ಮಾಡೋದ್ರಲ್ಲೂ ತಾನು ಮುಂದಿರಬೇಕು ಅಂದುಕೊಂಡಿರುವ ಚೀನಾ, ಅದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನ ಮಾಡಿಕೊಂಡು ಬಂದಿದೆ. ಈ ಹಿಂದೆ ಕೃತಕ ಸೂರ್ಯ, ಕೃತಕ ಚಂದ್ರ, ಕೃತಕ ಜೀವ ಸಂಕುಲಗಳನ್ನ ಚೀನಾ ದೇಶ ಪ್ರಕೃತಿಗೆ ವಿರುದ್ಧವಾಗಿ ತಯಾರಿಸಿ ಜಗತ್ತಿನ ಟೀಕೆಗೆ ಒಳಗಾಗಿತ್ತು. ಇಷ್ಟೇ ಯಾಕೆ ಕಳೆದ 2 ವರ್ಷಗಳಿಂದ ಜಗತ್ತಿಗೆ ಕಂಟಕವಾಗಿ ಕಾಡುತ್ತಿರುವ ಕೊರೋನಾ ಕೂಡ ಚೀನಿ ಪ್ರಾಡಕ್ಟ್​ ತಾನೆ. ಅವತ್ತು ಚೀನಾ ಲ್ಯಾಬ್​ನಲ್ಲಿ ನಡೆಸಿದ್ದ ಪ್ರಯೋಗದಿಂದಲೇ ಕೊರೋನಾ ಬಂದಿದೆ ಎಂದು ಜಗತ್ತಿನ ಹಲವು ರಾಷ್ಟ್ರಗಳು ಹೇಳುತ್ತಲೇ ಬಂದಿವೆ. ಆದ್ರೆ ಈ ಬಗ್ಗೆ ಇದುವರೆಗೂ ಯಾವುದೇ ಸೂಕ್ರವಾದ ತನಿಖೆ ನಡೆಯದೇ ಈ ಆರೋಪ ಈಗ ಆರೋಪವಾಗಿಯೇ ಉಳಿದಿದೆ.

ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರಕೃತಿಗೆ ಮಾರಕವಾಗುವ ಪ್ರಯೋಗ ಮಾಡುವಲ್ಲಿ ಚೀನಾ ಎಕ್ಸ್​​ಪರ್ಟ್​. ಈಗ ಅಂತಹುದೇ ಒಂದು ಪ್ರಯೋಗಕ್ಕೆ ಚೀನಾ ಮುಂದಾಗಿದ್ದು ಈಗ ಈ ಬಗ್ಗೆ ಸಂಶೋಧಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸದ್ಯಕ್ಕೆ ಆ ಪ್ರಯೋಗದ ಬಗ್ಗೆ ಚೀನಾ ತುಟಿ ಬಿಚ್ಚದಿದ್ರೂ ಚೀನಾದ ಕುತಂತ್ರ ಬುದ್ಧಿಯನ್ನ ಅರ್ಥ ಮಾಡಿಕೊಂಡಿರುವ ಸಂಶೋಧಕರು, ಚೀನಾಗೆ ಆ ಸಂಶೋಧನೆಯನ್ನ ಸದ್ಯಕ್ಕೆ ಕೈ ಬಿಡೋದಕ್ಕೆ ಹೇಳ್ತಾ ಇದ್ದಾರೆ. ಆದ್ರೆ ಈ ಬಗ್ಗೆ ಏನನ್ನು ಮಾತನಾಡದ ಚೀನಾ, ಸೈಲೆಂಟ್​ ಆಗಿ ತನ್ನ ಕೆಲಸ ಆರಂಭಿಸಿದೆ ಅಂತ ಪಾಶ್ಚಿಮಾತ್ಯ ತನಿಖಾ ಪತ್ರಕರ್ತರು ಹೇಳ್ತಾ ಇದ್ದಾರೆ. ಒಂದು ವೇಳೆ ಅವರು ಹೇಳೋದೇನಾದ್ರು ನಿಜ ಆದ್ರೆ ಮುಂದೆ ಜೀವ ಸಂಕುಲಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ. ಅಷ್ಟಕ್ಕೂ ಆ ಪ್ರಯೋಗದ ಹೆಸರು 6G TEC. ಅಂದ್ರೆ 6 ತಲೆಮಾರಿನ ತರಂಗ ಹಾಗು ತಂತ್ರಜ್ಞಾನದ ಅನ್ವೇಷಣೆ.

ಸದ್ಯಕ್ಕೆ ಅಮೆರಿಕ ಸೇರಿದ ಹಾಗೆ ಕೆಲವೇ ಕೆಲವು ರಾಷ್ಟ್ರಗಳು 5ಜಿಯನ್ನ ಬಳಸುತ್ತಿವೆ. ಇದನ್ನ ಹೊರತು ಪಡಿಸಿ ಜಗತ್ತಿನ  ಬೇರೆ ಯಾವ ದೇಶದಲ್ಲೂ 5ಜಿ ಮೊಬೈಲ್ ತಂತ್ರಜ್ಞಾನ ಇನ್ನೂ ಬಳಕೆಯಾಗುತ್ತಿಲ್ಲ. ಇದಕ್ಕೆ ಭಾರತವೂ ಕೂಡ ಹೊರತಾಗಿಲ್ಲ. ಈ ವರ್ಷದ ಜುಲೈ ನಂತರದಲ್ಲಿ ಬೆಂಗಳೂರು ಸೇರಿದಂತೆ ಕೆಲವು ನಗರಗಳಲ್ಲಿ ಮಾತ್ರ 5ಜಿ ಸೇವೆ ದೊರೆಯಲಿದೆ ಅಂತ ಹೇಳಲಾಗ್ತಾ ಇದ್ದು, ಇದು ಇನ್ನೂ ಅಧಿಕೃತಗೊಂಡಿಲ್ಲ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ಅದು 5ಜಿ ತರಂಗಗಳಿಂದ ಉಂಟಾಗುವ ಅಪಾಯ.  ಈ ಹಿಂದೆ 5ಜಿ ತರಂಗಗಳ ಮೇಲೆ ಪ್ರಯೋಗಗಳನ್ನ ನಡೆಸಿದಾಗ ಲಕ್ಷಾಂತರ ಪಕ್ಷಿಗಳು ದಾರುಣವಾಗಿ ಸಾವನ್ನಪ್ಪಿದ್ದವು. ಅದರ ಜೊತೆಗೆ ಈ ತರಂಗಗಳು ಮಾನವನ ಮೆದುಳಿಗೆ ಹಲವು ಆಪಾಯಗಳನ್ನ ಕೂಡ ತರುತ್ತವೆ ಅಂತ ಹೇಳಲಾಗಿದ್ದು, ಇದಕ್ಕಾಗಿ ಈ ತರಂಗದ ಸೇವೆಗಳನ್ನ ಒದಗಿಸೋದಕ್ಕೆ ಹಲವು ದೇಶದ ಸರ್ಕಾರಗಳು ಈ ಯೋಜನೆಯನ್ನ ತರೋದಕ್ಕೆ ಹಿಂದೆ-ಮುಂದೆ ಯೋಚಿಸುವಂತಾಗಿದೆ.

ಆದ್ರೆ ಈ ಬಗ್ಗೆ ಆಲೋಚಿಸದ ಚೀನಾ 6ಜಿ ತರಂಗಗಳ ಕುರಿತಾಗಿ ಅನ್ವೇಷಣೆಗೆ ಮುಂದಾಗಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಮಾಡಿರುವ ವರದಿಯ ಪ್ರಕಾರ, 6G ಮೊಬೈಲ್ ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿರುವುದಾಗಿ ವಿದೇಶಿ ಮಾಧ್ಯಮಗಳು ಕೂಡ ಈ ಹಿಂದೆ ಹೇಳಿದ್ವು. ಆದ್ರೆ ಇದೀಗ ಈ ವರದಿಯ ಮೂಲಕ ಅದು ದೃಢಪಟ್ಟಿದ್ದು, ಚೀನಾದ ತಜ್ಞರು ಪ್ರತಿ ಸೆಕೆಂಡಿಗೆ 206.25 ಗಿಗಾಬೈಟ್‌ಗಳ ವಿಶ್ವದಾಖಲೆಯ ವೈರ್‌ಲೆಸ್ ಟ್ರಾನ್ಸ್‌ಮಿಷನ್ ವೇಗವನ್ನು ಸಾಧಿಸಿದ್ದಾರೆ ಅಂತ ಹೇಳಲಾಗ್ತಾ ಇದೆ. ಇದು 6G ತಂತ್ರಜ್ಞಾನವು ಬಂದಾಗ, 5G ಗಿಂತ 100 ಪಟ್ಟು ವೇಗವಾಗಿರುತ್ತದೆ ಅಂತ ನಿಖರವಾಗಿ ಹಲವು ಪತ್ರಿಕೆಗಳು ವರದಿ ಮಾಡಿದೆ.

ಸದ್ಯಕ್ಕೆ 6ಜಿ ತಂತ್ರಜ್ಞಾನದಿಂದ 206.25 ಗಿಗಾಬೈಟ್‌ಗಳಷ್ಟು ವೇಗವು ಜಗತ್ತಿನ ವೇಗವಾದ ತರಂಗಗಳು ಅಂತ ಹೇಳಲಾಗ್ತಾ ಇದ್ದು, ಇದು ಗ್ರಾಹಕರಿಗೆ ಕೇವಲ 16 ಸೆಕೆಂಡುಗಳಲ್ಲಿ 4Kಯಲ್ಲಿ ಅತ್ಯುತ್ತಮ ಗುಣಮಟ್ಟದ ಸಿನಿಮಾಗಳನ್ನ ಮಾಡಬಹುದು ಅಂತ ಹೇಳಲಾಗಿದೆ. ಇದೇ ವೇಳೆ 59.5 ಗಂಟೆಗಳ ಅವಧಿಯ ಅತಿದೊಡ್ಡ ಡೇಟಾವನ್ನ ಕೂಡ ಡೌನ್‌ಲೋಡ್ ಮಾಡಬಹುದು ಅಂತ ಹೇಳಲಾಗ್ತಾ ಇದೆ. ದಕ್ಷಿಣ ಕೊರಿಯಾದ ಸುದ್ದಿ ಸಂಸ್ಥೆಗಳ ಪ್ರಕಾರ, ಟೆಲಿಕಾಂ ಸಲಕರಣೆ ಪೂರೈಕೆದಾರರು 6G ತಂತ್ರಜ್ಞಾನವನ್ನ 2030ರ ಸುಮಾರಿಗೆ ಮಾರುಕಟ್ಟೆಗೆ ತರಬಹುದು ಅಂತ ಹೇಳುತ್ತಿದ್ದಾರೆ.

ಸದ್ಯಕ್ಕೆ ಚೀನಾದ ಈ ಹೊಸ ಪ್ರಯೋಗದ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗ್ತಾ ಇದ್ದು. ಈ ಬಗ್ಗೆ ಇದುವರೆಗೂ ನಿಖರವಾಗಿ ಚೀನಾ ಏನನ್ನೂ ಹೇಳಿಕೊಂಡಿಲ್ಲ.. ಆದ್ರೆ ಒಂದು ವೇಳೆ 6ಜಿ ತಂತ್ರಜ್ಞಾನ ಚಾಲ್ತಿಗೆ ಬಂತು ಅಂದ್ರೆ ಅದು ಜೀವ ಸಂಕುಲದ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರೋದ್ರಲ್ಲಿ ಯಾವುದೇ ಅನುಮಾನವಿಲ್ಲ.. ಹಾಗಾಗಿ ಈ ಬಗ್ಗೆ  ಸಂಶೋಧಕರು ಆತಂಕ ವ್ಯಕ್ತಪಡಿಸುತ್ತಿದ್ದು, ಒಂದು ವೇಳೆ ಇದೇ ರೀತಿ ತರಂಗಗಳ ವೇಗವನ್ನ ಹೆಚ್ಚಿಸುತ್ತಾ ಹೋದರೆ, ಅದು ಮಾನವ ಕುಲಕ್ಕೆ ಮತ್ತೊಂದು ಮಾರಣಾತಿಕ ಕಾಯಿಲೆಯನ್ನ ತರಲಿದೆ ಅಂತ ಹೇಳಲಾಗುತ್ತಿದೆ. ಹಾಗಾಗಿ ಈ ಬಗ್ಗೆ ಚೀನಾ ಹಾಗು ವಿವಿಧ ದೇಶದ ಸರ್ಕಾರಗಳು ಯಾವ ರೀತಿಯಾದ ನಿಲುವುಗಳನ್ನ ತಳೆಯಲಿದೆ(ವೆ) ಅನ್ನೋದನ್ನ ಕಾದು ನೋಡ ಬೇಕಾಗಿದೆ.

- Advertisment -

Most Popular

Recent Comments