Tuesday, January 25, 2022
Powertv Logo
Homeತಂತ್ರಜ್ಞಾನಬಾಹ್ಯಾಕಾಶ ಅಪಘಾತದಿಂದ ಚೀನಾ ಬಚಾವ್​

ಬಾಹ್ಯಾಕಾಶ ಅಪಘಾತದಿಂದ ಚೀನಾ ಬಚಾವ್​

satellite ಬಾಹ್ಯಾಕಾಶ ಅನ್ನೋದೇ ಹಾಗೆ, ಅಲ್ಲಿ ಒಂದಲ್ಲ ಒಂದು ವಿದ್ಯಮಾನಗಳು ನಡೀತಾನೆ ಇರುತ್ತವೆ. ಅಲ್ಲಿನ ಕ್ಷಣ-ಕ್ಷಣದ ಬದಲಾವಣೆಗಳು ಕೂಡ ಮಹತ್ವದ್ದೇ ಆಗಿರುತ್ತೆ. ಆದ್ರೆ ಇತ್ತೀಚೆಗೆ ಬಾಹ್ಯಾಕಾಶದಲ್ಲಿ ನಡೆದ ಘಟನೆಯೊಂದು ಬಾಹ್ಯಾಕಾಶದಲ್ಲಿ ಬಹುದೊಡ್ಡ ಅಪಘಾತವನ್ನ ತಡೆದಿದೆ. ಹಾಗಿದ್ರೆ ಆ ಘಟನೆ ಏನು ಅಂತ ಲಯೋಚನೆ ಮಾಡ್ತಾ ಇದ್ದೀರಾ ಹಾಗಾದರೆ ಮುಂದೆ ಓದಿ..

ಇವತ್ತು ಮಾನವ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರೆದಿದ್ದಾನೆ. ಅದ್ರಲ್ಲೂ ರಾಕೆಟ್​ ಸೈನ್ಸ್​ ಬಂದ ಮೇಲೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯೇ ನಡೆದಿದೆ. ಇದೇ ಬಾಹ್ಯಾಕಾಶ ಕ್ಷೇತ್ರವನ್ನ ಆಳೋದಕ್ಕೆ ಎಲ್ಲಾ ದೇಶಗಳು ಪೈಪೋಟಿಗೆ ಬಿದ್ದಿವೆ. ಈಗಾಗ್ಲೆ ಬಾಹ್ಯಾಕಾಶದಲ್ಲಿ ಬಿಸಿನೆಸ್​​ ಪಾರ್ಕ್​ವೊಂದನ್ನ ನಿರ್ಮಾಣ ಮಾಡಲಾಗ್ತಾ ಇದೆ. ಒಂದು ವೇಳೆ ಇದು ಸಾಧ್ಯ ಆಯ್ತು ಅಂದ್ರೆ, ಮುಂದೆ ಯಾರು ಬೇಕಾದ್ರು ಬಾಹ್ಯಾಕಾಶಕ್ಕೆ ಟ್ರಿಪ್​ ಹೋಗಿ ಬರಬಹುದು, ಇದರ ಜೊತೆಗೆ ಈಗ ಖಾಸಗಿ ಸಂಸ್ಥೆಗಳು ಕೂಡ ಬಾಹ್ಯಾಕಾಶದಲ್ಲಿ ಅಧ್ಯಯನಕ್ಕೆ ಇಳಿದಿದ್ದು, ಮುಂದಿನ ದಿನಗಳಲ್ಲಿ ಬಾಹ್ಯಾಕಾಶದಲ್ಲಿ ಖಾಸಗಿ ಸಂಸ್ಥೆಗಳು ಕೂಡ ಪ್ರಾಬಲ್ಯವನ್ನ ಸಾಧಿಸಲಿವೆ. ಇದೇ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಎಲನ್​ ಮಸ್ಕ್​, ತಮ್ಮ ಸ್ಪೇಸ್​ ಎಕ್ಸ್​ ಸಂಸ್ಥೆಯ ಮೂಲಕ ಬಾಹ್ಯಾಕಾಶ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಟೆಕ್ ಜಗತ್ತಿನ ಕ್ರಾಂತಿಕಾರಿ ಎಲನ್​ ಮಸ್ಕ್​, ಹಲವು ವರ್ಷಗಳಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರ ಸ್ಪೇಸ್​ ಎಕ್ಸ್​ ಸಂಸ್ಥೆ ಕೂಡ ಕಾರ್ಯ ಪ್ರವೃತ್ತವಾಗಿದೆ. ಈ ಹಿಂದೆ ಜಗತ್ತಿನಲ್ಲಿ ಎಲೆಕ್ಟ್ರಿಕ್​ ಕಾರುಗಳನ್ನ ಮಾರುಕಟ್ಟೆಗೆ ತಂದು ಕ್ರಾಂತಿ ಮಾಡಿದ್ದ ಮಸ್ಕ್​, ಈಗ ಇಂಟರ್​ ನೆಟ್​ ಕ್ಷೇತ್ರದಲ್ಲಿ ಕ್ರಾಂತಿ ಮಾಡೋದಕ್ಕೆ ಶುರು ಮಾಡಿದ್ದಾರೆ, ಅದು ಕೂಡ ಸ್ಯಾಟ್​ ಇಂಟರ್​ನೆಟ್​… ಇದೇ ಉದ್ದೇಶಕ್ಕಾಗಿ ಮೊನ್ನೆಮೊನ್ನೆಯಷ್ಟೇ ಪ್ರಯೋಗಿಕವಾಗಿ 52 ಸ್ಯಾಟ್​ಲೈಟ್​ಗಳನ್ನ ಸ್ಪೇಸ್​ಎಕ್ಸ್​ ಉಡಾವಣೆ ಮಾಡಿತ್ತು. ಇದು ಇಂಟರ್​ನೆಟ್​ ಹಾಗು ಟೆಕ್​ ಜಗತ್ತಿನಲ್ಲಿ ಬಹುದೊಡ್ಡ ಸಂಚಲನವನ್ನೇ ಮೂಡಿಸಿತ್ತು, ಯಾಕಂದ್ರೆ, ಒಂದು ವೇಳೆ ಈ ಸ್ಯಾಟ್​​ಲೈಟ್​ ಇಂಟರ್​ನೆಟ್​ ಸೌಲಭ್ಯ ಸಿಕ್ಕರೆ ಜಗತ್ತಿನ ಯಾವ ಮೂಲೆಗೆ ಬೇಕಾದ್ರು ಇಂಟರ್​ನೆಟ್​ ಸೌಲಭ್ಯವನ್ನ ಕಲ್ಪಿಸಬಹುದು. ಹೀಗಾಗಿ ಮೊದಲ ಹಂತದಲ್ಲಿ ಸುಮಾರು 12 ಸಾವಿರ ಸ್ಯಾಟ್​ಲೈಟ್​ಗಳನ್ನ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತೆ. ತದ ನಂತರ ಇದರ ಸಂಖ್ಯೆಯನ್ನ 42 ಸಾವಿರಕ್ಕೆ ಏರಿಸಲಾಗುತ್ತೆ. ಒಂದು ವೇಳೆ ಇದು ಸಾಧ್ಯ ಆದ್ರೆ ಜಗತ್ತಿನಲ್ಲಿ ವೇಗದ ಇಂಟರ್​ನೆಟ್​ ಸೌಲಭ್ಯ ಒದಗಿಸುವ ಸಂಸ್ಥೆಯಾಗಿ ಸ್ಪೇಸ್​ ಎಕ್ಸ್​ ಹೊರಹೊಮ್ಮುತ್ತೆ.

ಇದೇ ಕಾರಣಕ್ಕೆ ಹಲವು ಬಾಹ್ಯಾಕಾಶ ತಜ್ಪರು ಹಾಗು ಚೀನಾ ಈ ಹಿಂದಿನಿಂದಲೂ ಈ ಯೋಜನೆಗೆ ಅಡ್ಡಗಾಲು ಹಾಕಿಕೊಂಡು ಬಂದಿದೆ. ಈ ಚೀನಾ ಕೇವಲ ಇದೊಂದೇ ವಿಚಾರಕ್ಕೆ ಎಲನ್​ ಮಸ್ಕ್​ರನ್ನ ಟಾರ್ಗೇಟ್​ ಮಾಡಿಲ್ಲ. ಈ ಹಿಂದೆ ಟೆಸ್ಲಾ ಎಲೆಕ್ಟ್ರಿಕ್​ ಕಾರುಗಳ ವಿಚಾರದಲ್ಲೂ ಎಲನ್​ ಮಸ್ಕ್​ ಚೀನಾ ಕಿಡಿ ಕಾರಿತ್ತು. ಇದಕ್ಕೆ ಯಾವಾಗ ಜಗತ್ತಿನ ಬೇರೆ ಬೇರೆ ರಾಷ್ಟ್ರದ ಜನ್ರು ಆಕ್ರೋಶ ವ್ಯಕ್ತ ಪಡಿಸೋದಕ್ಕೆ ಶುರು ಮಾಡಿದ್ರೋ, ಆಗ ಚೀನಾದ ಸಾಕು ನಾಯಿ ಅಂತ ಕರೆಯಿಸಿಕೊಳ್ಳುವ ಗ್ಲೋಬಲ್​ ಟೈಮ್ಸ್​ ಪುಂಕಾನುಪುಂಕವಾಗಿ ಸುಳ್ಳುಸುದ್ಧಿಗಳನ್ನ ಟೆಸ್ಲಾ ಕಾರುಗಳ ಮೇಲೆ ಬರೆದಿತ್ತು. ಅದರ ಪ್ರಕಾರ ಈ ಟೆಸ್ಲಾ ಕಾರು ಚೀನಾದಲ್ಲಿ ಬೇಹುಗಾರಿಕೆ ಮಾಡ್ತಾ ಇದೆ. ಈ ಟೆಸ್ಲಾ ಕಾರುಗಳು ಚೀನಾದ ಭದ್ರತೆಗೆ ಅಪಾಯ ತಂದಿಡುತ್ತೆ. ಅನ್ನೋ ಹಸಿ ಸುಳ್ಳಿನ, ಪುರಾವೆ ಇಲ್ಲದ ಆರೋಪ ಮಾಡಿತ್ತು. ಬಳಿಕ ಚೀನಾ ಸರ್ಕಾರ ಕೂಡ ತನ್ನ ಸೇನಾಧಿಕಾರಿಗಳಿಗೆ ಹಾಗು ಪೊಲೀಸ್​ ಸಿಬ್ಬಂಧಿಗೆ ಟೆಸ್ಲಾ ಕಾರುಗಳನ್ನ ಬಳಸದಂತೆ ಸೂಚನೆಯನ್ನ ನೀಡಿತ್ತು. ಇದು ಚೀನಾದಲ್ಲಿ ಟೆಸ್ಲಾ ಕಾರುಗಳ ಮಾರುಕಟ್ಟೆಗೆ ಬಹುದೊಡ್ಡ ಹೊಡೆತವನ್ನ ಕೊಟ್ಟಿತ್ತು.

ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಎಲನ್​ ಮಸ್ಕ್​ ಸಂಸ್ಥೆಯನ್ನ ಟಾರ್ಗೆಟ್​ ಮಾಡಿರುವ ಚೀನಾ, ಎಲನ್​ ಮಸ್ಕ್​ರ ಸ್ಪೇಸ್​ ಪ್ರಾಜೆಕ್ಟ್​ಗಳಿಗೆ ಒಂದಲ್ಲ ಒಂದು ಅಡ್ಡಗಾಲು ಹಾಕುತ್ತಲೇ ಇದೆ. ಇದೀಗ ಮೊನ್ನೆಮೊನ್ನೆ ಸ್ಪೇಸ್​ಎಕ್ಸ್​ ಸಂಸ್ಥೆ ಉಡಾವಣೆ ಮಾಡಿದ್ದ 52 ಸ್ಯಾಟ್​ಲೈಟ್​ಗಳ ಉಡಾವಣೆಯೇ ಇದಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಹೌದು ಈ ಉಪಗ್ರಹಗಳು ಚೀನಾದ ಬಾಹ್ಯಾಕಾಶ ಕೇಂದ್ರದ ಬಳಿಯೇ ಹಾದು ಹೋಗಿದೆ. ಆದ್ರೆ ಇದಕ್ಕೆ ಹಲವು ಮುಂಜಾಗೃತೆಯನ್ನ ವಹಿಸಿಯೇ ಸ್ಪೇಸ್​ ಎಕ್ಸ್​ ಈ ಉಪಗ್ರಹಗಳನ್ನ ಉಡಾವಣೆ ಮಾಡಿದ್ದು, ಬಾಹ್ಯಾಕಾಶದಲ್ಲಿ ಯಾವುದೇ ಅಪಘಾತ ನಡೆಯದಂತೆ ಎಚ್ಚರ ವಹಿಸಲಾಗಿದೆ. ಆದ್ರೆ ಈ ಬಗ್ಗೆ ಉಲ್ಟಾ ಮಾತನಾಡುತ್ತಿರುವ ಚೀನಾ ಸ್ಪೇಸ್​ಎಕ್ಸ್​ನ ಉಪಗ್ರಗಳು ನಮ್ಮ ಬಾಹ್ಯಾಕಾಶ ಕೇಂದ್ರದ ಬಳಿ ಡಿಕ್ಕಿ ಹೊಡೆಯಲು ಬಂದಿತ್ತು ಈ ವೇಳೆ ಎಚ್ಚೆತ್ತುಕೊಂಡು ನಮ್ಮ ವಿಜ್ಞಾನಿಗಳು ಮಹಾ ಅಪಘಾತವನ್ನ ತಪ್ಪಿಸಿದ್ದಾರೆ, ಅಮೆರಿಕ ಬಾಹ್ಯಾಕಾಶ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ ಅಂತ ಎಲುಬಿಲ್ಲದ ನಾಲಿಗೆಯಿಂದ ಬೇಕಾಬಿಟ್ಟಿಯಾಗಿ ಹೇಳಿಕೆಯನ್ನ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯೆಸಿರುವ ಸ್ಪೇಸ್​ ಎಕ್ಸ್​ ಸಂಸ್ಥೆ. ಇದು ಕೇವಲ ಆರೋಪವಷ್ಟೆ ಇಲ್ಲಿ ಯಾವುದೇ ಅಪಘಾತವಾಗುವ ಸಂದರ್ಭವೇ ಇರಲಿಲ್ಲ ಅನ್ನೋ ಹೇಳಿಕೆಯನ್ನ ನೀಡಿದೆ. ಇದೀಗ ಈ ವಿಚಾರ ಜಾಗತಿಕವಾಗಿ ಬಹುದೊಡ್ಡ ಚರ್ಚೆಯನ್ನ ಹುಟ್ಟು ಹಾಕಿದ್ದು, ಚೀನಾ ಸ್ಪೇಸ್​ಎಕ್ಸ್​ನ ಸ್ಟಾರ್​ಲಿಂಕ್​ ಇಂಟರ್​ನೆಟ್​ ಯೋಜನೆಯನ್ನ ವಿಫಲಗೊಳಿಸೋದಕ್ಕೆ ಪ್ರಯತ್ನಿಸುತ್ತಿದೆಯೇ ಅನ್ನೋ ಅನುಮಾನ ಕಾಡೋದಕ್ಕೆ ಶುರುವಾಗಿದೆ. ಇದರ ಜೊತೆಗೆ ಈ ಚೀನಾಗೆ ತನ್ನ ಭೂಪ್ರದೇಶದ ಮೇಲಿನ ಹಾಗು ಅಕ್ಕಪಕ್ಕದ ಭೂಪ್ರದೇಶದ ಮೇಲಿನ ಬಾಹ್ಯಾಕಾಶದಲ್ಲಿ ಬೇರೆ ದೇಶದ ಸ್ಯಾಟ್​ಲೈಟ್​ಗಳ ಸಂಚಾರವನ್ನ ಒಪ್ಪೋದಿಲ್ಲ. ಇದಕ್ಕೆ ಕಾರಣ ಸ್ಯಾಟ್​ಲೈಟ್​ಗಳು ಬೇಹುಗಾರಿಕೆಯನ್ನ ನಡೆಸಬಹುದು ಅನ್ನೋ ಭಯ ಚೀನಾಗೆ ಸದಾ ಕಾಡುತ್ತಿದೆ.  ಒಟ್ಟಾರೆಯಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ಪರ್ಧೆ ಇರೋದು ಸರ್ವೇ ಸಾಮಾನ್ಯ, ಆದ್ರೆ ಬಾಹ್ಯಾಕಾಶದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳೋದಕ್ಕೆ ಚೀನಾ ಮಾಡುತ್ತಿರುವ ನಾಟಕವನ್ನ ನೋಡಿದ್ರೆ. ಈ ಕುತಂತ್ರಿ ರಾಷ್ಟ್ರಕ್ಕೆ ಏನ್​ ಹೇಳಬೇಕೋ ಗೊತ್ತಾಗ್ತಾ ಇಲ್ಲ..

R.ರಮ್ಯ, ಪವರ್ ಟಿವಿ

- Advertisment -

Most Popular

Recent Comments