ಬೆಂಗಳೂರು: ನಗರದ ಗುರಪ್ಪನಪಾಳ್ಯದ ಸಲೀಂ ಸ್ಟೋರ್ ಗಲ್ಲಿಯಲ್ಲಿ ಸ್ವಂತ ಅಜ್ಜಿಯೇ ತನ್ನ ಮೊಮ್ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡಸಿರುವ ಕೃತ್ಯ ನಡೆದಿದೆ.
ಈ ಮಗುವಿನ ತಂದೆ ತಾಯಿ ಕೆಲವು ವರ್ಷಗಳ ಹಿಂದೆ ತಮಗೆ ಗಂಡು ಮಕ್ಕಳಿಲ್ಲವೆಂದು ಇವನ್ನನ್ನು ದತ್ತು ಪಡೆದುಕೊಂಡಿದ್ದರು. ಈ ಮಗು ಅನ್ನ ಕೇಳಿದಕ್ಕೆ ರಾಕ್ಷಸಿ ಅಜ್ಜಿ ಮುಬಿನಾ ಮನ ಬಂದಂತೆ ಥಳಿಸಿದ್ದಾರೆ. ಬಾಯಿಗೆ ಪೇಪರ್ ತುರುಕಿ, ಕ್ಯಾಂಡಲ್ನಿಂದ ಸುಟ್ಟು ರಾಕ್ಷಸೀ ಕೃತ್ಯವೆಸಗಿದ್ದಾಳೆ. ಈ ರೀತಿ ಹಲ್ಲೆ ನಡೆಸಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಮಗುವಿಗೆ ಹೀಗೆ ಚಿತ್ರೆ ಹಿಂಸೆ ಕೊಡುತ್ತಿದ್ದಳು ಎಂದು ಸ್ಥಳೀಯರಿಂದ ತಿಳಿದು ಬಂದಿದೆ.
ಸದ್ಯ ಗಾಯಗೊಂಡ ಮುಗ್ದ ಮಗು ನಗರದ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದೆ. ಕ್ರೂರಿ ಮುಬೀನಾ ತಲೆಮರೆಸಿಕೊಂಡಿದ್ದಾಳೆ. ಸದ್ದುಗುಂಟೆ ಪೋಲಿಸ್ ಆರೋಪಿ ಅಜ್ಜಿಯ ವಿರುದ್ದ FIR ದಾಖಲಲಿಸಿಕೊಂಡಿದ್ದು, ಈಕೆಗಾಗಿ ಶೋಧ ನಡೆಸುತ್ತಿದೆ.