Home P.Special ಆನ್​​ಲೈನ್​​ ಕ್ಕೋಸ್ಕರ ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿರುವ ವಿದ್ಯಾರ್ಥಿಗಳು..!

ಆನ್​​ಲೈನ್​​ ಕ್ಕೋಸ್ಕರ ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿರುವ ವಿದ್ಯಾರ್ಥಿಗಳು..!

ಅಜ್ಜನ ಕಾಲದ ತೋಟ ಬಿಟ್ರು. ಅಪ್ಪನ ಕಾಲದ ಮನೆಯನ್ನೂ ಬಿಟ್ರು. ಹುಟ್ಟಿ ಬೆಳೆದ ಊರು-ಸ್ನೇಹಿತರನ್ನೂ ತೊರಿದ್ರು. ತಮ್ಮ ಊರು-ಮನೆಗೆ ತಾವೇ ಅತಿಥಿಗಳಾದ್ರು. ಎಲ್ಲದಕ್ಕೂ ಕಾರಣ ಕೊರೋನಾ. ಬೀಸೋ ಗಾಳಿ. ಸುರಿಯೋ ಮಳೆ. ಎಲ್ಲದಕ್ಕೂ ಸೆಡ್ಡು ಹೊಡೆದಿದ್ದ ಮಲೆನಾಡಿಗರು ಅದೊಂದೇ ಒಂದು ಕಾರಣಕ್ಕೆ ಊರನ್ನೇ ಬಿಡ್ತಿದ್ದಾರೆ. ಆದ್ರೆ, ಬೈತಿರೊದು ಮಾತ್ರ ಭಾರತವೀಗ ಡಿಜಿಟಲ್ ಇಂಡಿಯಾ ಅಂತಿರೋ ಸರ್ಕಾರ ಹಾಗೂ ರಾಜಕಾರಣಿಗಳಿಗೆ.

ಈಕೆ ಹೆಸ್ರು ಸಿರಿ. ಮೈಸೂರಿನಲ್ಲಿ ಫೈನಲ್ ಇಯರ್ ಡಿಗ್ರಿ ಓದುತ್ತಿರೋ ಚಿಕ್ಕಮಗಳೂರು ತಾಲ್ಲೂಕಿನ ಮುತ್ತೋಡಿ ಅರಣ್ಯದ ಹಾಸುಪಾಸಿನ ಗಾಳಿಗುಡ್ಡೆ ಗ್ರಾಮದ ಯುವತಿ. ಕೊರೋನಾ ಕಾಲಿಟ್ಟಾಗಿನಿಂದ ಹಳ್ಳಿಯಲ್ಲೇ ಇದ್ದ ಈಕೆ ಈಗ ಹಳ್ಳಿ ತೊರೆದು, ಅಪ್ಪ-ಅಮ್ಮನ ಕರೆತಂದು ಚಿಕ್ಕಮಗಳೂರಲ್ಲಿ ಮನೆ ಮಾಡಿಕೊಂಡಿದ್ದಾರೆ. ಬಿಕಾಸ್ ಆಫ್ ನೆಟ್ವರ್ಕ್..! ಆತ್ತ ಕಾಲೇಜಿನಿಂದ ಆನ್‍ಲೈನ್ ಕ್ಲಾಸ್. ಇತ್ತ ಹಳ್ಳಿಯಲ್ಲಿ ಬೇಸಿಕ್ ಮೊಬೈಲ್‍ಗೂ ನೆಟ್ವರ್ಕ್ ಇಲ್ಲ. ಇಲ್ಲಿನ ಜನ ಹೆಚ್ಚಾಗಿ ಅವಲಂಬಿತರಾಗಿರೋದು ಬಿ.ಎಸ್.ಎನ್.ಎಲ್. ನೆಟ್ವರ್ಕಿಗೆ. ಆದ್ರೀಗ, ಬಿ.ಎಸ್.ಎನ್.ಎಲ್. ಹೆಸರಿಗಷ್ಟೆ. ನೆಟ್ವರ್ಕ್ ಕೇಳೋದೇ ಬೇಡ. ಮಳೆ-ಗಾಳಿ ಬಂದ್ರೆ ಇರೋದು ಹೋಗುತ್ತೆ. ಮತ್ತೆ ಸಿಕ್ರಿ ಸಿಕ್ತು. ಇಲ್ಲವಾದ್ರೆ ಇಲ್ಲ. ಸೋ, ಹಾಗಾಗಿ, ಮಲೆನಾಡಿಗರು ಮಕ್ಕಳ ವಿದ್ಯಾಭ್ಯಾಸ ಹಾಗೂ ಭವಿಷ್ಯದ ದೃಷ್ಠಿಯಿಂದ ಬದುಕಿ-ಬಾಳಿದ ತೋಟ-ಮನೆ-ಊರನ್ನ ತೊರೆಯುತ್ತಿದ್ದಾರೆ. ತಮ್ಮ ಊರಿಗೆ ತಾವೇ ಗೆಸ್ಟ್ ಆಗಿದ್ದಾರೆ. ಈ ಕುಟುಂಬ ಕೂಡ ಚಿಕ್ಕಮಗಳೂರಿನಲ್ಲಿ ಮನೆ ಮಾಡ್ಕೊಂಡು ಊರಿಗೆ ಓಡಾಡ್ತಿದ್ದಾರೆ. ಸರ್ಕಾರ ಡಿಜಿಟಲ್ ಇಂಡಿಯಾ ಎಂದು ಹೇಳ್ತಿದೆ. ಡಿಜಿಟಲ್ ಇಂಡಿಯಾ ಅಂದ್ರೆ ಇದೇನಾ ಎಂದು ಜನ ಸರ್ಕಾರಕ್ಕೆ ಪ್ರಶ್ನೆ ಮಾಡ್ತಿದ್ದಾರೆ.

ಆರ್ಥಿಕವಾಗಿ ಅನುಕೂಲಸ್ಥರಿಗೆ ನೋ ಪ್ರಾಬ್ಲಂ. ನಗರಕ್ಕೆ ಬಂದು ಮನೆ ಮಾಡಿಕೊಂಡು ಓದುತ್ತಾರೆ. ಆದ್ರೆ, ಎಷ್ಟೋ ಜನಕ್ಕೆ ತಮ್ಮ ಮಕ್ಕಳಿಗೆ ಮೊಬೈಲ್ ಕೊಡ್ಸೋದಕ್ಕೆ ಆಗಲ್ಲ. ಅವ್ರು ಮಕ್ಕಳ ಭವಿಷ್ಯಕ್ಕಾಗಿ ಏನು ಮಾಡ್ತಾರೆ ಅನ್ನೋದು ಇಲ್ಲಿ ಯಕ್ಷಪ್ರಶ್ನೆ. ಅವರು ಹೇಗೆ ನಗರ ಪ್ರದೇಶಗಳಿಗೆ ಬಂದು ಮಕ್ಕಳಿಗೆ ಓದಿಸುತ್ತಾರೆ ಅನ್ನೋದನ್ನ ಯೋಚಿಸಬೇಕು. ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಇಂತಹಾ ಸಾವಿರಾರು ಹಳ್ಳಿಗಳಿವೆ. ಅವುಗಳಗೆ ರೋಡು, ವಾಟ್ರು, ಕರೆಂಟ್ ಕೂಡ ಇಲ್ಲ. ಅವ್ರಿಗೆ ಮೂಲಭೂತ ಸೌಕರ್ಯ ಮರೀಚಿಕೆ. ಅಂತದ್ರಲ್ಲಿ ನೆಟ್ವರ್ಕ್ ಕೇಳೋದೇ ಬೇಡ. ಹಾಗಾಗಿ, ಮಲೆನಾಡಿಗರು ಹಳ್ಳಿ ಬಿಟ್ಟು ನಗರಗಳತ್ತ ಮುಖ ಮಾಡ್ತಿದ್ದಾರೆ. ಮೊದಲೆಲ್ಲಾ ಬಿ.ಎಸ್.ಎನ್.ಎಲ್. ನೆಟ್ವಿರ್ಕ್ ಫ್ರಿಕ್ವೆನ್ಸಿ ಚೆನ್ನಾಗಿ ಸಿಗ್ತಿತ್ತು. ಆದ್ರೀಗ, ಫ್ರಿಕ್ವೆನ್ಸಿ ಇಲ್ಲ. ನೆಟ್ವರ್ಕ್ ಇಲ್ಲ. ಕರೆಂಟೂ ಇರಲ್ಲ. ಹಾಗಾಗಿ, ಮಕ್ಕಳು ಹಳ್ಳಿಯಲ್ಲಿ ಓದೋದು ಅಸಾಧ್ಯ. ಹಾಗಾಗಿ, ಎಲ್ಲವನ್ನೂ ಬಿಟ್ಟು ನಗರಕ್ಕೆ ಬಂದಿದ್ದೇವೆ. ಇಲ್ಲಿಂದಲೇ ಹಳ್ಳಿಗೆ ಓಡ್ತಾಡ್ತಿದ್ದೀವಿ ಅಂತಾರೆ ಗಾಳಿಗುಡ್ಡೆ ಗ್ರಾಮದ ಕಲ್ಲೇಶ್. ಸರ್ಕಾರ ಕೂಡಲೇ ನೆಟ್ವರ್ಕ್ ಸಮಸ್ಯೆ ಬಗೆಹರಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಒಟ್ಟಾರೆ, ಸರ್ಕಾರ ಹಾಗೂ ಜನಪ್ರತಿನಿಧಿಗಳು ನಮ್ಮದ್ದು ಡಿಜಿಟಲ್ ಭಾರತ ಅಂತಿದ್ದಾರೆ. ಆದ್ರೆ, ಡಿಜಿಟಲ್ ಭಾರತ ಅಂದ್ರೆ ಇದೇನಾ ಅಂತ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಕೊರೋನ ನಿಯಂತ್ರಣಕ್ಕೆ ಬರುತ್ತಿಲ್ಲ. ಮಕ್ಕಳು ಶಾಲೆಗೆ ಹೋಗಲು ಆಗ್ತಿಲ್ಲ. ನೆಟ್ವರ್ಕ್‍ನಲ್ಲಿ ಪಾಠ ಕೇಳೋದು, ಓದೋದು ಮಲೆನಾಡಿಗರಿಗೆ ಅಸಾಧ್ಯ. ಹಾಗಾಗಿ, ಸರ್ಕಾರ ಆನ್‍ಲೈನ್ ಕ್ಲಾಸ್ ಜಾರಿಗೆ ತರೋ ಮುನ್ನ ಮಕ್ಕಳಿಗೆ ಬೇಕಾದ ಸೂಕ್ತ ಸೌಲಭ್ಯವನ್ನ ಕಲ್ಪಿಸಬೇಕಾದ ಅಗತ್ಯತೆ ಬಹಳಷ್ಟಿದೆ. ಇಲ್ಲವಾದ್ರೆ, ಮಕ್ಕಳ ಓದು ಆದಂಗಾಯ್ತು ಅಂತರಘಟ್ಟೆ ಜಾತ್ರೆ ಎಂಬಂತಾಗೋದ್ರಲ್ಲಿ ನೋ ಡೌಟ್

-ಸಚಿನ್ ಶೆಟ್ಟಿ, ಚಿಕ್ಕಮಗಳೂರು 

LEAVE A REPLY

Please enter your comment!
Please enter your name here

- Advertisment -

Most Popular

ಸೋಂಕಿತನ ಅಂತ್ಯಕ್ರಿಯೇ ನೆರವೇರಿಸಿದ ಮುಸಲ್ಮಾನ್ ಯುವಕರು..!  

ಶಿವಮೊಗ್ಗ : ಕೊರೋನಾದಿಂದ ಸಾವನಪ್ಪಿದವನಿಗೆ, ಕುಟುಂಬಸ್ಥರು, ಮತ್ತು ನೆರೆಹೊರೆಯವರು, ಅಂತ್ಯಕ್ರಿಯೇ ಮಾಡಲು ಹಿಂಜರಿದ ಹಿನ್ನೆಲೆಯಲ್ಲಿ, ಮುಸಲ್ಮಾನ್ ಯುವಕರೇ ನಿಂತು ಅಂತ್ಯಕ್ರಿಯೇ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.  ಶಿವಮೊಗ್ಗದ  ಶಿರಾಳಕೊಪ್ಪದಲ್ಲಿಯೇ ಈ ಘಟನೆ ನಡೆದಿದ್ದು, ಇಲ್ಲಿನ...

ಲಾಕ್ ಡೌನ್ ವೇಳೆಯೇ ಅರಣ್ಯ ಲೂಟಿಗೆ ಯತ್ನಿಸಿದ ಖದೀಮರು..!

ಶಿವಮೊಗ್ಗ : ಇತ್ತ ರಾಜ್ಯದೆಲ್ಲೆಡೆ ಲಾಕ್ ಡೌನ್ ಘೋಷಣೆಯಾಗಿದೆ. ಅದೆಷ್ಟೊ ಜನರು ಮನೆ ಸೇರಿಕೊಂಡಿದ್ದರೆ, ಮತ್ತೆ ಕೆಲವರು ಆಸ್ಪತ್ರೆಗಳಿಗೆ ಅಲೆಯುತ್ತಿದ್ದಾರೆ.  ಇನ್ನೂ ಕೆಲವರು ಹೇಗಪ್ಪಾ ಲಸಿಕೆ ಪಡೆದುಕೊಳ್ಳೋದು ಎಂಬ ಯೋಚನೆಯಲ್ಲಿದ್ದಾರೆ. ಆದ್ರೆ ಇಲ್ಲಿನ...

‘ನನ್ನಿಂದ ಮನೆಯವರೆಗೂ ಸೋಂಕು ತಗುಲಿದೆ ಎಂದು ತಹಶೀಲ್ದಾರ್ ಸೂಸೈಡ್’

ಚಿಕ್ಕಮಗಳೂರು: ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಕೊರೋನ ಬಂತು. ನನಗೆ ವಯಸ್ಸಾಗಿದ್ದು, ಬದುಕುವ ಭರವಸೆ ಕಡಿಮೆ ಇದೆ. ಆದರೆ, ನನ್ನ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಕಣ್ಣೆದುರೇ ಏನಾದರೂ ಆದರೆ ಅದನ್ನ ನನ್ನಿಂದ ಸಹಿಸಿಕೊಳ್ಳಲು...

ಮನೆ, ಮನೆಗೆ ಹಾಲು ವಿತರಣೆಗೆ ಪೊಲೀಸರ ಅಡ್ಡಿ..!  

ಶಿವಮೊಗ್ಗ: ನಗರ ಪ್ರದೇಶದ ಮನೆಮನೆಗಳಿಗೆ ಹಾಲು ಮಾರಾಟ ಮಾಡುವ ರೈತರಿಗೂ ಬಿಡದೇ ಪೊಲೀಸರು, ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.  ಹಾಲು, ತರಕಾರಿ ಮನೆಮನೆಗೆ ತೆರಳಿ ಮಾರಾಟ ಮಾಡಬಹುದು ಎಂದು ಜಿಲ್ಲಾಡಳಿತ ಸೂಚನೆ...

Recent Comments