ಚಿಕ್ಕಮಗಳೂರು :ಕಾಫೀ ಡೇ ಸಾಮ್ರಾಟ್, ಸಿದ್ದಾರ್ಥ ಹೆಗಡೆ ಅವರ ಸಮಾಧಿ ಸ್ಥಳಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯ ಶ್ರೀ ಅವದೂತ ಶ್ರೀ ವಿನಯ್ ಗುರೂಜಿ ಅವರು ಭೇಟಿ ನೀಡಿದ್ದಾರೆ. ಸಿದ್ಧಾರ್ಥ್ ಹೆಗಡೆ ಅವರ ಸಮಾಧಿ ಸ್ಥಳದ ಬಳಿ, ಅರಳಿ ಹಾಗೂ ಔದಂಬರ ವೃಕ್ಷದ ಸಸಿಯನ್ನು ವಿನಯ್ ಗುರೂಜಿ ಅವರು ನೆಟ್ಟಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಎಸ್ಟೇಟ್ ನಲ್ಲಿರುವ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಿನ್ನೆ ವಾಮನ ಯಾದ ಪವಿತ್ರ ದಿನ ಹಾಗೂ ಬುದ್ಧನಿಗೆ ಜ್ಞಾನೋದಯವಾದ ಬೋದಿ ಬೋಧಿವೃಕ್ಷವನ್ನು ನೆಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿದ್ದಾರ್ಥ ಹೆಗಡೆ ತಾಯಿ ವಾಸಂತಿಕ ಹೆಗಡೆ ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದು, ಭಗವಾನ್ ಬುದ್ಧ ಇಡೀ ಪ್ರಪಂಚಕ್ಕೆ ಪ್ರೇರಣೆ ಆಗಿದ್ದರು. ಸಿದ್ಧಾರ್ಥ ಹೆಗಡೆ ಯುವಕರಿಗೆ ಆದರ್ಶ ಆಗಿದ್ದ ಹಿನ್ನೆಲೆ, ತಿರುಪತಿಯಿಂದ ತಂದಂತಹ ಮಂತ್ರಾಕ್ಷತೆಯನ್ನು ಸ್ಥಳದಲ್ಲಿ ಹಾಕಿ, ಅರಳಿ ಗಿಡದ ಸಸಿ ಹಾಗೂ ಬೋಧಿವೃಕ್ಷದ ಸಸಿಯನ್ನು ಅವರ ಸಮಾಧಿಯ ಬಳಿ ಅವಧೂತ ವಿನಯ್ ಗುರೂಜಿ ಅವರು ನೆಟ್ಟಿದ್ದಾರೆ. ಅವರ ಜೀವಿತಾವಧಿಯಲ್ಲಿ ಯಾರಿಗೂ ನೋವು ಉಂಟು ಮಾಡದ ಸಿದ್ದಾರ್ಥ ಹೆಗಡೆ ಅವರನ್ನು ಇದೇ ಸಂದರ್ಭದಲ್ಲಿ ಅವಧೂತರು ನೆನಸಿಕೊಂಡಿದ್ದು, ಅವರ ಜೀವಿತಾವಧಿಯ ದಿನಗಳನ್ನು ಮೆಲುಕು ಹಾಕಿದ್ದಾರೆ….
-ಸಚಿನ್ ಶೆಟ್ಟಿ