ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರದ ಎಸ್.ಎಸ್ .ಇ ಎ.ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಲಕ್ಷ್ಮೀ. ಎನ್. ಎಂಬ ದೃಷ್ಟಿ ಕಾಣದ ಯುವತಿ ಇಂದು ಜಿಲ್ಲೆಗೆ ಮೊದಲ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ.
ಶಿಕ್ಷಣ ತಜ್ಞ ಡಾಕ್ಟರ್. ಎಚ್ .ನರಸಿಂಹಯ್ಯನವರ ಹುಟ್ಟೂರಾದ ಹೊಸೂರು ಗ್ರಾಮದ ಎಚ್. ಎನ್. ಪ್ರೌಢಶಾಲೆಯ ಶಿಕ್ಷ ಕರಾಗಿರುವ ನರಸಿಂಹಮೂರ್ತಿ ಅವರ ಮಗಳು ಲಕ್ಷ್ಮೀ ಎಂಬು ಹುಟ್ಟಿನಿಂದಲೂ ತನ್ನ ಎರಡು ಕಣ್ಣುಗಳು ಕಳೆದುಕೊಂಡಿದ್ದಳು.ಆದರೆ, ಪಟ್ಟು ಬಿಡದೇ ಛಲದಂಕ ಮಲ್ಲನಂತೆ ಸಾಧನೆ ಮಾಡಿದ್ದಾರೆ.
ಶಾಲೆಯಲ್ಲಿ ಉಪನ್ಯಾಸಕರು ಮಾಡಿದ ಪಾಠವನ್ನು ಶ್ರದ್ಧೆಯಿಂದ ಆಲಿಸುತ್ತಿದ್ದು, ನಂತರ ಸ್ನೇಹಿತರ ನೋಟ್ಸ್ ತಂದು ಮನೆಯಲ್ಲಿ ತಮ್ಮ ತಂದೆಯವರು ಟಾಕಿಂಗ್ ಲ್ಯಾಪ್ ಟಾಪ್ ನಲ್ಲಿ ರೆಕಾರ್ಡ್ ಮಾಡಿಕೊಂಡು ನಂತರ ಮನೆಯಲ್ಲಿ ಮತ್ತೊಮ್ಮೆ ಕೇಳಿಸಿಕೊಳ್ಳುತ್ತಿದ್ದರು. ಪ್ರತಿನಿತ್ಯ ಆರು ಗಂಟೆಗಳ ಕಾಲ ಪಾಠವನ್ನು ಕೇಳಿಸಿಕೊಳ್ಳುತ್ತಿದ್ದ ಲಕ್ಷ್ಮೀ ಕಾಲೇಜಿನಲ್ಲಿ ಶಿಕ್ಷಕರು ಹಾಗೂ ಪ್ರಾಂಶುಪಾಲರ ಸಹಕಾರದಿಂದ
ಕಲಾ ವಿಭಾಗದಲ್ಲಿ ಒಟ್ಟು 548 ಅಂಕಗಳನ್ನು ಗಳಿಸಿದ್ದು
ಕನ್ನಡ 98
ಇಂಗ್ಲಿಷ್ 72
ಇತಿಹಾಸ 97
ಅರ್ಥಶಾಸ್ತ್ರ 90
ಸಮಾಜ ಶಾಸ್ತ್ರ 96 ಅಂಕಗಳನ್ನು ಪಡೆಯುವಂತಾಯಿತು ಎಂದು ತನ್ನ ಹಿಂದಿನ ಹಾದಿಯನ್ನ ನೆನೆಯುತ್ತಾರೆ.ಮುಂದಿನ ದಿನಗಳಲ್ಲಿ ಐಎಎಸ್ ಪರೀಕ್ಷೆ ಬರೆಯುವ ಬಯಕೆಯನ್ನು ಹೊಂದಿದ್ದೇನೆಂಬ ಲಕ್ಷ್ಮೀ ಹೇಳಿಕೊಂಡಿದ್ದಾರೆ.
ಮಲ್ಲಪ್ಪ. ಎಂ.ಶ್ರೀರಾಮ್. ಪವರ್ ಟಿವಿ. ಚಿಕ್ಕಬಳ್ಳಾಪುರ