ಬಿಜೆಪಿ ವೆಬ್​ಸೈಟ್​ ಹ್ಯಾಕ್ ಮಾಡಿದ ‘ಪಾಪಿ’ಸ್ತಾನ್ ಹ್ಯಾಕರ್ಸ್..!

0
264

ರಾಯ್​ಪುರ್ : ಪಾಕಿಸ್ತಾನದ ಹ್ಯಾಕರ್​ಗಳು ಬಿಜೆಪಿ ವೆಬ್​ಸೈಟ್​ ಹ್ಯಾಕ್ ಮಾಡಿದ್ದು, ಸರಣಿ ಸ್ಫೋಟದ ಬೆದರಿಗೆ ಒಡ್ಡಿದ್ದಾರೆ.
ಛತ್ತೀಸ್​ಗಢದ ಬಿಜೆಪಿ ರಾಜ್ಯಘಟಕದ ವೆಬ್​ಸೈಟ್​ ಅನ್ನು ಹ್ಯಾಕ್ ಮಾಡಿರೋ ಹ್ಯಾಕರ್ಸ್, ”ನಾವು ಪಾಕಿಸ್ತಾನದ ಅಟ್ಯಾಕರ್​ಗಳು’ಅಂತ ವೆಬ್​ ಸೈಟ್​ನಲ್ಲಿ ಮೆಸೇಜ್ ಪೋಸ್ಟ್ ಮಾಡಿದ್ದಾರೆ.
ವೆಬ್​ಸೈಟ್​ನಲ್ಲಿ ಪಾಕಿಸ್ತಾನದ ಧ್ವಜ ಮತ್ತು ಆರ್ಮಿ ಫೋಟೋಗಳನ್ನು ಅಪ್​ಲೋಡ್​ ಮಾಡಿದ್ದಾರೆ. ಜೊತೆಗೆ ಸರಣಿ ಸ್ಫೋಟದ ಬೆದರಿಕೆಯನ್ನು ಒಡ್ಡಿದ್ದಾರೆ. ಅಷ್ಟೇ ಅಲ್ಲದೆ ಕಾಶ್ಮೀರದ ಮೇಲೆ ಹಿಡಿತ ಸಾಧಿಸೋ ಪ್ರಯತ್ನ ಮಾಡ್ಬೇಡಿ ಅಂತಲೂ ವೆಬ್​ಸೈಟ್​ನಲ್ಲಿ ಮೆಸೇಜ್ ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಛತ್ತೀಸ್​ಗಢ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಡಿ.ಮಶಾಕೆ ಪ್ರತಿಕ್ರಿಯೆ ನೀಡಿದ್ದು, ನಮ್ಮ ವೆಬ್​ ಸೈಟ್​ ಸೇರಿದಂತೆ 100ಕ್ಕೂ ಹೆಚ್ಚು ವೆಬ್​ ಸೈಟ್​ಗಳನ್ನು ಪಾಕಿಸ್ತಾನ ಮೂಲದ ಹ್ಯಾಕರ್ಸ್ ಹ್ಯಾಕ್ ಮಾಡಿದ್ದಾರೆ. ಈ ಬಗ್ಗೆ ನಾವು ಸೈಬರ್ ಪೊಲೀಸರಿಗೆ ದೂರು ನೀಡಿದ್ದೇವೆ ಅಂತ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here