ಐಶ್ವರ್ಯ ಬೆನ್ನು ಮುಟ್ಟಿದ್ರಂತೆ ಚೇತ‌ನ್..!

0
146

ಸ್ಯಾಂಡಲ್ ವುಡ್ ನಲ್ಲಿ #MeToo ‘ಬಿರುಗಾಳಿ’ ಚೇತನ್ ಕಡೆಗೆ ಬೀಸಿದೆ.‌ ನಟಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಆ ಬಗ್ಗೆ ಚರ್ಚೆ ಆಗ್ತಿರೋದು ಗೊತ್ತೇ ಇದೆ. ಈಗ ಈ ಕೇಸ್ ಗೆ ಸಂಬಂಧಿಸಿದಂತೆ ಶ್ರುತಿ ಪರ ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿದ ಮೈನಾ ಚೇತನ್ ವಿರುದ್ಧವೇ ಈಗ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ‌.
ಹೀಗೆ ಚೇತನ್ ಮೇಲೆ ಆರೋಪ ಮಾಡಿದವ್ರು ಅರ್ಜುನ್ ಸರ್ಜಾ ಅವ್ರ ಮಗಳು, ನಟಿ ಐಶ್ವರ್ಯ.
ಐಶ್ವರ್ಯ ನಟನೆಯ ಪ್ರೇಮಬರಹ ಮೂವಿಗೆ ಹೀರೋ ಆಗಿ ಚಂದನ್ ಆಯ್ಕೆ ಆಗೋ ಮುಂಚೆ ಇದೇ ಮೈನಾ ಚೇತನ್ ಸೆಲೆಕ್ಟ್ ಆಗಿದ್ರು. ಫೋಟೋ ಶೂಟ್ ಟೈಮ್ ನಲ್ಲಿ ನನ್ನ ಬೆನ್ನು ಟಚ್ ಮಾಡಿದ್ರು. ನಾನು ಊಟಕ್ಕೆ ಬರಲ್ಲ ಅಂದ್ರೂ ಪದೇ ಪದೇ ಊಟಕ್ಕೆ ಕರೆದಿದ್ರು ಅಂತ ಐಶ್ವರ್ಯ ಹೇಳಿದ್ದಾರೆ. ಶ್ರುತಿ ಅರ್ಜುನ್ ಸರ್ಜಾ ಬಗ್ಗೆ ಮಾಡಿರೋ ಆರೋಪದ ಬಗ್ಗೆ ರಿಯಾಕ್ಟ್ ಮಾಡಿರೋ ಐಶ್ವರ್ಯ, ಚೇತನ್ ನನ್ನ ಜೊತೆ ಹೀಗೆ ನಡೆದುಕೊಂಡಿದ್ರು. ಇದನ್ನು ಲೈಂಗಿಕ ಕಿರುಕುಳ ಅನ್ನಬಹುದೇ ಅಂತ ಪ್ರಶ್ನಿಸಿದ್ದಾರೆ.‌

LEAVE A REPLY

Please enter your comment!
Please enter your name here