Home ಸಿನಿ ಪವರ್ ಸ್ಯಾಂಡಲ್​ವುಡ್​​ಗೆ ಜೋಡಿ ನಿರ್ದೇಶಕಿಯರ ಎಂಟ್ರಿ..!

ಸ್ಯಾಂಡಲ್​ವುಡ್​​ಗೆ ಜೋಡಿ ನಿರ್ದೇಶಕಿಯರ ಎಂಟ್ರಿ..!

ಅದು 1970-80ರ ದಶಕ ಭಗವಾನ್ ಆ್ಯಕ್ಷನ್ ಕಟ್ ಹೇಳುತ್ತಿದ್ದ ಚಿತ್ರಗಳಲ್ಲಿ ದೊರೈ ಕ್ಯಾಮೆರಾ ಕೈಚಳ ತೋರಿಸ್ತಾ ಇದ್ರು. ದೊರೈ ಭಗವಾನ್ ಒಬ್ಬರೇ ಅನ್ನೋ ಮಟ್ಟಿಗೆ ದೊರೈ ಭಗವಾನ್ ಜೋಡಿ ಇಂದಿಗೂ ಹೆಸರುವಾಸಿ. ದೊರೈ ಅಗಲಿದ ಮೇಲೂ ಭಗವಾನ್ ಆತ್ಮೀಯ ಗೆಳೆಯನ ಹೆಸರನ್ನು ಜೊತೆಯಲ್ಲಿಟ್ಟು ಕೊಂಡು ದೊರೈ ಭಗವಾನ್ ಅಂತಲೇ ಕರೆಸಿಕೊಳ್ಳುತ್ತಿದ್ದಾರೆ.
ಅದೇ ರೀತಿ ರಾಜನ್ ಲಿರಿಕ್ಸ್ಗೆ ನಾಗೇಂದ್ರ ಮ್ಯೂಸಿಕ್ ನೀಡ್ತಾಯಿದ್ರು. ರಾಜನ್ ಮತ್ತು ನಾಗೇಂದ್ರ ಇಬ್ಬರೂ ಬೇರೆ ಬೇರೆ ಆದರೂ ಒಬ್ಬರ ಸಾಹಿತ್ಯ ಇನ್ನೊಬ್ಬರ ಮ್ಯೂಸಿಕ್ನಿಂದ ರಾಜನ್ ನಾಗೇಂದ್ರ ಅನ್ನೋ ಹೆಸರೇ ಜನಪ್ರಿಯವಾಗಿ ಸಿನಿರಸಿಕರ ಮನದಲ್ಲಿ ಭದ್ರವಾಗಿ ನೆಲಯೂರಿದೆ.
ಹೀಗೆ ಸ್ಯಾಂಡಲ್ವುಡ್ನಲ್ಲಿ ದೊರೈ-ಭಗವಾನ್ , ರಾಜನ್-ನಾಗೇಂದ್ರ ಜೋಡಿ ಅತ್ಯಂತ ಸೂಪರ್ ಹಿಟ್ ಜೋಡಿ. ಈ ಕಾಂಬಿನೇಷನಲ್ಲಿ ಬಂದ ಸಿನಿಮಾಗಳು, ಹಾಡುಗಳು ಸೂಪರ್ ಡೂಪರ್ ಹಿಟ್ ಮಾತ್ರವಲ್ಲ.. ಅವು ಎವರ್ ಗ್ರೀನ್ ಕೂಡ. ಆದರೆ, ಇತ್ತೀಚೆಗೆ ಇಂಥಾ ಜೋಡಿಗಳ ಸಿನಿಮಾ ಕಡಿಮೆ ಆಗುತ್ತಾ ಇವೆ. ಕಾಂಬಿನೇಷನ್ ಸಿನಿಮಾಗಳು ಅಪರೂಪ. ಒಂದು ಸಿನಿಮಾ ಒಟ್ಟಿಗೆ ಮಾಡಿದವರು ಮತ್ತೊಂದು ಸಿನಿಮಾದಲ್ಲಿ ಒಂದಾಗೋದು ಅಪರೂಪ. ಆದರೆ, ಈಗ ಮಹಿಳಾ ಡೈರೆಕ್ಟರ್ ಇಬ್ಬರು ಒಟ್ಟಾಗಿದ್ದಾರೆ.
ದೊರೈ-ಭಗವಾನ್, ರಾಜನ್-ನಾಗೇಂದ್ರ ಅವರಂತೆ ಒಟ್ಟೊಟ್ಟಿಗೆ ಸಾಲು ಸಾಲು ಸಿನಿಮಾಗಳನ್ನು ಮಾಡಿದ ಡೈರೆಕ್ಟರ್ ಗಳು ಇವರಲ್ಲ. ಆದರೆ. ಇಬ್ಬರು ಮಹಿಳಾ ನಿರ್ದೇಶಕಿಯರು ಸೇರಿ ಒಟ್ಟಿಗೆ ಸಿನಿಮಾ ಮಾಡ್ತಿರೋದು ವಿಶೇಷ,
ಹೌದು, ದೊರೈ-ಭಗವಾನ್, ರಾಜನ್-ನಾಗೇಂದ್ರ ಅನ್ನೋ ಸ್ನೇಹಿತರು ಎರಡು ದೇಹ ಒಂದು ಆತ್ಮದಂತೆ ಚಿತ್ರರಂಗದಲ್ಲಿ ಛಾಪು ಮೂಡಿಸಿದ ರೀತಿಯಲ್ಲೀಗ ಆತ್ಮೀಯ ಗೆಳತಿಯರಾದ ಸಾಯಿಪೂರ್ಣಾ ಮತ್ತು ಸಾಯಿ ರಶ್ಮಿ ಎಂಬಿಬ್ಬರು ಸ್ನೇಹಿತೆಯರು ಒಟ್ಟಿಗೇ ಒಂದು ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳೋ ಸಾಹಸಕ್ಕೆ ಕೈ ಹಾಕಿದ್ದಾರೆ.
ಸಾಯಿಪೂರ್ಣ ಮತ್ತು ಸಾಯಿ ರಶ್ಮಿ ನಿರ್ದೇಶಿಸುತ್ತಿರುವ ಚಿತ್ರದ ಹೆಸರು ‘ಚಾರುಮತಿ’. ಈ ಚಿತ್ರಕ್ಕೆ ಇಬ್ಬರು ಡೈರೆಕ್ಟರ್ ಇರುವಂತೆ ಇಬ್ಬರು ನಾಯಕರು, ಇಬ್ಬರು ನಾಯಕಿಯರಂತೆ..! ಹೊಸ ಚಿತ್ರತಂಡದ ಹೊಸ ಸಿನಿಮಾ ಚಾರುಮತಿ. ತಾರಗಣದ ಬಗ್ಗೆ ಇನ್ನೂ ರಿವೀಲ್ ಆಗಿಲ್ಲ. ಶೀಘ್ರದಲ್ಲೇ ಅದು ಗೊತ್ತಾಗುತ್ತದೆ. ಇನ್ನು ಜೂನ್ನಲ್ಲಿ ಶೂಟಿಂಗ್ ಶುರುಮಾಡಲು ಪ್ಲಾನ್ ಮಾಡಿರೋದಾಗಿ ನಿರ್ದೇಶಕಿ ಸಾಯಿಪೂರ್ಣ ಹೇಳಿದ್ದಾರೆ.
ಒಟ್ನಲ್ಲಿ ದೊರೈ-ಭಗವಾನ್, ರಾಜನ್-ನಾಗೇಂದ್ರ ಅವರಂತೆ ಜೋಡಿಯಾಗಿ ಸ್ನೇಹಿತೆಯರಿಬ್ಬರು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಇಬ್ಬರು ಸ್ನೇಹಿತರಿಗೆ ಶುಭವಾಗಲಿ. ಈ ಜೋಡಿಯ ಸಿನಿಮಾ ಚಾರುಮತಿ ಗೆಲ್ಲಲಿ. ಈ ಕಾಂಬಿನೇಷನ್ನಲ್ಲಿ ಸ್ಯಾಂಡಲ್ವುಡ್ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳು ಬರಲಿ. ಈ ಜೋಡಿ ಅಚ್ಚಳಿಯದ ಹೆಸರಾಗಿ ಸ್ಯಾಂಡಲ್ ವುಡ್ ನಲ್ಲಿ ನೆಲೆ ನಿಲ್ಲಲ್ಲಿ ಅಂತ ಹಾರೈಸೋಣ..

-ಚರಿತ ಪಟೇಲ್

LEAVE A REPLY

Please enter your comment!
Please enter your name here

- Advertisment -

Most Popular

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

ಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೆಂಗಳೂರು :  ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಗೆ ಅಪಘಾತವಾಗಿದ್ದು, ಸಂಚಾರಿ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಸಂಚಾರಿ ವಿಜಯ್ ತಲೆಗೆ...

Recent Comments