Saturday, October 1, 2022
Powertv Logo
HomePower Specialಸಂತಾನ ಭಾಗ್ಯ ಕರುಣಿಸುವ ಅಂಬೆಗಾಲು ಕೃಷ್ಣ

ಸಂತಾನ ಭಾಗ್ಯ ಕರುಣಿಸುವ ಅಂಬೆಗಾಲು ಕೃಷ್ಣ

ಚನ್ನಪಟ್ಟಣ : ಮದುವೆ ಆಗಿ ವರ್ಷಗಳೇ ಕಳೆದಿದ್ರು ಅದೆಷ್ಟೋ ದಂಪತಿಗಳು ಮಕ್ಕಳಿಲ್ಲದೆ ಕೊರಗುತ್ತಾರೆ. ತೋಳಲ್ಲಿ ಕಂದನನ್ನ ಎತ್ತಿ ಆಡಿಸಬೇಕು, ಮುದ್ದಾಡ ಬೇಕು ಅನ್ನೋ ಆಸೆಗಳನ್ನ ಇಟ್ಟುಕೊಂಡು ಅದೆಷ್ಟೋ ದಂಪತಿಗಳು ನಮ್ಮ ಕಣ್ಣ ಮುಂದೆಯೇ ಇದ್ದಾರೆ. ಮಕ್ಕಳಾಗದೇ ಇದ್ದವರಿಗೆ ಸಂತಾನ ಭಾಗ್ಯ ಸಿಕ್ಕರೆ ಆಗುವ ಸಂತೋಷ ಹೇಳೋಕೆ ಸಾಧ್ಯವಿಲ್ಲ ಅಲ್ವಾ..? ಮಕ್ಕಳಾಗದವರು ಒಮ್ಮೆಯಾದ್ರೂ ಈ ದೇವರ ಸನ್ನಿದಿಯಲ್ಲಿ ಬಂದು ಒಮ್ಮೆ ಪೂಜಿಸಿದರೆ ಸಾಕು ಸಂತಾನ ಭಾಗ್ಯ ಪಾಪ್ತಿಯಾಗುತ್ತಂತೆ ಈ ಅಂಬೆಗಾಲು ಕೃಷ್ಣನ ಕೃಪೆಯಿಂದ.

ಸಂತಾನ ಕರುಣಿಸಬೇಕು ಅಂದ್ರೆ ಈ ಅಂಬೆಗಾಲು ಮುದ್ದು ಕೃಷ್ಣನಿಗೆ ಏನ್ ನೀಡಬೇಕು..? ಮುಂದೆ ಓದಿ
ಮೊದಲಿಗೆ ಅಂಬೆಗಾಲು ಶ್ರೀ ಕೃಷ್ಣನ ಸನ್ನಿಧಿಗೆ ತೆರಳಿ ದೇವರಿಗೆ ಹರಕೆ ಕಟ್ಟಿಕೊಳ್ಳಬೇಕು. ದೊಡ್ಡದಾಗಲಿ ಚಿಕ್ಕದಾಗಲಿ, ತೊಟ್ಟಿಲನ್ನು ಕಾಣಿಕೆಯಾಗಿ ಅರ್ಪಿಸುವೆ ಎಂದು ದಂಪತಿಗಳು ಶೃದ್ಧೆ ಭಕ್ತಿಯಿಂದ ಈ ಅಂಬೆಗಾಲು ಕೃಷ್ಣನನ್ನು ಪ್ರಾರ್ಥಿಸಿದರೆ ಬಲು ಶೀಘ್ರದಲ್ಲೆ ಸಂತಾನ ಭಾಗ್ಯ ಕರುಣಿಸುತ್ತಾನೆ ಎನ್ನುವ ನಂಬಿಕೆಯಿದೆ. ಅದರಂತೆ ಅದೆಷ್ಟೊ ಜನರು ಮಕ್ಕಳನ್ನ ಪಡೆದುಕೊಂಡಿದ್ದಾರೆ.

ಇಲ್ಲಿರುವ ಕೃಷ್ಣನು ಅಪ್ರಮೇಯಸ್ವಾಮಿ ಆಗಿದ್ದರೂ ಸಹ, ಜನಪ್ರೀಯವಾಗಿ ಈ ಕೃಷ್ಣನನ್ನು ಅಂಬೆಗಾಲು ಕೃಷ್ಣ ಎಂದೆ ಕರೆಯುತ್ತಾರೆ. ಅಂಬೆಗಾಲಿಡುತ್ತಿರುವ ಭಂಗಿಯಲ್ಲಿರುವುದರಿಂದ ಈ ಕೃಷ್ಣನ ವಿಗ್ರಹವು ಸಾಕಷ್ಟು ಆಕರ್ಷಣೀಯವಾಗಿ ವಿಭಿನ್ನವಾಗಿ ಕಂಡುಬರುತ್ತದೆ. ಜೊತೆಗೆ ಪ್ರತಿ ಶನಿವಾರ ಬೆಣ್ಣೆ ಪ್ರಿಯನಿಗೆ ವಿಶೇಷವಾಗಿ ಬೆಣ್ಣೆಯಿಂದ ಅಲಂಕಾರ ಮಾಡಲಾಗುತ್ತೆ.

ದೇವಸ್ಥಾನ ಎಲ್ಲಿದೆ..? ಸಮಯ

ಅಪ್ರಮೇಯ ದೇವಸ್ಥಾನವು ಚನ್ನಪಟ್ಟಣದಿಂದ ಕೇವಲ 3 ಕಿ.ಲೋ ದೂರದಲ್ಲಿರುವ ದೊಡ್ಡ ಮಳ್ಳೂರಿನಲ್ಲಿ ಇದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಹೋಗುವಾಗ ಚನ್ನಪಟ್ಟಣ ದಾಟಿದ ನಂತರ ಎಡಗಡೆಯಲ್ಲಿ ಕಾಣಸಿಗುತ್ತದೆ. ಈ ದೇವಸ್ಥಾನವು ಭಕ್ತರಿಗೆಂದು ಪ್ರತಿ ದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12:30ರವರೆಗೂ ತೆರದಿರುತ್ತದೆ ಹಾಗೂ ಸಂಜೆ 5:30ರಿಂದ ರಾತ್ರಿ 8:30ರವರೆಗೆ ತೆರೆದಿರುತ್ತದೆ. ವೈಕುಂಠ ಏಕಾದಶಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರಗುತ್ತವೆ.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments