ಚಂದ್ರಯಾನ 2: ಮತ್ತೊಂದು ಮೈಲುಗಲ್ಲಿಗೆ ಇಸ್ರೋ ಸಜ್ಜು

0
345

ಚಂದ್ರಯಾನ-1ರ ಅಭೂತಪೂರ್ವ ಯಶಸ್ಸಿನಿಂದ ಜಗತ್ತೇ ತಿರುಗಿ ನೋಡುವಂತೆ ಮಾಡಿದ ಇಸ್ರೋ ಇದೀಗ ಮತ್ತೊಂದು ಸಾಧನೆಗೆ ಸಿದ್ದವಾಗಿ ನಿಂತಿದೆ.. ಇದೀಗ ಚಂದ್ರಯಾನ-2  ನಾಳೆ (ಜುಲೈ 15) ಚಂದ್ರನತ್ತ ತನ್ನ ಪ್ರಯಾಣ ಆರಂಭಿಸಲಿದೆ..ಶ್ರೀಹರಿಕೋಟಾದ  ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ನಾಳೆ ಮುಂಜಾನೆ 2 ಗಂಟೆ 51 ನಿಮಿಷಕ್ಕೆ 3.8 ಟನ್ ತೂಕದ ಚಂದ್ರಯಾನ-2 ಉಪಕರಣಗಳನ್ನು ಹೊತ್ತು ಜಿಎಸ್ಎಲ್ವಿ ಮಾರ್ಕ್-3 ರಾಕೆಟ್ ಉಡಾವಣೆಗೊಳ್ಳಲಿದೆ..

ಚಂದ್ರಯಾನ-2ಗೆ ಒಟ್ಟು 978 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಯೋಜನೆಯನ್ನು ಭಾರತವೇ ಅಭಿವೃದ್ದಿಪಡಿಸಿದೆ.   ಇದರಲ್ಲಿ  603 ಕೋಟಿಯನ್ನು ಆರ್ಬಿಟರ್, ಲ್ಯಾಂಡರ್, ರೋವರ್, ನ್ಯಾವಿಗೇಷನ್ ಮತ್ತು ಗ್ರೌಂಡ್ ಸಪೋರ್ಟ್ ನೆಟ್ವರ್ಕ್ಗಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಉಳಿದ 375 ಕೋಟಿ ರೂ. ಗಗನನೌಕೆಯನ್ನು ಹೊತ್ತೊಯ್ಯಲಿರುವ ರಾಕೆಟ್ ಜಿಎಸ್ಎಲ್ವಿಗೆ ಬಳಸಿಕೊಳ್ಳಲಾಗಿದೆ.  ಈ ರಾಕೆಟ್ಗೆ ‘ಬಾಹುಬಲಿ’ ಎಂದು ಹೆಸರಿಡಲಾಗಿದೆ. ಇಲ್ಲಿ ಲ್ಯಾಂಡರ್ ಗೆ  ವಿಕ್ರಮ್ ಸಾರಾಭಾಯ್ ಹೆಸರಿಡಲಾಗಿದ್ದು, ರೋವರ್ ಗೆ ಪ್ರಜ್ಞಾನ ಎಂಬ ಹೆಸರಿಡಲಾಗಿದೆ.

ಚಂದ್ರಯಾನ -2 ಭಾರತದ ಪ್ರತಿಷ್ಠಿತ ಯಾನಗಳಲ್ಲಿ ಒಂದಾಗಿದ್ದು ದೇಶಿಯ ತಂತ್ರಜ್ಞಾನದಿಂದಲೇ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಜಿಎಸ್ಎಲ್ವಿ ಮಾರ್ಕ್ 3 ರಾಕೆಟ್ ನಿರ್ಮಾಣದಲ್ಲಿ ದೇಶದ 500 ಕೈಗಾರಿಕೆಗಳು ಮತ್ತು ಚಂದ್ರಯಾನ 2 ನಿರ್ಮಾಣದಲ್ಲಿ 150 ಕೈಗಾರಿಕೆಗಳು ನೆರವಾಗಿದ್ದವು.

ಚಂದ್ರಯಾನ -2ರಿಂದ ಚಂದ್ರ ನ ಮೂಲದ ಇನ್ನಷ್ಟು ಮಾಹಿತಿ ಸಿಗಲಿದೆ. ಚಂದ್ರನ ಮೇಲ್ಮೆನಲ್ಲಿ ನೀರಿನ ಕಣಗಳ ಹಂಚಿಕೆ ಹಾಗೂ ಪ್ರಸರಣವನ್ನು ಸಂಶೋಧನೆಯಿಂದ ತಿಳಿದುಕೊಳ್ಳಲು ಚಂದ್ರಯಾನ 2 ಸಹಕಾರಿಯಾಗಲಿದೆ.

ಚಂದ್ರಯಾನದ ಉದ್ದೇಶಗಳು:  ಚಂದ್ರಯಾನ -2ರಿಂದ ಚಂದ್ರ ನ ಮೂಲದ ಇನ್ನಷ್ಟು ಮಾಹಿತಿ ಸಿಗಲಿದೆ. ಚಂದ್ರನ ಮೇಲ್ಮೆನಲ್ಲಿ ನೀರಿನ ಕಣಗಳ ಹಂಚಿಕೆ ಹಾಗೂ ಪ್ರಸರಣವನ್ನು ಸಂಶೋಧನೆಯಿಂದ ತಿಳಿದುಕೊಳ್ಳಬೇಕಿದೆ.

ಮೇಲ್ಮೆ, ಮೇಲ್ಮೆ ಕೆಳಭಾಗ ಹಾಗೂ ಬಾಹ್ಯಾಗೋಳದಲ್ಲಿ ನೀರಿನ ಅಣುಗಳ ಇರುವಿಕೆ ಕುರಿತು ನಡೆಯುವ ಸಂಶೋಧನೆಯು, ಗ್ರಹದ ನೀರಿನ ಮೂಲ ತಿಳಿಯಲು ಸಹಕಾರಿಯಾಗಲಿದೆ.

LEAVE A REPLY

Please enter your comment!
Please enter your name here