ಚಂದನ್ ಶೆಟ್ಟಿ -ನಿವೇದಿತಾ ಮದುವೆಗೆ ಮುನ್ನುಡಿ!

0
2495

ಮೈಸೂರು : ರ‍್ಯಾಪರ್, ಬಿಗ್​ಬಾಸ್ ವಿನ್ನರ್ ಚಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಗೊಂಬೆ ಖ್ಯಾತಿಯ ನಿವೇದಿತಾ ಗೌಡ ಮದುವೆಗೆ ಇಂದು ಮುನ್ನುಡಿ ಬರೆಯಲಾಗಿದೆ. ಅರ್ಥಾತ್ ಚಂದನ್ ಹಾಗೂ ನಿವೇದಿತಾ ನಿಶ್ಚಿತಾರ್ಥ ನೆರವೇರಿದೆ.
ಇತ್ತೀಚೆಗೆ ಮೈಸೂರು ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡಾಗೆ ಉಂಗುರ ತೊಡಿಸಿ ಪ್ರಪೋಸ್ ಮಾಡಿದ್ದರು. ಅದು ಸಿಕ್ಕಾಪಟ್ಟೆ ವಿವಾದಕ್ಕೆ ಕಾರಣವಾಗಿತ್ತು. ದಸರಾ ವೇದಿಕೆಯಲ್ಲಿ ಚಂದನ್ -ನಿವೇದಿತಾ ಹೀಗೆ ವರ್ತಿಸಿದ್ದು ಸರಿಯಲ್ಲ ಎಂದು ಅನೇಕ ಟೀಕೆಗಳು ಬಂದಿದ್ದವು. ಇಂದು ಮೈಸೂರಲ್ಲಿ ಯುವ ಜೋಡಿಯ ನಿಶ್ವಿತಾರ್ಥ ನಡೆದಿದೆ. ಖಾಸಗಿ ಹೋಟೆಲ್ಲೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರ ಕುಟುಂಬದವರು, ಹತ್ತಿರದ ಸಂಬಂಧಿಕರು, ಆಪ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here