Home ಸಿನಿ ಪವರ್ ಚಂದನ್ ಶೆಟ್ಟಿ ವಿವಾದಕ್ಕೆ ಸಿಲುಕಿರುವುದು ಇದೇ ಮೊದಲಲ್ಲ..!

ಚಂದನ್ ಶೆಟ್ಟಿ ವಿವಾದಕ್ಕೆ ಸಿಲುಕಿರುವುದು ಇದೇ ಮೊದಲಲ್ಲ..!

ಬಿಗ್​ ಬಾಸ್​ ಖ್ಯಾತಿಯ ಚಂದನ್ ಶೆಟ್ಟಿ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಕೋಲು ಮಂಡೆ ಜಂಗಮ ದೇವ ಹಾಡಿನಲ್ಲಿ ನಮ್ಮ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ ಅಂತ ಮಾದಪ್ಪನ ಭಕ್ತರು ಚಂದನ್ ಶೆಟ್ಟಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿದ್ದಾರೆ.

ಚಂದನ್ ಶೆಟ್ಟಿ ವಿವಾದದಲ್ಲಿ  ಸಿಲುಕುತ್ತಿರುವುದು ಇದೇ ಮೊದಲೇನು ಅಲ್ಲ. ಚಂದನ್ ಶೆಟ್ಟಿ ಪಾಪ್ಯುಲರ್ ಆದಲ್ಲಿಂದಲೂ ಒಂದಲ್ಲ ಒಂದು ವಿವಾದಗಳಿಗೆ ತುತ್ತಾಗುತ್ತಲೇ ಇದ್ದಾರೆ.

3 ಪೆಗ್​​​ ಕಿರಿಕ್​​​ : ಚಂದನ್ ಶೆಟ್ಟಿ 2015ಕ್ಕೂ ಮೊದಲು ಕೆಲವೊಂದು ರ್ಯಾಪ್ ಸಾಂಗ್​ಗಳನ್ನು ಮಾಡಿದ್ದರೂ ದೊಡ್ಡ ಮಟ್ಟಿನ ಯಶಸ್ಸು ಸಿಕ್ಕಿದ್ದು 2015ರಲ್ಲಿ ಹಾಳಾಗೋದೆ ರ್ಯಾಪ್​ ಸಾಂಗ್  ರಿಲೀಸ್ ಆದ್ಮೇಲೆ. ಆ ಸಾಂಗ್ ಬಂದ ವರ್ಷದ ನಂತರ 3 ಪೆಗ್ ಸಾಂಗ್ ಬಂತು.  ಮೂರೇ ಮೂರು ಪೆಗ್ಗಿಗೆ `ತಲೆ ಗಿರ ಗಿರ ಅಂದಿದೆ’ ಅಂತ ನಟಿ ಐಂದ್ರಿತಾ ರೇ ಜೊತೆ ಚಂದನ್ ಸಖತ್ ಸ್ಟೆಪ್​​ ಹಾಕಿ ಸದ್ದು ಮಾಡಿದ್ರು.  ಜೊತೆಗ ಸಣ್ಣ ಮಟ್ಟಿಗೆ ವಿವಾದಕ್ಕೂ ಗುರಿಯಾದ್ರು…! ಚಂದನ್ ಮದ್ಯ ಸೇವನೆಯನ್ನು ಪ್ರಚೋದಿಸುವಂತೆ ಹಾಡು ಮಾಡಿದ್ದಾರೆ ಅನ್ನೋ ಕಿರಿಕ್ ಕೂಡ ಕೇಳಿಬಂತು. ಆದ್ರೆ ಅದು ಅಂಥಾ ದೊಡ್ಡಮಟ್ಟಿನ ವಿವಾದ ಆಗ್ಲಿಲ್ಲ. ಯುವಕರು ಆ ಹಾಡಿಗೆ ಫಿದಾ ಆಗಿ, ಹಾಡು ಸೂಪರ್ ಹಿಟ್ ಆಯ್ತು.

ಚಂದನ್ ಗಾಂಜಾ ವಿವಾದ  : 2018ರಲ್ಲಿ ಚಂದನ್ ಶೆಟ್ಟಿ ಬಿಗ್ ಬಾಸ್ (ಸೀಸನ್ 5) ರಿಯಾಲಿಟಿ ಶೋ ವಿನ್ನರ್ ಆದ್ರು. ಆ ಬಳಿಕ ಅವರು ಮೂರು ವರ್ಷದ ಹಿಂದೆ ಮಾಡಿದ್ದ ಹಾಡೊಂದು ಸದ್ದು ಮಾಡಿತ್ತು.  2015ರಲ್ಲಿ ಬಿಡುಗಡೆ ಆಗಿದ್ದ ಅಂತ್ಯ ಸಿನಿಮಾದ ಭಂಗಿ ಹಾಡಿನಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತುಗಳ ಸೇವನೆಗೆ ಉತ್ತೇಜನ ನೀಡುವಂಥಾ ಸಾಹಿತ್ಯ ಇದೆ ಅಂತ ಚಂದನ್ ಶೆಟ್ಟಿ ವಿವಾದಕ್ಕೀಡಾಗಿದ್ದರು. “ ಧಮ್ಮು ಬಿಡಬೇಡ, ಅದೇ ನಮಗೆ ಬಿಯರ್ ಎತ್ತೋದು ಹಳತಾಗಿದೆ… ಗಾಂಜಾ ಎಳೆಯೋದು ಹೊಸದಾಗಿದೆ.. ಭಂಗಿ ಎಳಕೊಂಡು ನಗುತಾ ಇರು, ಶಿವನು ಹಿಡಿದರೆ ಭಂಗಿಯಂತೆ, ನಾವು ಹಿಡಿದರೆ ಕಂಬಿ ಅಂತೆ, ಬಿಡಬೇಡ ಧಮ್ಮು, ನಮ್ಮಯ ಪಾಲಿಗೆ ಇದೇ ವಿಸ್ಕಿ ರಮ್ಮು’’ ಅನ್ನೋ ಸಾಲುಗಳು ಆ ಹಾಡಿನಲ್ಲಿತ್ತು. 

ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಸಿಸಿಬಿ ತಂಡ ಈ ಹಾಡಿನ ವಿಚಾರದಲ್ಲಿ ಚಂದನ್ ಶೆಟ್ಟಿಗೆ ನೋಟಿಸ್ ನೀಡಿತ್ತು.  ಗಾಂಜಾ ಮತ್ತಿತರ ಮಾದಕ ವಸ್ತುಗಳ ಸೇವನೆಗೆ ಉತ್ತೇಜನ ನೀಡುವಂಥಾ ಸಾಹಿತ್ಯ ನಿಮ್ಮ ಹಾಡಿನಲ್ಲಿದೆ. ನಾವೇಕೆ ನಿಮ್ಮ ಮೇಲೆ ಪ್ರಕರಣ ದಾಖಲಿಸ  ಬಾರದು ಅಂತ ಚಂದನ್ ಶೆಟ್ಟಿಯನ್ನು ಪೊಲೀಸರು ನೋಟಿಸ್​ನಲ್ಲಿ ಪ್ರಶ್ನಿಸಿದ್ದರು. ನಂತರ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು.

ದಸರಾ ವೇದಿಕೆಯಲ್ಲಿ ಪ್ರೊಪೋಸ್ :  2019ರಲ್ಲಿ ಮೈಸೂರಲ್ಲಿ ದಸರಾ ವೇದಿಕೆಯಲ್ಲಿ ನಿವೇದಿತಾ ಗೌಡಗೆ ಪ್ರಪೋಸ್ ಮಾಡುವ ಮೂಲಕ ಚಂದನ್ ಶೆಟ್ಟಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ರು.  ಚಂದನ್ ಶೆಟ್ಟಿ ಸಾರ್ವಜನಿಕ ವೇದಿಕೆಯನ್ನು ದುರುಪಯೋಗ ಪಡಿಸಿಕೊಂಡು ಪ್ರೇಯಸಿಗೆ ಪ್ರಪೋಸ್ ಮಾಡಿದ್ದಾರೆ ಅಂತ ವಿವಾದ ದೊಡ್ಡಮಟ್ಟಿನಲ್ಲಿ ಸದ್ದು ಮಾಡಿತ್ತು.  ಬಳಿಕ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದರು.

ಕ್ವಾರಂಟೀನ್ ಕ್ಯಾತೆ : ಕೊರೋನಾ ಹಿನ್ನೆಲೆಯಲ್ಲಿ ಲಾಕ್​​ಡೌನ್​ ಘೋಷಣೆಯಾದ ಸಂದರ್ಭದಲ್ಲಿ ಚಂದನ್ ಶೆಟ್ಟಿ – ನಿವೇದಿತಾ ಗೌಡ ದಂಪತಿ ಯುರೋಪ್ ಪ್ರವಾಸ ಮೊಟಕುಗೊಳಿಸಿ ವಾಪಸ್​ ಬಂದಿದ್ರು. ಆದರೆ ಅವರನ್ನು ಆರಂಭದಲ್ಲಿ ಕೊವಿಡ್ ಪರೀಕ್ಷೆಗೆ ಒಳಪಡಿಸಿರ್ಲಿಲ್ಲ. ವಿದೇಶದಿಂದ ಬಂದ ಎಲ್ಲರನ್ನೂ ಕೊವಿಡ್ ಪರೀಕ್ಷೆಗೆ ಒಳಪಡಿಸ್ತಿದ್ದೀರಿ, ಚಂದನ್ ಶೆಟ್ಟಿಗೆ ಯಾಕೆ ಕೊವಿಡ್ ಪರೀಕ್ಷೆ ಇಲ್ಲ ಅಂತ ಕೆಲವರು ಕ್ಯಾತೆ ತೆಗೆದಿದ್ದರು. ನಂತರ ನವಜೋಡಿ ಹೋಮ್ ಕ್ವಾರಂಟೀನ್​ನಲ್ಲಿದ್ದರು. 

ಇದೀಗ ಕೋಲು `ಮಂಡೆ’ ಬಿಸಿ :  ಇದೀಗ ಚಂದನ್ ಶೆಟ್ಟಿ ಕೋಲು ಮಂಡೆ ಜಂಗಮ ದೇವ ಹಾಡಿನ ವಿಚಾರದಲ್ಲಿ ವಿವಾದಕ್ಕೆ ಗುರಿಯಾಗಿದ್ದಾರೆ. ಚಂದನ್ ಶೆಟ್ಟಿ ರೀಮಿಕ್ಸ್ ಮಾಡಿರುವ ಈ  ಆ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್​ನಲ್ಲಿ ಗಣೇಶ ಚತುರ್ಥಿಯಂದು ರಿಲೀಸ್ ಆಗಿದೆ. ಕೇವಲ ಮೂರು ದಿನಗಳಲ್ಲಿ ಬರೋಬ್ಬರಿ 3 .5 ಮಿಲಿಯನ್​ಗಿಂತಲೂ ಹೆಚ್ಚಿನ ವೀವ್ಸ್ ಬಂದಿದೆ.

ಕೋಲು ಮಂಡೆ ಸಾಂಗ್ ವೈರಲ್ ಆಗ್ತಿದ್ದಂತೆ ರ‍್ಯಾಪರ್ ಚಂದನ್ ಶೆಟ್ಟಿಗೆ ಮಂಡೆ ಬಿಸಿ ಶುರುವಾಗಿದೆ..!  ಬಿಡುಗಡೆಯಾಗಿರೋ ವಿಡಿಯೋದಲ್ಲಿ ಶರಣೆ ಸಂಕಣ್ಣೆಯನ್ನು ಅಶ್ಲೀಲವಾಗಿ ತೋರಿಸಲಾಗಿದೆ. ತುಂಡುಡುಗೆಯಲ್ಲಿ ತೋರಿಸಿ ಮಾದಪ್ಪನ ಭಕ್ತರ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಅಂತ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋ ಕೂಡಲೇ ಡಿಲೀಟ್ ಮಾಡಬೇಕು ಹಾಗೂ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಮಾದಪ್ಪನ ಭಕ್ತರು  ಆಗ್ರಹಿಸಿದ್ದಾರೆ.

ಬಗ್ಗೆ  ಪವರ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, “ಚಂದನ್ ಶೆಟ್ಟಿ ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಅವರು ಕ್ಷಮೆ ಯಾಚಿಸಿದ್ದಾರೆ. ವಿಡಿಯೋ ಡಿಲೀಟ್ ಮಾಡುವಂತೆ  ಹೇಳಿದ್ದೇನೆ. ಇಲ್ಲವಾದ್ರೆ ಪ್ರತಿಭಟನೆ ನಡೆಸುತ್ತೇವೆ. ಜೊತೆಗೆ ದೂರು ದಾಖಲು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ವಿಡಿಯೋ ಮೂಲಕ ಕೂಡ ಚಂದನ್ ನಾಡಿನ ಜನತೆ ಹಾಗೂ ಮಾದಪ್ಪ ಭಕ್ತರ ಕ್ಷಮೆಯಾಚಿಸಿದ್ದಾರೆ.

ಒಟ್ಟಿನಲ್ಲಿ ಚಂದನ್ ಶೆಟ್ಟಿ ಅವರೇ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆಯೇ ಅಥವಾ ವಿವಾದಗಳೇ ಅವರನ್ನು ಹುಡುಕಿಕೊಂಡು ಬರುತ್ತಿವೆಯೇ ಗೊತ್ತಿಲ್ಲ.

LEAVE A REPLY

Please enter your comment!
Please enter your name here

- Advertisment -

Most Popular

ಅವರ ಬಳಿ ಹಣ ಕೇಳಿದ್ದು ತಪ್ಪು-ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ

ಚಿಕ್ಕಮಗಳೂರು : ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಬಹಳ ಪ್ರಾಮಾಣಿಕ ವ್ಯಕ್ತಿ, ನಿಷ್ಠೆ ಯಿಂದ ಕೆಲಸ ಮಾಡ್ತಾ ಇದ್ದಾರೆ, ಅವರ ಬಳಿ ಕಂದಾಯ ಸಚಿವ ಆರ್.ಅಶೋಕ್ ಪಿಎ ಗಂಗಾಧರ್ ಹಣ ಕೇಳಿದ್ದು ತಪ್ಪು,...

ಪತ್ರಕರ್ತರ ಗೋಲ್ಡ್​ ಹಿಂತಿರುಗಿಸಿ ಮಾನವೀಯತೆ ಮೆರೆದ ಕೆಎಸ್​ಆರ್​ಟಿಸಿ ಸಿಬ್ಬಂದಿ!

ವಿಜಯಪುರ : ಹೈದ್ರಾಬಾದ್ ಮಾರ್ಗದಲ್ಲಿ ಪ್ರಯಾಣಿಸುವ ಬಸ್​ನಲ್ಲಿ ಸಿಕ್ಕ ಗೋಲ್ಡ್​ ಚೈನ್​ನ್ನು ವಾರಸುದಾರರಿಗೆ ಹಿಂತಿರುಗಿಸಿ ಕೆಎಸ್​ಆರ್​ಟಿಸಿ ಸಿಬ್ಬಂದಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ವಿಜಯಪುರ ನಗರ ಕೆಎಸ್​ಆರ್​ಟಿಸಿ ಘಟಕದ ನಿರ್ವಾಹಕ ಎಸ್.ಜೆ.ಬೊಮ್ಮಣಗಿ ತಮ್ಮ ಪ್ರಾಮಾಣಿಕತೆ ತೋರಿದ್ದಾರೆ....

ಕೆಂಪುಕೋಟೆ ಹತ್ತಿದವರು ಯಾರು ರೈತರಲ್ಲ : ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು : ನಿನ್ನೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನ ರೈತರು ವಹಿಸಿಲ್ಲ, ಕೆಂಪು ಕೋಟೆ ಹತ್ತಿದವರು ಯಾರೂ ಕೂಡ ರೈತರಲ್ಲ, ಹೋರಾಟದ ನೇತೃತ್ವವನ್ನ ಉಮ್ಮರ್ ಖಾಲಿದ್ ಬಿಡುಗಡೆ ಮಾಡಿ ಅನ್ನುವಂತಹ ವಿಚಾರವಾದಿಗಳು ಹಾಗೂ...

‘4 ವರ್ಷ ಸರೆಮನೆ ವಾಸ ಪೂರ್ಣಗೊಳಿಸಿದ ಶಶಿಕಲಾ’

ಬೆಂಗಳೂರು: ದಿ.ಜಯಲಲಿತಾ ಆಪ್ತೆ ಶಶಿಕಲಾ 4 ವರ್ಷ ಶಿಕ್ಷೆ ಅವಧಿ ಪೂರ್ಣಗೊಳಿಸಿ ಇಂದು ಬಿಡುಗಡೆಯಾಗುತ್ತಿದ್ದಾರೆ.  ಅಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ ಶಶಿಕಲಾ ಜೈಲು ಸೇರಿದ್ದರು. ಜೈಲಾಧಿಕಾರಿಗಳು ಆಸ್ಪತ್ರೆಗೆ ಬಂದು ಬಿಡುಗಡೆ ಪ್ರಕ್ರಿಯೆ ಮುಗಿಸಿ, ಶಶಿಕಲಾಯಿಂದ...

Recent Comments