ಚಾಮರಾಜನಗರ : ಕಾಡಿನಿಂದ ನಾಡಿಗೆ ಬಂದ ಹೆಬ್ಬಾವು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರನ್ನು ಬೆಚ್ಚಿಬಿಳಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಯಳಂದೂರು ತಾಲ್ಲೂಕಿನ ರಂಗನಾಥಪುರ ಗ್ರಾಮದ ಹೊರವಲಯದಲ್ಲಿರುವ ರಂಗನಾಯಕರ ಜೋಳದ ಹೊಲದಲ್ಲಿ ಬಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಕೆಲಕಾಲ ಎಲ್ಲರನ್ನು ಬೆಚ್ಚಿಬಿಳಿಸಿದೆ. ಜೋಳದ ಹೊಲದಲ್ಲಿ ಮಹಿಳೆಯೊವ೯ರು ಕೆಲಸ ಮಾಡುತ್ತಿದ್ದ ವೇಳೆ ಕಾಲಿಗೆ ಸಿಕ್ಕಿದೆ. ಗಾಬರಿಗೊಂಡ ಮಹಿಳೆ ಕಿರುಚಾಟ ನಡೆಸಿ ಜಮೀನಿನ ಹೊರ ಬಂದು ಮಾಲೀಕರಿಗೆ ತಿಳಿಸಿದ್ದಾರೆ.
ವಿಷಯ ತಿಳಿದ ಅರಣ್ಯಾಧಿಕಾರಿಗಳು ಉರಗಜ್ಞ ಸ್ನೇಕ್ ಮಹೇಶ್ ಜೊತೆ ಸ್ಥಳಕ್ಕೆ ಆಗಮಿಸಿ ಅವರು ಜೋಳದ ಹೊಲದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಹುಡುಕಾಟ ನಡೆಸಿ ನಂತರ ಬಾರಿ ಗಾತ್ರದ ಹೆಬ್ಬಾವನ್ನು ಪತ್ತೆ ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಅಪರೂಪವಾಗಿ ಬಂದಿದ್ದ ಹೆಬ್ಬಾವನ್ನು ನೋಡಲು ಗ್ರಾಮಗಳಿಂದ ಬಂದಿದ್ದ ಜನರು ಹಾಗೂ ಮಳೆ ಬೀಳುತ್ತಿದ್ದರಿಂದ ಹಾವು ಹಿಡಿಯುವ ವೇಳೆ ಉರಗ ತಜ್ಞ ಸ್ನೇಕ್ ಮಹೇಶ್ ಕೈಗೆ ಹಾವು ಕಚ್ಚಿದರೂ ಬಿಡದ ಹಾವನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಆತಂಕದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರುವ ಬಿಡುವಂತಾಗಿದೆ.