ಗಣೇಶ ಹಬ್ಬಕ್ಕೆ ‘ಒಡೆಯ’ನ ದರ್ಶನ..!

0
513

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರುಕ್ಷೇತ್ರ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದರ್ಶನ್ ಅಭಿಮಾನಿಗಳು ಸುಯೋಧನನ ದರ್ಶನದಿಂದ ಫುಲ್​​ ಖುಷಿಯಲ್ಲಿದ್ದಾರೆ. ಇದೀಗ ಗಣೇಶ ಹಬ್ಬಕ್ಕೆ ‘ಒಡೆಯ’ನ ದರ್ಶನವಾಗಿದೆ.
ಹೌದು ಡಿ.ಬಾಸ್ ಅಭಿನಯದ ಬಹು ನಿರೀಕ್ಷಿತ ಒಡೆಯ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಒಡೆಯನ ಪೋಸ್ಟರ್​ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ‘ಒಡೆಯಾ’ವತಾರಕ್ಕೆ ಫಿದಾ ಆಗಿದ್ದಾರೆ.
ತಮಿಳಿನ ವೀರಂ ಸಿನಿಮಾ ಕನ್ನಡ ರಿಮೇಕ್ ಈ ಒಡೆಯ. ಈ ಹಿಂದೆ ದಚ್ಚು ಅಭಿನಯದ ಬುಲ್​ ಬುಲ್​ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಡೈರೆಕ್ಟರ್ ಎಂ.ಡಿ ಶ್ರೀಧರ್ ಒಡೆಯನಿಗೆ ಆ್ಯಕ್ಷನ್​ ಕಟ್ ಹೇಳಿದ್ದಾರೆ.
ಟ್ವಿಟರ್​ನಲ್ಲಿ ಪೋಸ್ಟರ್​ ಪೋಸ್ಟ್ ಮಾಡಿರುವ ದರ್ಶನ್ ”ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು. ನಿಮ್ಮೆಲ್ಲಾ ಕನಸುಗಳು ಈಡೇರಲಿ, ಆ ದೇವರ ಆಶೀರ್ವಾದ ಸದಾ ನಿಮ್ಮ ಕುಟುಂಬಗಳ ಮೇಲಿರಲಿ.- ನಿಮ್ಮ ದಾಸ ದರ್ಶನ್#Odeya” ಅಂತ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here