‘ನಂಗೆ ಇಂಗ್ಲಿಷ್ ಬರಲ್ಲ’ : ಚಾಲೆಂಜಿಂಗ್ ಸ್ಟಾರ್ ದರ್ಶನ್

0
1416

ಬೆಂಗಳೂರು: ಸ್ಯಾಂಡಲ್​ವುಡ್ ‘ಒಡೆಯ’ ಚಾಲೆಂಜಿಂಗ್ ಸ್ಟಾರ್ ದರ್ಶನ್ 43 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆರ್​ಆರ್ ನಗರದ ನಿವಾಸದ ಎದುರು‌ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಪ್ರತಿ ವರ್ಷದಂತೆ ಈ ವರ್ಷ‌ ಕೂಡ‌ ಅಭಿಮಾನಿಗಳು‌ ಬಂದಿದ್ದಾರೆ, ಬರ್ತಿದ್ದಾರೆ.‌ ಕಳೆದ ಸಲದಂತೆ ಈ ಸಲ ಕೂಡ ಕೇಕ್ ತರ್ಲಿಲ್ಲ. ಮೊಲ , ಬಾತುಕೋಳಿ ಉಡುಗೊರೆ ನೀಡಿದ್ದಾರೆ. ದವಸ – ಧಾನ್ಯಗಳನ್ನು ಕೊಟ್ಟಿದ್ದಾರೆ. ಅವು ಜನರ ಉಪಯೋಗಕ್ಕೆ ಬರುತ್ತವೆ” ಅಂತ ಖುಷಿ ಹಂಚಿಕೊಂಡ್ರು.
ಕೊನೆಯಲ್ಲಿ ಕೆಲವು ಇಂಗ್ಲಿಷ್ ಮಾಧ್ಯಮದವರು ಇಂಗ್ಲಿಷಲ್ಲಿ ಮಾತಾಡಿ ಅಂತ ಕೇಳಿದ್ರು.‌ ಅದಕ್ಕೆ ಪ್ರೀತಿಯಿಂದಲೇ ಉತ್ತರಸಿದ ‘ಯಜಮಾನ’, “ನಂಗೆ ಇಂಗ್ಲಿಷ್ ಬರಲ್ಲ. ಕಾರ್ಪೋರೇಷನ್ ಸ್ಕೂಲಲ್ಲಿ ಓದಿರೋನಿಗೆ ಇಂಗ್ಲಿಷೆಲ್ಲಿ ಬರುತ್ತೆ?” ಅಂದ್ರು.

‘ದಾಸ‘ನಿಗೆ 43ನೇ ಜನ್ಮದಿನ : ಅಭಿಮಾನಿಗಳಿಗೆ ಸಂಭ್ರಮ

LEAVE A REPLY

Please enter your comment!
Please enter your name here