ಚಾಲೆಂಜಿಂಗ್​ ಸ್ಟಾರ್​ ದರ್ಶನ್​ಗೆ ಮತ್ತೊಂದು ಬಿರುದು..!

0
16325

ಸ್ಯಾಂಡಲ್​ವುಡ್​ನ ಬಾಕ್ಸ್ ಆಫೀಸ್​ ಸುಲ್ತಾನ ಚಾಲೆಂಜಿಂಗ್​ ಸ್ಟಾರ್ ದರ್ಶನ್ ಸದ್ಯ ‘ಕುರುಕ್ಷೇತ್ರ’ದ ಸಕ್ಸಸ್ ಖುಷಿಯಲ್ಲಿದ್ದಾರೆ. ಕುರುಕ್ಷೇತ್ರದ ಯಶಸ್ಸು ದರ್ಶನ್ ಅವರನ್ನು ನ್ಯಾಷನಲ್ ಸ್ಟಾರ್ ಮಾಡಿದೆ.
ಸಾಮಾನ್ಯವಾಗಿ ಸ್ಟಾರ್​ಗಳು ಸ್ಟಾರ್ ನೇಮ್​, ಬಿರುದುಗಳಿಂದ ಗುರುತಿಸಿಕೊಳ್ಳುತ್ತಾರೆ. ಅಂತೆಯೇ ದರ್ಶನ್ ಚಾಲೆಂಜಿಂಗ್ ಸ್ಟಾರ್ ಎಂದೇ ಪ್ರಸಿದ್ಧರು. ಬಾಕ್ಸ್ ಆಫೀಸ್​ ಸುಲ್ತಾನ, ಚಂದನವನದ ‘ಚಕ್ರವರ್ತಿ’, ಡಿ.ಬಾಸ್​ ಹೀಗೆ ನಾನಾ ಹೆಸರಲ್ಲಿ ಕರೆಯಲ್ಪಡುವ ದರ್ಶನ್​ ತೂಗದೀಪ್ ಅವರಿಗೆ ಮಹಿಳಾ ಅಭಿಮಾನಿಗಳು ಹೊಸ ಬಿರುದೊಂದನ್ನು ನೀಡಿ ಗೌರವಿಸಿದ್ದಾರೆ.
ಕುರುಕ್ಷೇತ್ರ ಸಿನಿಮಾ ಕಲೆಕ್ಷನ್ 100 ಕೋಟಿ ದಾಟಿರುವ ಹಿನ್ನೆಲೆಯಲ್ಲಿ ದರ್ಶನ್​ ಗೆ DFDH ಗರ್ಲ್ಸ್​ ಗ್ರೂಪ್​ ನವರು ಶತಕೋಟಿ ಸರ್ದಾರ ಎನ್ನುವ ಬಿರುದು ನೀಡಿ ಗೌರವಿಸಿದ್ದಾರೆ. ದರ್ಶನ್ ಅವರಿಗೆ ಸನ್ಮಾನಿಸಿ, ಸ್ಮರಣಿಕೆ ನೀಡುವ ಮೂಲಕ ಹೊಸ ಬಿರುದು ನೀಡಿದ್ದಾರೆ ಡಿಎಫ್​ಡಿಎಚ್​ ಗ್ರೂಪ್​ನವರು. ಇನ್ಮುಂದೆ ದರ್ಶನ್ ಶತಕೋಟಿ ಸರ್ದಾರ..!

LEAVE A REPLY

Please enter your comment!
Please enter your name here