ದಾವಣಗೆರೆ : ಸ್ಯಾಂಡಲ್ವುಡ್ ಡ್ರಗ್ಸ್ ಕಳಂಕದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೌನ ಮುರಿದಿದ್ದು ಚಿರಂಜೀವಿ ಸರ್ಜಾ ಬಗ್ಗೆ ಕೇಳಿ ಬರುತ್ತಿರುವ ಆರೋಪಕ್ಕೆ ಭಾವುಕರಾಗಿದ್ದಾರೆ.
ದಾವರಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡ್ರಗ್ಸ್ ಪ್ರಕರಣದ ವಿಚಾರದಲ್ಲಿ ಚಿರು ಹೆಸರು ಎಳೆದು ತಂದಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಡ್ರಗ್ಸ್ ಕೇಸ್ನಲ್ಲಿ ಚಿರು ಹೆಸರು ತುಂಬಾ ಕೇಳಿ ಬರ್ತಿದೆ. ಸತ್ತವರ ಮೇಲೆ ಆರೋಪ ಮಾಡೋದು ಸರಿಯಲ್ಲ. ಏನೋ ಅಪ್ಪಿ-ತಪ್ಪಿ ಪ್ರೂವ್ ಆದ್ರೆ ಶಿಕ್ಷೆ ಕೊಡೋಕೆ ಆಗುತ್ತಾ ಅಂತ ಭಾವುಕರಾದರು.
ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಲೇ ನಾವು ಯಾವ್ದೇ ನಿರ್ಧಾರಕ್ಕೆ ಬರೋದು ಬೇಡ. ನಾನು 26 ವರ್ಷದಿಂದ ಚಿತ್ರರಂಗದಲ್ಲಿದ್ದೇನೆ. ಇದುವರೆಗೆ ಡ್ರಗ್ಸ್ ಬಗ್ಗೆ ಕೇಳಿಲ್ಲ, ನೋಡಿಲ್ಲ. ಯಾರೋ ಕೆಲವರು ಇರಬಹುದು. ಹಾಗಂತ ಇಡೀ ಚಿತ್ರರಂಗವನ್ನು ದೂಷಿಸುವುದು ಸರಿಯಲ್ಲ ಎಂದರು.