Friday, October 7, 2022
Powertv Logo
Homeಸಿನಿಮಾ'ರಾಬರ್ಟ್' ಪಂಚ್​ಗೆ ಫ್ಯಾನ್ಸ್ ಫುಲ್ ಫಿದಾ..! ದರ್ಶನ್ ಬರ್ತ್​ಡೇ ಗಿಫ್ಟ್​ಗೆ ಕಳೆದೋಗೋದು ಗ್ಯಾರಂಟಿ!

‘ರಾಬರ್ಟ್’ ಪಂಚ್​ಗೆ ಫ್ಯಾನ್ಸ್ ಫುಲ್ ಫಿದಾ..! ದರ್ಶನ್ ಬರ್ತ್​ಡೇ ಗಿಫ್ಟ್​ಗೆ ಕಳೆದೋಗೋದು ಗ್ಯಾರಂಟಿ!

ಚಂದನವನದ ‘ಯಜಮಾನ’ ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ಇಂದು‌ ಹುಟ್ಟುಹಬ್ಬದ ಸಂಭ್ರಮ.‌ ‘ ಸುಲ್ತಾನ’ನ ಬರ್ತ್​ಡೇ ಉಡುಗೊರೆ ರೂಪದಲ್ಲಿ ಅಭಿಮಾನಿಗಳಿಗೆ ‘ರಾಬರ್ಟ್’ ದರ್ಶನ ಸಿಕ್ಕಿದೆ.

‘ಒಡೆಯ’ನ ‘ರಾಬರ್ಟ್’ ಅವತಾರಕ್ಕೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಆತನ ಪಂಚ್ ಡೈಲಾಗ್​ಗೆ ನೀವು ಕೂಡ ಕಳೆದೋಗೋದು ಗ್ಯಾರೆಂಟಿ.

ಹೌದು, ಸ್ಯಾಂಡಲ್​ವುಡ್ ‘ಚಕ್ರವರ್ತಿ’ ಡಿ.ಬಾಸ್ ಹುಟ್ಟುಹಬ್ಬದ ಪ್ರಯುಕ್ತ ಬಹುನಿರೀಕ್ಷಿತ ರಾಬರ್ಟ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. 1 ನಿಮಿಷ 12 ಸೆಕೆಂಡ್ ಇರುವ ಟೀಸರ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಅಬ್ಬರಿಸೋಕೆ ಶುರುಮಾಡಿದೆ. ಯೂಟ್ಯೂಬ್​ನಲ್ಲಿ ಕೆಲವೇ ಕೆಲವು ಗಂಟೆಗಳಲ್ಲಿ ಲಕ್ಷ ಲಕ್ಷ ವೀವ್ಸೂ ಪಡೆದಿದೆ.

ತರುಣ್ ಸುಧೀರ್ ನಿರ್ದೇಶನದ ಈ ‘ರಾಬರ್ಟ್’ಗೆ ಉಮಾಪತಿ ಶ್ರೀನಿವಾಸಗೌಡ ಬಂಡವಾಳ ಹಾಕಿದ್ದಾರೆ. ಆಶಾ ಭಟ್ ದರ್ಶನ್​ಗೆ ನಾಯಕಿಯಾಗಿದ್ದು, ವಿನೋದ್ ಪ್ರಭಾಕರ್, ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

‘ದಾಸ‘ನಿಗೆ 43ನೇ ಜನ್ಮದಿನ : ಅಭಿಮಾನಿಗಳಿಗೆ ಸಂಭ್ರಮ

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments