ಮತ್ತೆ ದರ್ಶನ್ ‘ರಾಜ ವೀರಮದಕರಿ ನಾಯಕ’ನ ಅಖಾಡಕ್ಕೆ!

0
236

ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಜ ವೀರಮದಕರಿ ನಾಯಕ ಚಿತ್ರದ 2ನೇ ಹಂತದ ಶೂಟಿಂಗ್ ಪ್ರಾರಂಭವಾಗಿದೆ. 2ನೇ ಹಂತದ ಚಿತ್ರೀಕರಣ ಹೈದರಾಬಾದ್​ನಲ್ಲಿ ನಡೆಯಲಿದ್ದು, ಮೊದಲ ಹಂತದ ಚಿತ್ರೀಕರಣ ಕೇರಳದಲ್ಲಿ ನಡೆದಿದೆ.

ಈ ಸಿನಿಮಾದ ಚಿತ್ರೀಕರಣಕ್ಕಾಗಿ ಬೆಂಗಳೂರು, ಹೈದರಾಬಾದ್, ಚಿತ್ರದುರ್ಗ ಹಾಗೂ ಮುಂಬೈ ಸೇರಿದಂತೆ ಹಲವು ಲೊಕೇಶನ್​ಗಳನ್ನು ಫಿಕ್ಸ್ ಮಾಡಲಾಗಿದೆ. ಸಿನಿಮಾದ ಕಥೆಯು ಬಿ.ಎಲ್ ವೇಣು  ಕಾದಂಬರಿಯನ್ನು ಆಧರಿಸಿದೆ. ಈ ಸಿನಿಮಾದಲ್ಲಿ ಸುಮಲತಾ ಅಂಬರೀಶ್ ರಾಜಮಾತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದೊಡ್ಡಣ್ಣ, ರವಿಶಂಕರ್ ತಾರಾಗಣದಲ್ಲಿದ್ದಾರೆ. ಚಿತ್ರದ ನಿರ್ಮಾಣವನ್ನು ರಾಕ್​ಲೈನ್ ವೆಂಕಟೇಶ್ ಮಾಡುತ್ತಿದ್ದು, ರಾಜೇಂದ್ರ ಸಿಂಗ್ ಬಾಬು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 

 

LEAVE A REPLY

Please enter your comment!
Please enter your name here