Tuesday, September 27, 2022
Powertv Logo
Homeಸಿನಿಮಾಕನ್ನಡದಲ್ಲಿ ಮಾತ್ರವಲ್ಲ ತೆಲುಗಲ್ಲೂ ರಾಬರ್ಟ್ ರಿಲೀಸ್..!

ಕನ್ನಡದಲ್ಲಿ ಮಾತ್ರವಲ್ಲ ತೆಲುಗಲ್ಲೂ ರಾಬರ್ಟ್ ರಿಲೀಸ್..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ. ತರುಣ್​ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಈಗಾಗಲೇ ಸಿಕ್ಕಾಪಟ್ಟೆ ಸೌಂಡು ಮಾಡ್ತಿದೆ. ಸೆಟ್ಟೇರಿದಲ್ಲಿಂದಲೂ ಸಖತ್ ಸುದ್ದಿಯಲ್ಲಿರೋ ಸಿನಿಮಾ ಮೊನ್ನೆ ಮೊನ್ನೆ ದರ್ಶನ್ ಹುಟ್ಟುಹಬ್ಬದಂದು ರಿಲೀಸ್ ಆದ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.
ಏಪ್ರಿಲ್ 9ರಂದು ಸಿನಿಮಾ ರಿಲೀಸ್ ಮಾಡೋದಾಗಿ ಪ್ರೊಡ್ಯೂಸರ್ ಉಮಾಪತಿ ಶ್ರೀನಿವಾಸ್ ತಿಳಿಸಿದ್ದಾರೆ. ಈ ನಡುವೆ ಸಿನಿತಂಡದಿಂದ ಹೊಸ ಸುದ್ದಿಯೊಂದು ಬಂದಿದೆ. ರಾಬರ್ಟ್​ ಬರೀ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗಲ್ಲೂ ರಿಲೀಸ್ ಆಗಲಿದೆ. ಅಷ್ಟೇ ಅಲ್ಲದೆ ಹಿಂದಿ, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲೂ ರಿಲೀಸ್ ಮಾಡೋ ಪ್ಲ್ಯಾನ್ ಚಿತ್ರತಂಡದ್ದು.

- Advertisment -

Most Popular

Recent Comments