ದರ್ಶನ್​ ಪ್ರಚಾರ ಮಾಡ್ತಿರೋದು ಸುಮಲತಾ ಪರ ಮಾತ್ರವಲ್ಲ..! ಮತ್ತೆ?

0
271

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ ಪ್ರಚಾರದಲ್ಲಿ ಬ್ಯುಸಿ ಆಗಿರೋದು ಗೊತ್ತೇ ಇದೆ. ಸುಮಲತಾ ಸ್ಪರ್ಧೆ ಖಚಿತವಾದಾಗಲೇ ತನ್ನ ಬೆಂಬಲ ಸೂಚಿಸಿದ್ದ ದರ್ಶನ್ ತಾವು ಮಾತುಕೊಟ್ಟಂತೆ ಪ್ರಚಾರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.


ದರ್ಶನ್ ಸುಮಲತಾ ಪರ ಮಾತ್ರ ಪ್ರಚಾರ ಮಾಡ್ತಿಲ್ಲ. ಬದಲಾಗಿ ಇನ್ನೊಬ್ಬ ಅಭ್ಯರ್ಥಿ ಪರವೂ ಪ್ರಚಾರಕ್ಕೆ ರಣಕಣಕ್ಕೆ ಧುಮುಕಿದ್ದಾರೆ.
ಹೌದು, ಇಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ ಮೋಹನ್  ಅವರ ಪರ ಪ್ರಚಾರ ಮಾಡಿದ್ರು. ನಾನು ಸ್ನೇಹಕ್ಕಾಗಿ ಪ್ರಚಾರ ಮಾಡ್ತೀನಿ ಅಂದಿರೋ ದರ್ಶನ್ ಪಕ್ಷಬೇಧ ಮರೆತು ಆತ್ಮೀಯರು ಕರೆದರೆ ಪ್ರಚಾರಕ್ಕೆ ಹೋಗುತ್ತಾರೆ. ಹಿಂದೆ ರೆಬಲ್ ಸ್ಟಾರ್ ಅಂಬರೀಶ್ ಅವರ ಪರ ಪ್ರಚಾರಕ್ಕೆ ಹೋಗ್ತಾ ಇದ್ರು. ಸಿದ್ದರಾಮಯ್ಯ ಅವರ ಪರವೂ ಪ್ರಚಾರ ಮಾಡಿದ್ರು. ಈಗ ಮಂಡ್ಯ ರಣಕಣದಲ್ಲಿ ಸುಮಲತಾ ಪರ ಫುಲ್​ ಟೈಮ್ ಪ್ರಚಾರಕರಾಗಿ ಬೆಂಬಲಕ್ಕೆ ನಿಂತಿದ್ದಾರೆ.

LEAVE A REPLY

Please enter your comment!
Please enter your name here