Home ಸಿನಿ ಪವರ್ ಮೆ.23ಕ್ಕೂ ಚಾಲೆಂಜಿಂಗ್ ಸ್ಟಾರ್​​​​​​​​​​ ದರ್ಶನ್​ಗೂ ಅದೆಂಥಾ ನಂಟು?

ಮೆ.23ಕ್ಕೂ ಚಾಲೆಂಜಿಂಗ್ ಸ್ಟಾರ್​​​​​​​​​​ ದರ್ಶನ್​ಗೂ ಅದೆಂಥಾ ನಂಟು?

ಭಾರಿ ಕುತೂಹಲ ಮೂಡಿಸಿದ್ದ ಲೋಕಸಮರದ ರಿಸೆಲ್ಟ್ ಬಂದೇ ಬಿಟ್ಟಿದೆ. ನರೇಂದ್ರ ಮೋದಿ ನೇತೃತ್ವದ ಎನ್​ಡಿಎಗೆ ಮತ್ತೊಮ್ಮೆ ಸರ್ಕಾರ ರಚಿಸೋಕೆ ದೇಶದ ಮತದಾರರು ಸ್ಪಷ್ಟ ಬಹುಮತ ನೀಡಿದ್ದಾರೆ. ಇಡೀ ದೇಶದ ಗಮನ ಸೆಳೆದ ಮಂಡ್ಯ ರಣಕಣದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವಿನ ನಗೆಬೀರಿದ್ದಾರೆ.
 ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರ ನಡುವಿನ ಜಿದ್ದಾಜಿದ್ದಿನ ಫೈಟ್​​ನಿಂದ ಮಂಡ್ಯ ಸ್ಟಾರ್​​​​​​​​​ವಾರ್​ಗೆ ಸಾಕ್ಷಿಯಾಗಿತ್ತು. ಸುಮಲತಾ ಅವರ ಪ್ರಚಂಡ ಗೆಲುವು ಸುಮಲತಾ ಅಂಬರೀಶ್…, ಅವರ ಮಗ ಅಭಿಷೇಕ್ ಅಂಬರೀಶ್ ಮತ್ತು ಫ್ಯಾನ್ಸ್​ಗೆ ಮಾತ್ರ ಖುಷಿ ವಿಚಾರವಲ್ಲ..ಗರ್ವದ ಸುದ್ದಿಯಲ್ಲ..! ನಟರಾದ ದರ್ಶನ್ ಮತ್ತು ಯಶ್ ಹಾಗೂ ಅವರ ಫ್ಯಾನ್ಸ್ ಗೂ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.
 ಸುಮಲತಾ ಪರ ‘ಜೋಡೆತ್ತುಗಳಾಗಿ’ ದರ್ಶನ್ ಮತ್ತು ಯಶ್ ಪ್ರಚಾರ ಮಾಡಿದ್ದರು. ಹೀಗಾಗಿ ಸುಮಲತಾ ಅವರ ಗೆಲುವಿನಿಂದ ಅವರಿಗೆ ತುಂಬಾ ಖುಷಿಯಾಗಿದೆ..! ಈ ಮಂಡ್ಯ ರಿಸೆಲ್ಟ್ ದಿನವೇ ದರ್ಶನ್ ಅವರ ಪಾಲಿಗೆ ಮತ್ತೊಂದು ವಿಶೇಷವಿದೆ.
ಹೌದು, ದರ್ಶನ್ ಡಿ.ಬಾಸ್, ಚಾಲೆಂಜಿಂಗ್ ಸ್ಟಾರ್, ಬಾಕ್ಸ್ಆಫೀಸ್ ಸುಲ್ತಾನಾ ಹೀಗೆ ಹತ್ತಾರು ಬಿರುದುಗಳನ್ನು ಹೊಂದಿದ್ದಾರೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ಅನ್ನೋದು ಸಿಕ್ಕಾಪಟ್ಟೆ ಫೇಮಸ್… ದರ್ಶನ್ ಹೆಸರಿನ ಹಿಂದೆ ಚಾಲೆಂಜಿಂಗ್ ಸ್ಟಾರ್ ಅನ್ನೋದು ಇದ್ರೇನೇ ಅದಕ್ಕೊಂದು ಗತ್ತು – ಗಮ್ಮತ್ತು.
ಮಂಡ್ಯ ರಿಸೆಲ್ಟ್ ದಿನವಾದ ನಿನ್ನೆಗೆ ಅಂದರೆ ಮೇ.23ಕ್ಕೆ ಸರಿಯಾಗಿ 16 ವರ್ಷದ ಹಿಂದೆ ದರ್ಶನ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ಅನ್ನೋ ಪಟ್ಟ ಸಿಕ್ಕಿತು..! 2003ರಲ್ಲಿ ದರ್ಶನ್ ಗೆ ಅವರ ಫ್ಯಾನ್ಸ್ ಈ ಚಾಲೆಂಜಿಂಗ್ ಸ್ಟಾರ್ ಅನ್ನೋ ಬಿರುದುಕೊಟ್ಟಿದ್ದು. 1997ರಿಂದ 2002ರವರೆಗೆ ನಾಲ್ಕೈದು ಸಿನಿಮಾದಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ದರ್ಶನ್, 2002ರಲ್ಲಿ ‘ಮೆಜೆಸ್ಟಿಕ್’ ನಿಂದ ನಾಯಕ ನಟನಾಗಿ ಸ್ಯಾಂಡಲ್​​ವುಡ್​​​​​​​​​ನಲ್ಲಿ ಮಿಂಚುತ್ತಿದ್ದಾರೆ. ಮೊದಲ ಚಿತ್ರ ಮೆಜೆಸ್ಟಿಕ್ ಸೂಪರ್ ಡೂಪರ್ ಹಿಟ್. ನಂತರ ಆ ಒಂದು ವರ್ಷದಲ್ಲಿ ಧ್ರುವ, ದಿಲ್, ನಿನಗೋಸ್ಕರ, ಕಿಟ್ಟಿ ಸಿನಿಮಾಗಳಲ್ಲಿ ನಟಿಸಿದ್ರು. 2003ರಲ್ಲಿ ಕರಿಯ, ಲಾಲಿಹಾಡು ಸೇರಿದಂತೆ 8 ಚಿತ್ರಗಳಲ್ಲಿ ದರ್ಶನ್ ಅಭಿನಯಿಸಿದ್ರು. ಅದೇ ವರ್ಷದಲ್ಲಿ ಚಾಲೆಂಜಿಂಗ್ ಸ್ಟಾರ್ ಅನ್ನೋ ಬಿರುದು ದರ್ಶನ್ ಅವರಿಗೆ ಒಲಿದು ಬಂತು ಅಂತಿದ್ದಾರೆ ಅವರ ಫ್ಯಾನ್ಸ್. ಹೀಗಾಗಿ ಮಂಡ್ಯದ ಫಲಿತಾಂಶದ ದಿನವಾದ ಮೇ.23 ದರ್ಶನ್ ಅವರ ಪಾಲಿಗೆ ಎಂದೂ.. ಎಂದೆಂದೂ ಮರೆಯಲಾಗದ ಸವಿ ಸವಿ ದಿನ..!

-ಚರಿತ ಪಟೇಲ್

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments