Thursday, October 6, 2022
Powertv Logo
Homeಸಿನಿಮಾ‘ದಾಸ‘ನಿಗೆ 43ನೇ ಜನ್ಮದಿನ : ಅಭಿಮಾನಿಗಳಿಗೆ ಸಂಭ್ರಮ

‘ದಾಸ‘ನಿಗೆ 43ನೇ ಜನ್ಮದಿನ : ಅಭಿಮಾನಿಗಳಿಗೆ ಸಂಭ್ರಮ

ಇಂದು ಸ್ಯಾಂಡಲ್​ವುಡ್​ ‘ಯಜಮಾನ’ನ ಪಾಲಿಗೆ ಸಂಭ್ರಮದ ದಿನ. ಹೌದು ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ 43ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಈ ದಿನವನ್ನು ದರ್ಶನ್ ದಿನ ಎನ್ನುವುದಕ್ಕಿಂತಲೂ ಅವರ ಆಭಿಮಾನಿಗಳ ದಿನ ಎಂದು ಕರೆದರೆ ತಪ್ಪಾಗದು. ನಿನ್ನೆ ರಾತ್ರಿಯಿಂದಲೇ ಬೆಂಗಳೂರಿನ ಆರ್​ಆರ್​ ನಗರದಲ್ಲಿರುವ ದರ್ಶನ್ ನಿವಾಸದ ಎದುರು ಫ್ಯಾನ್ಸ್ ಜಮಾವಣೆಗೊಂಡಿದ್ದು, ಏರಿಯಾದಲ್ಲಿ ಫುಲ್ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ಅಭಿಮಾನಿಗಳಿಗೆ ತಮ್ಮ ಪ್ರೀತಿಯ ಡಿ ಬಾಸ್ ಬರ್ತ್​ಡೇ ಅಂತ  ಹೇಳಿದ್ರೆ ಎಲ್ಲಿಲ್ಲದ ಸಡಗರ. ಅವರ ಹುಟ್ಟುಹಬ್ಬಕ್ಕೆ ಶುಭಕೋರಲು ಅನೇಕ ದೂರದ ಊರುಗಳಿಂದ ಅಭಿಮಾನಿಗಳ ದಂಡೇ ಬಂದು ಬಿಡುತ್ತೆ. ಇನ್ನೂ ದರ್ಶನ್ ಕೂಡಾ ಅಷ್ಟೇ ಪೂರ್ತಿ ದಿನವನ್ನು ತಮ್ಮ ಅಭಿಮಾನಿಗಳೊಂದಿಗೆ ಕಳೆದು ಬಿಡುತ್ತಾರೆ.

ಇನ್ನು ಕಳೆದ ಬಾರಿಯಂತೆ  ಈ ಬಾರಿಯೂ ಬರ್ತ್​ಡೇಯನ್ನು ಸಿಂಪಲ್ಲಾಗಿ ಸೆಲೆಬ್ರೇಷನ್ ಮಾಡುವಂತೆ ಅಭಿಮಾನಿಗಳೊಂದಿಗೆ ಮನವಿ ಮಾಡಿಕೊಂಡಿದ್ದು, ಕೇಕ್ , ಹಾರಾಗಳ ಬದಲು ದವಸ – ಧಾನ್ಯಗಳನ್ನು ನೀಡಿ ಎಂದು ಕೇಳಿಕೊಂಡಿದ್ದಾರೆ. ಅದರಂತೆ ಅಭಿಮಾನಿಗಳು ಅವರ ಕೈಲಾದಷ್ಟು ದವಸ – ಧಾನ್ಯಗಳನ್ನು ತಂದು ಡಿ ಬಾಸ್ ಬರ್ತ್​ಡೇಯನ್ನು ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ  ರಾಜ್ಯಾದ್ಯಂತ ಅವರ ಅಭಿಮಾನಿ ಸಂಘಗಳು ರಕ್ತದಾನ, ಅನ್ನದಾನ ಸೇರಿದಂತೆ ಹಲವು ಸಮಾಜಮುಖೀ ಕಾರ್ಯಗಳನ್ನು ಹಮ್ಮಿಕೊಂಡಿವೆ.

ಇಂದು ದರ್ಶನ್‌ ಅಭಿಮಾನಿಗಳಿಗೆ ಅವರ ಹುಟ್ಟುಹಬ್ಬದ ಸಂಭ್ರಮ ಒಂದು ಕಡೆಯಾದರೆ, ಇನ್ನೊಂದೆಡೆ ಬರ್ತ್​ಡೇ ಸಂಭ್ರಮ ಹೆಚ್ಚಿಸೋಕ್ಕೆ ‘ರಾಬರ್ಟ್​‘ ಆಗಮನವಾಗ್ತಿದೆ. ಈ ಮೂಲಕ ದರ್ಶನ್​ ಅಭಿಮಾನಿಗಳಿಗೆ ಬ್ಯಾಕ್​ ಟು ಬ್ಯಾಕ್​ ಸ್ವೀಟ್​ ನ್ಯೂಸ್​ ಸಿಕ್ಕಿದೆ. ​ ದರ್ಶನ್‌ ನಾಯಕರಾಗಿರುವ ‘ರಾಬರ್ಟ್‌’ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಟೀಸರ್‌ ಇಂದು ಬಿಡುಗಡೆಯಾಗಿದೆ. ಏಪ್ರಿಲ್‌ನಲ್ಲಿ ಸಿನಿಮಾ ತೆರೆಮೇಲೆ ಬರುವ ಸಾಧ್ಯತೆಯೂ ಇದೆ.

‘ರಾಬರ್ಟ್’ ಪಂಚ್​ಗೆ ಫ್ಯಾನ್ಸ್ ಫುಲ್ ಫಿದಾ..! ದರ್ಶನ್ ಬರ್ತ್​ಡೇ ಗಿಫ್ಟ್​ಗೆ ಕಳೆದೋಗೋದು ಗ್ಯಾರಂಟಿ!

101 ಈಡುಗಾಯಿ ಒಡೆದು ‘ಒಡೆಯ’ನ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು..!

21 COMMENTS

  1. Magnificent web site. Lots of useful information here. I?¦m sending it to a few friends ans also sharing in delicious. And of course, thank you in your sweat!

LEAVE A REPLY

Please enter your comment!
Please enter your name here

- Advertisment -

Most Popular

Recent Comments