ಕೊರೋನಾ ವೈರಸ್ನಿಂದಾಗಿ ಇಡೀ ವಿಶ್ವವೇ ನಲುಗುತ್ತಿದೆ. ಎಲ್ಲಾ ಕಡೆ ಜನ ಜಾತಿ, ಧರ್ಮ ಬೇಧ ಮರೆತು ಜಾಗೃತಿ ಮೂಡಿಸುತ್ತಿದ್ದಾರೆ. ಚಿಂತಕ ಚರ್ಕವರ್ತಿ ಸೂಲಿಬೆಲೆ ಮಾಡಿರುವ ಟ್ವೀಟ್ ಸಖತ್ ಚರ್ಚೆಗೆ ಗ್ರಾಸವಾಗಿದೆ. ಸೂಲಿಬೆಲೆ ಟ್ವೀಟ್ಗೆ ನಟ ನಟ ಧನಂಜಯ್ ಮಾನವೀಯತೆ ಪಾಠ ಮಾಡಿದ್ದಾರೆ.
“ಇಟಲಿಯಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದ್ದು, ಸುಮಾರು 24,747 ಮಂದಿ ಕೊರೋನಾ ಸೋಂಕಿತರಾಗಿದ್ದು 1809 ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಚಿಕಿತ್ಸೆಗೆ ಆಸ್ಪತ್ರೆಗಳ ಕೊರತೆ ಉಂಟಾಗಿರುವುದರಿಂದ 80 ವರ್ಷಕ್ಕೂ ಮೇಲ್ಪಟ್ಟವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುವುದನ್ನು ನಿಲ್ಲಿಸಲು ಯೋಚಿಸಲಾಗುತ್ತಿದೆ. ಸೋಂಕು ತಗುಲಿರುವ ಎಲ್ಲರಿಗೂ ಚಿಕಿತ್ಸೆ ನೀಡಲು ಸಾಧ್ಯವಿಲ್ಲ” ಎಂಬ ಅಲ್ಲಿನ ಪ್ರಧಾನಿ ಹೇಳಿಕೆ ಶೇರ್ ಮಾಡಿರುವ ಚಕ್ರವರ್ತಿ ಸೂಲಿಬೆಲೆ, `ಜೀಸಸ್ ಲವ್ಸ್ ಆಲ್’ ಎಂಬ ವ್ಯಂಗ್ಯಭರಿತ ಶೀರ್ಷಿಕೆ ನೀಡಿದ್ದಾರೆ. ಈ ಟ್ವೀಟ್ಗೆ ಸಾಕಷ್ಟು ಜನ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ನಟ ಡಾಲಿ ಧನಂಜಯ್ ಸೂಲಿಬೆಲೆಯ ಈ ಟ್ವೀಟ್ಗೆ ರೀ ಟ್ವೀಟ್ ಮೂಲಕ ಮಾನವೀಯತೆ ಪಾಠ ಮಾಡಿದ್ದಾರೆ. “ ಏನಾದರೂ ಆಗು ಮೊದಲು ಮಾನವನಾಗು “ ಎಂದಿದ್ದಾರೆ.
“ ಕ್ಷಮಿಸಿ ನಾನು ನನ್ನ ತಪ್ಪನ್ನು ಸರಿಪಡಿಸಿದ್ದೇನೆ. ವಿಶ್ವದಾದ್ಯಂತ ಮಿಷನರಿಗಳು ಜೀಸಸ್ ಲವ್ಸ್ ಆಲ್ ಎಂದು ಹೇಳುತ್ತವೆ. ಆದ್ರೆ ಇಟಲಿಯ ವಯೋವೃದ್ಧರ ಸೇವೆಗೆ ನಿರಾಕರಿಸಿದ್ದಾರೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಲಾಗುತ್ತಿದೆ. ದೇವರು ಎಲ್ಲರನ್ನೂ ಪ್ರೀತಿಸುತ್ತಾನೆ ಆದ್ರೆ 80 ವರ್ಷ ಮೇಲ್ಪಟ್ಟವರನ್ನು ನಿರಾಕರಿಸುತ್ತಾನಾ? ಯಾರೆಲ್ಲಾ ಆಕ್ರೋಶ ವ್ಯಕ್ತಪಡಿಸುತ್ತಿದ್ದೀರೋ ಗಮನಿಸಿ ವ್ಯಾಟಿಕನ್ ಸಿಟಿ ಇಟಲಿಗೆ ಹತ್ತಿರವಿದೆ “ ಎಂದು ಸೂಲಿಬೆಲೆ ಪ್ರತಿಕ್ರಿಯಿಸಿದ್ದಾರೆ.
ಏನಾದರು ಆಗು ಮೊದಲು ಮಾನವನಾಗು🙏@astitvam https://t.co/F2SRrNkAn5
— Dhananjaya (@Dhananjayaka) March 17, 2020