Home ರಾಜ್ಯ ಮೈಸೂರು ಸಾಂಸ್ಕೃತಿಕ ನಗರಿಯಲ್ಲಿ ಮತ್ತೆ ಸರಗಳ್ಳರ ಕೈಚಳಕ

ಸಾಂಸ್ಕೃತಿಕ ನಗರಿಯಲ್ಲಿ ಮತ್ತೆ ಸರಗಳ್ಳರ ಕೈಚಳಕ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಸರಗಳ್ಳರ ಕಾಟ ಶುರುವಾಗಿದೆ. ಮೈಸೂರಿನ ನಾಲ್ಕು ಸ್ಥಳಗಳಲ್ಲಿ ಸರಗಳ್ಳತನ ನಡೆದಿದ್ದು ಇಬ್ಬರು ದುಷ್ಕರ್ಮಿಗಳು ಕೃತ್ಯ ನಡೆಸಿದ್ದಾರೆ. ಒಂದೇ ತಂಡದವರು ಈ ಎಲ್ಲ ಕೃತ್ಯವೆಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ವಿದ್ಯಾರಣ್ಯಪುರಂನ ಲಿಂಕ್ ರಸ್ತೆಯಲ್ಲಿ ಜಯಮ್ಮ (60) ಎಂಬುವರ 22 ಗ್ರಾಂ ಚಿನ್ನದ ಸರ, ವಿದ್ಯಾರಣ್ಯಪುರಂನ ಅಕ್ಕಮಹಾದೇವಿ ರಸ್ತೆಯಲ್ಲಿ ಜಯಲಕ್ಷ್ಮಿ(65) ಎಂಬುವರ 12 ಗ್ರಾಂ ಚಿನ್ನದ ಸರವನ್ನೂ ದುಷ್ಕರ್ಮಿಗಳು ಕಸಿದಿದ್ದಾರೆ. ನಜರಬಾದ್​ನ ಇಟ್ಟಿಗೆಗೂಡಿನಲ್ಲಿ ಹಾಲು ತರಲು ಮನೆಯಿಂದ ಹೊರಬಂದಿದ್ದ ಸುವರ್ಣಾದೇವಿ (79) ಎಂಬುವರಿಂದ 40ಗ್ರಾಂ ಚಿನ್ನದ ಸರವನ್ನು ಕಸಿಯಲಾಗಿದೆ. ವಿ.ವಿ.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಗೋಕುಲಂ ಮೊದಲನೇ ಹಂತದ ಭಾಗ್ಯಮ್ಮ(55) ಎಂಬುವರು ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ವೇಳೆ ದುಷ್ಕರ್ಮಿಗಳು ತಾಳಿ ಕಿತ್ತು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ವೃದ್ಧರನ್ನೇ ಟಾರ್ಗೆಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments