Friday, October 7, 2022
Powertv Logo
Homeದೇಶರೆಸ್ಟೋರೆಂಟ್, ಹೋಟೆಲ್ ಹಾಗೂ ಮಾಲ್ ಓಪನ್​ಗೆ​ ಕೇಂದ್ರದಿಂದ ಹೊಸ ಮಾರ್ಗಸೂಚಿ

ರೆಸ್ಟೋರೆಂಟ್, ಹೋಟೆಲ್ ಹಾಗೂ ಮಾಲ್ ಓಪನ್​ಗೆ​ ಕೇಂದ್ರದಿಂದ ಹೊಸ ಮಾರ್ಗಸೂಚಿ

ನವದೆಹಲಿ: ಲಾಕ್​ಡೌನ್ ಆದಾಗಿನಿಂದ ಮುಚ್ಚಾಲಗಿದ್ದ ರೆಸ್ಟೋರೆಂಟ್, ಹೋಟೆಲ್ ಹಾಗೂ ಮಾಲ್​ಗಳನ್ನು ಜೂನ್ 8 ರಿಂದ ತೆರಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದೀಗ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.

ಶಾಪಿಂಗ್‌ ಮಾಲ್​ಗಳಿಗೆ ನಿಯಮಗಳು:

 • ಮಾಲ್‌ ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಹ್ಯಾಂಡ್‌ ಸ್ಯಾನಿಟೈಸರ್‌ ವಿತರಕ ಮತ್ತು ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯ
 • ರೋಗ ಲಕ್ಷಣ ರಹಿತ ಗ್ರಾಹಕರಿಗೆ ಮಾತ್ರ ಮಾಲ್‌ ಒಳಗಡೆ ಪ್ರವೇಶ
 • ಫೇಸ್ ಮಾಸ್ಕ್‌ ಧರಿಸಿದ್ದರೆ ಮಾತ್ರ ಎಲ್ಲ ಕಾರ್ಮಿಕರು, ಗ್ರಾಹಕರ ಪ್ರವೇಶಕ್ಕೆ ಅನುಮತಿ ಹಾಗೂ ಮಾಲ್ ಒಳಗಡೆ ಎಲ್ಲಾ ಸಮಯದಲ್ಲೂ ಮಾಸ್ಕ್‌ ಧರಿಸುವುದು ಕಡ್ಡಾಯ
 • ಕೊರೋನಾ ನಿಯಂತ್ರಣದ ಪೋಸ್ಟರ್‌ ಹಾಗೂ ವಿಡಿಯೋಗಳನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಬೇಕು.
 • ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಮಾಲ್‌ ನಿರ್ವಹಣೆ. ಕಂಪೆನಿಗಳು ಅಗತ್ಯವಾದ ಜನರನ್ನು ನಿಯೋಜಿಸಬೇಕು
 • ಉದ್ಯೋಗಿಗಳಲ್ಲಿ ವೃದ್ಧರು, ಗರ್ಭಿಣಿ ನೌಕರರು ಮತ್ತು ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವ ನೌಕರರು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
 • ಪಾರ್ಕಿಂಗ್‌ ಸ್ಥಳಗಳಲ್ಲಿ ಜನದಟ್ಟಣೆ ನಿಯಂತ್ರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
 • ಮಾಲ್‌ನ ಆವರಣದ ಹೊರಗೆ ಹಾಗೂ ಒಳಗೆ ಯಾವುದೇ ಅಂಗಡಿಗಳು, ಮಳಿಗೆಗಳು ಕೆಫೆಟೇರಿಯಾಗಳಲ್ಲಿ ಎಲ್ಲ ಸಮಯದಲ್ಲೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ
 • ಕ್ಯೂ ನಿರ್ವಹಿಸಲು ಮತ್ತು ಆವರಣದಲ್ಲಿ ಸಾಮಾಜಿಕ ಅಂತರ ಖಚಿತಪಡಿಸಿಕೊಳ್ಳಲು ವಿಶೇಷ ಗುರುತನ್ನು ಮಾಡಬೇಕು
 • ಕಾರ್ಮಿಕರು ಮತ್ತು ಸರಕು ಸರಬರಾಜುಗಳಿಗಾಗಿ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ರೂಪಿಸಬೇಕಾಗುತ್ತದೆ.
 • ಹೋಮ್‌ ಡೆಲಿವರಿಗೂ ಮುನ್ನ ಡೆಲಿವರಿ ಬಾಯ್‌ ಅಥವಾ ಸಿಬ್ಬಂದಿಯ ಥರ್ಮಲ್‌ ಸ್ಕ್ರೀನಿಂಗ್‌ನ್ನು ಮಾಲ್‌ ನಿರ್ವಹಣೆ ಕಂಪನಿಗಳು ಮಾಡಬೇಕು.
 • ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕನಿಷ್ಠ ಸಂಖ್ಯೆಯಲ್ಲಿ ಗ್ರಾಹಕರನ್ನು ಒಳಗಡೆ ಬಿಡಬೇಕು
 • ಮಾಲ್‌ಗಳ ಎಸಿ 24 ರಿಂದ 30 ಡಿಗ್ರಿ ಸೆಲ್ಸಿಯಸ್‌ ಇರಬೇಕು. ಸಾಧ್ಯವಾದಷ್ಟು ಹೆಚ್ಚು ಮಾಲ್‌ ಒಳಗಡೆ ತಾಜಾ ಗಾಳಿ ಬರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು.
 • ಎಸ್ಕಲೇಟರ್​​ನಲ್ಲಿ ಹತ್ತುವಾಗ 1 ಮೆಟ್ಟಿಲು‌ ನಡುವೆ ಅಂತರವಿರಲಿ
 • ಮಾಲ್​ನಲ್ಲಿ ದೊಡ್ಡ ಪ್ರಮಾಣ ಜನ ಸೇರಿ ಪಾರ್ಟಿ ಮಾಡುವಂತಿಲ್ಲ
 • ಮಾಲ್​​​ನಲ್ಲಿರುವ ಗೇಮಿಂಗ್ ಸೆಂಟರ್ ಅವಕಾಶವಿಲ್ಲ
 • ಫುಡ್‌ ಕೋರ್ಟ್‌ ಅಥವಾ ರೆಸ್ಟೋರೆಂಟ್‌ಗಳಲ್ಲಿ, ಆಸನ ಶೇ.50ಕ್ಕಿಂತ ಹೆಚ್ಚಿರಬಾರದು.
 • ಆಸನಗಳ ವ್ಯವಸ್ಥೆಯ ಮಧ್ಯೆ ಸಾಧ್ಯವಾದಷ್ಟು ಸಾಮಾಜಿಕ ಅಂತರವಿರಲಿ.
 • ಸಿಬ್ಬಂದಿ ಮಾಸ್ಕ್‌ ಹಾಗೂ ಗ್ಲೌಸ್‌ ಕಡ್ಡಾಯವಾಗಿ ಧರಿಸಿರಬೇಕು ಮತ್ತು ಇತರ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು
 • ಡಿಜಿಟಲ್‌ ಪಾವತಿಯನ್ನು ಪ್ರೋತ್ಸಾಹಿಸುವುದು ಅಗತ್ಯ ಮತ್ತು ಅನಿವಾರ್ಯ
 • ಪ್ರತಿ ಬಾರಿ ಗ್ರಾಹಕರು ಹೊರಟಾಗ ಟೇಬಲ್‌ಗಳನ್ನು ಸ್ಯಾನಿಟೈಸರ್‌ ಮೂಲಕ ಸ್ವಚ್ಛಗೊಳಿಸಬೇಕು.
 • ಅಡುಗೆ ಮನೆಯಲ್ಲಿ, ಸಿಬ್ಬಂದಿ ಕೆಲಸದ ಸ್ಥಳದಲ್ಲಿ ಸಾಮಾಜಿಕ ಅಂತರ ನಿಯಮ ಪಾಲನೆ ಕಡ್ಡಾಯ

ಹೋಟೆಲ್ ರೆಸ್ಟೋರೆಂಟ್​ಗಳಲ್ಲಿ ನಿಯಮಗಳು:

 • ಹೋಟೆಲ್ ಹಾಗೂ ರೆಸ್ಟೋರೆಂಟ್ ರಿಸಪ್ಷನ್‌ನಲ್ಲಿ ಮಾಸ್ಕ್, ಗ್ಲೌಸ್ ಕಡ್ಡಾಯವಾಗಿ ಧರಿಸಬೇಕು
 • ಗ್ರಾಹಕರೊಂದಿಗೆ ನೇರ ಸಂವಹನ ಮಾಡಬಾರದು
 • ವಾಹನ ನಿಲುಗಡೆ ಸ್ಥಳಗಳಲ್ಲಿ ಮತ್ತು ಆವರಣದ ಹೊರಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು.
 • ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಬರುವವರಿಗೆ ಪ್ರತ್ಯೇಕ ಪ್ರವೇಶ ಮತ್ತು ಪ್ರತ್ಯೇಕ ನಿರ್ಗಮನದ ವ್ಯವಸ್ಥೆ ಮಾಡಿಕೊಳ್ಳಬೇಕು.
 • ಆನ್‌ಲೈನ್ ಪಾವತಿ, ಡಿಜಿಟಲ್ ಪಾವತಿಯನ್ನು ಪ್ರೋತ್ಸಾಹಿಸಬೇಕು ಗ್ರಾಹಕರ ವಿಳಾಸ, ಪ್ರಯಾಣದ ಮಾಹಿತಿ ಪಡೆಯಬೇಕು
 • ಹೋಟೆಲ್ ಮತ್ತು ರೆಸ್ಟೋರೆಂಟ್ ಬರುವ ಗ್ರಾಹಕರ ಐಡಿ, ವಿಳಾಸ, ಪ್ರಯಾಣದ ಹಿನ್ನೆಲೆ, ವೈದ್ಯಕೀಯ ಸ್ಥಿತಿ ಬಗ್ಗೆ ಸರಿಯಾದ ದಾಖಲೆ ಅಥವಾ ಮಾಹಿತಿ ಪಡೆದುಕೊಳ್ಳಬೇಕು.
 • ಲಗೇಜ್‌ಗಳನ್ನು ಕೋಣೆಗಳಿಗೆ ಕಳುಹಿಸುವ ಮೊದಲು ಸೋಂಕು ರಹಿತಗೊಳಿಸಬೇಕು.
 • ಕೊಠಡಿ ಸೇವೆಗಾಗಿ, ಅತಿಥಿಗಳು ಮತ್ತು ಸಿಬ್ಬಂದಿಗಳ ನಡುವಿನ ಸಂವಹನವು ಇಂಟರ್‌ಕಾಮ್, ಮೊಬೈಲ್ ಫೋನ್ ಮೂಲಕ ಇರಬೇಕು.
 • ಸಾಮಾಜಿಕ ಅಂತರ ಕಾಯ್ದುಕೊಂಡು ಕೊಠಡಿ ಸೇವೆ ನೀಡಬೇಕು.
 • ಮಕ್ಕಳು ಆಡುವ ಪ್ರದೇಶಗಳು ಮುಚ್ಚಲ್ಪಡುತ್ತವೆ.
 • ರೆಸ್ಟೋರೆಂಟ್‌ಗಳ ಆಸನ ಸಾಮರ್ಥ್ಯವನ್ನು ಶೇಕಡಾ 50ಕ್ಕೆ ಇಳಿಸಿದೆ
 • ಆಹಾರ ವಿತರಣಾ ಸಿಬ್ಬಂದಿ ಪ್ಯಾಕೆಟ್‌ಗಳನ್ನು ಗ್ರಾಹಕರ ಬಾಗಿಲಲ್ಲಿ ಇಡಬೇಕು. ಆಹಾರ ಪ್ಯಾಕೆಟ್ ಅನ್ನು ನೇರವಾಗಿ ಗ್ರಾಹಕರಿಗೆ ಹಸ್ತಾಂತರಿಸಬಾರದು.
 • ಹೋಮ್ ಡಲಿವರಿ ಮಾಡುವ ಸಿಬ್ಬಂದಿಯ ಉಷ್ಣಾಂಶ ಪರೀಕ್ಷಿಸಬೇಕು
 • ಕ್ಯೂ ವ್ಯವಸ್ಥೆ ನಿರ್ವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆವರಣದಲ್ಲಿ ನಿರ್ದಿಷ್ಟ ಗುರುತುಗಳನ್ನು ಹಾಕಬೇಕು
 • ರೆಸ್ಟೋರೆಂಟ್ ಒಳಗೆ ಪ್ರವೇಶ ಸಂದರ್ಭದಲ್ಲಿ ಕನಿಷ್ಠ 6 ಅಡಿಗಳಷ್ಟು ದೈಹಿಕ ಅಂತರ ಕಾಪಾಡಿಕೊಳ್ಳುವುದು.
 • ಎಲ್ಲಾ ಹವಾನಿಯಂತ್ರಣ ಸಾಧನಗಳ ತಾಪಮಾನ ಸೆಟ್ಟಿಂಗ್ 24-30 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿರಬೇಕು.
 • ಹೋಟೆಲ್​​ನಲ್ಲಿ ಪ್ರತೇಕ ಆಗಮನ ಮತ್ತು ನಿರ್ಗಮನ ವ್ಯವಸ್ಥೆ
 • ಅತಿಥಿಗಳ ಲಗೇಜ್​​ಗೆ ಕ್ರಿಮಿನಾಶಕ ಸಿಂಪಡಣೆ ಕಡ್ಡಾಯ

 

7 COMMENTS

 1. I am extremely inspired with your writing skills as well as with the format for your blog. Is that this a paid theme or did you modify it yourself? Either way keep up the excellent high quality writing, it’s rare to look a great blog like this one today..

LEAVE A REPLY

Please enter your comment!
Please enter your name here

- Advertisment -

Most Popular

Recent Comments