Thursday, October 6, 2022
Powertv Logo
Homeರಾಜ್ಯನೆರೆ ಪರಿಹಾರ ಬಂದಿಲ್ಲ ಅಂತ ಮೋದಿ ಎದುರೇ ಯಡಿಯೂರಪ್ಪ ಅಸಮಾಧಾನ!

ನೆರೆ ಪರಿಹಾರ ಬಂದಿಲ್ಲ ಅಂತ ಮೋದಿ ಎದುರೇ ಯಡಿಯೂರಪ್ಪ ಅಸಮಾಧಾನ!

ತುಮಕೂರು:  ಕೇಂದ್ರ ಸರ್ಕಾರದಿಂದ ಬರಬೇಕಾದ ನೆರೆ ಪರಿಹಾರ ಇನ್ನೂ ಬಂದಿಲ್ಲ ಅಂತ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಎದುರೇ ಅಸಮಾಧಾನ ಹೊರಹಾಕಿದರು.
ನಗರದಲ್ಲಿ ನಡೆದ ಕರ್ಮಣ್ಯೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಪ್ರವಾಹದಿಂದ ರಾಜ್ಯಕ್ಕೆ ಸಾವಿರಾರು ಕೋಟಿ ರೂ ನಷ್ಟವಾಗಿದೆ. ಕೇಂದ್ರ ಸರ್ಕಾರದಿಂದ ಮೊದಲ ಹಂತದ ಪರಿಹಾರ ಬಂದಿದೆ. ಆದ್ರೆ, ಎರಡನೇ ಹಂತದ ಪರಿಹಾರ ಇನ್ನೂ ಕೂಡ ಬಂದಿಲ್ಲ. ಶೀಘ್ರವಾಗಿ ಅದನ್ನು ಬಿಡುಗಡೆ ಮಾಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ ಅಂತ ಮೋದಿಗೆ ಮನವಿ ಮಾಡಿದರು.
ಅಷ್ಟೇ ಅಲ್ಲದೆ ನೀರಾವರಿಗಾಗಿ ರಾಜ್ಯಕ್ಕೆ 50 ಸಾವಿರ ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಬೇಕು ಎಂಬ ಬೇಡಿಕೆಯನ್ನಿಟ್ಟರು. ಆದರೆ, ಮೋದಿ ಮಾತ್ರ ತಮ್ಮ ಭಾಷಣದಲ್ಲಿ ನೆರೆ ಪರಿಹಾರ ಬಿಡುಗಡೆ ವಿಷಯವನ್ನಾಗಲಿ ಅಥವಾ ನೀರಾವರಿಗೆ ಅನುದಾನ ಕೊಡೋ ಬಗ್ಗೆ ಯಾಗಲೀ ಪ್ರತಿಕ್ರಿಯೇ ನೀಡಲಿಲ್ಲ. 

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments