ಕೊರೋನಾ ವೈರಸ್ ಹರಡುವುದನ್ನು ತಡೆಯುವ ಹಿನ್ನೆಲೆ ದೇಶಾದ್ಯಂತ 21 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಘೋಷಿಸಲಾಗಿದೆ. ಆದರೆ ದೇಶದ ಜನತೆ ಸರ್ಕಾರದ ಆದೇಶವನ್ನು ನಿರ್ಲಕ್ಷಿಸುತ್ತಿದ್ದಾರೆ. ಹಾಗಾಗಿ ಸೆಲೆಬ್ರೆಟಿಗಳು ತಮ್ಮ ಅಭಿಮಾನಿಗಳಿಗೆ ಮನೆಯಿಂದ ಹೊರಬರದಂತೆ ಮನವಿಯನ್ನು ಮಾಡಿಕೊಂಡಿದ್ದಾರೆ.
ಟ್ವೀಟ್ ಮೂಲಕ ಮನವಿ ಮಾಡಿಕೊಂಡಿರುವ ಅಮಿತಾಬ್ ಬಚ್ಚನ್, ಈ ಲಾಕ್ಡೌನ್ ನಮ್ಮ ಜೀವವನ್ನು ಉಳಿಸುತ್ತದೆ. 21ದಿನಗಳ ಕಾಲ ಮನೆಯಲ್ಲೇ ಇದ್ದು, ಕೊರೋನಾವನ್ನು ಮಸಣ ಸೇರಿಸೋಣ ಎಂದು ತಿಳಿಸಿದ್ದಾರೆ.
T 3480 –
"हाथ हैं जोड़ते विनम्रता से आज हम ,
सुनें आदेश प्रधान का , सदा तुम और हम ;
ये बंदिश जो लगी है , जीवदायी बनेगी ,
21 दिनों का संकल्प निश्चित Corona दफ़नाएगी " !!!~ अमिताभ बच्चन pic.twitter.com/Hq35etxSz0
— Amitabh Bachchan (@SrBachchan) March 24, 2020
ಇಂತಹ ಸಿಂಪಲ್ ಕೆಲಸಗಳನ್ನು ಮಾಡೋದಕ್ಕೆ ಜನರಿಗೆ ಕಷ್ಟವಾಗೋದು. ಯಾಕಂದ್ರೆ ಇಂತಹ ಕೆಲಸಗಳಿಗೆ ಶಿಸ್ತು ಹಾಗೂ ದೃಢಸಂಕಲ್ಪ ಇರಬೇಕು. ನಾವು ಮಾಡೋ ಸಣ್ಣ ಕೆಲಸಗಳಿಂದ ಲಕ್ಷಾಂತರ ಜೀವಗಳನ್ನು ಉಳಿಸಬಹುದು ಎಂದು ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
Simple things are often the hardest to do, because they require consistent discipline & determination.
Hon‘ble PM @narendramodi ji has asked us to #StayHomeStaySafe for 21 days. This simple task can save millions of lives.
Let’s all unite in this war against #COVID19.
— Sachin Tendulkar (@sachin_rt) March 24, 2020
ಇನ್ನು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಟ್ವೀಟ್ ಮಾಡಿ ನಮ್ಮ ಪ್ರಧಾನ ಮಂತ್ರಿಗಳು ಆದೇಶಿಸಿರುವಂತೆ 21 ದಿನಗಳ ಕಾಲ ಮನೆಯಲ್ಲೇ ಇರಿ. ನಾನು ಎಲ್ಲರಲ್ಲೂ ಮನವಿ ಮಾಡಿಕೊಳ್ತಿದ್ದೇನೆ. ಈ ಕೊರೋನಾದಿಂದ ಬಚಾವಾಗಲು ಸೋಶಿಯಲ್ ಡಿಸ್ಟೆನ್ಸ್ನಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.
जैसे कि हमारे माननीय प्रधान मंत्री, श्री @NarendraModi जी ने अभी घोषणा की, पूरा देश अगले 21 दिनों के लिए आज मध्यरात्रि से पूरे लॉकडाऊन में जा रहा है। मेरा अनुरोध एक ही रहेगा, कृपया घर पर रहॆं। 🙏🏼 #SocialDistancing ही कोविड १९ का एकमात्र इलाज है। #IndiaFightsCorona
— Virat Kohli (@imVkohli) March 24, 2020
ಮುಂದಿನ 21 ದಿನಗಳು ನಮ್ಮ ದೇಶದ ಇತಿಹಾಸದಲ್ಲಿ ತುಂಬಾ ಮುಖ್ಯವಾದ ದಿನವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಜನರಿಂದ ದೂರವಿದ್ದು, ತಮ್ಮ ಮನೆಗಳಲ್ಲಿ ಉಳಿದುಕೊಂಡು ಜವಾಬ್ದಾರಿಯುತ ಪಾತ್ರವಹಿಸಬೇಕಾಗಿದೆ. ಸರ್ಕಾರದ ಆದೇಶವನ್ನು ಶಿಸ್ತಿನಿಂದ ಪಾಲಿಸಿದ್ರೆ ಕೊರೋನಾ ಆತಂಕದಿಂದ ಬೇಗನೆ ಹೊರಬರಬಹುದು ಎಂದು ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
These 21 days are very important in the history of our nation & each one of us can play our part by just staying at our homes and maintaining distance from people. Please adhere to it strictly and we shall overcome this soon #CoronavirusLockdown
— Virender Sehwag (@virendersehwag) March 24, 2020