Homeರಾಜ್ಯಕ್ಷಣಕ್ಕೊಂದು ಜಾಗ ಬದಲಾಯಿಸುತ್ತಿರುವಾ ಸಿಡಿ ಗ್ಯಾಂಗ್..!

ಕ್ಷಣಕ್ಕೊಂದು ಜಾಗ ಬದಲಾಯಿಸುತ್ತಿರುವಾ ಸಿಡಿ ಗ್ಯಾಂಗ್..!

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮುಗಿಯದ ಕಾದಂಬರಿಯಂತೆ ಸಾಗುತ್ತಲೇ ಇದೆ. ಸಿಡಿ ಪ್ರಕರಣದ ಹಿನ್ನಲೆಯಲ್ಲಿ, ಪ್ರಮುಖ ಆರೋಪಿಗಳಾದ ಹ್ಯಾಕರ್ ಶ್ರವಣ್ ಹಾಗೂ ನರೇಶ್ ಗೌಡ ದೇಶಾದ್ಯಂತ  ಸುತ್ತುತ್ತಿದ್ದು, ಪೊಲೀಸರಿಗೆ ಇದು ತಲೆ ನೋವಿನ ಸಂಗತಿಯಾಗಿದೆ.

ನರೇಶ್ ಮತ್ತು ಇವನ ಗ್ಯಾಂಗ್ ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ದೆಹಲಿ, ರಾಜಸ್ಥಾನ ಹಾಗೂ ಉತ್ತರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದರು. ಆದರೆ ಈಗ ಈ ಗ್ಯಾಂಗ್ ಕೇರಳದತ್ತ ಪಯಣ ಬೆಳೆಸಿದ್ದಾರೆ.  4 ದಿನಗಳ ಹಿಂದೆ, ರಾಜಸ್ಥಾನದಲ್ಲಿ ಟವರ್ ಲೊಕೇಷನ್ ಪತ್ತೆಯಾಗಿದ್ದು, ನಿನ್ನೆ ಕೇರಳದಲ್ಲಿ ಟವರ್ ಪತ್ತೆಯಾಗಿದೆ. ಹ್ಯಾಕರ್ ಶ್ರವಣ್ ಕೂತ ಜಾಗದಲ್ಲೇ ಟವರ್ ಲೊಕೇಷನ್ ಬದಲಾಯಿಸುತ್ತಿದ್ದಾನಾ ಎನ್ನುವ ಶಂಕೆ ಮೂಡುತ್ತಿದೆ.  

 ಎಸ್ಐಟಿ ಅಧಿಕಾರಿಗಳು ರಾಜ್ಯದಿಂದ ರಾಜ್ಯಕ್ಕೆ ಸುತ್ತಾಡಿ ಹೈರಾಣಾಗಿದ್ದಾರೆ. ಇನ್ನೂ ಎಸ್ಐಟಿ ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸಲು ಹ್ಯಾಕರ್ ಈ ರೀತಿಯಾದ ಕೆಲಸ ಮಾಡುತ್ತಿದ್ದಾನಾ ಎನ್ನುವ ಪ್ರಶ್ನೆಗಳು ಎದ್ದಿವೆ. ಎಸ್ಐಟಿ ಅಧಿಕಾರಿಗಳ ವಾಟ್ಸ್ಆ್ಯಪ್ ಹ್ಯಾಕ್ ಮಾಡಲು ಶ್ರವಣ್ ಯತ್ನಿಸಿದ್ದು, ಸದ್ಯಕ್ಕೆ ಪತ್ತೆಯಾದ ಲೊಕೇಷನ್ ಆಧಾರದ ಮೇರೆಗೆ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.  

LEAVE A REPLY

Please enter your comment!
Please enter your name here

- Advertisment -

Most Popular

Recent Comments