ಬೆಂಗಳೂರು: ಸರಣಿ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸರಣಿ ಕಳ್ಳತನ ಮಾಡುತ್ತಿದ್ದ ಫಯೂಮ್ ಮತ್ತು ಮುರಸಲೀಂ ಮೊಹಮದ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂದಿಸಿ, ಆರೋಪಿಗಳಿಂದ 4 ಕೆ.ಜಿ ಚಿನ್ನ ಮತ್ತು 2.25 ಕೋಟಿ ಮೊತ್ತದ ಚಿನ್ನವನ್ನು ಜಪ್ತಿ ಮಾಡಿದ್ದಾರೆ.
ಉತ್ತರ ಪ್ರದೇಶ, ದೆಹಲಿ, ಹರಿಯಾಣದಿಂದ ಬಂದು ಕಳ್ಳತನ ಮಾಡುತ್ತಿದ್ದರು. ಫಯೂಮ್ ಎಂಬಾತ ಎಟಿಎಮ್ ರಾಬರಿಯನ್ನು ಮಾಡುತ್ತಿದ್ದ. ಹೀಗಾಗಿ ಈತನನ್ನು ಫಯೂಮ್ ಎಂಬ ಹೆಸರಿನಿಂದ ಫೇಮಸ್ ಆಗಿದ್ದ. ಇತನನ್ನು 2016 ರಲ್ಲಿ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದರು. ನೋಯಿಡಾ ಜೈಲಿನಲ್ಲಿ ಇದ್ದಾಗ ಒಂದು ಗ್ಯಾಂಗ್ ಕಟ್ಟಿಕೊಂಡಿದ್ದ. 2017 ರಲ್ಲಿ ಜೈಲಿನಿಂದ ಬಿಡುಗಡೆ ಆದ ಬಳಿಕ ಕರ್ನಾಟಕದಲ್ಲಿ ಬಂದು ಕಳ್ಳತನ ಮಾಡಲು ಪ್ರಾರಂಭಿಸಿದ್ದಾನೆ. ಫಯೂಮ್ ನನ್ನು ಫಿಂಗರ್ ಪ್ರಿಂಟ್ ನಿಂದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮುರಾದಬಾದ್ ನಲ್ಲಿ ಚಿನ್ನ ಇಟ್ಟಿರುವ ಮಾಹಿತಿ ಆದಾರದ ಮೇಲೆ ಸತತ 7 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ.