ದೆಹಲಿ : ದೇಶದಲ್ಲಿ ಪೌರತ್ವದ ಕಿಚ್ಚು ಹೆಚ್ಚಾಗುತ್ತಿದಂತೆ ದೆಹಲಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಸಂರ್ಪರ್ಕ ಸಂಸ್ಥೆಗಳು ಈ ಕ್ರಮವನ್ನು ಕೈಗೊಂಡಿದ್ದು, SMS ಸೇವೆಯನ್ನು ಸಹ ಬ್ಲಾಕ್ ಮಾಡಿವೆ. ದೆಹಲಿಯ ಕೆಂಪುಕೋಟೆ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, 16 ಮೆಟ್ರೋ ಸ್ಟೇಷನ್ಗಳನ್ನು ಸಹ ಬಂದ್ ಮಾಡಲಾಗಿದೆ.