Home ರಾಜ್ಯ ಗಣಿ ಸ್ಫೋಟ ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸಬೇಕು: ಮಾಜಿ ಸಚಿವ ಕಿಮ್ಮನೆ ರತ್ನಾಕರ್

ಗಣಿ ಸ್ಫೋಟ ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸಬೇಕು: ಮಾಜಿ ಸಚಿವ ಕಿಮ್ಮನೆ ರತ್ನಾಕರ್

ಶಿವಮೊಗ್ಗ: ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣವೂ ಸೇರಿದಂತೆ, ಶಿವಮೊಗ್ಗ ಸ್ಫೋಟ ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸಬೇಕೆಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹಿಸಿದ್ದಾರೆ. 

ಅಕ್ರಮ ಕಲ್ಲುಗಣಿಗಾರಿಕೆಯಲ್ಲಿ ಬಿಜೆಪಿಯವರದ್ದೇ ಪಾತ್ರ ಬಹಳಷ್ಟು ಇದೆ.  ಬಿಜೆಪಿ ಆಡಳಿತದಲ್ಲಿ, ಬೇರೆಯವರಿಗೆ ಸಂಬಂಧಪಟ್ಟದ್ದಾದರೆ, ಅವೆಲ್ಲವನ್ನೂ ಸಿಬಿಐ ತನಿಖೆಗೊಳಪಡಿಸುತ್ತಾರೆ.   ಮತ್ತು ಅವರನ್ನ ಒಳಗೆ ಹಾಕಿಸುತ್ತಾರೆ.  ಸುಳ್ಳು ಆಪಾದನೆ ಮಾಡಿ ವಿನಯ್ ಕುಲಕರ್ಣಿಯನ್ನು ಒಳಗೆ ಕಳಿಸಿದ್ದಾರೆ.  ಇದು ರಾಜ್ಯದ ದುರಾಡಳಿತದ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಕಿಮ್ಮನೆ ಆಪಾದಿಸಿದ್ದಾರೆ. 

ಈ ಎರಡೂ ಪ್ರಕರಣಗಳಲ್ಲಿ ಬಿಜೆಪಿಯವರ ಪಾತ್ರವಿದೆ.  ಸ್ಫೋಟದಲ್ಲಿ ಸಾವನಪ್ಪಿದವರು ಪರಿಹಾರ ಕೇಳಿದರೆ, ಇದು 302 ಕೇಸು ಎಂದು ಹೇಳಿ ನುಣುಚಿಕೊಳ್ಳುತ್ತಿದ್ದಾರೆ.  ದುರಂತದಲ್ಲಿ ಸಾವನಪ್ಪಿದವರಿಗೆ ಪರಿಹಾರವೇ ಇಲ್ಲದಂತಾಗಿದೆ.  ಬಿಜೆಪಿಯವರು ಪಲಾಯನಯವಾದ ಮಾಡುತ್ತಿದ್ದಾರೆ.  ಅಕ್ರಮ ಕಲ್ಲುಗಣಿಗಾರಿಕೆಗಳಲ್ಲಿ, ಬಿಜೆಪಿಯವರದ್ದೇ ಪ್ರಮುಖ ಪಾತ್ರ ಇರುವುದು ಕಂಡು ಬಂದಿದೆ.  ಶಿವಮೊಗ್ಗದ ಸ್ಫೋಟ ಪ್ರಕರಣವನ್ನು ಈವರೆಗೂ ಸಿಬಿಐ ಆಗಲೀ, ಸಿಐಡಿ ತನಿಖೆಗೆ ಒಳಪಡಿಸಿಲ್ಲ.  ಕೇವಲ ಜಿಲ್ಲಾಧಿಕಾರಿಯವರ ತನಿಖೆಗೆ ಬಿಟ್ಟಿದ್ದಾರೆ.   ಬಿಜೆಪಿಯವರ ಮೇಲೆ ಆಪಾದನೆ ಬರುತ್ತದೆ ಎಂದುಕೊಂಡು, ಈ ರೀತಿ ಮಾಡಿದ್ದಾರೆ.  ರಾಜ್ಯದ ಜನರಿಗೆ ದಕ್ಷವಾದ ಆಡಳಿತ ನೀಡುವುದನ್ನೇ ಬಿಜೆಪಿ ಮರೆತಂತಿದೆ.  ಬಿಜೆಪಿ ಕೇವಲ ಭ್ರಷ್ಟಾಚಾರದ ಹಿಂದೆ ಬಿದಿದ್ದಾರೆ.  ಮಾರ್ಚ್ 4 ರಿಂದ ಸದನ ಆರಂಭಗೊಳ್ಳಲಿದ್ದು, ನಮ್ಮ ನಾಯಕರು ಇವೆಲ್ಲದರ ಬಗ್ಗೆ ಸದನದಲ್ಲಿ ಮಾತನಾಡಲಿದ್ದಾರೆ ಅಂತಾ ಕಿಮ್ಮನೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

‘ಡಿಜಿಟಲ್‌ ಮೀಡಿಯಾಗೆ ಹೊಸ ಗೈಡ್‌ಲೈನ್ಸ್ ‘

ಬೆಂಗಳೂರು: ಸೋಶಿಯಲ್ ಮೀಡಿಯಾಗಳಿಗೆ ಮೇಲೆ ಕೇಂದ್ರ ಸರ್ಕಾರ ಮೂಗುದಾರ ಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಗಳು ಹೆಚ್ಚಾಗುತ್ತಿವೆ. ನಿಂಧನೆ ಮಾಡುವಂತಹ ಪೋಸ್ಟ್ ಗಳನ್ನು ನಿರ್ಬಂಧಿಸಬೇಕು ಎಂದು ಕೇಂದ್ರ ಸರ್ಕಾರ ಸೋಶಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾಗೆ...

ನನ್ನ ಸೋಲು ಲಿಂಗಾಯತ ಸುಮುದಾಯಕ್ಕೆ ಹಿನ್ನಡೆ: ಸುನಂದಾ

ಮೈಸೂರು: ಮೈಸೂರು ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಸೋತ ಹಿನ್ನೆಲೆಯಲ್ಲಿ‌ ಬಿಜೆಪಿ ಅಭ್ಯರ್ಥಿ ಸುನಂದ ಪಾಲನೇತ್ರ ಕಣ್ಣೀರು ಹಾಕಿದ್ದಾರೆ. ನನ್ನ ಸೋಲು ಲಿಂಗಾಯತ ಸುಮುದಾಯಕ್ಕೆ ಹಿನ್ನೆಡೆಯಾಗಿದೆ. ನಾನು ಮೇಯರ್ ಆಗುತ್ತೇನೆ ಅಂತ ತುಂಬಾ‌ ನಿರೀಕ್ಷೆ ಇಟ್ಟುಕೊಂಡಿದ್ದೆ....

‘ಗ್ರಾಮಸ್ಥರ ಕೆರೆ ನಿರ್ಮಾಣಕ್ಕೆ ನಿನಾಸಂ ಸತೀಶ್ ಮೆಚ್ಚುಗೆ’

ಶಿವಮೊಗ್ಗ: ಗ್ರಾಮದ ಜನರೇ ಸೇರಿಕೊಂಡು, ಗ್ರಾಮದ ಕೆರೆಗಳನ್ನು ಅಭಿವೃದ್ಧಿಗೊಳಿಸಿದ ಮುತ್ತಲ ಗ್ರಾಮಕ್ಕೆ ನಟ ನೀನಾಸಂ ಸತೀಶ್ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮುತ್ತಲ ಗ್ರಾಮದಲ್ಲಿ ಎರಡು ಕೆರೆಗಳನ್ನು...

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು ಬುದ್ಧಿ ಬಂದಿಲ್ಲ: ಈಶ್ವರಪ್ಪ

ವಿಜಯಪುರ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು ಬುದ್ಧಿ ಬಂದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಜಯಪುರದಲ್ಲಿ ಗ್ರಾಮೀಣಾಬಿವೃದ್ಧಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಹೋದಲೆಲ್ಲಾ ಮುಂದಿನ ಸಿಎಂ ನಾನೇ ಅಂತಾ ಹೇಳ್ತಾರೆ. ಸಿದ್ದರಾಮಯ್ಯ ಹಗಲು-ರಾತ್ರಿ...

Recent Comments