Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Thursday, June 27, 2019

84ರ ಅಜ್ಜಿ ರಿವಾಲ್ವರ್ ದಾದಿ ಎಂದೇ ಫೇಮಸ್

0

ಇವರ ವಯಸ್ಸು 84 ದಾಟಿದೆ. ಆದ್ರೆ ಕೈ ನಡುಗುವುದಿಲ್ಲ. ಉತ್ಸಾಹವಿನ್ನೂ ಕಡಿಮೆಯಾಗಿಲ್ಲ. ಇಟ್ಟ ಗುರಿ ಎಂದಿಗೂ ತಪ್ಪಿಲ್ಲ. ಒಂದೇ ಏಟು.. ಮಟಾಷ್..! ಅಂತಾರಾಜ್ಯ ಮಟ್ಟದಲ್ಲಿ ಭಾರೀ ಸದ್ದು ಮಾಡಿರೋ ಇವರ ಮುಂದೆ ತರುಣ-ತರುಣಿಯರೇ ಸೋಲೊಪ್ಪಿಕೊಂಡಿದ್ದಾರೆ!

ಶರೀರಕ್ಕೆ ವೃದ್ಧಾಪ್ಯ ಬಂದಿರಬಹುದು ಆದರೆ ಮನಸ್ಸಿಗಲ್ಲ ಎಂಬುದನ್ನು ನಿರೂಪಿಸಿದ್ದಾರೆ ಅಜ್ಜಿ. ಇವರು ಶೂಟರ್ ದಾದಿ, ರಿವಾಲ್ವರ್ ದಾದಿ ಅಂತಲೇ  ವಿಶ್ವ ವಿಖ್ಯಾತಿ ಪಡೆದಿದ್ದಾರೆ. ಅಂದಹಾಗೇ ಈ ಅಜ್ಜಿಯ ಹೆಸರು ಚಂದ್ರೋ ತೋಮರ್ ಅಂತ. ಇಳಿವಯಸ್ಸಿನಲ್ಲಿಯೂ ಯುವ ಸಮುದಾಯವೇ ನಾಚಿಸುವಂತೆ ಶಾರ್ಪ್​ ಶೂಟಿಂಗ್​ನಲ್ಲಿ ಪರಿಣಿತಿ ಹೊಂದಿದ್ದಾರೆ. ಇವರು ಇಟ್ಟ ಗುರಿ ಇದುವರೆಗೂ ಒಂದೂ ತಪ್ಪಿಲ್ಲವಂತೆ.

ವಿಶ್ವದ ಅತ್ಯಂತ ಹಿರಿಯ ಶಾರ್ಪ್​​ಶೂಟರ್​, ಅದರಲ್ಲೂ ಮಹಿಳಾ ಶಾರ್ಪ್​ಶೂಟರ್ ಎಂಬ ಹೆಗ್ಗಳಿಕೆಗೆ ಇವರದ್ದು. ಇವರು ಉತ್ತರ ಪ್ರದೇಶದ ಬಾಗ್ವತ್ ಜಿಲ್ಲೆಯ ಜೋಹ್ರಿ ಗ್ರಾಮದವರು. ಜೋಹ್ರಿ ಗ್ರಾಮ ಇಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದರೆ ಅದಕ್ಕೆ ಕಾರಣ ಚಂದ್ರೋ ತೋಮರ್ ಅವ್ರು ಈ ಇಳಿವಯಸ್ಸಿನಲ್ಲಿ ಮಾಡಿರುವ ಸಾಧನೆಯಿಂದ.

ಇವರಿಗೆ ಹೆಚ್ಚು ಪ್ರೀತಿ ಪಿಸ್ತೂಲ್ ಮೇಲೆಯೇ. ಸೂರ್ಯೋದಯವಾಗುತ್ತಿದ್ದಂತೆಯೇ ದಿನ ನಿತ್ಯದ ಚಟುವಟಿಕೆ ಪ್ರಾರಂಭಿಸುವ ರಿವಾಲ್ವರ್ ದಾದಿ. ರಾತ್ರಿ ಮಲಗೋವರೆಗೂ ಪಿಸ್ತೂಲ್ ಕೈಗೆ ಅಂಟಿಕೊಂಡಿರುತ್ತೆ. ಪಿಸ್ತೂಲ್ ಇವರಿಗೆ ಚಿಕ್ಕ ಮಕ್ಕಳು ಆಟವಾಡುವ ವಸ್ತುವಿದ್ದ ಹಾಗೆ. ಯಾವುದೇ ಭಯವಿಲ್ಲದೆ ಲೀಲಾಜಾಲವಾಗಿ ಬಳಸುತ್ತಾರೆ.

ಅದು 1998ರ. ಅಜ್ಜಿಯ ಮೊಮ್ಮಗಳು ತಾನು ಒಳ್ಳೆಯ ಶೂಟರ್ ಆಗಬೇಕೆಂಬ ಬಹುದೊಡ್ಡ ಕನಸಿನಿಂದ ತರಬೇತಿ ಪಡೆಯಲು  ಗ್ರಾಮದಲ್ಲಿದ್ದ ಜೋಹ್ರಿ ರೈಫಲ್ ಕ್ಲಬ್ ಸೇರಿಕೊಂಡಿದ್ದಳು. ಆದ್ರೆ, ಕ್ಲಬ್​ನಲ್ಲಿ ಹೆಚ್ಚಿಗೆ ಯುವಕರೇ ಇದ್ದುದ್ದರಿಂದ ಮೊಮ್ಮಗಳಿಗೆ ಕಲಿಯಲು ಮುಜುಗರವಾಗುತ್ತಿತ್ತು. ಈ ವಿಷಯನ್ನು ತನ್ನಜ್ಜಿಯಾದ ಚಂದ್ರೋ ತೋಮರ್ ಬಳಿ ಹೇಳಿಕೊಂಡಾಗ ಅದಕ್ಕೇನಂತೆ ನಾನಿದ್ದೀನಿ ಎಂದು ಶೂಟಿಂಗ್ ಕ್ಲಾಸ್ ಮುಗಿಯವರೆಗೂ ಜೊತೆಯಲ್ಲಿಯೇ ತಾನು ಕೂಡ ಕಾಲ ಕಳೆಯುತ್ತಿದ್ರು.

ಒಂದು ದಿನ ಮೊಮ್ಮಗಳು ಬಂದೂಕನ್ನು ಲೋಡ್ ಮಾಡಲು ಮುಂದಾಗಿದ್ರು. ಆದ್ರೆ ಏನು ಮಾಡಿದ್ರು ಗನ್ ಲೋಡ್ ಆಗುತ್ತಲೇ ಇರಲಿಲ್ಲ. ಮೊಮ್ಮಗಳ ಒದ್ದಾಟವನ್ನು ನೋಡಲಾಗದೆ ಅಲ್ಲಿಗೆ ಬಂದು ಗನ್ ತೆಗೆದುಕೊಂಡು ಲೋಡ್ ಮಾಡಿದ್ದಲ್ಲದೆ ಬುಲ್ಸ್ ಐ ಗೆ ಗುರಿ ಇಟ್ಟು ಹೊಡೆದ್ರು.

ರೈಫಲ್ ಕ್ಲಬ್​ನಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಮತ್ತು ಅಲ್ಲಿ ಕಲಿಸುತ್ತಿದ್ದ ಶೂಟಿಂಗ್ ತರಬೇತುದಾರರಿಗೂ ಅಚ್ಚರಿಯಾಗಿತ್ತು. ಎಲ್ಲರೂ ತಬ್ಬಿಬ್ಬಾಗಿ ಹೋದರು. ಅಜ್ಜಿ ಬಂದೂಕಿನ ಗುರಿಯ ನಿಗಧಿತ ಸ್ಥಳಕ್ಕೆ ಗುರಿಯಿಟ್ಟು ಒಡೆದ ಅಜ್ಜಿಯ ಗುರಿಗೆ ತಾವೇ ಬಲಿಯಾದವರಂತೆ ಸ್ತಬ್ಧವಾದರು. ಅದು ರಿವಾಲ್ವರ್ ದಾದಿಯ ಮೊದಲ ಗುರಿ ಎಂದು ಯಾರೂ ಊಹಿಸುವುಕ್ಕೂ ಅಸಾಧ್ಯ ಎಂಬಂತೆ ಗುರಿ ತಲುಪಿದ್ದರು.
ಚಂದ್ರತೋಮರ್ ಮೊದಲ ಸ್ಪರ್ಧೆಗೆ ತಮ್ಮ ಮೊಮ್ಮಗಳ ಜೊತೆಗೆ ಅಂಜಿಕೆಯಿಂದಲೇ ಹೋದರು. ಅಲ್ಲಿ ಇವರನ್ನು ಅನುಭವಿ ವಿಭಾಗದಲ್ಲಿ ಸೇರ್ಪಡೆಗೊಳಿಸಲಾಯಿತು. ದಾದಿ ಜೊತೆ ಸ್ಫರ್ದಿಸಿದ್ದವರಲ್ಲಿ ಬಹುತೇಕರು ಶೂಟಿಂಗ್​ನಲ್ಲಿ ಹೆಚ್ಚು ಪರಿಣಿತಿ ಹೊಂದಿದ್ದವರು. ಚಾಂಪಿಯನ್​ಶಿಪ್​ಗಳಲ್ಲಿ ಗೆದ್ದವರು. ಇವರೆಲ್ಲರಿಗೂ ಸೋಲಿನ ರುಚಿ ತೋರಿಸಿ ಚಂದ್ರೋ ತೋಮರ್ ಗೆದ್ದು ಬೀಗಿದರು.

ರೈಫಲ್ ಕ್ಲಬ್​ನಲ್ಲಿ ತನ್ನ ಮೊದಲ ಗುರಿಯಿಂದ ಶುರುವಾದ ಚಂದ್ರೋತೋಮರ್ರವರ ಶಾರ್ಪ್​ಶೂಟಿಂಗ್​ ಜರ್ನಿ ಇಂದು ವಿಶ್ವಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿದೆ. ಶಾರ್ಪ್​ಶೂಟರ್ ದಾದಿ ಚಂದ್ರೋತೋಮರ್​ ಅವರನ್ನು ಶೂಟಿಂಗ್​ನಲ್ಲಿ ಮೀರಿಸುವವರೇ ಇಲ್ಲ. 25ಕ್ಕೂ ಹೆಚ್ಚು ಚಾಂಪಿಯನ್​ಶಿಪ್​ಗಳನ್ನು ಗೆದ್ದುಕೊಂಡ ಅತ್ಯದ್ಭುತ ಶಾರ್ಪ್​ಶೂಟರ್​ ಈಕೆ. ರಿವಾಲ್ವರ್ ದೀದಿ ಸ್ಫರ್ಧಾಳಾಗಿ ಸ್ಪರ್ಧಿಸಿದ ಎಲ್ಲಾ ಸ್ಫರ್ಧೆಗಳಲ್ಲಿಯೂ ವಿಜಯಶಾಲಿಯಾಗಿ ಮಿಂಚಿದ್ದರು.

2010ರಲ್ಲಿ ನಡೆದ ರೈಫಲ್ ಮತ್ತು ಪಿಸ್ತೂಲ್ ವಿಶ್ವಕಪ್​ನಲ್ಲಿ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಭಾರತದ ಏಕೈಕ ಮಹಿಳೆ ಎನ್ನಿಸಿಕೊಂಡರು. ದೇಶಕ್ಕೆ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದುಕೊಟ್ಟಿದಲ್ಲದೆ 82 ವರ್ಷವಾದರೂ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುವ ದಾದಿ ಗೆದ್ದು ಪಡೆದ ಪದಕಗಳ ಸಂಖ್ಯೆ 146ಕ್ಕೂ ಹೆಚ್ಚಿದೆ. ಪದಕಗಳು ಅಜ್ಜಿಯ ಶಾರ್ಪ್ ದೃಷ್ಟಿಗೆ ಸಾಕ್ಷಿ ತೋರಿಸುತ್ತಿವೆ. ದಾದಿ ಈಗ ಎಲ್ಲಿ ಮೊದಲ ಪಿಸ್ತೂಲ್ ಪ್ರಯೋಗ ಮಾಡಿದರೋ ಅದೇ ಕ್ಲಬ್​ನಲ್ಲೀಗ ಮುಖ್ಯ ಕೋಚ್!

ವಯಸ್ಸು ಎಂಬುದು ಕೇವಲ ಸಂಖ್ಯೆಯಷ್ಟೇ.. ನನ್ನ ಶರೀರಕ್ಕೆ ಮಾತ್ರ ವಯಸ್ಸಾಗಿರೋದು ಮನಸ್ಸಿಗಲ್ಲ ಎಂಬುದನ್ನು ರಿವಾಲ್ವಾರ್​ ದಾದಿ ಚಂದ್ರೋತೋಮರ್ ನಿರೂಪಿಸಿದ್ದಾರೆ. 82ರ ಹರೆಯದಲ್ಲೂ ನನ್ನ ಉಸಿರಿರುವ ತನಕ ನಾನು ಗುಂಡು ಹಾರಿಸುತ್ತೇನೆ ಎಂದು ಹೇಳುವ ಶಾರ್ಪ್​​​ಶೂಟರ್​ ರಿವಾಲ್ವರ್ ದಾದಿಗೆ ನಮ್ಮದೂ ಒಂದು ಸಲಾಮ್..

 

 

ಐಎಎಸ್​ ಪಾಸಾಗಲು ಅಂಧತ್ವ ಅಡ್ಡಿಯಾಗಲಿಲ್ಲ!

0

ಜಯಶಾಲಿಗಳಾಗಲು ನಿಮ್ಮಲ್ಲಿ ಪ್ರಚಂಡ ಛಲವೊಂದಿರಬೇಕು, ಪ್ರಬಲ ಇಚ್ಛಾಶಕ್ತಿಯಿರಬೇಕು! ‘ನಾನು ವಾರಿಧಿಯನ್ನೇ ಹೀರಿಬೀಡುತ್ತೇನೆ’ ಎನ್ನುತ್ತಾನೆ ಛಲವಾದಿ! ‘ನನ್ನ ಇಚ್ಛಾಮಾತ್ರದಿಂದ ಪರ್ವತಗಳೂ ಪುಡಿಪುಡಿಯಾಗುವುವು ಎನ್ನುತ್ತಾನೆ ಅವನು! ಈ ಬಗೆಯ ಛಲವಿರಲೀ ನಿಮಗೆ, ಈ ಬಗೆಯ ಇಚ್ಛಾಶಕ್ತಿಯಿರಲಿ ನಿಮ್ಮಲ್ಲಿ! ಏಳಿ ಏಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎನ್ನುವ ಸ್ವಾಮಿ ವಿವೇಕನಂದರ ಈ ನುಡಿಯನ್ನ ಅಕ್ಷರಶಃ ಅನುಸರಿಸಿ ಸಾಧಿಸಿ ತೋರಿಸಿದ್ದಾರೆ ಪ್ರಾಂಜಲ್ ಪಟೇಲ್.
ಸಾಧಿಸುವ ಮನಸ್ಸೊಂದಿದ್ದರೆ ಸಾಲದು.., ಛಲವೂ ಇರಬೇಕು ಆಗ ಮಾತ್ರ ಗುರಿ ಮುಟ್ಟಲು ಸಾಧ್ಯ. ಸಾಧನೆಯ ಮಾರ್ಗವೇನು ಸುಲಭವಲ್ಲ. ಆದ್ರೆ, ಪ್ರಯತ್ನ ಪಟ್ಟರೆ ದೊರಕದ್ದು ಏನು ಇಲ್ಲ. ಅದಕ್ಕೆ ಶ್ರಮದ ಜೊತೆಗೆ ಶ್ರದ್ಧೆ, ಮನಸ್ಥೈರ್ಯ ಎನ್ನುವುದು ಇರಬೇಕಷ್ಟೇ. ಈ ರೀತಿ ಮನಸ್ಥೈರ್ಯವನ್ನೇ ಆಸ್ತ್ರವಾಗಿಸಿಕೊಂಡು ದೈಹಿಕ ನ್ಯೂನತೆಗಳನ್ನು ಮೆಟ್ಟಿನಿಂತವರು ಪ್ರಾಂಜಲ್ ಪಟೇಲ್.
ಹೌದು, ಪ್ರಾಂಜಲ್ ಪಟೇಲ್ ವಿಶೇಷ ಚೇತನರು. ಆದ್ರೆ, ಸಾಧನೆಗೆ ಇದ್ಯಾವುದು ಅಡ್ಡಿಯಲ್ಲ ಎಂದು ತೋರಿಸಿಕೊಟ್ಟವರು. ಎಷ್ಟೋ ಅವಮಾನಗಳನ್ನ ಮೆಟ್ಟಿನಿಂತ ಈಕೆ ಕೊನೆಗೊಂದು ದಿನ ಇಡೀ ದೇಶವೇ ಮೆಚ್ಚುವಂತೆ ಸಾಧನೆ ಮಾಡಿ ತಮ್ಮಂತ ಎಷ್ಟೋ ಜನರಿಗೆ ಮಾದರಿಯಾದರು. ಎಲ್ಲ ಸರಿಯಾಗಿದ್ದು ಓದಿನಲ್ಲಿ ಹಿಂದುಳಿಯುವ ನಮ್ಮ ಯುವಜನತೆ ಇವ್ರನ್ನ ನೋಡಿ ಕಲಿಯಬೇಕಿದೆ. ಕಣ್ಣಿಲ್ಲದಿದ್ದರೂ ಐಎಎಸ್​ನಲ್ಲಿ 124ನೇ ರ್ಯಾಂಕ್ ಪಡೆದ ಪ್ರಾಂಜಲ್​ ಅವರನ್ನು ಅನುಸರಿಸಬೇಕಿದೆ.
ಸಧ್ಯ ಇಡೀ ದೇಶವೇ ಮೆಚ್ಚುವಂತೆ ಸಾಧನೆ ಮಾಡಿರುವ ಪ್ರಾಂಜಲ್ ಪಾಟೇಲ್ ಆಗಿನ್ನೂ 6 ವರ್ಷದ ಬಾಲಕಿ. ತನ್ನ ಸ್ನೇಹಿತೆಯೊಬ್ಬಳು ಪೆನ್ಸಿಲ್ ನಿಂದ ಕಣ್ಣಿಗೆ ಚುಚ್ಚಿದ ಪರಿಣಾಮ ಒಂದು ಕಣ್ಣು ಕಳೆದುಕೊಂಡರು. ದುರಾದೃಷ್ಠ ಎನ್ನುವಂತೆ ಆನಂತರ ಮೆಡಿಸಿನ್ ಗಳ ಅಡ್ಡ ಪರಿಣಾಮಗಳ ಕಾರಣದಿಂದ ಇನ್ನೊಂದು ಕಣ್ಣನ್ನು ಕಳೆದುಕೊಂಡರು. ಹತ್ತನೇ ತರಗತಿಯವರೆಗೂ ಅಂಧರ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು.
ಮುಂದೆ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಮುಂಬೈ ಹೊರವಲಯದಲ್ಲಿರುವ ಥಾಣೆ ಜಿಲ್ಲೆಯ ಉಲ್ಹಸ್ನಗರದಲ್ಲಿನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪ್ರವೇಶ ಪಡೆದರು. ಆ ಕಾಲೇಜು ಪ್ರಾಂಜಲ್ರವರ ಮನೆಯಿಂದ ಒಂದು ಗಂಟೆ ಹತ್ತು ನಿಮಿಷ ದೂರವಿತ್ತು. ಇನ್ನು ಇವ್ರ ಈ ಕಾಲೇಜಿನಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದ ಎಷ್ಟೋ ಮಂದಿ ಇದ್ದರಂತೆ. ಅವ್ರ ಆ ಇಂಗ್ಲಿಷ್ ಭಾಷೆ ಪ್ರಾಂಜಲ್​ ಅವರಿಗೆ ಅರ್ಥ ಮಾಡಿಕೊಳ್ಳಲು ತುಂಬಾನೇ ಕಷ್ಟವಾಗುತ್ತಿತ್ತಂತೆ ಆದ್ರೂ ಪಟ್ಟು ಬಿಡದೇ ಕಲಿತರು.
ಇನ್ನು ಓದುವ ಮತ್ತು ಸಾಧಿಸುವ ತುಡಿತವಿದ್ದ ಪ್ರಾಂಜಲ್​ ಇತರರ ನೋಟ್ಸ್ ಬರೆದು ತಂದು ತಾಯಿಗೆ ನೀಡಿ, ತಾಯಿಯಿಂದ ಗಟ್ಟಿಯಾಗಿ ಓದಿಸಿಕೊಂಡು ಕೇಳುತ್ತಿದ್ದರು. ಇದನ್ನು ಮತ್ತೆ ನೆನಪಿಟ್ಟುಕೊಂಡು ಅಭ್ಯಾಸ ಮಾಡುವುದು ಪ್ರಾಂಜಲ್ ಅವರ ನಿತ್ಯ ಕಾಯಕವಾಗಿತ್ತು. ಈ ರೀತಿ ಶ್ರದ್ಧೆಯಿಂದ ಓದಿ ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಎಂಫಿಲ್ ಮುಗಿಸಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ಪ್ರಾಂಜಲ್​ ವಿವಾಹ 2014 ರಲ್ಲಿ ನಡೆಯಿತು. ಮದುವೆಯ ನಂತರ ಪ್ರಾಂಜಲ್ ದೆಹಲಿಯಲ್ಲಿ ಐಎಎಸ್ ಪರೀಕ್ಷೆಗೆ ಸಿದ್ಧವಾಗಬೇಕೆಂಬ ನಿರ್ಧಾರಕ್ಕೆ ಬಂದರು. ಆಗಿನಿಂದಲೇ ಇದ್ದಕ್ಕೆ ಬೇಕಾದ ತಯಾರಿಯನ್ನ ಕೂಡ ನಡೆಸಿದರು. 2016 ರಲ್ಲಿ 773ನೇ ರಾಂಕಿಂಗ್ ನಲ್ಲಿ ಪಾಸ್ ಆದರೂ ರೈಲ್ವೇ ಸೇವೆಗಳಿಗೆ ನೇಮಕಗೊಂಡಿದ್ದರು. ಆದರೆ ಇಲಾಖೆಯು 100 ರಷ್ಟು ದೃಷ್ಟಿಹೀನತೆ ಹೊಂದಿದ್ದ ಕಾರಣ ಈ ಕೆಲಸಕ್ಕೆ ಅನರ್ಹ ಎಂದು ಪರಿಗಣಿಸಿತು.
ಆದ್ರೂ ಖಿನ್ನತೆಗೆ ಒಳಗಾಗದ ಪ್ರಾಂಜಲ್ ಪಟೇಲ್ ಪಟ್ಟು ಹಿಡಿದು ಓದಿ ಈ ವರ್ಷ 124 ನೇ ರ್ಯಾಂಕ್​ನಲ್ಲಿ ಪಾಸ್ ಆಗಿ ಐಎಎಸ್ ಸೇವೆಗೆ ಆಯ್ಕೆಯಾಗಿದ್ದಾರೆ. ದೇಹಕ್ಕೆ ಅಂಗ ವೈಕಲ್ಯ ಇರಬಹುದು ಆದರೆ ಮನಸ್ಸಿಗೆ ಆ ಅಂಗ ವೈಕಲ್ಯ ಇಲ್ಲ ಎನ್ನುವುದನ್ನ ಸಾಬೀತು ಪಡಿಸಿದ್ದಾರೆ.

ಭಾರತದ ಮೊದಲ ಮಹಿಳಾ ಐಎಎಸ್ ಆಫೀಸರ್ ಮದ್ವೆ ಆಗಿದ್ದು ಅವರ ಬ್ಯಾಚ್ ಮೇಟನ್ನೇ….!  ಅವರ್ಯಾರು ಗೊತ್ತಾ?

0

ಅನ್ನಾ ರಾಜಮ್ ಜಾರ್ಜ್ ಅಥವಾ ಅನ್ನಾ ರಾಜಮ್ ಮಲ್ಹೋತ್ರಾ  ಈ ಹೆಸರು ಎಲ್ಲೋ ಕೇಳಿದಂಗೆ ಇದೆಯಲ್ಲಾ ಅಂತ ಯೋಚಿಸ್ತಿದ್ದೀರಾ? ಹುಂ .. ಈ ಹೆಸರನ್ನು ಖಂಡಿತವಾಗಿಯೂ ಕೇಳಿರ್ತೀರಿ. ಭಾರತದ ಮೊಟ್ಟ ಮೊದಲ ಮಹಿಳಾ ಐಎಎಸ್ ಆಫೀಸರ್ ಇವ್ರು.

ಕೇರಳದ ಎರ್ನಾಕುಲಂ ಜಿಲ್ಲೆಯ ನಿರನಂ ಅನ್ನೋ ಊರಲ್ಲಿ 1927ರ ಜುಲೈ 17ರಂದು ಹುಟ್ಟಿದ್ದು. ತಂದೆ  ಒ.ಎ ಜಾರ್ಜ್, ತಾಯಿ ಅನ್ನಾ ಪೌಲ್, ಅಜ್ಜ ಮಲೆಯಾಳಂ ಸಾಹಿತಿ ಪೈಲೋ ಪೌಲ್. 

ಕ್ಯಾಲಿಕಟ್ನ ಪ್ರಾವಿಡೆನ್ಸ್ ವುಮೆನ್ಸ್ ಕಾಲೇಜಲ್ಲಿ ಇಂಟರ್ ಮೀಡಿಯೆಟ್ ಎಜುಕೇಶನ್,  ಮಲ್ಬಾರ್ ಕ್ರಿಶ್ಚಿಯನ್ ಕಾಲೇಜಲ್ಲಿ ಬ್ಯಾಚುಲರ್ ಡಿಗ್ರಿ ಮುಗಿಸಿದ ಮಲ್ಹೋತ್ರಾ ಹೈಯರ್ ಎಜುಕೇಶನ್ ಮಾಡಿದ್ದು ಮದ್ರಾಸ್​ನಲ್ಲಿ. ಮದ್ರಾಸ್ ಯೂನಿವರ್ಸಿಟಿಯಿಂದ ಇಂಗ್ಲಿಷ್​ನಲ್ಲಿ ‌ಮಾಸ್ಟರ್ ಡಿಗ್ರಿ‌ ಮಾಡಿದ್ದಾರೆ.

ಮಾಸ್ಟರ್ ಡಿಗ್ರಿ ಮುಗಿಸಿದ್ದು 1949ರಲ್ಲಿ. ಆಮೇಲೆ 1950 ರಲ್ಲಿ ಸಿವಿಲ್ ಸರ್ವೀಸ್ ಎಕ್ಸಾಮ್ ಬರೆಯೋಕೆ ಡಿಸೈಡ್ ಮಾಡಿದ್ರು. ಇಂಟರ್ ವ್ಯೂ ರೌಂಡ್​ಗೆ ಸೆಲೆಕ್ಟ್ ಆದ್ರು.  ಸಿವಿಲ್ ಸರ್ವೀಸ್ ಎಕ್ಸಾಮಿ‌ನೇಷನ್​ನಲ್ಲಿ ಈ ರೌಂಡ್ ತಲುಪಿದ ಮೊದಲ ಮಹಿಳೆ ತಾನೇ ಅಂತ ಸ್ವತಃ ಮಲ್ಹೋತ್ರಾ ಅವರಿಗೂ ಆಗ ಗೊತ್ತಿರ್ಲಿಲ್ಲ.‌ಇಂಟರ್ ವ್ಯೂ ರೌಂಡ್ ಆಯ್ತು, ಸೆಲೆಕ್ಷನ್ ಟೈಮಲ್ಲಿ ಮಹಿಳೆಯರಿಗೆ ಐಎಎಸ್ (ಇಂಡಿಯನ್ ಅಡ್ಮಿನಿಸ್ಟ್ರೇಶನ್ ಸರ್ವೀಸ್) ಆಗಲ್ಲ, ಫಾರಿನ್ ಸರ್ವೀಸ್ (ಐಎಫ್ ಎಸ್) ಅಥವಾ ಸೆಂಟ್ರಲ್ ಸರ್ವೀಸ್ (ಐಸಿಎಸ್) ಆಫರ್ ಮಾಡಿದ್ರು ಇಂಟರ್ ವ್ಯೂ ನಡೆಸಿದ್ದ ಯುಪಿಎಸ್ ಚೇರ್​ಮನ್  ಆಗಿದ್ದ ಆರ್. ಎನ್ ಬ್ಯಾನರ್ಜಿ ಮತ್ತು ಅಧಿಕಾರಿಗಳು. ಆದ್ರೆ, ನಾನು ಐಎಎಸ್ಸೇ ಆಯ್ಕೆ ಮಾಡ್ಕೊಳ್ಳೋದು ಅಂತ ಪಟ್ಟು ಹಿಡಿದ್ರು ಮಲ್ಹೋತ್ರಾ. ಒಳ್ಳೆಯ ರ್ಯಾಂಕ್​ ಕೂಡ ಬಂದಿತ್ತು. ಐಎಎಸ್ ಗೆ ಡಿಸರ್ವ್ ಇದ್ರು. ಹಾಗಾಗಿ ನಿಮ್ಗೆ ಐಎಎಸ್ ಕೊಡೋಕೆ ಆಗಲ್ಲ ಕಣ್ರೀ, ಐಎಫ್ಎಸ್ ಅಥವಾ ಐಸಿಎಸ್ ತಗೋಳಿ ಅಂತ‌ ಹೇಳೋಕೆ ಯುಪಿಎಸ್ಸಿಗೆ ಆಗ್ಲಿಲ್ಲ.

ಮಲ್ಹೋತ್ರಾ ಅವರನ್ನು ಐಎಎಸ್ ಆಫೀಸರ್ ಆಗಿ ನೇಮಿಸಿ, ಆಗಿನ ಮದ್ರಾಸ್ ರಾಜ್ಯಕ್ಕೆ ಪೋಸ್ಟಿಂಗ್ ನೀಡಿದ್ರು.‌ ಅನ್ನಾ ರಾಜಮ್ ಮಲ್ಹೋತ್ರಾ ಆಗಿನ ಮುಖ್ಯಮಂತ್ರಿ ಸಿ. ರಾಜಗೋಪಾಲಾಚಾರಿ ಅವರ ಕೆಳಗಡೆ ಕೆಲಸ ಮಾಡಿದ್ರು . 7 ಮುಖ್ಯಮಂತ್ರಿಗಳ‌ ಕೈ ಕೆಳಗೆ ಕೆಲಸ ಮಾಡಿದ ಅನುಭವ ಇವರದ್ದು ‌.‌ರಾಜೀವ್ ಗಾಂಧಿ ಮತ್ತು ಇಂದಿರಾಗಾಂಧಿ ಅವರನ್ನು ಕೂಡ ತುಂಬಾ ಹತ್ತಿರದಿಂದ ಬಲ್ಲವರಾಗಿದ್ರು.

ಇನ್ನು ಇವರ ಅಪ್ಪ,‌ಅಮ್ಮನ ಬಗ್ಗೆ ಮೊದಲೇ ಹೇಳಾಗಿದೆ‌.‌ ಇಷ್ಟೆಲ್ಲಾ ಹೇಳಿದ್ಮೇಲೆ ಇವ್ರ ದಾಂಪತ್ಯದ ಬಗ್ಗೆ ಹೇಳ್ದೆ ಇದ್ರೆ ಹೇಗೆ..? ಇವರು ಮದ್ವೆ ಆಗಿದ್ದು ಆರ್. ಎನ್ ಮಲ್ಹೋತ್ರಾ ಅವರನ್ನು. ಆರ್.ಎನ್.ಎಂ ಅವರು ಆರ್ ಬಿ ಐನ 17ನೇ ಗವರ್ನರ್. ಅನ್ನಾ ಅವರ ಐಎಎಸ್ ಬ್ಯಾಚ್ ಮೇಟ್ ಕೂಡ ಹೌದು. ಮಲ್ಹೋತ್ರಾ ಅವರನ್ನು ಮದ್ವೆ ಆದ್ಮೇಲೆ ಅನ್ನಾ ರಾಜಮ್ ಜಾರ್ಜ್ ಅನ್ನಾ ರಾಜಮ್ ಮಲ್ಹೋತ್ರಾ ಆದ್ರು.

ಸ್ವತಂತ್ರ ಭಾರತದ ಮೊದಲ ಮಹಿಳಾ ಐಎಎಸ್ ಅಧಿಕಾರಿ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದ ಈ ಅನ್ನಾ ರಾಜಮ್ ಮಲ್ಹೋತ್ರಾ ಇತ್ತೀಚೆಗಷ್ಟೇ, ಅಂದ್ರೆ 2018ರ ಸೆಪ್ಟೆಂಬರ್ 17 ರಂದು ನಮ್ಮನ್ನೆಲ್ಲಾ  ಅಗಲಿದ್ದಾರೆ.

Popular posts