Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Monday, January 20, 2020

ಬೆಂಗಳೂರಲ್ಲಿ ಲ್ಯಾಂಡ್ ಆಯ್ತು ಏರ್​ಬಸ್​ ಎ-220 – ಭಾರತೀಯ ವೈಮಾನಿಕ ಮಾರುಕಟ್ಟೆಯತ್ತ ಆಧುನಿಕ ವಿಮಾನದ ಚಿತ್ತ

0

ಕಡಿಮೆ ದೂರದ ಪ್ರಯಾಣಕ್ಕೆಂದೇ ಅಭಿವೃದ್ಧಿ ಪಡಿಸಲಾಗಿರೋ ಆಧುನಿಕ ಏರ್​ಬಸ್​ ಎ -220 ಭಾರತಕ್ಕೆ ಮೊದಲ ಬಾರಿ ಎಂಟ್ರಿಕೊಟ್ಟಿದ್ದು, ನಮ್ಮ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ಏರ್​​ಬಸ್​ನ ಏಷಿಯಾ -ಪೆಸಿಫಿಕ್ ಪ್ರಾತ್ಯಕ್ಷಿಕೆ ಪ್ರವಾಸದ ಭಾಗವಾಗಿ ಸೋಮವಾರ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಿಂಗಲ್ -ಏಸೆಲ್​ ಎ 220 ವಿಮಾನವನ್ನು ಪ್ರದರ್ಶಿಸಲಾಯಿತು.
ಇಂಧನ ಕ್ಷಮತೆ, ಕಡಿಮೆ ಕಾರ್ಬನ್ ಬಿಡುಗಡೆ ಮಾಡೋ ಏರ್​ಬಸ್​ ಈಗ ಭಾರತೀಯ ವೈಮಾನಿಕ ಮಾರುಕಟ್ಟೆ ಮೇಲೆ ಕಣ್ಣಿಟ್ಟಿದೆ. ಇದರ ಬಿಸಿನೆಸ್​ ಮತ್ತು ಎಕನಾಮಿ ಕ್ಲಾಸಲ್ಲಿ 100 ರಿಂದ 150 ಸೀಟುಗಳು ಸಾಮರ್ಥ್ಯ ಹೊಂದಿದ್ದು, ಸದ್ಯ ಈ ವಿಮಾನವನ್ನು ಭಾರತದ ಯಾವ್ದೇ ಏರ್​ಲೈನ್​ಗಳು ಹೊಂದಿಲ್ಲ. ಆದ್ರೆ, ಶೀಘ್ರದಲ್ಲೇ ಆರ್ಡರ್​ ಗಳು ಬರೋ ವಿಶ್ವಾಸವನ್ನು ಏರ್​ಬಸ್ ಹೊಂದಿದೆ.

ಮಿನಿ ಚಿರತೆ ಎಂಬ ಶ್ವಾನ ರೋಬೊ! ಇದರ ಚಿಣ್ಣಾಟಕ್ಕೆ ಫಿದಾ ಆಗ್ದೇ ಇರೋರೇ ಇಲ್ಲ!

0

ವಿಜ್ಞಾನ -ತಂತ್ರಜ್ಞಾನ ಬೆಳೆಯುತ್ತಿದೆ. ಅದರಲ್ಲೂ ರೋಬೊಟಿಕ್ ತಂತ್ರಜ್ಞಾನವಂತೂ ದಿನೇ ದಿನೇ ಹೊಸತನದೊಂದಿಗೆ ಮಾರುಕಟ್ಟೆಯಲ್ಲಿ ಆಧಿಪತ್ಯ ಸ್ಥಾಪಿಸ್ತಿದೆ. ಈಗ ರೋಬೋ ಲೋಕದಲ್ಲಿ ರೋಬೋಟ್ ನಾಯಿಗಳು ಗಮನ ಸೆಳೆಯುತ್ತಿವೆ.

ನೀವು ಈ ಮೇಲಿನ ವಿಡಿಯೋವನ್ನು ನೋಡಿ, ತಣ್ಣನೆ ಗಾಳಿ, ಸುಂದರ ಉದ್ಯಾನವನ…ಉದರುವ ಎಲೆಗಳು. ಇಲ್ಲಿ ಆಡುವ ಪುಟಾಣಿ ಶ್ವಾನ ರೋಬೋಗಳು! ಪುಟ್ಟ ಪುಟ್ಟ ಕಾಲುಗಳಲ್ಲಿ ನೆಗೆಯುತ್ತಾ ಚಿಣ್ಣಾಟ ಆಡುವ ಇವುಗಳನ್ನು ನೋಡೋದೇ ಚಂದ. ಇವು ರೋಬೋಟ್​ ಜಗತ್ತಿನ ಹೊಸ ಸದಸ್ಯರು.
ಈ ಪುಟಾಣಿ ಶ್ವಾನ ರೋಬೋಗಳನ್ನು ಪರಿಚಯಿಸಿರೋದು ಅಮೆರಿಕಾದ ಮೆಸಾಚ್ಯೂಸೆಟ್ಸ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಕ್ರೋಬ್ಯಾಟಿಕ್ಸ್ ಸ್ಕೂಲ್​.
ಹೌದು ಎಂಐಟಿ ಶ್ವಾನ ಮಾದರಿಯ ರೋಬೋವನ್ನು ತಯಾರಿಸಿದೆ. ಈ ರೋಬೋ ನಾಯಿಯಂತೆ ನಾಲ್ಕು ಕಾಲುಗಳಲ್ಲಿ ನಡೆಯುತ್ತೆ. ಉಲ್ಟಾ-ಪಲ್ಟಾ ಸಹ ಓಡಾಡುತ್ತೆ. ಬ್ಲಾಕ್​​ ಫ್ಲಿಪ್ ಕೂಡ ಮಾಡುತ್ತೆ! 20 ಫೌಂಡ್ ( 9 ಕೆಜಿ) ತೂಕವಿರೋ ಈ ರೋಬೋ ತಯಾರಿಕೆಗೆ 12 ಎಲೆಕ್ಟ್ರಿಕ್ ಮೋಟರ್​ಗಳನ್ನ ಬಳಸಿದ್ದಾರೆ.‘ ವೇಗಕ್ಕೆ ಹಾಗೂ ದಿಕ್ಕು ಬದಲಾವಣೆಗೆ ಮೂರು ಪತ್ಯೇಕ ಮೋಟರ್​ಗಳನ್ನು ಅಳವಡಿಸಲಾಗಿದೆ.
ಈ ರೋಬೋಗೆ ಮಿನಿ ಚಿರತೆ (ಮಿನಿ ಚೀತಾ) ಎಂದು ಹೆಸರಿಟ್ಟಿದ್ದಾರೆ. ಮಿನಿ ಚೀತಾದ್ದು ನಿಜಕ್ಕೂ ಚಿರತೆ ವೇಗ! ಸಾಮಾನ್ಯ ಮನುಷ್ಯಗಿಂತ ಎರಡುಪಟ್ಟು ವೇಗವಾಗಿ ಇದು ನಡೆಯುತ್ತಂತೆ.

ನಿಮ್ಗೆ ಗೊತ್ತಾ? ವಾಟ್ಸ್​​ಆ್ಯಪ್​​ನಲ್ಲಿ ಫಿಂಗರ್​ ಪ್ರಿಂಟ್ ಲಾಕ್​ ಮಾಡ್ಬಹುದು!

0

ವಾಟ್ಸ್​ಆ್ಯಪ್​ ಒಂದಲ್ಲ ಒಂದು ರೀತಿಯ ಗ್ರಾಹಕ ಸ್ನೇಹಿ ಫೀಚರನ್ನು ಪರಿಚಯಿಸುತ್ತಿರುತ್ತೆ. ಈಗ ಮತ್ತೊಂದು ನಯಾ ಫೀಚರ್​ ಅನ್ನು ಪರಿಚಯಿಸಿದೆ. ಈಗ ಬಂದಿರೋ ಫೀಚರ್ ಯಾವ್ದಪ್ಪ ಅಂದ್ರೆ ಫಿಂಗರ್ ಪ್ರಿಂಟ್ ಲಾಕ್!
ಹೌದು ವಾಟ್ಸ್​ಆ್ಯಪ್​ಗೆ ನೀವು ಪ್ರತ್ಯೇಕವಾಗಿ ಫಿಂಗರ್ ಪ್ರಿಂಟ್ ಲಾಕನ್ನು ಮಾಡ್ಬಹುದು. ಯಾರೂ ನಿಮ್ಮ ವಾಟ್ಸ್​​ಆ್ಯಪ್​ನ್ನು ಕದ್ದು ಮುಚ್ಚಿ ನೋಡದಂತೆ ಲಾಕ್ ಮಾಡಿಟ್ಟುಕೊಳ್ಳಲು ಈ ಫೀಚರ್ ಸಹಕಾರಿ. ಈ ಫೀಚರ್ ಕಳೆದ ಫೆಬ್ರವರಿಯಲ್ಲೇ ಇತ್ತು. ಆಗಸ್ಟ್​ನಲ್ಲಿ ಆ್ಯಂಡ್ರಾಯ್ಡ್ ಬೀಟಾದಲ್ಲಿ ಟೆಸ್ಟ್​ ಮಾಡಲಾಗಿತ್ತು. ಈಗ ಸಾಮಾನ್ಯ ಆ್ಯಂಡ್ರಾಯ್ಡ್​ಗಳಲ್ಲೂ ಈ ಫೀಚರ್ ಲಭ್ಯ.
ನೀವು ಮೊದಲು ವಾಟ್ಸ್​ಆ್ಯಪ್ ಅಪ್​ಡೇಟ್ ಮಾಡಿಕೊಳ್ಳಿ. ವಾಟ್ಸ್​ಆ್ಯಪ್ ಓಪನ್ ಮಾಡಿದ ಕೂಡಲೇ ಬಲ ಮೇಲ್ಭಾಗದಲ್ಲಿ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ ಸೆಟ್ಟಿಂಗ್ ಆಪ್ಷನ್​ ಗೆ ಹೋಗಿ. ಅಲ್ಲಿಂದ ಪ್ರೈವೆಸಿ ಆಪ್ಷನ್.. ಅಲ್ಲಿ ಕೊನೆಯಲ್ಲಿ ಫಿಂಗರ್ ಪ್ರಿಂಟ್ ಲಾಕ್ ಎಂಬ ಆಪ್ಷನ್ ಇದೆ ಕ್ಲಿಕ್ ಮಾಡಿ. ಅಲ್ಲಿ ಅನ್​ಲಾಕ್ ವಿತ್ ಫಿಂಗರ್ ಪ್ರಿಂಟ್ ಅನ್ನೋ ಆಪ್ಷನ್ ಇದೆ. ನಿಮ್ಮ ಫಿಂಗರ್ ಪ್ರಿಂಟ್ ನೀಡಿ ಲಾಕ್ ಮಾಡ್ಬಹುದು.

ವಾಟ್ಸ್​​ಆ್ಯಪ್​, ಫೇಸ್​​ಬುಕ್​, ಟ್ವಿಟರ್​ನಲ್ಲಿ ಹೇಗೆ ಬರೆಯಬೇಕಂತ ಪದವಿ ಪಾಠ..!

0

ನವದೆಹಲಿ : ಸೋಶಿಯಲ್ ಮೀಡಿಯಾದಲ್ಲಿ ಹೇಗೆ ಬರೆಯಬೇಕು ಅಂತ ಪದವಿಯಲ್ಲಿ ಪಾಠ ಮಾಡಲಾಗುತ್ತದೆ..! ಯುಜಿಸಿ (ವಿವಿ ಧನಸಹಾಯ ಆಯೋಗ) ಪದವಿ ತರಗತಿಗಳಿಗೆ ‘ಜೀವನ ಕೌಶಲ್ಯ’ ಎಂಬ ಪಠ್ಯಕ್ರಮವನ್ನು ಅಳವಡಿಸಿದೆ. ಅದರಲ್ಲಿ ವಾಟ್ಸ್​ಆ್ಯಪ್​, ಫೇಸ್​ಬುಕ್, ಟ್ವಿಟರ್​ ಮೊದಲಾದ ಸೋಶಿಯಲ್ ಮೀಡಿಯಾದಲ್ಲಿ ಹೇಗೆ ಬರೆಯಬೇಕು ಅನ್ನೋದರ ಬಗ್ಗೆ ಪಾಠ ನೀಡಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹೇಗೆ ಬರೆಯಬೇಕು? ಹೇಗೆ ಸಂವಹನ ಮಾಡಬೇಕು ಎಂಬುದನ್ನು ಕಡೆಗಣಿಸಬಾರದು. ಇದು ಸಂವಹನಕ್ಕೆ ಉತ್ತಮ ಮಾಧ್ಯಮವಾಗಿರುವುದರಿಂದ ಈ ಬಗ್ಗೆ ಪಠ್ಯದಲ್ಲಿ ನೀಡಲಾಗಿದೆ. ಅಷ್ಟೇ ಅಲ್ಲದೆ ರೆಸ್ಯೂಮ್, ಬಯೋಡೆಟಾ ಹಾಗೂ ಕರಿಕ್ಯುಲಂ ವಿಟೆ ನಡುವಿನ ವ್ಯತ್ಯಾಸಗಳನ್ನು ಸಹ ತಿಳಿಸಿಕೊಡಲಾಗುತ್ತದೆ ಎಂದು ಯುಜಿಸಿ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.

ಕೊನೆಗೂ ‘ವಿಕ್ರಮ್​​​​’ ಲ್ಯಾಂಡರ್​ ಪತ್ತೆ ಹಚ್ಚಿದ ಇಸ್ರೋ..!

0

ಕೊನೆಗೂ ವಿಕ್ರಮ್​​​​’ ಲ್ಯಾಂಡರನ್ನು ಪತ್ತೆ ಹಚ್ಚುವಲ್ಲಿ ಇಸ್ರೋ ಯಶಸ್ವಿಯಾಗಿದ್ದು, ಸಂಪರ್ಕ ಸಾಧಿಸಯವ ಭರವಸೆಯನ್ನು ವ್ಯಕ್ತಪಡಿಸಿದೆ.
ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರನ್ನು ಆರ್ಬಿಟರ್ ಪತ್ತೆ ಹಚ್ಚಿದೆ ಅಂತ ಇಸ್ರೋ ತಿಳಿಸಿದೆ. ಲ್ಯಾಂಡರ್​ನ ಥರ್ಮಲ್​ ಚಿತ್ರವನ್ನು ಸೆರೆ ಹಿಡಿದಿದೆ. ಆದ್ರೆ, ಲ್ಯಾಂಡರ್ ಸಂಪರ್ಕಕ್ಕೆ ಸಿಗುತ್ತಿಲ್ಲ ಅಂತ ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ. . ಸದ್ಯ ಆರ್ಬಿಟರ್ ಸೆರೆ ಹಿಡಿದಿರುವ ವಿಕ್ರಮ್ ಲ್ಯಾಂಡರ್ ನ ಫೋಟೋಗಳು ಮತ್ತು ಮಾಹಿತಿಯನ್ನು ಪರಿಶೀಲನೆ ನಡೆಸುತ್ತೇವೆ. ಆದಷ್ಟು ಬೇಗ ವಿಕ್ರಮ್ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸ್ತೀವಿ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Xiaomi ಪರಿಚಯಿಸ್ತಿದೆ 108MP ಕ್ಯಾಮರಾ ಇರೋ ಮೊಬೈಲ್!

0

ಸದ್ಯ Xiaomi ಕಂಪನಿ ಭಾರತೀಯ ಮೊಬೈಲ್​ ಮಾರುಕಟ್ಟೆಯಲ್ಲಿ ನಂ.1 ಸ್ಥಾನದಲ್ಲಿದೆ. ಚೀನಾ ಮೂಲದ ಈ ಕಂಪನಿ ಅಗ್ಗದ ಬೆಲೆ ಹಾಗೂ ಉತ್ತಮವಾದ ಫೀಚರ್​​ಗಳ ಮೂಲಕ ಭಾರಿ ಜನಪ್ರಿಯತೆಯನ್ನು ಗಳಿಸಿದೆ. ಇದೀಗ ಈ ಸಂಸ್ಥೆ ತನ್ನ ಹೊಸ ಪ್ರಾಡಕ್ಟ್​​ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಅದಕ್ಕೆ ಮಿ ಮಿಕ್ಸ್4 ಎಂದು ಹೆಸರಿಡಲಾಗಿದೆ. ಈ ನೂತನ ಸ್ಮಾರ್ಟ್​​ಫೋನ್​ ರಿಲೀಸ್​ಗೆ ಮುನ್ನವೇ ಭಾರಿ ನಿರೀಕ್ಷೆ ಮೂಡಿಸಿದೆ. ಇದಕ್ಕೆ ಕಾರಣ ಈ ಮೊಬೈಲ್​ನಲ್ಲಿರೋ ಕ್ಯಾಮರಾ ಮತ್ತು ಸ್ಟೋರೆಜ್​ ಕೆಪಾಸಿಟಿ.!

ಮಿ ಮಿಕ್ಸ್​​4 ಫೋನ್​ನಲ್ಲಿ 108MP ಕ್ಯಾಮರಾ ಇದೆಯಂತೆ!.ಜೊತೆಗೆ 16 MP ಅಲ್ಟ್ರಾವೈಡ್​ ಆ್ಯಂಗಲ್​ ಲೆನ್ಸ್​, 12MP ಸೆನ್ಸಾರ್​ ಕೂಡ ನೀಡಲಾಗಿದೆಯಂತೆ. ಸೆಲ್ಫಿಗಾಗಿಯೇ ವಿಶೇಷವಾಗಿ 32MP ಫ್ರಂಟ್​​ ಕ್ಯಾಮರಾವಿದೆ. ಇನ್ನು 2K ಗೆ ಹೆಚ್ಚಿಸಬಹುದಾದ AMOLED 2K HDR10+ ಕವರ್ಡ್​​ ಡಿಸ್ಪ್ಲೇ ಹೊಂದಿದ್ದು, ಅದು 6.4inch ಇರಲಿದೆ. 12GB RAM ಸ್ಟೋರೆಜ್​​ ಈ ಫೋನಿನಲ್ಲಿ ಇದೆಯಂತೆ. ವಿಶೇಷವೆಂದರೇ, ಸ್ಟೋರೆಜ್​​ ಕೆಪಾಸಿಟಿಯನ್ನು 1TB ವರೆಗೂ ವಿಸ್ತರಿಸಿಕೊಳ್ಳಬಹುದು ಎಂದು ಹೇಳಲಾಗಿದೆ. ಇನ್ನು, 4500 mAh ಬ್ಯಾಟರಿ ಬ್ಯಾಕಪ್​ ಹೊಂದಿದ್ದು, ಹಾಗೆಯೇ 30W ಸ್ಪೀಡ್​ನಲ್ಲಿ ಚಾರ್ಜ್​ ಮಾಡಿಕೊಳ್ಳಬಹುದಾದ ವ್ಯವಸ್ಥೆಯೂ ಇದರಲ್ಲಿದೆ. ಜೊತೆಗೂ ವೈರ್​ಲೆಸ್​​ ಮತ್ತು ರಿವರ್ಸ್​ ಚಾರ್ಜಿಂಗ್​​ ಕೂಡ ಮಾಡಬಹುದಂತೆ.

ಈ ನೂತನ ಸ್ಮಾರ್ಟ್​ಫೋನ್​​ ಚೀನಾದಲ್ಲಿ ಸೆಪ್ಟೆಂಬರ್​​ ಮೊದಲ ವಾರದಲ್ಲಿ ಬಿಡುಗಡೆಗೊಳ್ಳಲಿದ್ದು, ನಂತರ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇನ್ನು ಈ ಮಿ ಮಿಕ್ಸ್​​4 ಫೋನ್​, ಕಪ್ಪು ಹಾಗೂ ಗೋಲ್ಡನ್​​ ಕಲರ್​​ನಲ್ಲಿರಲಿದೆಯಂತೆ. ಭಾರತದಲ್ಲಿ ಈ ಮೊಬೈಲ್​ನ ಬೆಲೆ 57,990 ರೂ. ಇರಲಿದೆಯಂತೆ.

ಕಡಿಮೆ ಬೆಲೆಗೆ ಸ್ಟೈಲಿಶ್ Xiaomi-Mi9 ಮೊಬೈಲ್​ – ಆಗಸ್ಟ್​ 21ಕ್ಕೆ ಮಾರುಕಟ್ಟೆಗೆ ಲಗ್ಗೆ

0

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ನಂಬರ್ 1 ಸ್ಥಾನದಲ್ಲಿರೋ ಚೀನಾ ಮೂಲದ ಮೊಬೈಲ್​ ಕಂಪನಿ Xiaomi  ವಿನೂತನ, ವಿಶಿಷ್ಟ ಫೀಚರ್​​ಗಳನ್ನು ಹೊಂದಿರುವ ಮೊಬೈಲ್​ಗಳನ್ನು ಪರಿಚಯಿಸುತ್ತಲೇ ಬಂದಿದ್ದು, ಗ್ರಾಹಕ ಸ್ನೇಹಿಯಾಗಿ ಮಾರುಕಟ್ಟೆಯಲ್ಲಿ ರಾಜ್ಯಭಾರ ಮಾಡ್ತಿದೆ.

ಇದೀಗ ಈ ಸಂಸ್ಥೆ Xiaomi-Mi9 ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಅತ್ತುತ್ತಮ ಕ್ಯಾಮರಾ, ಬ್ಯಾಟರಿ ಬ್ಯಾಕ್​ಅಪ್​, ಆಕರ್ಷಕ ಡಿಸ್ಪ್ಲೆಯನ್ನು ಹೊಂದಿದೆ. 6.13 ಇಂಚು ಡಿಸ್ಪ್ಲೇ ಹೊಂದಿರು ಈ ಮೊಬೈಲ್ ಸಖತ್ ಸ್ಟೈಲಿಶ್​​ ಆಗಿದೆ. ಕ್ಯಾಮರಾ ಮತ್ತು ಬ್ಯಾಟರಿ ವಿಚಾರಕ್ಕೆ ಬಂದ್ರೆ ಈ ಮೊಬೈಲ್​ ಟ್ರಿಪಲ್​ ರಿಯರ್​ ಸೆನ್ಸಾರ್​ ಹೊಂದಿದ್ದು ,48MP+12MP+16MP ಲೆನ್ಸಸ್​​ ಹೊಂದಿದೆ. ಹಾಗೂ 20MP ಫ್ರಂಟ್​​ ಕ್ಯಾಮರವನ್ನು ಇದೆ.

ಉತ್ತಮವಾದ ಬ್ಯಾಟರಿ ಬ್ಯಾಕ್​ಅಪ್​  ಹೊಂದಿದ್ದು 3,300mAh ಇದೆ. ಕಡಿಮೆ ಅವಧಿಯಲ್ಲಿ ಬ್ಯಾಟರಿ ಚಾರ್ಜ್​​ ಮಾಡ್ಬಹುದು. ಮೊಬೈಲ್​ನಲ್ಲಿ 128GB ಇನ್​ಬಿಲ್ಟ್​​ ಸ್ಟೋರೆಜ್​ ಇದೆ. 6GB RAM ಹೊಂದಿದೆ. ಡೀಪ್​  ಗ್ರೇ, ಕಡುನೀಲಿ ಕಲರ್​​ಗಳಲ್ಲಿ ಲಭ್ಯವಾಗಲಿದೆ. ಭಾರತದಲ್ಲಿ ಈ ಮೊಬೈಲ್​ಗೆ ಆರಂಭಿಕ ದರ 31,790 ರೂ. ಆಗಸ್ಟ್​ 21ಕ್ಕೆ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಚಂದಿರನ ಅಂಗಳಕ್ಕೆ ‘ಬಾಹುಬಲಿ’

0

ಶ್ರೀಹರಿಕೋಟ : ಇಸ್ರೋ ಮತ್ತೊಂದು ಇತಿಹಾಸವನ್ನು ಸೃಷ್ಠಿಸಿದೆ. ಭಾರತದ ಮಹಾತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-2 ಗಗನನೌಕೆ ನಭಕ್ಕೆ ಹಾರಿದೆ.
ಇಂದು (ಸೋಮವಾರ) ಮಧ್ಯಾಹ್ನ 2.43ಕ್ಕೆ ಬಾಹುಬಲಿ ಅಂತ ಕರೆಯಲ್ಪಡುವ ಜಿಎಸ್​ಎಲ್​ವಿಎಂಕೆ 111-ಎಂ1 ಉಡಾವಣಾ ವಾಹಕ ಚಂದ್ರಯಾನ-2 ನೌಕೆಯನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದು, ಇದರೊಂದಿಗೆ ಇಸ್ರೋ ಮತ್ತೊಂದು ಮಹತ್ವದ ಮೈಲುಗಲ್ಲು ಸ್ಥಾಪಿಸಿದಂತಾಗಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಬಾಹುಬಲಿ’ ರಾಕೆಟ್ ಬಾನಂಗಳದತ್ತ ಚಿಮ್ಮಿದೆ. ಜುಲೈ 15ರಂದೇ ಬಾಹುಬಲಿ ಉಡ್ಡಯನಗೊಳ್ಳಬೇಕಿತ್ತು. ಆದರೆ. ತಾಂತ್ರಿಕ ದೋಷದಿಂದ ಮುಂದೂಡಲಾಗಿತ್ತು. ಇಂದು ಯಶಸ್ವಿಯಾಗಿ ಉಡಾವಣೆಯಾಗಿದೆ.

ಅತೀ ಕಡಿಮೆ ಬೆಲೆಗೆ ಆಕರ್ಷಕ ಮೊಬೈಲ್..!

0

ಮೊಬೈಲ್ ಮಾರುಕಟ್ಟೆ ಪ್ರಪಂಚಕ್ಕೆ ಹೊಸ ಹೊಸ ಮೊಬೈಲ್​ಗಳ ಎಂಟ್ರಿ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಮಾತ್ರ ಗ್ರಾಹಕರಿಗೆ ಬಹಳ ಇಷ್ಟವಾಗುತ್ತವೆ. ಬೆಲೆ ಕಡಿಮೆ, ಗರಿಷ್ಠ ಫೀಚರ್, ಆಕರ್ಷಕ ವಿನ್ಯಾಸವಿರುವ ಮೊಬೈಲ್​ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುವುದು ಕಾಮನ್. ಇದೀಗ ಅಂಥಾ ಮೊಬೈಲ್​ಗಳ ಸಾಲಿನಲ್ಲಿರೋದು Realme..!
ರೀಸನೇಬಲ್ ಬೆಲೆಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ Realme ಅತೀ ಕಡಿಮೆ ಅವಧಿಯಲ್ಲಿ ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಈ ಇದೇ ಸಂಸ್ಥೆಯಿಂದ Realme 3i ಮೊಬೈಲ್ ಮಾರುಕಟ್ಟೆಗೆ ಪ್ರವೇಶಿಸಿದೆ.
Realme X ಜೊತೆಯಲ್ಲಿ Realme 3i ಮಾರುಕಟ್ಟೆಗೆ ಎಂಟ್ರಿಕೊಟ್ಟಿದ್ದು ಕಡಿಮೆ ಬೆಲೆ ಆಕರ್ಷಕ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ. 3 GB RAM, 32 GB ಸ್ಟೋರೇಜ್ ಹಾಗೂ 4230 mAh ಸಾಮರ್ಥ್ಯದ ಅಲ್ಟ್ರಾ ಬ್ಯಾಟರಿ ಹೊಂದಿದೆ.
ಇನ್ನು ಕ್ಯಾಮರಾ ವಿಚಾರಕ್ಕೆ ಬಂದ್ರೆ, 13ಎಂಪಿ ಮತ್ತು 2ಎಂಪಿ ರೇರ್​​​ ಕ್ಯಾಮೆರಾ ಮತ್ತು 13ಎಂಪಿ ಫ್ರಂಟ್ ಕ್ಯಾಮರಾ ಒಳಗೊಂಡಿದೆ. ಇಷ್ಟೆಲ್ಲಾ ಹೇಳಿದ್ಮೇಲೆ ಬೆಲೆ ಬಗ್ಗೆ ಹೇಳ್ದೆ ಇದ್ರೆ ಆಗುತ್ತಾ..! ಬಹಳ ಕೈಗೆಟಕುವ ಬೆಲೆಯಲ್ಲಿ Realme 3i ಲಭ್ಯವಿದೆ. ಈ ಸ್ಮಾರ್ಟ್​ಫೋನ್ ಬೆಲೆ 9999 ರೂ ಮಾತ್ರ..!

ಭಾರತದಲ್ಲಿ ರೆಡ್ಮಿ K20 ಜುಲೈ 17ಕ್ಕೆ ಲಾಂಚ್..!

0

ಚೀನಾದ ಶಿಯೋಮಿ, ರೆಡ್ಮಿಯ K20, K20 pro ಸ್ಮಾರ್ಟ್​​​ಫೋನ್​ಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಡೋ ಟೈಮ್ ಬಂದೇ ಬಿಟ್ಟಿದೆ..! ಶೀಘ್ರದಲ್ಲೇ ಈ ಮೊಬೈಲ್ ಫೋನ್​ಗಳು ಭಾರತದ ಮಾರುಕಟ್ಟೆಯಲ್ಲಿ ಸದ್ದು ಮಾಡಲಿವೆ.
ರೆಡ್ಮಿ ತನ್ನ ಹೊಸ K ಸರಣಿಯ ಸ್ಮಾರ್ಟ್​ಫೋನ್​ಗಳಾದ K20, K20 proಗಳನ್ನು ಜುಲೈ 17ರಂದು ಬಿಡುಗಡೆ ಮಾಡಲಿದೆ. ಈ ಎರಡೂ ಸ್ಮಾರ್ಟ್​ಫೋನ್​ಗಳು 6.39 ಇಂಚಿನ ಡಿಸ್​ಪ್ಲೇ ಹೊಂದಿವೆ. 48 + 13 + 8 ಮೆಗಾಫಿಕ್ಸೆಲ್​ ತ್ರಿವಳಿ ಕ್ಯಾಮರಾ ಹಾಗೂ 4000mah ಬ್ಯಾಟರಿ ಹೊಂದಿವೆ. ಇನ್ನು K 20 ಬೆಲೆ ಅಂದಾಜು 20ಸಾವಿರ ರೂಗಳು ಹಾಗೂ K20 pro (6ಜಿಬಿ RAM) 25 ಸಾವಿರ ರೂ ಬೆಲೆಗೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.

Popular posts