Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Monday, January 20, 2020

`ಭಜರಂಗಿ-2′ ಸೆಟ್​ನಲ್ಲಿ ಬೆಂಕಿ ಅವಘಡ

0

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ  ‘ಭಜರಂಗಿ 2’ ಸಿನಿಮಾ ಸೆಟ್​ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. 

ಬೆಂಗಳೂರಿನ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಚಿತ್ರೀಕರಣಕ್ಕಾಗಿ ಸುಮಾರು 1 ಕೋಟಿ ವೆಚ್ಚದಲ್ಲಿ ಗುಹೆ ಸೆಟ್ಟನ್ನು ಹಾಕಲಾಗಿದ್ದು, ಶಾರ್ಟ್ ಸರ್ಕ್ಯೂಟ್​ನಿಂದ ಸೆಟ್​  ಭಸ್ಮವಾಗಿದೆ. 

ನಟ ಶಿವರಾಜ್ ಕುಮಾರ್ ಸೇರಿದಂತೆ  ಸುಮಾರು 300 ಮಂದಿ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸೆಟ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಸೆಟ್ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಯಾವ್ದೇ ಪ್ರಾಣಾಪಾಯ ಸಂಭವಿಸಿಲ್ಲ. 

 

 

ರಶ್ಮಿಕಾ ಮಂದಣ್ಣಗೆ ಐಟಿ ಶಾಕ್..!

0

ಕೊಡಗು : ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿರಾಜಪೇಟೆಯಲ್ಲಿರುವ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಹೈದರಾಬಾದ್​​​​​​​​​​​​ನಲ್ಲಿರುವ ರಶ್ಮಿಕಾಗೆ ಕೂಡಲೇ ವಿರಾಜಪೇಟೆಗೆ ಹೊರಟು ಬರುವಂತೆ ಸಮನ್ಸ್​ ನೀಡಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ 10 ಅಧಿಕಾರಿಗಳು ದೌಡಾಯಿಸಿದ್ದು, ಕುಟುಂಬದವರಿಗೆ ಶಾಕ್ ನೀಡಿದೆ. ಕೇವಲ 24 ವಯಸ್ಸಿನ ರಶ್ಮಿಕಾ ಆದಾಯ ಕಳೆದೆರಡು ವರ್ಷಗಳಿಂದ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಆದಾಯಕ್ಕೆ ತಕ್ಕಂತೆ ತೆರಿಗೆ ಪಾವತಿಸಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. 

ಸ್ಯಾಂಡಲ್​ವುಡ್ ಮತ್ತು ಟಾಲಿವುಡ್​ನಲ್ಲಿ ಹಿಟ್​ ಸಿನಿಮಾಗಳನ್ನು ನೀಡಿರುವ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಐಷಾರಾಮಿ ಕಾರೊಂದನ್ನು ಖರೀದಿಸಿದ್ದರು. 

ಆಂಜನೇಯನ ಅವತಾರದಲ್ಲಿ ಚಾಲೆಂಜಿಂಗ್ ಸ್ಟಾರ್ ‘ದರ್ಶನ’ !

0

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 2019ರಲ್ಲಿ ಯಜಮಾನ, ಕುರುಕ್ಷೇತ್ರ ಮತ್ತು ಒಡೆಯ ಸಿನಿಮಾಗಳ ಮೂಲಕ ಅಭಿಮಾನಿಗಳಿಗೆ ವರ್ಷವಿಡೀ ಸಿನಿ ಹಬ್ಬದೂಟ ಉಣಬಡಿಸಿದ್ದ ಡಿ ಬಾಸ್​​ ಸಂಕ್ರಾಂತಿ ಸಂಭ್ರಮದಲ್ಲಿ ಆಂಜನೇಯನಾಗಿ ‘ದರ್ಶನ’ ನೀಡಿದ್ದಾರೆ.
ಹೌದು ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಸೆಕೆಂಡ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ದರ್ಶನ್ ಆಂಜನೇಯನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾಕ್ಕೆ ಉಮಾಪತಿ ಬಂಡವಾಳ ಹಾಕಿದ್ದಾರೆ. ಅರ್ಜುನ್ಯ ಜನ್ಯಾ ಸಂಗೀತದ ಬಲ ತುಂಬಿದ್ದಾರೆ. ಆಶಾಭಟ್, ಜಗಪತಿ ಬಾಬು, ರವಿಕೃಷ್ಣ ಮತ್ತಿತರರು ತಾರಾಗಣದಲ್ಲಿದ್ದಾರೆ.

ಕಿಚ್ಚನ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ..! ಹೇಗಿದೆ ಗೊತ್ತಾ ‘ಕೋಟಿಗೊಬ್ಬ -3’ ಹವಾ?

0

ಅಭಿನಯ ಚಕ್ರವರ್ತಿ, ಬಾದ್​ ಷಾ ಕಿಚ್ಚ ಸುದೀಪ್ ಹೊಸ ಅವತಾರಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಕಿಚ್ಚನ ಚಂದದ ಅದ್ದೂರಿ ಲುಕ್​ಗೆ ಅಭಿಮಾನಿಗಳು ಕಳೆದೋಗಿದ್ದಾರೆ!
ಏನಪ್ಪಾ ಇದು ಸಂಕ್ರಾಂತಿಗೆ ಕಿಚ್ಚನ ಮತ್ತೊಂದು ಸಿನಿಮಾ ಅನೌನ್ಸ್ ಆಗಿ, ಅದರ ಲುಕ್ ಬಿಡುಗಡೆ ಆಯ್ತಾ ಅನ್ಕೊಂಡ್ರಾ? ಅಲ್ಲ ಈಗಾಗಲೇ ಸಖತ್ ಸದ್ದು ಮಾಡ್ತಿರೋ ಬಹು ನಿರೀಕ್ಷಿತ ಕೋಟಿಗೊಬ್ಬ -3 ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ನಿನ್ನೆ ರಿಲೀಸ್ ಆಗಿರೋ ಪೋಸ್ಟರ್ ಯೂಟ್ಯೂಬ್​​ನಲ್ಲಿ ಸಖತ್ ಸದ್ದು ಮಾಡ್ತಿದೆ.
ಇನ್ನು ಶಿವಕಾರ್ತಿಕ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಸೂರಪ್ಪ ಬಾಬು ಬಂಡವಾಳ ಹಾಕಿದ್ದಾರೆ. ಮಡೋಣ ಸೆಬಾಸ್ಟಿನ್ ಮತ್ತು ಶ್ರದ್ಧಾ ದಾಸ್ ಚಿತ್ರದ ನಾಯಕಿಯರು.

ಪುಟ್ಟ ಅಭಿಮಾನಿಯನ್ನು ಎತ್ತಿ ಮುದ್ದಾಡಿದ ಡಿ.ಬಾಸ್ – ಪವರ್​ ಟಿವಿ ವರದಿಗೆ ದರ್ಶನ್ ಸ್ಪಂದನೆ!

0

ಬೆಂಗಳೂರು : ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯನ್ನು ಭೇಟಿಯಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆಯ ನಿವಾಸಿ ರುತನ್ ಕುಮಾರ್ ಎಂಬ ಬಾಲಕ ದರ್ಶನ್ ಅವರ ಅಭಿಮಾನಿ. ಕಿಡ್ನಿವೈಪಲ್ಯದಿಂದ ಬಳಲುತ್ತಿರೋ ಈತ ಒಮ್ಮೆಯಾದ್ರು ನೆಚ್ಚಿನ ನಟನನ್ನು ಭೇಟಿಯಾಗ್ಬೇಕು ಅಂತ ಆಸೆ ಪಟ್ಟಿದ್ದ. ಆತನ ಆಸೆಯನ್ನು ಇಂದು ದರ್ಶನ್ ಈಡೇರಿಸಿದ್ದಾರೆ.


ಪವರ್ ಟಿವಿಯಲ್ಲಿ ರುತನ್ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆ ಸುದ್ದಿಯನ್ನು ವೈರಲ್ ಮಾಡಿದ್ದಾರೆ. ವಿಷಯ ದರ್ಶನ್​ ಅವರಿಗೂ ತಲುಪಿದ್ದು, ಅವರು ಇಂದು ಪುಟಾಣಿ ಅಭಿಮಾನಿಯನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು, ಆತನನ್ನು ಎತ್ತಿ ಮುದ್ದಾಡಿದ್ದಾರೆ. ದರ್ಶನ್​ಗೆ ಮುತ್ತು ಕೊಟ್ಟು ರುತನ್ ಖುಷಿಪಟ್ಟಿದ್ದಾನೆ.
ದರ್ಶನ್ ಭೇಟಿ ಬಳಿಕ ತನ್ನ ಪೋಷಕರೊಂದಿಗೆ ಪವರ್ ಟಿವಿ ಕಚೇರಿಗೆ ಆಗಮಿಸಿದ ರುತನ್, ದರ್ಶನ್ ಭೇಟಿಯಾದ ಕ್ಷಣದ ಬಗ್ಗೆ ಸಂತಸ ಹಂಚಿಕೊಂಡಿದ್ದಾನೆ. ಅಲ್ಲದೆ ದರ್ಶನ್ ಅಭಿಮಾನಿಗಳು ಸೇರಿದಂತೆ ಅನೇಕರು ಪವರ್ ಟಿವಿಗೆ ಕರೆ ಮಾಡಿ ರುತನ್ ಚಿಕಿತ್ಸೆಗೆ ತಮ್ಮ ಕೈಲಾದ ಸಹಾಯ ಮಾಡೋದಾಗಿ ಭರವಸೆ ನೀಡಿದ್ದಾರೆ.

ವರ್ಲ್ಡ್​ ರೆಕಾರ್ಡ್​ ಕೇಕ್​ ಕತ್ತರಿಸಿದ ರಾಕಿಂಗ್​ ಸ್ಟಾರ್​ ಯಶ್​!

0

ಬೆಂಗಳೂರು: ಸ್ಯಾಂಡಲ್​ವುಡ್​ನ ರಾಕಿಭಾಯ್​ ಯಶ್​ಗಿಂದು 35ನೇ ಹುಟ್ಟುಹಬ್ಬದ ಸಂಭ್ರಮ. ತಮ್ಮ ನೆಚ್ಚಿನ ಸ್ಟಾರ್​ ಬರ್ತ್​ಡೇಗೆ ಅಭಿಮಾನಿಗಳು ಬಹುದೊಡ್ಡ ಗಿಫ್ಟ್​ ಕೊಟ್ಟಿದ್ದಾರೆ.

ಯಶ್​ ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳು ಬರೋಬ್ಬರಿ 5000 ಕೆ.ಜಿಯ ಕೇಕ್ ತಯಾರಿಸಿ​ದ್ದರು. ನಿನ್ನೆ ರಾತ್ರಿ ಅಭಿಮಾನಿಗಳ ಜೊತೆ ಈ ಬೃಹತ್​ ಕೇಕ್​ ಕತ್ತರಿಸುವ ಮೂಲಕ ಯಶ್ ತಮ್ಮ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಪ್ರಪಂಚದ ಅತಿದೊಡ್ಡ ಸೆಲೆಬ್ರಿಟಿ ಬರ್ತ್​ಡೇ ಕೇಕ್​ ಇದಾಗಿದ್ದು, ದಾಖಲೆಯ ಪುಸ್ತಕ ಸೇರಿ ವರ್ಲ್ಡ್​ ರೆಕಾರ್ಡ್ ಸರ್ಟಿಫಿಕೇಟ್​ ಕೂಡ ಪಡೆದುಕೊಂಡಿದೆ.

‘ಕನ್ನಡ ಚಿತ್ರರಂಗದ ಹೆಮ್ಮೆ ಸುದೀಪ್’ : ಇದು ಭಾರತೀಯ ಸಿನಿರಂಗದಲ್ಲಿ ನಿರ್ಮಿಸಿದ ಹೊಸ ದಾಖಲೆಗೆ ಸಂದ ಗೌರವ!

0

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಡಿಗೆ ಮತ್ತೊಂದು ಬಿರುದು ಅಲಂಕರಿಸಿದೆ. ಸ್ಯಾಂಡಲ್​​ವುಡ್​ ಬಾದ್​​ಷಾ ಕಿಚ್ಚ ‘ಕನ್ನಡ ಚಿತ್ರರಂಗದ ಹೆಮ್ಮೆ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2019ರಲ್ಲಿ ಒಂದೇ ವರ್ಷ ಮೂರು ಪ್ಯಾನ್​ ಇಂಡಿಯಾ ಸಿನಿಮಾಗಳನ್ನು ನೀಡಿ ದಾಖಲೆ ಬರೆದ ಕೀರ್ತಿ ಸುದೀಪ್ ಅವರದ್ದು. ಪಂಚ ಭಾಷೆಗಳಲ್ಲಿ ಬಂದ ಕನ್ನಡದ ‘ಪೈಲ್ವಾನ್​’, ಟಾಲಿವುಡ್​ ಅಂಗಳದಿಂದ ಬಹು ಭಾಷೆಯಲ್ಲಿ ಅಬ್ಬರಿಸಿದ ‘ಸೈರಾ ನರಸಿಂಹ ರೆಡ್ಡಿ’, ಬಾಲಿವುಡ್​ ಅಂಗಳದಿಂದ ವಿಶ್ವಮಟ್ಟದಲ್ಲಿ ಸದ್ದು ಮಾಡಿದ ‘ದಬಾಂಗ್ -3 ‘ ಸೇರಿದಂತೆ ಮೂರು ಸಿನಿಮಾಗಳಲ್ಲಿ ಸುದೀಪ್ ಮಿಂಚಿದ್ರು. ಮೂರೂ ಸಿನಿಮಾಗಳು ಬಿಗ್ ಬಜೆಟ್ ಮತ್ತು ಸೂಪರ್ ಡೂಪರ್ ಹಿಟ್!
ಹೀಗೆ ಒಬ್ಬ ನಾಯಕ ನಟ ಮೂರು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೊದಲು! ಇಂತಹದ್ದೊಂದು ಇತಿಹಾಸ ಸೃಷ್ಟಿಸಿದ ಸುದೀಪ್​ ಪರಭಾಷೆಯ ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ಪಡೆದಿದ್ದಾರೆ. ಜೀ ತಮಿಳು ವಾಹಿನಿಯು ಜೀ ಸಿನಿಮಾ ಅವಾರ್ಡ್ಸ್​​ 2020ಯಲ್ಲಿ ಸುದೀಪ್​ಗೆ ‘ಕನ್ನಡ ಚಿತ್ರರಂಗದ ಹೆಮ್ಮೆ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಅದೆಷ್ಟೋ ಪ್ರಶಸ್ತಿಗಳು ಹರಸಿ ಬಂದಿದ್ದರೂ ಅವುಗಳಿಂದ ದೂರವಿದ್ದ ಸುದೀಪ್ ಸ್ನೇಹಿತನಿಗಾಗಿ ನಿರ್ಧಾರ ಬದಲಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ವಿಷಯವನ್ನು ಸ್ವತಃ ಸುದೀಪ್ ಟ್ಟಿಟರ್​ ಮೂಲಕ ಹಂಚಿಕೊಂಡಿದ್ದು, ”ಈ ಸಮಾರಂಭದಲ್ಲಿ ನನ್ನ ಇರುವಿಕೆಯಿಂದ ಕೆಲವರಿಗೆ ಖುಷಿ ಆಗಿದ್ದು ನಂಗೂ ಖುಷಿ ತಂದಿದೆ. ನನ್ನ ನಿರ್ಧಾರವನ್ನು ಸ್ನೇಹಿತನಿಗಾಗಿ ಬದಲಿಸಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ” ಅಂತ ಹೇಳಿದ್ದಾರೆ.
ಸುದೀಪ್ ಪ್ರಶಸ್ತಿಗಳ ಹೆಸರಲ್ಲಿ ವಿವಾದಗಳಿಗೆ ಸಿಲುಕುವುದು ಬೇಡ ಅಂತ 15 ವರ್ಷಗಳಿಂದ ಒಂದೇ ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರ್ಲಿಲ್ಲ.
ಇನ್ನು ಜಿ ಸಿನಿಮಾ ಅವಾರ್ಡ್ಸ್​ನಲ್ಲಿ ಸುದೀಪ್ ‘ಕನ್ನಡ ಚಿತ್ರರಂಗದ ಹೆಮ್ಮೆ’ ಪ್ರಶಸ್ತಿ ಸ್ವೀಕರಿಸಿದರೆ, ಕಮಲ ಹಾಸನ್ ‘ಭಾರತೀಯ ಚಿತ್ರರಂಗದ ಹೆಮ್ಮೆ’ ಅವಾರ್ಡ್​ ಪಡೆದರು.

 

ಚೊಚ್ಚಲ KSPL : ಹುಚ್ಚ ಹರಿಕೇನ್ಸ್ ಚಾಂಪಿಯನ್

0

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳು ಆರಂಭಿಸಿರುವ ಕಿಚ್ಚ ಸುದೀಪ್​ ಪ್ರೀಮಿಯರ್​ ಲೀಗ್​ನ ಮೊದಲ ಆವೃತ್ತಿಗೆ ತೆರೆಬಿದ್ದಿದೆ. ಬೆಂಗಳೂರಿನ ನೆಲಮಂಗಲದ ಆದಿತ್ಯ ಗ್ಲೋಬಲ್​ ಗ್ರೌಂಡ್​ನಲ್ಲಿ ಎರಡು ದಿನಗಳ ಕಾಲ ನಡೆದ ಕೆಎಸ್​ಪಿಎಲ್​​ ಟೂರ್ನಿಯಲ್ಲಿ ಹುಚ್ಚ ಹರಿಕೇನ್ಸ್​ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನಿಮ್ಮ ನೆಚ್ಚಿನ ಪವರ್ ಟಿವಿ ಮಾಧ್ಯಮ ಸಹಭಾಗಿತ್ವದಲ್ಲಿ ನಡೆದ ಟೂರ್ನಿಯಲ್ಲಿ 16 ತಂಡಗಳು ಚೊಚ್ಚಲ ಆವೃತ್ತಿಯ ಪ್ರಶಸ್ತಿಗಾಗಿ ಸೆಣೆಸಿದವು. ಜಿದ್ದಾಜಿದ್ದನ ಸರಣಿಯಲ್ಲಿ ಕೋಟಿಗೊಬ್ಬ ಫೈಟಸ್೯ , ಹುಚ್ಚ ಹರಿಕೇನ್ಸ್​ ಹಾಗೂ ರನ್ನ ರೈನೋಸ್ ಹಾಗು ಬಚ್ಚನ್ ಬ್ರಿಗೇಡಿಯರ್ ಸೆಮಿಫೈನಲ್​ನಲ್ಲಿ ಸೆಣೆಸಿದವು. ಬಳಿಕ ಹುಚ್ಚ ಹರಿಕೆನ್ಸ್ ಮತ್ತು ಬಚ್ಚನ್ ಬ್ರಿಗೇಡಿಯರ್ ಫೈನಲ್​​ನಲ್ಲಿ ಮುಖಾಮುಖಿಯಾದವು. ಮೊದಲ ಪಂದ್ಯದಿಂದಲೂ ಅದ್ಭುತ ಪ್ರದರ್ಶನ ತೋರುತ್ತಾ ಬಂದಿದ್ದ ಹುಚ್ಚ ಹರಿಕೇನ್ಸ್​ ರೋಚಕ ಫೈನಲ್​​ನಲ್ಲೂ ಹುಚ್ಚ ಹರಿಕೆನ್ಸ್​ ಪಡೆ ಸಂಘಟಿತ ಹೋರಾಟ ನಡೆಸಿ ಪ್ರಶಸ್ತಿಗೆ ಮುತ್ತಿಕ್ಕಿತು.

ಸೈಬರ್​ ಕ್ರೈಂ ಅನುಭವವಾಗಿದ್ರೆ ಹಂಚಿಕೊಳ್ಳಿ ಅಂತಿದ್ದಾರೆ ನಟ ರಮೇಶ್ ಅರವಿಂದ್!

0

ನಿಮ್ಗೇನಾದ್ರೂ ಸೈಬರ್ ಕ್ರೈಂ ಅನುಭವ ಆಗಿದ್ಯಾ? ಸೈಬರ್ ಕ್ರೈಂ ಬಗ್ಗೆ ಒಂದಿಷ್ಟು ವಿಚಾರಗಳನ್ನು ತಿಳ್ಕೋ ಬೇಕಾ? ಹಾಗಿದ್ರೆ ರಮೇಶ್ ಅರವಿಂದ್​​ ನಿರ್ದೇಶಿಸಿ, ನಟಿಸ್ತಿರೋ #100 ಚಿತ್ರತಂಡದ ಜೊತೆ ಮುಕ್ತವಾಗಿ ಹಂಚಿಕೊಳ್ಳಬಹುದು! ಸ್ವತಃ ರಮೇಶ್ ಅವರೇ ಈ ಬಗ್ಗೆ ಕರೆಕೊಟ್ಟಿದ್ದಾರೆ.
ನಿಮ್ಗೇನಾದ್ರು ಸೋಶಿಯಲ್ ಮೀಡಿಯಾ ಮೂಲಕ ಅನ್ಯಾಯವಾಗಿದ್ರೆ, ನೀವೂ ಸೈಬರ್ ಅಪರಾಧದಿಂದ ತೊಂದ್ರೆಗೆ ಒಳಗಾಗಿದ್ರೆ ನಮ್ ಜೊತೆ ಹಂಚಿಕೊಳ್ಳಿ. 100Kannadafilmಗೆ ಟ್ಯಾಗ್ ಮಾಡಿ ನೀವು ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ಶೇರ್​ ಮಾಡಿಕೊಳ್ಬಹುದು. ನಮ್ ಟೀಮಲ್ಲಿರೋ ಸೈಬರ್​ ಕ್ರೈಂ ತಜ್ಞರು ಅದಕ್ಕೆ ಉತ್ತರಿಸ್ತಾರೆ. ಇದ್ರಿಂದ ಸೈಬರ್ ಅಪರಾಧದ ಬಗ್ಗೆ ಅರಿವು ಮೂಡುತ್ತೆ ಅಂತ ಅವರು ವಿಡಿಯೋ ಮೂಲಕ ಹೇಳಿದ್ದಾರೆ.
ಇನ್ನು #100 ಚಿತ್ರ ಸೈಬರ್ ಕ್ರೈಂ ಕುರಿತ ಚಿತ್ರವಾಗಿದ್ದು, ರಮೇಶ್ ಅರವಿಂದ್ ಪೊಲೀಸ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರಚಿತಾ ರಾಮ್​​ ಮತ್ತು ಪೂರ್ಣಾ ಚಿತ್ರದ ನಾಯಕಿಯರು. ಶೀಘ್ರದಲ್ಲಿ ಚಿತ್ರ ರಿಲೀಸ್ ಆಗಲಿದ್ದು, ಚಿತ್ರತಂಡ ಸದ್ಯ ಪ್ರಮೋಶನ್​ನಲ್ಲಿ ಬ್ಯುಸಿ ಇದೆ.

ಆಂಧ್ರದಲ್ಲಿ ಯಶ್​​ ಜೊತೆ ಸೆಲ್ಫಿಗೆ ಸಾಲುಗಟ್ಟಿ ನಿಂತ ಅಭಿಮಾನಿಗಳು!

0

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್’ ಸಿನಿಮಾದ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿರುವ ನಟ. ದೇಶದ ಮೂಲೆ ಮೂಲೆಗಳಲ್ಲದೆ ಪ್ರಪಂಚದೆಲ್ಲಡೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಯಶ್ ಹೋದಲ್ಲಿ – ಬಂದಲ್ಲಿ ಸೆಲ್ಫಿಗಾಗಿ ಅಂಖ್ಯಾತ ಅಭಿಮಾನಿಗಳು ಮುಗಿ ಬೀಳುತ್ತಾರೆ.  ಅಂತೆಯೇ ಯಶ್​ ನೋಡಲು ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಆಂಧ್ರಪ್ರದೇಶದಲ್ಲಿ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದು, ಆ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಆಂಧ್ರದ ರಾಯಲ ಸೀಮೆಯಲ್ಲಿ ಕೆಜಿಎಫ್-2  ಸಿನಿಮಾದ ಚಿತ್ರಿಕರಣ ನಡೆಯುತ್ತಿದೆ. ಯಶ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಶೂಟಿಂಗ್ ಸ್ಪಾಟ್​ಗೆ ತೆರಳಿ ಸೆಲ್ಫಿಗಾಗಿ ಬೇಡಿಕೆ ಇಟ್ಟಿದ್ದಾರೆ. ಅಭಿಮಾನಿಗಳ ಬೇಡಿಕೆಗೆ ಸ್ಪಂದಿಸಿದ ಯಶ್ ಶೂಟಿಂಗ್​ಗೆ ಕೊಂಚ ಬ್ರೇಕ್ ಹಾಕಿ ಪೊಲೀಸ್​ರ ನೆರವಿನೊಂದಿಗೆ ಅಭಿಮಾನಿಗಳ ಜೊತೆ ಸೆಲ್ಫಿಗೆ ಪೋಸ್​ ಕೊಟ್ಟಿದ್ದಾರೆ. 

Popular posts