Friday, April 3, 2020

ಬಿಗ್​ಬಾಸ್​ಗೆ ಸಲ್ಮಾನ್ ಖಾನ್ ಗುಡ್​ಬೈ?

0

ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರೋ ಬಿಗ್​ಬಾಸ್​ ನಿರೂಪಣೆಗೆ ನಟ ಸಲ್ಮಾನ್ ಖಾನ್ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. 

ಶೋನಲ್ಲಿ ಕೆಲ ಸ್ಪರ್ಧಿಗಳ ನಡವಳಿಕೆಗಳಿಂದ ತೀರಾ ಬೇಸರಗೊಂಡಿರುವ ಸಲ್ಮಾನ್ ಖಾನ್, ಕಾರ್ಯಕ್ರಮದಿಂದ ಹೊರ ನಡೆಯುತ್ತಿರುವುದಾಗಿ ಕಾರ್ಯಕ್ರಮ ಪ್ರಸಾರಕರಿಗೆ ನೇರ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ . ಸಲ್ಮಾನ್ ಖಾನ್ ಈ ನಿರ್ಧಾರದಿಂದ ಕಂಗೆಟ್ಟಿರುವ ಕಾರ್ಯಕ್ರಮದ ನಿರ್ಮಾಪಕರು, ಸಲ್ಮಾನ್ ಜಾಗಕ್ಕೆ ಖ್ಯಾತ ನಿರ್ದೇಶಕಿ ಫರ್ಹಾ ಖಾನ್ ಕರೆತರಲು ಮುಂದಾಗಿದ್ದಾರೆ ಎನ್ನಲಾಗಿದೆ.

ಹಾಫ್​ ಸೆಂಚುರಿ ಬಾರಿಸಿದ ಅಮಿತಾಭ್​ಗೆ ಸ್ಟಾರ್ ಅಭಿಮಾನಿಯಿಂದ ವಿಶ್!

0

1969ರ ನವೆಂಬರ್​ 7 ರಂದು `ಸಾಥ್​ ಹಿಂದುಸ್ಥಾನ್’ ಚಿತ್ರದ ಮೂಲಕ ಬಾಲಿವುಡ್​ ಚಿತ್ರರಂಗ ಪ್ರವೇಶಿಸಿದ ಅಮಿತಾಭ್ ಬಚ್ಚನ್ ಸಿನಿಜರ್ನಿಗೆ ಇಂದಿಗೆ 50 ವರ್ಷದ ಸಂಭ್ರಮ. ಸಿನಿಪಯಣದಲ್ಲಿ ಹಾಫ್ ಸೆಂಚುರಿ ಬಾರಿಸಿರುವ ಬಿಗ್​ಬಿ ಅಮಿತಾಭ್​ಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ನಾನಾ ಕ್ಷೇತ್ರದ ಸಾಧಕರು, ರಾಜಕೀಯ ನಾಯಕರು ಶುಭಾಶಯ ಕೋರುತ್ತಿದ್ದಾರೆ.
ಹಾಗೆಯೇ ಸ್ಟಾರ್ ಅಭಿಮಾನಿಯೊಬ್ರು ವಿಶ್ ಮಾಡಿದ್ದಾರೆ. ಆ ಸ್ಟಾರ್ ಅಭಿಮಾನಿ ಬೇರಾರು ಅಲ್ಲ ಅಮಿತಾಭ್​ ಪುತ್ರ, ನಟ ಅಭಿಷೇಕ್ ಬಚ್ಚನ್. ಸೋಶಿಯಲ್ ಮೀಡಿಯಾದಲ್ಲಿ ಅಭಿಷೇಕ್ ತಂದೆಗೆ ಮಗನಾಗಿ, ನಟನಾಗಿ, ಅಭಿಮಾನಿಯಾಗಿ ಶುಭಹಾರೈಸಿದ್ದಾರೆ.
“ಒಬ್ಬ ಮಗನಾಗಿ ಮಾತ್ರವಲ್ಲ, ನಟನಾಗಿ ಮತ್ತು ಅಭಿಮಾನಿಯಾಗಿ ನಾವೆಲ್ಲರೂ ನಿಮ್ಮ ಸಾಧನೆ, ದೊಡ್ಡತನಕ್ಕೆ ಸಾಕ್ಷಿಯಾಗಿರುವುದೆ ನಮ್ಮ ಪುಣ್ಯ. ನಿಮ್ಮಿಂದ ಕಲಿಯಲು ಇನ್ನೂ ಜಾಸ್ತಿ ಇದೆ. ಚಿತ್ರರಂಗದಲ್ಲಿ 50 ವರ್ಷ ಪೂರೈಸಿದಕ್ಕೆ ಅಭಿನಂದನೆಗಳು ಅಪ್ಪ. ನಾವೀಗ ಮುಂದಿನ 50 ವರ್ಷಕ್ಕಾಗಿ ಕಾಯುತ್ತಿದ್ದೀವಿ. ಲವ್ ಯು ಅಪ್ಪ” ಎಂದಿದ್ದಾರೆ ಅಭಿ.

KGF ಮುಂದೆ ನಡೀಲಿಲ್ಲ ಬಾಲಿವುಡ್ ‘ಹೌಸ್​ಫುಲ್ -4’ ಆಟ..!

0

ನಟ ಅಕ್ಷಯ್ ಕುಮಾರ್ ಅಭಿನಯದ ಹೌಸ್​ಫುಲ್ -4 ರಿಲೀಸ್ ಆಗಿದೆ. ಆದರೆ, ಅಭಿಮಾನಿಗಳ ನಿರೀಕ್ಷೆಯನ್ನು ತಲುಪಿಲ್ಲ! ಪ್ರೇಕ್ಷಕ ಪ್ರಭುಗಳು ಹೌಸ್​ಫುಲ್ಲನ್ನು ಸ್ವಾಗತಿಸುವಲ್ಲಿ ಯಾಕೋ ಹಿಂದೇಟು ಹಾಕಿದ್ದಾರೆ. ಪಂಚ ಭಾಷೆಗಳಲ್ಲಿ ಸದ್ದು ಮಾಡಿದ್ದ ಕನ್ನಡದ ಗೋಲ್ಡನ್ ಫಿಲ್ಮ್ ದಾಖಲೆಯನ್ನು ಬ್ರೇಕ್ ಮಾಡಲು ಹೌಸ್​ಫುಲ್ ತಲೆಬಾಗಿದೆ.

ಹೌದು, ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅಭಿನಯದ, ಫರ್ಹಾದ್​ ಸಮ್ಜಿ ಆ್ಯಕ್ಷನ್ ಕಟ್ ಹೇಳಿರುವ ಹೌಸ್​ಫುಲ್ 4 ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಅಕ್ಕಿ ಅಭಿನಯದ ಸಿನಿಮಾ ಹತ್ತಾರು ದಾಖಲೆಗಳನ್ನು ಬರೆಯುತ್ತೆ ಅಂತ ಬಾಲಿವುಡ್ ಮಂದಿ ಲೆಕ್ಕಾಚಾರ ಹಾಕಿದ್ರು. ಅಕ್ಷಯ್ ಬಹಳ ವರ್ಷಗಳ ಬಳಿಕ ನಟಿಸಿ ಕಾಮಿಡಿ ಸಿನಿಮಾ ಇದಾಗಿದ್ದು, ಅದ್ಯಾಕೋ ದಾಖಲೆ ಲೆಕ್ಕಾಚಾರದಲ್ಲಿ ಉಲ್ಟಾ ಹೊಡೆದಿದೆ,

ಕನ್ನಡದ ಕೆಜಿಎಫ್​ನ ದಾಖಲೆಯ ಕಲೆಕ್ಷನ್​ ಅನ್ನು ಸರಿಗಟ್ಟಲು ಬಾಲಿವುಡ್ ಹೌಸ್​ಫುಲ್​ಗೆ ಸಾಧ್ಯವಾಗಿಲ್ಲ. ದೀಪಾವಳಿಯ ಸಂಭ್ರಮದ ಪಟಾಕಿ ಸೌಂಡಂತೆ ಹೌಸ್​ಫುಲ್ ಬಾಕ್ಸ್ ಆಫೀಸಲ್ಲಿ ಸೌಂಡು ಮಾಡುತ್ತೆ ಎಂಬ ನಿರೀಕ್ಷೆ ಹುಸಿಯಾಗಿದೆ. ಹಬ್ಬದಲ್ಲಿ ಅಭಿಮಾನಿಗಳು ಫ್ಯಾಮಿಲಿ ಸಮೇತ ಚಿತ್ರಮಂದಿರಗಳಿಗೆ ಬರ್ತಾರೆ ಎಂಬ ನಿರೀಕ್ಷೆಯೂ ಅದ್ಯಾಕೋ ತಲೆಕೆಳಗಾಗಿದೆ.

ಹೌಸ್​ಫುಲ್​ನ ಮೊದಲ ದಿನದ ರಿಪೋರ್ಟ್ ಬಂದಿದೆ. ನಿರೀಕ್ಷಿತ ಕಲೆಕ್ಷನ್ ಆಗಿಲ್ಲ. ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಮೊದಲ ದಿನ ಬರೋಬ್ಬರಿ 25 ಕೋಟಿಯನ್ನು ಗಳಿಸಿತ್ತು. ಹೌಸ್​ಫುಲ್ ಕನಿಷ್ಠ 25 ಕೋಟಿ ತಲುಪುತ್ತೆ ಎನ್ನಲಾಗಿತ್ತು. ಆ ಮಟ್ಟಿಗೆ ಸಿನಿಮಾ ರಿಲೀಸಿಗೆ ಮುನ್ನ ಸೌಂಡು ಮಾಡಿತ್ತು. ಆದರೆ, ಗಳಿಸಿದ್ದು 19.08 ಕೋಟಿ ಮಾತ್ರ.

ಒಟ್ನಲ್ಲಿ ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಮುಂದೆ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ ಹೌಸ್​ಫುಲ್ ಹಿಂದೆ ಬಿದ್ದಿದ್ದು, ಸ್ಯಾಂಡಲ್ವುಡ್ ಹವಾ ಮತ್ತೊಮ್ಮೆ ಸಾಬೀತಾಗಿದೆ.

ಕಿಚ್ಚ ಸುದೀಪ್ ಫ್ಯಾನ್ಸ್​ಗೆ ‘ದಬಾಂಗ್​ 3’ ಡೈರೆಕ್ಟರ್ ಕೊಟ್ರು ಸರ್​ಪ್ರೈಸ್​​ ನ್ಯೂಸ್!

0

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡದಲ್ಲಿ ಮಾತ್ರವಲ್ಲದೆ ಪರ ಭಾಷೆಗಳಲ್ಲೂ ಬಹು ಬೇಡಿಕೆ ಹೊಂದಿರುವ ಸ್ಟಾರ್ ನಟ. ಸುದೀಪ್ ಈಗಾಗಲೇ ಬಾಲಿವುಡ್, ಟಾಲಿವುಡ್​ನಲ್ಲಿ ತನ್ನ ಖದರ್ ತೋರಿಸಿದ್ದಾರೆ. ಸದ್ಯ ದಬಾಂಗ್ 3ನಲ್ಲಿ ಸಲ್ಮಾನ್​ಖಾನ್ ಜೊತೆ ಕಿಚ್ಚ ಅಭಿನಯಿಸಿದ್ದು, ನಿನ್ನೆಯಷ್ಟೇ ದಬಾಂಗ್ 3 ಕನ್ನಡ ಟ್ರೈಲರ್ ಕೂಡ ರಿಲೀಸ್ ಆಗಿದೆ.
ದಬಾಂಗ್ 3 ಟ್ರೈಲರ್ ನೋಡಿದ ಸಲ್ಲು ಮತ್ತು ಕಿಚ್ಚನ ಅಭಿಮಾನಿಗಳು ಸಖತ್ ಖುಷಿಯಲ್ಲಿದ್ದಾರೆ. ಸಿನಿಮಾ ಡಿಸೆಂಬರ್ 20ಕ್ಕೆ ರಿಲೀಸ್ ಆಗಲಿದೆ. ಈ ಖುಷಿ ವಿಚಾರದ ಜೊತೆಗೆ ಡೈರೆಕ್ಟರ್ ಪ್ರಭುದೇವ್ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸರ್​ಪ್ರೈಸ್ ನ್ಯೂಸ್ ಕೊಟ್ಟಿದ್ದಾರೆ. ಬೆಂಗಳೂರಲ್ಲಿ ದಬಾಂಗ್ 3 ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಭುದೇವ್, ಕಿಚ್ಚ ಸುದೀಪ್​ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ರು. ಕಿಚ್ಚನ ಸಿನಿಮಾಕ್ಕೆ ತಾನು ಆ್ಯಕ್ಷನ್ ಕಟ್ ಹೇಳುವುದಾಗಿ ತಿಳಿಸಿದ್ರು.
ಪ್ರಭುದೇವ್ ನಿರ್ದೇಶನದ, ಸಲ್ಮಾನ್ ಖಾನ್ ನಿರ್ದೇಶನದ ದಬಾಂಗ್ 3ನಲ್ಲಿ ಸುದೀಪ್ ವಿಲನ್ ಆಗಿ ಕಾಣಿಸಿಕೊಂಡಿದ್ದು, ಪ್ರಭುದೇವ್ ಮತ್ತೊಂದು ಸಿನಿಮಾವನ್ನು ಸುದೀಪ್​ಗಾಗಿಯೇ ಮಾಡಲಿದ್ದಾರೆ ಎಂಬುದು ಈಗಲೇ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ದಬಾಂಗ್ 3 ಟೀಮ್ನಿಂದ ಅಭಿಮಾನಿಗಳಿಗೆ ಸರ್​​ಪ್ರೈಸ್​ ನ್ಯೂಸ್!

0

ಬಾಲಿವುಡ್​ ಸ್ಟಾರ್ ಸಲ್ಮಾನ್ ಖಾನ್ ಮತ್ತು ಸ್ಯಾಂಡಲ್​ವುಡ್ ಬಾದ್​ ಷಾ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ದಬಾಂಗ್ 3 ಚಿತ್ರತಂಡ ಅಭಿಮಾನಿಗಳಿಗೆ ಸರ್​ಪ್ರೈಸ್ ನ್ಯೂಸ್ ನೀಡಿದೆ. ಈಗಾಗಲೇ ಟೀಸರ್, ನ್ಯೂಲುಕ್​​​ ಪೋಸ್ಟರಿಂದ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿರುವ ದಬಾಂಗ್ 3ಯ ಟ್ರೈಲರ್ ಅಕ್ಟೋಬರ್ 23ರಂದು ರಿಲೀಸ್ ಆಗಲಿದೆ.
ಸುದೀಪ್ ಮತ್ತು ಸಲ್ಮಾನ್ ಖಾನ್ ಒಟ್ಟಾಗಿ ನಟಿಸಿರುವ ಮೊದಲ ಸಿನಿಮಾ ಇದಾಗಿದ್ದು, ಕನ್ನಡದಲ್ಲೂ ರಿಲೀಸ್ ಆಗಲಿದೆ. ಡಿಸೆಂಬರ್ 20ಕ್ಕೆ ಸಿನಿಮಾ ರಿಲೀಸ್ ಆಗಲಿದ್ದು, ನಾಡಿದ್ದು (ಅ.23) ಟ್ರೈಲರ್ ರಿಲೀಸ್ ಆಗಲಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಚುಲ್ ಬುಲ್ ಪಾಂಡೆ ರೋಲಿನಲ್ಲಿ ಕಾಣಿಸಿಕೊಂಡಿದ್ದು, ಸುದೀಪ್ ಬಾಲಿ ಸಿಂಗ್​ ಆಗಿ ಸದ್ದು ಮಾಡಲಿದ್ದಾರೆ. ಪ್ರಭುದೇವ್ ಆ್ಯಕ್ಷನ್ ಕಟ್ ಹೇಳಿರೋ ಈ ಸಿನಿಮಾದ ಕನ್ನಡ ಡಬ್ಬಿಂಗ್ ವರ್ಷನ್​ಗೆ ಗುರುದತ್ ಗಾಣಿಗ ಡೈಲಾಗ್ ಬರೆದಿದ್ದಾರೆ.

ಕನ್ನಡದ ಕೀರ್ತಿ ‘ಮೂರ್ತಿ’ ದಂಪತಿ ಬಯೋಪಿಕ್​ ಟೈಟಲ್ ಫಿಕ್ಸ್!

0

ಇನ್ಫೋಸಿಸ್​ ಸ್ಥಾಪಕ ಎನ್​.ಆರ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ದಂಪತಿ ಜೀವನಗಾಥೆ ಸಿನಿಮಾ ಆಗೋ ಬಗ್ಗೆ ನಿಮ್ಗೆ ಈಗಾಗಲೇ ಗೊತ್ತಿದೆ. ಬಾಲಿವುಡ್ಡಲ್ಲಿ ನಮ್ಮ ಕನ್ನಡದ ಕೀರ್ತಿ ಮೂರ್ತಿ ದಂಪತಿ ಬಯೋಪಿಕ್ ಬರುತ್ತೆ ಎಂಬುದು ಈಗಾಗಲೇ ಸುದ್ದಿಯಾಗಿತ್ತು. ಆದರೆ ಸಿನಿಮಾ ಟೈಟಲ್ ಇನ್ನು ಫಿಕ್ಸ್ ಆಗಿರಲಿಲ್ಲ. ಇದೀಗ ‘ಮೂರ್ತಿ’ ಅಂತ ಟೈಟಲ್ ಫೈನಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಅಶ್ವಿನಿ ಅಯ್ಯರ್ ತಿವಾರಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ನಿತೇಶ್ ತಿವಾರಿ ಮತ್ತು ಮಹವೀರ್​ ಜೈನ್ ಬಂಡವಾಳ ಹಾಕಲಿದ್ದಾರೆ. ಸುಧಾಮೂರ್ತಿ ಪಾತ್ರದಲ್ಲಿ ನಟಿ ಆಲಿಯಾ ಭಟ್ ನಟಿಸುವುದು ಬಹುತೇಕ ಪಕ್ಕಾ. ಇನ್ನು ನಾರಾಯಣಮೂರ್ತಿ ಅವರ ಪಾತ್ರಕ್ಕೆ ಅಕ್ಷಯ್​ ಕುಮಾರ್, ರಣಬೀರ್ ಕಪೂರ್, ಸುಶಾಂತ್ ಸಿಂಗ್ ಹೆಸರು ಕೇಳಿ ಬರ್ತಿದೆ. ಇನ್ನು ಸಿನಿಮಾ ಕನ್ನಡದಲ್ಲೂ ಬರಬೇಕು ಎಂಬ ಬೇಡಿಕೆ ಹೆಚ್ಚಿದೆ.

ಸುಧಾಮೂರ್ತಿ ಬಯೋಪಿಕ್​ನಲ್ಲಿ ಆಲಿಯಾ ಭಟ್?

0

ಇನ್ಫೋಸಿಸ್​ ಪ್ರತಿಷ್ಟಾನದ ಅಧ್ಯಕ್ಷೆ ಸುಧಾಮೂರ್ತಿ ಕನ್ನಡದ ಕೀರ್ತಿ. ಸಮಾಜಮುಖಿ ಕಾರ್ಯಗಳು, ತನ್ನ ಸರಳತೆ ಮೂಲಕ ಎಲ್ಲರಿಗೂ ಇಷ್ಟವಾಗುವ ವ್ಯಕ್ತಿತ್ವ ಸುಧಾಮೂರ್ತಿ ಅವರದ್ದು. ಪ್ರತಿಯೊಬ್ಬರಿಗೂ ಮಾದರಿ ನಮ್ಮ ಸುಧಾಮೂರ್ತಿ. ಇವರ ಜೀವನಗಾಥೆ ಎಲ್ಲರಿಗೂ ಆದರ್ಶ. ಹೀಗಾಗಿ ಅವರ ಜೀವನಾಧಾರಿತ ಚಿತ್ರ ಬಂದರೆ ಹೇಗಿರುತ್ತೆ? ಅದಕ್ಕೂ ಕಾಲ ಸನ್ನಿಹಿತವಾಗಿದೆ. ಸುಧಾಮೂರ್ತಿಯವರ ಬಯೋಪಿಕ್ ಬರುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ.
ಸುಧಾಮೂರ್ತಿ ಬಯೋಪಿಕ್​ನಲ್ಲಿ ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ನಟಿ ಅಭಿನಯಿಸಲಿದ್ದಾರೆ. ಅಶ್ವಿನಿ ಐಯ್ಯರ್ ತಿವಾರಿ ಸಿನಿಮಾ ನಿರ್ಮಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ. ಇನ್ಸ್ಟಾಗ್ರಾಮ್​ನಲ್ಲಿ ಅಶ್ವಿನಿ ತಿವಾರಿ ಸುಧಾಮೂರ್ತಿಯೊಂದಿಗಿನ ಫೋಟೋ ಹಾಕಿ, ಅವರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ.

‘ವಾರ್​​​’ಗಾಗಿ ಹೃತಿಕ್ ಹೀಗೆಲ್ಲಾ ಮಾಡಿದ್ರಾ?

0

ಹೌದು ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ನಟನೆಯ ‘ವಾರ್’ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಬಾಲಿವುಡ್ ಬಾಕ್ಸ್ಆಫೀಸಲ್ಲಿ ‘ವಾರ್​​’ನದ್ದೇ ದರ್ಬಾರು. ಮೊದಲ ದಿನವೇ ಸಿನಿಮಾ ದಾಖಲೆ ಗಳಿಕೆ ಕಂಡಿದೆ. 2019ರಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ಫಸ್ಟ್ ಡೇನೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಅನ್ನೋ ಖ್ಯಾತಿಗೆ ವಾರ್ ಪಾತ್ರವಾಗಿದೆ.
2019ರ ಬಿಗ್ ಓಪನರ್ ಎನ್ನುವ ಖ್ತಾತಿಯನ್ನು ವಾರ್ ಪಡೆದಿದ್ದು, ಈಗಾಗಲೇ 300 ಕೋಟಿ ಕ್ಲಬ್ ಸೇರಿ ಭರ್ಜರಿ ಯಶಸ್ಸು ಕಂಡಿದೆ. ನಹೆಸರೇ ಸೂಚಿಸುವಂತೆ ಇದು ಯುದ್ಧದ ಕಥಾವಸ್ತುವನ್ನು ಒಳಗೊಂಡ ಸಿನಿಮಾವಾಗಿದ್ದು. ಭಾರಿ ಬಜೆಟ್, ಅದಕ್ಕೂ ಮೀರಿದ ಆ್ಯಕ್ಷನ್ ಸನ್ನಿವೇಶಗಳೇ ಈ ಚಿತ್ರದ ಹೈಲೈಟ್ಸ್ ಆಗಿದೆ.
ಮುಖ್ಯವಾಗಿ ಹೃತಿಕ್ ಹಾಗೂ ಟೈಗರ್ ಅವರ ಫೈಟ್ ಸೀನ್​ಗಳು ಆ್ಯಕ್ಷನ್ ಪ್ರಿಯರಿಗೆ ಸಖತ್ ಥ್ರಿಲ್ ಕೊಡುವಂತಿದೆ. ವಿಶೇಷವಾಗಿ ಹೃತಿಕ್ ಅವರ ಕಟ್ಟುಮಸ್ತು ದೇಹ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಆದ್ರೆ, ಸಿನಿ ಪ್ರೇಕ್ಷಕರಿಗೆ ಆ ಬಲಿಷ್ಟ ದೇಹ ಗಳಿಸಲು ಹೃತಿಕ್ ಎಷ್ಟು ಕಷ್ಟ ಪಟ್ಟಿದ್ದಾರೆ ಎನ್ನುವುದರ ಬಗ್ಗೆ ಇಂಚಿತ್ತು ಗೊತ್ತಿಲ್ಲ.
ಈ ಹಿಂದೆ ಹೃತಿಕ್ ರೋಷನ್ ಅಭಿನಯದ ಸೂಪರ್ 30 ಸಿನಿಮಾ ರಿಲೀಸ್ ಆಗಿ, ತಕ್ಕ ಮಟ್ಟಿಗೆ ಯಶಸ್ಸು ಕಂಡಿತ್ತು. ಚಿತ್ರದಲ್ಲಿ ಒಬ್ಬ ಕಾಮನ್ ಮ್ಯಾನ್ ಆಗಿ ಹೃತಿಕ್ ಕಾಣಿಸಿಕೊಂಡಿದ್ರು. ಆದ್ರೆ ಸೂಪರ್ 30 ಸಿನಿಮಾದ ಹೃತಿಕ್ ಗೂ ‘ವಾರ್’ ಸಿನಿಮಾದ ಹೃತಿಕ್​ಗೂ ಅಜಗಜಾಂತರ ವ್ಯತ್ಯಸವಿದೆ.
ವಾರ್​​ನಲ್ಲಿ ಸಖತ್ ಬಾಡಿ ಬಿಲ್ಡ್ ಮಾಡಿರೋ ಹೃತಿಕ್​​ರನ್ನು ಕಾಣ್ತೀವಿ. ಪವರ್ ಫುಲ್ ದೇಹಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನು ಅವರೇ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ.
ಹೃತಿಕ್ ಶೇರ್ ಮಾಡಿರೋ ವಿಡಿಯೋದಲ್ಲಿ ಸೂಪರ್ 30 ಹೃತಿಕ್ನಲ್ಲೂ ವಾರ್ ಹೃತಿಕ್ನಲ್ಲೂ ಕಂಡಿರೋ ಬದಲಾವಣೆ ಗುರುತಿಸಬಹುದು. ಅಷ್ಟೇ ಅಲ್ದೆ ‘ ವಾರ್’ ಗಾಗಿ ತೆರೆ ಹಿಂದೆ ಹೃತಿಕ್ ಮಾಡಿದ ಕಸರತ್ತು ನೋಡಿದ್ರೆ ಖಂಡಿತಾ ಮೈ ಜುಮ್ಮೆನ್ನುತ್ತೆ.
ಒಟ್ನಲ್ಲಿ ಸಿನಿಮಾಕ್ಕಾಗಿ ಹೃತಿಕ್ ಡೆಡಿಕೇಷನ್, ಹಾರ್ಡ್ ವರ್ಕ್ಗೆ ಸಖತ್ ಪ್ರತಿಫಲ ಸಿಕ್ಕಿದ್ದು, ‘ವಾರಿ’ಯರ್ ಹೃತಿಕ್ ಯಶಸ್ಸಿನ ಖುಷಿಯಲ್ಲಿದ್ದಾರೆ.

Hrithik’s transformation to KABIR

The star we know, the struggle we don’t! Hrithik’s transformation to KABIR is nothing less than inspiring.

Posted by ভক্তের ভগবান হৃতিক রোশন – God Of The Devotees Hrithik Roshan on Thursday, October 10, 2019

 

ತೆರೆ ಮೇಲೆ ಬರೋಕೆ ರೆಡಿಯಾದ್ರು ಸೈನಾ..!

0

ಸಚಿನ್​ ಎ ಬಿಲಿಯನ್​ ಡ್ರೀಮ್ಸ್​​, MS ಧೋನಿ – ಎ ಅನ್​ ಟೋಲ್ಡ್​ ಸ್ಟೋರಿ, ಮೇರಿ ಕೋಮ್​, ಭಾಗ್​ ಮಿಲ್ಕಾ ಭಾಗ್​, ದಂಗಲ್​ ಇವೆಲ್ಲಾ ಬಾಲಿವುಡ್​ ಅಂಗಳದಲ್ಲಿ ಧೂಳೆಬ್ಬಿ ಕ್ರಿಡಾಪಟುಗಳ ಜೀವನ ಕಥನಗಳು. ಕೇವಲ ಗಾಸಿಪ್​ಗಳಿಂದಲೇ ಸುದ್ದಿಯಾಗುತ್ತಿದ್ದ ಚಿತ್ರರಂಗ ಹಾಗೂ ಕ್ರೀಡಾ ಜಗತ್ತು ಬಯೋಪಿಕ್​ಗಳ ಮೂಲಕ ಪ್ರೇಕ್ಷಕರನ್ನು ರಂಜಿಸ್ತಾ ಇವೆ. ಇದೀಗ ಈ ಸಾಲಿಗೆ ಸೇರಲು ಹೊಸ ಚಿತ್ರವೊಂದು ಸಜ್ಜಾಗಿದೆ.
ಯೆಸ್​​..! ಒಂದರ ಹಿಂದೊಂದರಂತೆ ಕ್ರೀಡಾಪಟುಗಳ ಜೀವನಾಧಾರಿತ ಸಿನಿಮಾಗಳು ಯಶಸ್ಸು ಕಾಣ್ತಾ ಇದ್ದಂತೆ, ಸೈನಾ ನೆಹ್ವಾಲ್​ ಬದುಕನ್ನ ಆಧರಿಸಿದ ಚಿತ್ರವೊಂದು ಸೆಟ್ಟೇರಿದೆ. ಬ್ಯಾಡ್ಮಿಂಟನ್​ ಅಂಗಳದಲ್ಲಿ ವಿಶಿಷ್ಠ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿರುವ ಸೈನಾ ಜೀವನ ತೆರೆ ಮೇಲೆ ಬರಲು ಸಜ್ಜಾಗಿದೆ. ಚಿತ್ರದಲ್ಲಿ ಸೈನಾ ಪಾತ್ರದಲ್ಲಿ ಪರಿಣಿತಿ ಚೋಪ್ರಾ ಕಾಣಿಸಿಕೊಳ್ಳಲಿದ್ದು, ಪಾತ್ರಕ್ಕಾಗಿ ವರ್ಕೌಟ್​ ಆರಂಭಿಸಿದ್ದಾರೆ.
ಈಗಾಗಲೇ ಪಾತ್ರಕ್ಕಾಗಿ ಪರಿಣಿತಿ ಚೋಪ್ರಾ ಬ್ಯಾಡ್ಮಿಂಟನ್​ ಅಂಗಳದಲ್ಲಿ ಬೆವರು ಹರಿಸ್ತಾ ಇದ್ದಾರೆ. ಬ್ಯಾಡ್ಮಿಂಟನ್​ ಪಾತ್ರಧಾರಿಯಾಗಿ ಮಿಂಚಲು ಅಭ್ಯಾಸ ನಡೆಸ್ತಾ ಇರುವ ಚಿತ್ರವೊಂದನ್ನ ಪರಿಣಿತಿ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಈ ಪೋಟೋ ಇದೀಗ ಸಖತ್​ ವೈರಲ್​ ಆಗ್ತಿದೆ. ಇಷ್ಟೇಅಲ್ಲ…ಈ ಚಿತ್ರವನ್ನ ಸ್ವತಃ ಸೈನಾ ನೆಹ್ವಾಲ್​ ಕೂಡ ಶೇರ್​ ಮಾಡಿದ್ದು, ಚಿತ್ರ ತಂಡಕ್ಕೆ ಶುಭಾಶಯ ಕೋರಿದ್ದಾರೆ.

ಅಮೂಲ್​ ಗುಪ್ತ್​​ ನಿರ್ದೇಶನದ ಈ ಚಿತ್ರ 2018ರ ಸಪ್ಟೆಂಬರ್​ನಲ್ಲೇ ಸೆಟ್ಟಿರೀತ್ತು. ಎಲ್ಲಾ ಅಂದೂಕೊಂಡಂತೆ ಆಗಿದ್ರೆ, ಸೈನಾ ನೆಹ್ವಾಲ್​ ಪಾತ್ರದಲ್ಲಿ ಶ್ರದ್ಧಾ ಕಪೂರ್​ ಕಾಣಿಸಿಕೊಳ್ಳಬೇಕಿತ್ತು. ಚಿತ್ರದ ಮೊದಲ ಪೋಟೋಶೂಟ್​ನಲ್ಲಿಯೂ ಶ್ರದ್ಧಾ ಕಪೂರ್​ ಕಾಣಿಸಿಕೊಂಡಿದ್ರು. ಆದ್ರೆ, ಕಾರಣಾಂತರಗಳಿಂದ ಈ ಚಿತ್ರದ ಶೂಟಿಂಗ್​ ನಿಂತಿತ್ತು. ಇದೀಗ ಚಿತ್ರದ ಶೂಟಿಂಗ್​ ಪುನಾರಂಭವಾಗಿದೆ. ಆದ್ರೆ, ಸ್ಟಾರ್​ ಶೆಟ್ಲರ್​​ ಪಾತ್ರದಲ್ಲಿ ಪರಿಣಿತಿ ಚೋಪ್ರಾ ಕಾಣಿಸಿಕೊಳ್ಳಲಿದ್ದಾರೆ.
 ಬಾಲಿವುಡ್​​ ಅಂಗಳದಲ್ಲಿ ಈಗಾಗಲೇ ತೆರೆ ಕಂಡಿರುವ ಬಯೋಪಿಕ್​ಗಳು ಭರ್ಜರಿ ಯಶಸ್ಸು ಕಂಡಿವೆ. ಮಾಸ್ಟರ್​​ ಬ್ಲಾಸ್ಟರ್​​​ ಸಚಿನ್​ ತೆಂಡೂಲ್ಕರ್​ ಜೀವನಾಧಾರಿತ ಸಚಿನ್​ ಎ ಬಿಲಿಯನ್​ ಡ್ರೀಮ್ಸ್​​ ಹಾಗೂ ಟೀಮ್​ಇಂಡಿಯಾದ ಮಿಸ್ಟರ್​​ ಕೂಲ್​ ಎಮ್​ಎಸ್​​ ಧೋನಿ ಜೀವನಾಧಾರಿತ MS ಧೋನಿ ದ ಅನ್​ಟೋಲ್ಡ್​​ ಸ್ಟೋರಿ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡಿದ್ವು.
ಕೇವಲ.. ಕ್ರಿಕೆಟ್​​ ಆಟಗಾರರನ್ನ ಆಧರಿಸಿದ ಚಿತ್ರಗಳು ಮಾತ್ರವಲ್ಲ… ಭಾರತದ ಹೆಮ್ಮೆಯ ರನ್ನರ್​ ಮಿಲ್ಖಾ ಸಿಂಗ್​, ಮಣಿಪುರದ ಗಟ್ಟಿಗಿತ್ತಿ ಮೇರಿ ಕೋಮ್​ ಚಿತ್ರಗಳು ಭರ್ಜರಿ ಯಶಸ್ಸು ಕಂಡಿವೆ. ಅದರಲ್ಲೂ ಮೇರಿ ಕೂಮ್​ ಪಾತ್ರದಾರಿಯಾಗಿ ಬಣ್ಣ ಹಚ್ಚಿದ್ದ ಪ್ರಿಯಾಂಕ ಚೋಪ್ರಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ರು.
ಇದೀಗ ವಿಶ್ವದ ಮಾಜಿ ನಂಬರ್​ ಒನ್​ ಶಟ್ಲರ್​​ ಪಾತ್ರದಲ್ಲಿ ಪ್ರಿಯಾಂಕ ಚೋಪ್ರಾರ ತಂಗಿ ಪರಿಣಿತಿ ಬಣ್ಣ ಹಚ್ಚಲಿದ್ದಾರೆ. ಸ್ಪೋರ್ಟ್ಸ್ ಥೀಮ್ ನಲ್ಲಿ ಬಾಲಿವುಡ್ ನಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ವೈಯಕ್ತಿಕ ಮಿತಿ ಮತ್ತು ಸನ್ನಿವೇಶಗಳನ್ನ ಮೀರಿ ರಾಷ್ಟ್ರಕ್ಕಾಗಿ ಸಾಧಿಸಿದ ಕ್ರೀಡಾಪಟುಗಳ ಬದುಕು ನಿಜಕ್ಕೂ ರೋಮಾಂಚನಕಾರಿಯಾಗಿರುತ್ತೆ. ಹೀಗಾಗಿಯೇ, ಹತ್ತು ಹಲವು ದಾಖಲೆಗಳು, ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡ ದಿಗ್ಗಜರ ಸಾಧನೆಯ ಹಿಂದಿನ ಹಾದಿಯನ್ನ ನೋಡಲು ಅಭಿಮಾನಿಗಳ ಹೆಚ್ಚು ನಿರೀಕ್ಷೆಯಿಂದಲೇ ಕಾಯ್ತಾ ಇರ್ತಾರೆ.
 ಒಟ್ಟಿನಲ್ಲಿ, ಒಲಂಪಿಕ್​ನಲ್ಲಿ ಭಾರತವನ್ನ 3 ಬಾರಿ ಪ್ರತಿನಿಧಿಸಿದ ವಿಶ್ವಮಟ್ಟದಲ್ಲಿ ಭಾರತಕ್ಕೆ ಕೀರ್ತಿ ತಂದ ಸೈನಾ ನೆಹ್ವಾಲ್​​ ಸಾಹಸಗಾಥೆ ಶೀಘ್ರದಲ್ಲೇ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ಸೈನಾ ಜೀವನದ ಕಹಾನಿಯನ್ನ ತಿಳಿಯಲು ಅಭಿಮಾನಿಗಳೂ ಉತ್ಸುಕರಾಗಿದ್ದಾರೆ. ಅಭಿಮಾನಿಗಳ ಅಪಾರ ನಿರೀಕ್ಷೆಯನ್ನ ಚಿತ್ರತಂಡ ಹೇಗೆ ಪೂರೈಸಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

ದಬಾಂಗ್​-3 : ಕಿಚ್ಚನ ಫಸ್ಟ್​ ಲುಕ್​ ರಿಲೀಸ್ ಮಾಡಿದ ಸಲ್ಲು!

0

ಬಾಲಿವುಡ್​ನ ಬಹು ನಿರೀಕ್ಷಿತ ಸಿನಿಮಾ ದಬಾಂಗ್​ 3 ಚಿತ್ರತಂಡದಿಂದ ಅಭಿಮಾನಿಗಳಿಗೆ ಒಂದರ ಮೇಲೊಂದು ಗುಡ್​ ನ್ಯೂಸ್​ ಸಿಕ್ತಾನೆ ಇದೆ. ಇದೀಗ ಮತ್ತೊಂದು ಗಿಫ್ಟ್​ ಸಿಕ್ಕಿದ್ದು ವಿಶೇಷವಾಗಿ ಸ್ಯಾಂಡಲ್​ವುಡ್​ ಬಾದ್​ ಶಾ ಸುದೀಪ್​ ಅಭಿಮಾನಿಗಳು ಗಿಫ್ಟ್​ ನೋಡಿ ಫುಲ್​ ಖುಷಿಯಾಗಿದ್ದಾರೆ.

ಭುದೇವ್​​ ನಿದೇರ್ಶನದ ದಬಾಂಗ್​-3 ಸಿನಿಮಾ ಸೆಟ್ಟೇರಿದಲ್ಲಿಂದಲೂ ಸದ್ದು ಮಾಡ್ತಾನೆ ಇದೆ. ಕಳೆದ ತಿಂಗಳು ಈ ಚಿತ್ರದ ಟ್ರೈಲರ್​​ ರಿಲೀಸ್​ ಆಗಿದ್ದು, ಕನ್ನಡದಲ್ಲಿ ಸಲ್ಮಾನ್​ ಡಬ್​ ಮಾಡಿರುವ ವಿಷಯ ಬಾರಿ ಸದ್ದು ಮಾಡಿತ್ತು.

ದಬಾಂಗ್​ ಹಾಗೂ ದಬಾಂಗ್​​​-2 ರಲ್ಲಿ ಚುಲ್​​​ಬುಲ್ ಪಾಂಡೆ ಆಗಿ ನಟಿಸಿದ್ದ ಸಲ್ಮಾನ್ ಇಲ್ಲೂ ಅದೇ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ಟೀಸರ್​ ಕೂಡ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿತ್ತು. ಸದ್ಯದ ವಿಷಯ ಅಂದ್ರೆ ದಬಾಂಗ್​ 3 ಚಿತ್ರದ ಶೂಟಿಂಗ್​ ಕಂಪ್ಲೀಟ್​ ಆಗಿ ಚಿತ್ರತಂಡ ಪೋಸ್ಟ್​ ಪ್ರೊಡಕ್ಷನ್​​​ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ವಿಷಯ ತಿಳಿದ ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ.

ವಿನೋದ್ ಖನ್ನಾ ಜನ್ಮದಿನದ ನೆನಪಲ್ಲಿ ಸಲ್ಮಾನ್ ಖಾನ್ ಟ್ವೀಟ್​ ಮಾಡುವ ಮೂಲಕ ಗೌರವ ಅರ್ಪಿಸಿದ್ದಾರೆ. ಶೂಟಿಂಗ್ ಕಡೆಯ ದಿನ ತಾವು ಮಾತನಾಡಿರುವ ವಿಡಿಯೋವೊಂದನ್ನು ಸಲ್ಮಾನ್ ಖಾನ್ ತಮ್ಮ ಟ್ವೀಟರ್​​ನಲ್ಲಿ ಅಪ್​ಲೋಡ್​ ಮಾಡಿದ್ದಾರೆ.

ಸಲ್ಮಾನ್ ಖಾನ್​​​​​​ ತಮ್ಮ ಟ್ವಿಟರ್​ ಖಾತೆ ಹೆಸರನ್ನು ಚುಲ್​​ಬುಲ್ ಪಾಂಡೆ ಎಂದು ಬದಲಿಸಿಕೊಂಡಿದ್ದು ತಮ್ಮ ಟ್ವಿಟರ್​​ ಸುದೀಪ್ ಫಸ್ಟ್​​​ಲುಕ್ ಪೋಟೋವನ್ನು ಶೇರ್​​​​​​ ಮಾಡಿದ್ದಾರೆ. ಬಲ್ಲಿ ಪಾತ್ರ ಮಾಡಿರುವ ಕಿಚ್ಚ ಸುದೀಪ್ ಅವರನ್ನು ನಿಮಗೆ ಪರಿಚಯ ಮಾಡಿಸುತ್ತಿದ್ದೇನೆ ಎಂದು ಸಲ್ಮಾನ್ ಫೋಟೋ ಜೊತೆಗೆ ಕ್ಯಾಪ್ಷನ್ ನೀಡಿದ್ದಾರೆ. ಸಲ್ಲು ರಿಲೀಸ್ ಮಾಡಿರುವ ಕಿಚ್ಚನ ಫಸ್ಟ್​ ಲುಕ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. 

ಸಲ್ಮಾನ್ ಖಾನ್ ಫಿಲಮ್ಸ್ ಹಾಗೂ ಅರ್ಬಾಜ್ ಖಾನ್ ಪ್ರೊಡಕ್ಷನ್ ಬ್ಯಾನರ್ ಅಡಿ ಡ್ಯಾನ್ಸಿಂಗ್​ ಸ್ಟಾರ್ ಪ್ರಭುದೇವ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಡಿಸೆಂಬರ್ 20 ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು ಸಲ್ಮಾನ್ ಹಾಗೂ ಸುದೀಪ್ ಇಬ್ಬರನ್ನೂ ತೆರೆ ಮೇಲೆ ಒಟ್ಟಿಗೆ ನೋಡಲು ಅಭಿಮಾನಿಗಳು ವ್ಹೇಟ್ ಮಾಡ್ತಿದ್ದಾರೆ. 

 ಈ ಹಿಂದೆ ಸುದೀಪ್​, ಸಲ್ಮಾನ್ ಖಾನ್, ಪ್ರಭುದೇವ್​ ಡ್ಯಾನ್ಸ್ ಮಾಡಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್​​ ಆಗಿತ್ತು. ಇನ್ನು ಇದೀಗ  ಸಿನಿಮಾದಲ್ಲೇ ಈ ದಿಗ್ಗಜರು ಒಟ್ಟಾಗಿ ಕಾಣಿಸಿಕೊಂಡಿರೋದ್ರಿಂದ ಚಿತ್ರ ಎಷ್ಟರ ಮಟ್ಟಿಗೆ ಹಿಟ್ ಆಗುತ್ತೆ ಅನ್ನೋದು ಕುತೂಹಲ. 

 

 

 

 

 

 

 

Popular posts