Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Monday, December 16, 2019

ವಿಜಯ್ ದೇವರಕೊಂಡ ನೋವನ್ನೂ ಸೆಲೆಬ್ರೇಟ್​ ಮಾಡಿ ಅಂದಿದ್ಯಾಕೆ?

0

ಇತ್ತೀಚೆಗೆ ಟಾಲಿವುಡ್​ನಲ್ಲಿ ಬೇಡಿಕೆಯಲ್ಲಿರುವ ನಟ ವಿಜಯ್ ದೇವರಕೊಂಡ ನೋವನ್ನೂ ಸೆಲಬ್ರೇಟ್​ ಮಾಡಿ ಅಂತ ಇನ್​​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ. ಇದೇನು ಹೀಗೆ ಬರೆದಿದ್ದಾರೆ ಅಂತ ಆಶ್ಚರ್ಯ ಆಗ್ತಿದ್ಯಾ..? “ನೋವನ್ನು ಸೆಲೆಬ್ರೇಟ್​ ಮಾಡಿ, ಯಾಕೆ ಅಂದ್ರೆ ಯಾವುದೂ ಸುಲಭವಾಗಿ ಸಿಗಲ್ಲ” ಅಂತ ಕಾರಣ ಕೊಟ್ಟಿದ್ದಾರೆ ವಿಜಯ್.

ವಿಜಯ್ ತಮ್ಮ ಹೊಸ ಚಿತ್ರ ‘ಡಿಯರ್​ ಕಾಮ್ರೆಡ್​’ ಫೈಟಿಂಗ್ ಸೀನ್​ ಶೂಟಿಂಗ್​ ವೇಳೆ ಎಡಗೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಆಂಧ್ರದ ಕಾಕಿನಾಡಿನಲ್ಲಿ ‘ಡಿಯರ್ ಕಾಮ್ರೆಡ್ ಚಿತ್ರೀಕರಣದಲ್ಲಿ ಮೂರು ವಾರಗಳಿಂದ ವಿಜಯ್ ಬ್ಯುಸಿಯಾಗಿದ್ದರು. ಶೂಟಿಂಗ್ ವೇಳೆ ಫೈಟಿಂಗ್ ದೃಶ್ಯ ಚಿತ್ರಿಕರಿಸುವಾಗ ಎಡಗೈಗೆ ಬಲವಾಗಿ ಪೆಟ್ಟು ಬಿದ್ದಿದೆ. ವಿಜಯ್ ತಾವು ಗಾಯಗೊಂಡಿರುವ ವಿಷಯವನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಿತ್ರದ ಜೊತೆಗೇ “ನಿಮ್ಮ ನೋವನ್ನೂ ಸೆಲೆಬ್ರೇಟ್ ಮಾಡಿ. ಯಾಕಂದ್ರೆ ಜೀವನದಲ್ಲಿ ಯಾವುದೂ ಸುಲಭವಾಗಿ ಬರಲ್ಲ” ಅಂತ ಬರೆದುಕೊಂಡಿದ್ದಾರೆ.

ಘಟನೆಯಲ್ಲಿ ಹೆಚ್ಚಿಗೆ ಅಪಾಯವೇನು ಸಂಭವಿಸಿಲ್ಲ. ಸದ್ಯ ವೈದ್ಯರು ಒಂದು ದಿನದ ಮಟ್ಟಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ವಿಜಯ್​ಗೆ ಸೂಚಿಸಿದ್ದಾರೆ. ಗೀತಾ ಗೋವಿಂದಂ ಚಿತ್ರದ ಯಶಸ್ಸಿನ ಬಳಿಕ  ವಿಜಯ್ ಹಾಗೂ ರಶ್ಮಿಕಾ ‘ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ಮತ್ತೆ ಜೊತೆಯಾಗಿ  ತೆರೆ ಹಂಚಿಕೊಳ್ಳುತ್ತಿದ್ದಾರೆ.

ಪವನ್ ಕಲ್ಯಾಣ್ ಯಾವ್ದೇ ಸಿನಿಮಾ ಮಾಡಲ್ಲ.. ಅಸಲಿ ಕಾರಣ ಇದು..!

0

ಲೋಕಸಭಾ ಎಲೆಕ್ಷನ್ ಫಸ್ಟ್…ಆಮೇಲೇನಿದ್ರು ಸಿನಿಮಾ ಬಗ್ಗೆ ಯೋಚನೆ ಮಾಡೋದು ಅಂತ ಟಾಲಿವುಡ್ ಸ್ಟಾರ್ ನಟ ಪವನ್ ಕಲ್ಯಾಣ್ ತಿಳಿಸಿದ್ದಾರೆ.
ಪವನ್ ಕಲ್ಯಾಣ್ ಹೊಸ ಸಿನಿಮಾಕ್ಕೆ ಸಹಿ ಮಾಡಿದ್ದಾರೆ. ಎಲೆಕ್ಷನ್ ಗೂ ಮುನ್ನ ಸಿನಿಮಾವೊಂದರಲ್ಲಿ ನಟಿಸ್ತಾರೆ ಅಂತ ಸುದ್ದಿ ಹಬ್ಬಿತ್ತು. ಈ ಬಗ್ಗೆ ಸ್ವತಃ ಪವನ್ ಕಲ್ಯಾಣ್ ಅವರೇ ಸ್ಪಷ್ಟನೆ ನೀಡಿದ್ದಾರೆ.
‘ನಾನು ಹೊಸ ಚಿತ್ರಕ್ಕೆ ಸಹಿ ಮಾಡಿದ್ದೀನಿ ಅಂತ ಸುದ್ದಿಯೊಂದು ಹರಿದಾಡ್ತಿದೆ. ಇದು ಶುದ್ಧ ಸುಳ್ ಸುದ್ದಿ. ನಂಗೆ ಸಿನಿಮಾದಲ್ಲಿ ನಟಿಸೋಕೆ ಸದ್ಯಕ್ಕೆ ಟೈಮ್ ಇಲ್ಲ. ನಾನು ಲೋಕಸಭಾ ಎಲೆಕ್ಷನ್ ಮುಗಿಯೋ ತನಕ ಯಾವ್ದೇ ಸಿನಿಮಾ ಮಾಡಲ್ಲ. ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿ ಕೊಳ್ಳೋಕೆ ಉದ್ದೇಶಿಸಿದ್ದೇನೆ” ಅಂತ ತಿಳಿಸಿದ್ದಾರೆ.
ಪವನ್ ಕಲ್ಯಾಣ್ 2014ರಲ್ಲಿ ಜನಸೇನಾ ಪಾರ್ಟಿ ಸ್ಥಾಪನೆ ಮೂಲಕ ರಾಜಕೀಯರಂಗಕ್ಕೆ ಅಧಿಕೃತ ಎಂಟ್ರಿಕೊಟ್ಟಿದ್ದರು. 2018 ಜನವರಿ 9ರಂದು ರಿಲೀಸ್ ಆದ ‘ಅಜ್ಞಾತವಾಸಿ’ ಪವನ್ ಕಲ್ಯಾಣ್ ಅವರ ಕೊನೇ ಸಿನಿಮಾ ಆಗಿದೆ.

ಸ್ಯಾಂಡಲ್ ವುಡ್ ಗಿಂತ ಟಾಲಿವುಡ್ ನಲ್ಲೇ ಹೆಚ್ಚಿದೆ ‘ಕೆಜಿಎಫ್’ ಹವಾ..!

0

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಚಿತ್ರದ ಟ್ರೇಲರ್ ಲಾಂಚ್ ಆಗಿದೆ. ರೆಬಲ್ ಸ್ಟಾರ್ ಅಂಬರೀಶ್ 5 ಭಾಷೆಗಳಲ್ಲಿರೋ ಟ್ರೇಲರ್ ಅನ್ನು ರಿಲೀಸ್ ಮಾಡಿದ್ರು.
ಟ್ರೇಲರ್ ಲಾಂಚ್ ಮಾಡಿದ ಅಂಬರೀಶ್, ಕೆಜಿಎಫ್ ಬರೀ ಕರ್ನಾಟಕ ಮಾತ್ರವಲ್ಲ. ಇಡೀ ಪ್ರಪಂಚ ಸಿನಿಮಾವನ್ನು ಗುರುತಿಸುತ್ತೆ. ಸಿನಿಮಾ ಮಾಡುವಾಗ, ಪ್ರತಿ ಟೈಟಲ್ ಗಳಿಗೂ ಅದರದ್ದೇ ಅರ್ಥ ಇರುತ್ತೆ. ಆದ್ರೆ ಇದೀಗ ಅದು ಬದಲಾಗಿದೆ. ಕೆಜಿಎಫ್ ಅಂದ್ರೆ ಕೋಲಾರದ ಕೆಜಿಎಫ್ ಗೋಲ್ಡ್ ಅಂತ ಮನಸ್ಸಿಗೆ ಬರುತ್ತೆ. ಆದ್ರೆ ಈ ಕೆಜಿಎಫ್ ಸ್ವಲ್ಪ ವಿಭಿನ್ನವಾಗಿದೆ ಅಂದ್ರು. ಟ್ರೇಲರ್ ಬಹಳಾ ಕುತೂಹಲ ಹೆಚ್ಚಿಸಿದೆ, ಯಶ್ ಮತ್ತು ಅವ್ರ ತಂಡಕ್ಕೆ ಶುಭವಾಗಲಿ ಅಂತ ಹೇಳಿದ್ರು.
ಬಾಲಿವುಡ್ ಡೈರೆಕ್ಟರ್ ಫರಾನ್ ಅಕ್ತಾರ್, ತಮಿಳು ನಟ ವಿಶಾಲ್ ಸೇರಿದಂತೆ ಪರ ಭಾಷೆಯ ಸ್ಟಾರ್ ಗಳೂ ಕೂಡ ಕೆಜಿಎಫ್ ಗೆ ವಿಶ್ ಮಾಡಿದ್ದಾರೆ.
ಪ್ರಶಾಂತ್ ನೀಲು ಆ್ಯಕ್ಷನ್ ಕಟ್ ಹೇಳಿರೋ ಕೆಜಿಎಫ್ ಕನ್ನಡ, ತಮಿಳು, ಹಿಂದಿ, ತೆಲುಗು, ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ 5 ಭಾಷೆಗಳಲ್ಲೂ ಟ್ರೇಲರ್ ರಿಲೀಸ್ ಆಗಿದೆ. ವಿಶೇಷವೆಂದ್ರೆ ಟ್ರೇಲರ್ ಕನ್ನಡಕ್ಕಿಂತ ವೇಗವಾಗಿ ತೆಲುಗಿನಲ್ಲಿ ಓಡ್ತಿದೆ. ರಿಲೀಸ್ ಆಗಿ ಗಂಟೆ ಆಗುವ ಮುನ್ನ ಕನ್ನಡಲ್ಲಿ ಸುಮಾರು 24 ಸಾವಿರ ಮಂದಿ ವೀಕ್ಷಣೆ ಮಾಡಿದ್ದು, ತೆಲುಗಿನಲ್ಲಿ 1ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

Popular posts