Saturday, May 30, 2020

ನಟಿಯೊಂದಿಗೆ ಕ್ರಿಕೆಟಿಗ ಮನೀಷ್​ ಪಾಂಡೆ ಮದುವೆ ಫಿಕ್ಸ್?

0

ಟೀಮ್ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಮನೀಷ್ ಪಾಂಡೆಗೆ ಕಂಕಣಭಾಗ್ಯ ಕೂಡಿ ಬಂದಿದೆ. ಸ್ಟಾರ್ ಕ್ರಿಕೆಟಿಗ ಪಾಂಡೆ ನಟಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ಕರ್ನಾಟಕ ಮೂಲದ ನಟಿ ಅಶ್ರಿತಾ ಶೆಟ್ಟಿಯೊಡನೆ ಮನೀಷ್ ಪಾಂಡೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಡಿ.2ರಂದು ಮುಂಬೈನಲ್ಲಿ ಇವರಿಬ್ಬರ ವಿವಾಹ ನೆರವೇರಲಿದೆ ಅಂತ ವರದಿಯಾಗಿದೆ. ಅಶ್ರಿತಾ ತುಳು ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಜನಪ್ರಿಯ ನಟ ಸಿದ್ಧಾರ್ಥ್​ ಜೊತೆ ಕಾಲಿವುಡ್​ನ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಉದಯಂ ಎನ್​​ಎಚ್​​ 4, ಒರು ಕನ್ನಿಯಂ ಮೂನು ಕಳವಾನಿಕಳುಂ ಅಶ್ರಿತಾ ನಟನೆಯ ಹಿಟ್ ಚಿತ್ರಗಳು.
ಇನ್ನು ಮನೀಷ್ ಪಾಂಡ ಸದ್ಯ ವಿಜಯ್ ಹಜಾರೆ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದು, ವೈಯಕ್ತಿಕವಾಗಿಯೂ ಸಾಲಿಡ್​ ಪರ್ಫಾರ್ಮೆನ್ಸ್ ನೀಡ್ತಿದ್ದಾರೆ.

‘ಸೈರಾ’ ಸಿನಿಮಾದ ಕನ್ನಡ ಟೀಸರ್ ಬಿಡುಗಡೆ – ಸಿನಿಮಾ ರಿಲೀಸ್ ಡೇಟ್ ಅನೌನ್ಸ್..!

0

ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹು ನಿರೀಕ್ಷಿತ ಸೈರಾ ನರಸಿಂಹ ರೆಡ್ಡಿ ಸಿನಿಮಾ ಕನ್ನಡದಲ್ಲೂ ತೆರೆಕಾಣುವುದು ಪಕ್ಕಾ ಆಗಿದೆ. ಇಂದು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಅಕ್ಟೋಬರ್ 2ರಂದು ಸಿನಿಮಾ ತೆರೆ ಕಾಣುತ್ತಿದ್ದು, ಬಿಡುಗಡೆಯಾಗಿರುವ ಪಂಚ ಭಾಷಾ ಟೀಸರ್​ಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಇನ್ನು ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ನಟಿಸಿದ್ದು ಕನ್ನಡದ ಅಭಿಮಾನಿಗಳು, ಚಿತ್ರರಸಿಕರು ಸಿನಿಮಾ ಬಿಡುಗಡೆಗೆ ವ್ಹೇಟ್ ಮಾಡ್ತಿದ್ದಾರೆ. ಸುದೀಪ್ ಅವರಲ್ಲದೆ ಅಮಿತಾಭ್​ ಬಚ್ಚನ್​, ವಿಜಯ್ ಸೇತುಪತಿ, ತಮನ್ನಾ, ನಯನಾತಾರ , ಜಗಪತಿ ಬಾಬು ಮತ್ತಿತರರು ಅಭಿನಯಿಸಿದ್ದಾರೆ.

ಬೆಂಗಳೂರಿನ ಈ ಚೆಲುವೆಯೇ ಆ ಸೂಪರ್ ಸ್ಟಾರ್ ನ ಫಸ್ಟ್ ಲವ್ವರ್!

0

ಲವ್ ಅನ್ನೋದೇ ಹಾಗೆ, ಯಾರಿಗೆ? ಯಾವಾಗ? ಎಲ್ಲಿ? ಹೇಗೆ? ಯಾಕೆ? ಯಾರ ಮೇಲೆ ಹುಟ್ಟುತ್ತೆ ಅಂತ ಹೇಳೋಕೇ ಯಾವ ಪ್ರೇಮ ಪಂಡಿತರಿಗೂ ಸಾಧ್ಯವಿಲ್ಲ. 

ಹಾಗೆಯೇ, ಆ’ಕಾಲ’ದಲ್ಲೇ ಈ  ಸೂಪರ್ ಸ್ಟಾರ್​ನ ಹೃದಯ ಕದ್ದಿದ್ದಳು  ಬೆಂಗಳೂರು ಚೆಲುವೆ. ಈ ನಟ ಪ್ರತಿಯೊಬ್ಬರಿಗೂ ಗೊತ್ತಿದ್ದಾರೆ. ಆದರೆ, ಅವರ ಫಸ್ಟ್ ಲವ್ ಸ್ಟೋರಿ ಮಾತ್ರ ಎಷ್ಟೋ ಜನರಿಗೆ ಗೊತ್ತಿಲ್ಲ.‌

ಆ ನಟ ಯಾರು? ಆ ಸುರಸುಂದರಾಂಗಿ ಯಾರಿರ್ಬಹುದು ಅಂತ ಯೋಚ್ನೆ ಶುರುವಾಯ್ತಾ..? ಈ ಸೂಪರ್ ಸ್ಟಾರ್ ಬೇರಾರು ಅಲ್ಲ. ತಮಿಳು ನಟ ರಜನಿಕಾಂತ್. ಸಿನಿಮಾ ಇಂಡಸ್ಟ್ರಿಗೆ ಕಾಲಿಡೋ‌ ಮೊದಲೇ ರಜನಿಕಾಂತ್ ಲವ್ ಆಗಿತ್ತು. ಆ ‘ಕಾಲ’ದ ಲವ್ ಸ್ಟೋರಿಯನ್ನು ಸ್ವತಃ ರಜನಿಕಾಂತ್ ಅವರೇ ಹೇಳಿದ್ದರು.‌ ನಿಮ್ಮಲ್ಲಿ ಕೆಲವರಿಗೆ ಇದು ಗೊತ್ತಿರ್ಬಹುದು? ಆದರೆ, ತುಂಬಾ ಜನರಿಗೆ ಗೊತ್ತಿರಲಿಕ್ಕಿಲ್ಲ. 

ಸೌತ್ ಇಂಡಿಯನ್ ಆರ್ಟಿಸ್ಟ್ಸ್‌ ಅಸೋಸಿಯೇಷನ್‌ ಮಲೇಷ್ಯಾದಲ್ಲೊಂದು ಪ್ರೋಗ್ರಾಂ ಮಾಡಿತ್ತು. ಅದರಲ್ಲಿ ರಜನಿಕಾಂತ್ ಕೂಡ ಭಾಗವಹಿಸಿದ್ರು.  ಅಲ್ಲಿ ಮಾತಾಡ್ತಾ  ತನ್ನ ಫಸ್ಟ್ ಲವ್ ಸ್ಟೋರಿನಾ ಬಿಚ್ಚಿಟ್ಟಿದ್ರು.

ನಿಮ್ಗೆ ಗೊತ್ತೇ ಇದೆ.‌ ರಜನಿಕಾಂತ್ ಹುಟ್ಟಿದ್ದು, ಬೆಳೆದಿದ್ದೆಲ್ಲಾ ಬೆಂಗಳೂರಲ್ಲೇ.‌ ಓದಿದ್ದು ಕೂಡ ಇಲ್ಲಿನ ಆಚಾರ್ಯ ಸ್ಕೂಲ್, ರಾಮಕೃಷ್ಣ ವಿದ್ಯಾಲಯದಲ್ಲಿ. ರಜನಿ ಅವರೇ ಹೇಳಿರುವಂತೆ ಅವರಿಗೆ ಸ್ಕೂಲ್ ಡೇಸ್ ನಲ್ಲೇ ಲವ್ ಆಗಿತ್ತು. ಅವಳು ಕನ್ನಡತಿಯೇ. ಅದೂ ಅಲ್ದೆ ಆಕೆ ಬೆಂಗಳೂರವಳೇ. ಆ ಹುಡ್ಗಿ ಮೇಲಾಗಿದ್ದ ಲವ್ ಅನ್ನು ರಜನಿಗೆ ಯಾವತ್ತಿಗೂ ಮರೆಯೋಕೆ ಆಗಲ್ವಂತೆ. ಆದ್ರೆ, ಆಕೆಯ ಹೆಸರೇನು ಅಂತ ರಜನಿ ಇವತ್ತಿಗೂ ಹೇಳಿಲ್ಲ. ಯಾವತ್ತೂ ಹೇಳಲ್ಲ ಅಂತಲೂ ಹೇಳಿದ್ದಾರೆ.

ವಿಜಯ್ ಕಿರಗಂದೂರ್ ರಿಯಲ್ ಸ್ಟಾರ್..!

0

 ಕೆಜಿಎಫ್ ನಲ್ಲಿ ರಾಕಿಂಗ್ ಸ್ಟಾರ್ ಯಶ್​ ಹೀರೋ ಅನ್ನೋದು  ಗೊತ್ತೇ ಇದೆ. ಯಶ್  ಖಡಕ್ ಖದರ್ ಗೆ  ಭಾರತೀಯ ಚಿತ್ರರಂಗವೇ ಸಲಾಂ ರಾಕಿಭಾಯ್ ಅಂದಿದೆ. ಕನ್ನಡ  ಮಾತ್ರವಲ್ಲದೆ ಇದೀಗ ಬಾಲಿವುಡ್​. ಟಾಲಿವುಡ್, ಕಾಲಿವುಡ್, ಮಾಲಿವುಡ್  ಯಶ್ ಸಿನಿರಂಗದ ‘ರಾಜಾಹುಲಿ’ ಅಂತ  ಶಹಬ್ಬಾಸ್ ಗಿರಿ ಕೊಡುತ್ತಿವೆ.  ಆದರೆ, ಕೆಜಿಎಫ್​ ಯಶಸ್ಸಿನ ಹಿಂದೆ ಬಹಳಷ್ಟು ತೆರೆಮರೆಯ ಹೀರೋಗಳಿದ್ದಾರೆ .

ಡೈರೆಕ್ಟರ್ ನೀಲ್ ಕೆಜಿಎಫ್ ಸ್ಟಾರ್

 ಕೆಜಿಎಫ್​ ನ ತೆರೆಮರೆಯ ಹೀರೋಗಳಂತ ಬಂದ್ರೆ ಈಗಾಗಲೇ ನಾವು ಹೇಳಿದಂತೆ ಡೈರೆಕ್ಟರ್ ಪ್ರಶಾಂತ್ ನೀಲ್ ಫಸ್ಟ್ ನೆನಪಾಗ್ತಾರೆ. ತನ್ನ 2ನೇ ಚಿತ್ರದಲ್ಲೇ ಕನ್ನಡ ಚಿತ್ರರಂಗದ ಬ್ರಾಂಡ್ ವ್ಯಾಲ್ಯುವನ್ನು ಹೆಚ್ಚಿಸಿದ ಪ್ರಶಾಂತ್ ನೀಲ್  ಅವರತ್ತ ಇವತ್ತು ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುತ್ತಿದೆ. ಯಾರ್ ಗುರೂ.. ಈ ಪ್ರಶಾಂತ್ ನೀಲ್..? ಎಲ್ಲಿಯವ್ರು. ಇವರ ಬ್ಯಾಗ್​ಗ್ರೌಂಡ್ ಏನು..? ಹಿಂದೆ ಯಾವೆಲ್ಲಾ ಮೂವಿಗಳನ್ನು ಮಾಡಿದ್ದಾರೆ ಅಂತ ತಿಳಿದುಕೊಳ್ಳುತ್ತಿದ್ದಾರೆ. ಎಷ್ಟೋ ಜನ ಪ್ರಶಾಂತ್ ನೀಲ್ ಅವರನ್ನು ಗೂಗಲ್​ ನಲ್ಲಿ ಹುಡುಕುತ್ತಿದ್ದಾರೆ.

ಸಲಾಂ ವಿಜಯ್ ಕಿರಗಂದೂರ್

ಡೈರೆಕ್ಟರ್​ ಪ್ರಶಾಂತ್ ನೀಲ್ ತಮ್ಮ ಮೊದಲ ಚಿತ್ರ ಉಗ್ರಂನಲ್ಲೇ ಭರವಸೆ ಮೂಡಿಸಿದ್ದು ನಿಜ. ಆದರೆ, ಎರಡನೇ  ಚಿತ್ರವನ್ನೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡ್ತಾರೆ ಅನ್ನೋ ಕಾನ್ಫಿಡೆನ್ಸ್ ಯಾರಿಗೆ ತಾನೆ ಇರುತ್ತೆ? ಸಿನಿ ಗೆಲುವು ಅನ್ನೋದು ನೀರಿನ ಮೇಲಿನ ಗುಳ್ಳೆ ತರ. ಎಂಥೆಂಥಾ ದೊಡ್ಡ ದೊಡ್ಡ ಡೆರೆಕ್ಟರ್ ಗಳ ಸಿನಿಮಾಗಳೇ  ನೆಲಕಚ್ಚಿದ ಉದಾಹರಣೆಗಳಿವೆ. ಹೀಗಿರುವಾಗ ಯುವ ಡೈರೆಕ್ಟರ್ ನ 2ನೇ ಸಿನಿಮಾಕ್ಕೆ  ಕೋಟಿ ಕೋಟಿ ಬಂಡವಾಳ ಸುರಿಯುವ ಧೈರ್ಯ ಮಾಡೋದು ಇದೆಯಲ್ಲಾ..? ಅದು ಹುಡುಗಾಟಿಕೆ ಅಲ್ಲ..!

 ಆದರೆ ‘ರಾಜಕುಮಾರ’ ವಿಜಯ್ ಕಿರಗಂದೂರ್ ಅವರನ್ನು ಈ ವಿಷಯದಲ್ಲಿ ಮೆಚ್ಚಲೇ ಬೇಕು. ಪ್ರಶಾಂತ್ ನೀಲ್ ಅವರ ಮೇಲೆ. ಅವರ ಕಥೆ ಮೇಲೆ ಹಾಗೂ ಮನೆಮಗ ‘ರಾಮಾಚಾರಿ’ ರಾಕಿಂಗ್​ ಸ್ಟಾರ್ ಮೇಲೆ ನಂಬಿಕೆ ಇಟ್ಟು 80 ಕೋಟಿ ರೂಪಾಯಿಯನ್ನು ಕೆಜಿಎಫ್​ ಗೆ ಸುರಿದಿದ್ದು ನಿಜಕ್ಕೂ ಹೆಮ್ಮೆ ಪಡಬೇಕಾದ ವಿಷಯ.

ವಿಜಯ್ ಕಿರಗಂದೂರ್ ಅವರು ಇಷ್ಟೊಂದು ದೊಡ್ಡ ಬಜೆಟ್ ಅನ್ನು ಕೆಜಿಎಫ್​ಗೆ ನೀಡದೇ ಇದ್ದಿದ್ದರೆ ಇವತ್ತು  ಸ್ಯಾಂಡಲ್​ವುಡ್ ನ ಈ ಕೆಜಿಎಫ್ ಅನ್ನೋ ಸಿನಿಮಾ ವರ್ಲ್ಡ್ ವೈಡ್ ಅಬ್ಬರಿಸೋಕೆ ಚಾನ್ಸೇ ಇರ್ತಿರ್ಲಿಲ್ಲ. ಫಸ್ಟ್ ಟೈಮ್ ಇನ್​ ದಿ ಹಿಸ್ಟರಿ ಕನ್ನಡದ ಸಿನಿಮಾವೊಂದು 5 ಭಾಷೆಗಳಲ್ಲಿ. ಅದರಲ್ಲೂ ಏಕಕಾಲದಲ್ಲಿ ರಿಲೀಸ್ ಆಗಿದೆ ಅಂದ್ರೆ ಅದು ಪ್ರೊಡ್ಸೂಸರ್ ವಿಜಯ್​ ಕಿರಂಗದೂರ್ ಅವರ ಸಾಹಸ ಅಂದ್ರೆ ತಪ್ಪಾಗಲ್ಲ.

 ಕಿರಂಗದೂರ್ ಕಥೆ ಓಕೆ, ಸ್ಯಾಂಡಲ್​ವುಡ್ ಆಚೆಗೆ ಯಾಕೆ ಅಂತ ಚಿಕ್ಕ ಬಜೆಟ್ ಮೂವಿಗೆ ಕೈ ಹಾಕಿ. ದೊಡ್ಡ ಸಿನಿಮಾ ಮಾಡುವ ಚಾಲೆಂಜ್ ಅನ್ನು ತನಗೆ ತಾನೇ ಸ್ವೀಕರಿಸದೇ ಇದ್ದಿದ್ದರೆ, ಕೆಜಿಎಫ್  ಈ ಮಟ್ಟದ ಯಶಸ್ಸು ಪಡೀತಾ ಇರಲಿಲ್ಲ.  ಸ್ಯಾಂಡಲ್​ವುಡ್ ಬ್ರಾಂಡ್​ ವ್ಯಾಲ್ಯೂ ಕೂಡ ಏಕಾಏಕಿ ಇಷ್ಟೊಂದು ಹೆಚ್ಚುತ್ತಿರಲಿಲ್ಲ. ಇದಕ್ಕಾಗಿ ನಾವು ಕೆಜಿಎಫ್ ರಿಯಲ್ ಸ್ಟಾರ್ ವಿಜಯ್ ಕಿರಗಂದೂರ್ ಅವರಿಗೆ ಬಿಗ್ ಸೆಲ್ಯೂಟ್ ಹೊಡಿಲೇ ಬೇಕು.

ಇನ್ನು ಈ ಕೆಜಿಎಫ್ ಗೆಲುವಿನಲ್ಲಿ ರಾಕಿಂಗ್ ಸ್ಟಾರ್ ಯಶ್,  ಚಿತ್ರಕ್ಕೆ ಬಣ್ಣ ಹಚ್ಚಿದ ಪ್ರತಿಯೊಬ್ಬರ ನಟನೆ, ಕಥೆ, ಚಿತ್ರಕಥೆ, ಸ್ಕ್ರೀನ್​ಪ್ಲೇ, ಚಿತ್ರ ನೆರೇಷನ್ ಎಲ್ಲದರ ಪಾತ್ರವೂ ಇದೆ. ಅಷ್ಟೇ ಅಲ್ಲ ಚಿತ್ರದ ಮೇಕಿಂಗ್ ಗೆ ಕಳೆದು ಹೋಗುತ್ತೀವಿ. ಭುವನ್ ಗೌಡ ಸಿನಿಮಾಟೋಗ್ರಫಿಯಂತೂ ಚಿಂದಿ. ರವಿ ಬಸ್ರೂರ್ ಅವರ ಸಂಗೀತ ಕೆಜಿಎಫ್ ಶಕ್ತಿ.  ಶ್ರೀಕಾಂತ್ ಅವರ ಎಡಿಟಿಂಗ್ ಕೂಡ ಸೂಪರ್.   ಟೆಕ್ನಿಕಲ್ ಆಗಿಯೂ ಸಿನಿಮಾ ಸಿಕ್ಕಾಪಟ್ಟೆ ರಿಚ್ ಆಗಿದೆ. ಹೀಗಾಗಿ ಕೆಜಿಎಫ್  ಟೀಮ್​ ನಲ್ಲಿ ದುಡಿದ ಪ್ರತಿಯೊಬ್ಬರೂ ಹೀರೋಗಳೇ… ಈ ತೆರೆಮರೆಯ ಹೀರೋಗಳಿಗೂ ನಮ್ಮದೊಂದು ಸಲಾಂ.

‘ಪದ್ಮಾವತಿ’ ರೆಕಾರ್ಡ್ ಬ್ರೇಕ್ ಮಾಡಿದ ತಲೈವಾ!

0

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 2.o ಸಖತ್ ಹವಾ ಎಬ್ಬಿಸಿದೆ. ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷೆಗೂ ಮೀರಿ ಸೌಂಡು ಮಾಡ್ತಿದೆ. ಹೀಗಿರುವಾಗಲೇ ರಜನಿಯಿಂದ ಅಭಿಮಾನಿಗಳಿಗೆ ಮತ್ತೊಂದು ಉಡುಗೊರೆ ಸಿಗ್ತಿದೆ… ಅದೂ ಸದ್ಯದಲ್ಲೇ.
ರಜನಿಕಾಂತ್‌ ಸಿನಿಮಾ ಬರುತ್ತೆ ಅಂದ್ರೆ ಸಾಕು, ಒಂದಲ್ಲಾ ಒಂದು ರೆಕಾರ್ಡ್ ಚಿಂದಿ ಆಗೋದು ಗ್ಯಾರೆಂಟಿ. ರಜನಿ ಸಿನಿಮಾಕ್ಕೆ ಹಾಕಿದ ಬಂಡವಾಳಕ್ಕಂತೂ ಪಕ್ಕಾ ಮೋಸ ಇಲ್ಲ..! ಇದೀಗ ಅದು ಮತ್ತೊಮ್ಮೆ ಪ್ರೂವ್ ಆಗಿದೆ. ರಜನಿ ಅಬ್ಬರಕ್ಕೆ ‘ಪದ್ಮಾವತಿ’ ರೆಕಾರ್ಡೇ ಉಡೀಸ್ ಆಗಿದೆ..!
ಸಂಜಯ್ ಲೀಲಾ ಬನ್ಸಾಲಿ ಆ್ಯಕ್ಷನ್ ಕಟ್ ಹೇಳಿದ್ದ ಸಿನಿಮಾ ‘ಪದ್ಮಾವತಿ’. ದೀಪಿಕಾ ಪಡುಕೋಣೆ , ರಣವೀರ್ ಸಿಂಗ್, ಶಾಹಿದ್ ಕಪೂರ್ ಅಭಿನಯದ ಈ ಚಿತ್ರ ರಿಲೀಸ್ ಆಗಿದ್ದು ಕಳೆದ ಜನವರಿ 25 ರಂದು. ಬಾಲಿವುಡ್ ನ ಈ ಸೂಪರ್ ಹಿಟ್ ಮೂವಿಗೆ ಪ್ರೊಡ್ಯೂಸರ್ ಸುರಿದಿದ್ದು 215 ಕೋಟಿ ರೂಪಾಯಿ. ನಂತರ ಖಜಾನೆಗೆ ಬಂದಿದ್ದು ಬರೋಬ್ಬರಿ 585 ಕೋಟಿ ರೂಪಾಯಿ..! ಇದೀಗ 2.o ಈ ರೆಕಾರ್ಡನ್ನು ಚಿಂದಿ ಮಾಡಿ‌ ಮುನ್ನುಗ್ಗಿದೆ. 2.o ‘ಪದ್ಮಾವತಿ’ ರೆಕಾರ್ಡ್ ಉಡೀಸ್ ಮಾಡಿದ್ದು, ರಜನಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಹೌದು, 2.o, ಕಾಲಿವುಡ್ ನ ಸೂಪರ್ ಹಿಟ್ ಸಿನಿಮಾ. ರಿಲೀಸ್ ಆಗಿದ್ದು ಮೊನ್ನೆ‌ ಮೊನ್ನೆ ಅಷ್ಟೇ..ಅಂದ್ರೆ, ಇದೇ ನವೆಂಬರ್ 29 ಕ್ಕೆ. ರಜನಿಕಾಂತ್, ಅಕ್ಷಯ್ ಕುಮಾರ್, ಆ್ಯಮಿ ಜಾಕ್ಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರೋ ಚಿತ್ರ.‌ ಇದು ಕೇವಲ 18 ದಿನಕ್ಕೆ 600 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಶಂಕರ್ ನಿರ್ದೇಶನದ ಈ ಚಿತ್ರದ ಬಜೆಟ್ 543ಕೋಟಿ ರೂ. ಈಗಾಗಲೇ 600 ಕೋಟಿ ಮೀರಿದ‌ ಕಲೆಕ್ಷನ್ ಮಾಡಿರೋ ಈ ಸಿನಿಮಾ ಹೆಚ್ಚು ಕಮ್ಮಿ 710 ಕೋಟಿಯನ್ನಂತೂ ತಲುಪುತ್ತೆ..!
ಸಂಕ್ರಾಂತಿಗೆ ರಜನಿ ‘ಪೆಟ್ಟಾ’ ಸೌಂಡ್: ಸಂಕ್ರಾಂತಿಗೆ ರಜನಿಕಾಂತ್ ಅವರ ಮತ್ತೊಂದು ಮೂವಿ ಬಾಕ್ಸ್ ಆಫೀಸಲ್ಲಿ ಸೌಂಡ್ ಮಾಡೋಕೆ ರೆಡಿಯಾಗಿದೆ. 2.0 ಸಕ್ಸಸ್ ಅಲೆಯಲ್ಲೇ ‘ಪೆಟ್ಟಾ’ ಸಿನಿಮಾ ರಿಲೀಸ್ ಆಗ್ತಿದೆ. ಕಾರ್ತಿಕ್ ಸುಬ್ಬರಾಜು ಈ ಪೆಟ್ಟಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ರಜನಿ ಅಂಡ್ ಟೀಮ್ ಅಭಿಮಾನಿಗಳಿಗೆ ‘ಪೆಟ್ಟಾ’ ಗಿಫ್ಟ್ ಕೊಡ್ತಿದೆ.
ಇನ್ನು, ಪೆಟ್ಟಾ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗ್ತಿದೆ.‌ಕರ್ನಾಟಕದಲ್ಲೂ ಮೂರು ಭಾಷೆಗಳಲ್ಲಿ ಮೂವಿ ರಿಲೀಸ್ ಆಗ್ತಿದ್ದು, ವಿತರಣಾ ಹೊಣೆಯನ್ನು ಕೆ.ವಿ.ಎಸ್ ಎಂಟರ್ ಪ್ರೈಸಸ್ ನ ಕೆ. ಸುಧಾಕರ್ ವಹಿಸಿಕೊಂಡಿದ್ದಾರೆ,
ಪೆಟ್ಟಾದಲ್ಲಿ ರಜನಿಕಾಂತ್ ತಮ್ಮ ರೆಗ್ಯುಲರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟೀಸರ್ ಮತ್ತು ಪೋಸ್ಟರ್ ನಿರೀಕ್ಷೆಯನ್ನು ಹೆಚ್ಚಿಸಿದೆ. ‌ಗಿರಿಜಾ ಮೀಸೆ ಹೊತ್ತ ರಜನಿ ಕೊಡೋ ಸ್ಮೈಲ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ರಜನಿ ಜೊತೆ ಸಿಮ್ರಾನ್, ತ್ರಿಷಾ ಕೃಷ್ಣನ್ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಒಟ್ನಲ್ಲಿ 2.o ಗೆಲುವಿನ ಗುಂಗಲ್ಲೇ ‘ಪೆಟ್ಟಾ’ ಬರ್ತಿದ್ದು, ರಜನಿ ಫ್ಯಾನ್ಸ್ ನ್ಯೂ ಇಯರ್ ಸಂಭಮ ಡಬಲ್ ಆಗಿದೆ.

ತಮಿಳಿನಲ್ಲಿ ‘ಶತ್ರುಗಳಿಗೆ ಆಶೀರ್ವಾದ’ ಮಾಡಲು ನೀನಾಸಂ ರೆಡಿ..!

0

ಸ್ಯಾಂಡಲ್​ ವುಡ್​ ನಟ, ನ್ಯಾಚುರಲ್ ಸ್ಟಾರ್ ನೀನಾಸಂ ಸತೀಶ್ ಕಾಲಿವುಡ್ ಗೆ ಎಂಟ್ರಿ ಕೊಟ್ಟಿರೋದು ಹಳೇ ಸುದ್ದಿ. ಹೊಸ ವಿಷ್ಯ ಏನಪ್ಪ ಅಂದ್ರೆ, ಸತೀಶ್ ಅವರ ತಮಿಳು ಡೆಬ್ಯು ಮೂವಿ ಪೋಸ್ಟರ್ ರಿಲೀಸ್ ಆಗಿದೆ. ಚಿತ್ರದ ಹೆಸರು ‘ಪಗೈವನಕ್ಕು ಅರುವಲ್ವೈ’ ಅಂತ. ಅಂದ್ರೆ, ಕನ್ನಡದಲ್ಲಿ ‘ಶತ್ರುಗಳಿಗೆ ಆಶೀರ್ವಾದ’ ಅಂತಾಗುತ್ತೆ..! ಹೀಗೆ ಸತೀಶ್ ತಮಿಳಿನಲ್ಲಿ ಶತ್ರುಗಳಿಗೆ ಆಶೀರ್ವಾದ ಮಾಡಲು ಹೊರಟಿದ್ದಾರೆ..!
‘ತಿರುಮನಂ ಎನ್ನುಂ ನಿಖ್ಖಾ’ ಖ್ಯಾತಿಯ ಅನೀಸ್ , ‘ಪಗೈವನಕ್ಕು ಅರುವಲ್ವೈ’ ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಈ ಸಿನಿಮಾಕ್ಕೆ ಷೇಕ್ಷಿಪಿಯರ್ ವಿರಚಿತ ಮ್ಯಾಕ್​ಬೆತ್ ನಾಟಕವೇ ಪ್ರೇರಣೆಯಂತೆ.
ಒಟ್ನಲ್ಲಿ ಕನ್ನಡದ ಸ್ಟಾರ್ ಗಳು ಪರಭಾಷೆಗಳಲ್ಲೂ ಸದ್ದು ಮಾಡ್ತಿರೋದು ಹೆಮ್ಮೆಯ ವಿಷಯವೇ ಸರಿ. ನೀನಾಸಂ ಸತೀಶ್ ಅವರ ಹೊಸ ಜರ್ನಿ ಹ್ಯಾಪಿಯಾಗಿ ಸಾಗಲಿ. ಸ್ಯಾಂಡಲ್ ವುಡ್ ನ್ಯಾಚುರಲ್ ಸ್ಟಾರ್ ಕಾಲಿವುಡ್ ನಲ್ಲೂ ಹೆಸರು ಮಾಡಲಿ ಅನ್ನೋದೇ ಅಭಿಮಾನಿಗಳ ಆಶಯ.

ರಜನಿಕಾಂತ್ ಮಗಳ ಎರಡನೇ ಮದ್ವೆ ಫಿಕ್ಸ್..!

0

ಸೂಪರ್ ಸ್ಟಾರ್ ರಜನಿಕಾಂತ್ ಮಗಳ ಎರಡನೇ ಮದ್ವೆ ಫಿಕ್ಸ್ ಆಗಿದೆ. ರಜನಿ ಪುತ್ರಿ ಸೌಂದರ್ಯ ನಟ ವಿಶಾಗನ್ ವನಗಮುಡಿ ಜೊತೆ ಎರಡನೇ ಮದ್ವೆ ಆಗ್ತಿದ್ದಾರೆ. ಉದ್ಯಮಿ ಅಶ್ವಿನ್ ಅನ್ನೋರನ್ನು 2010ರಲ್ಲಿ ಮದ್ವೆ ಆಗಿದ್ರು ಸೌಂದರ್ಯ. 2017ರಲ್ಲಿ ಅಶ್ವಿನ್ ಮತ್ತು ಸೌದರ್ಯ ವೈಯಕ್ತಿಕ ಕಾರಣದಿಂದ ಡಿವೋರ್ಸ್ ಪಡೆದಿದ್ರು. ಇದೀಗ ಸೌಂದರ್ಯ ವಿಶಾಖ್ ಖಾನ್ ಮದ್ವೆ ಫಿಕ್ಸ್ ಆಗಿದೆ. ವಿಶಾಗನ್ ಗೂ ಇದು ಎರಡನೇ ಮದ್ವೆ. ಜನವರಿಯಲ್ಲಿ ಇವರಿಬ್ಬರ ಮದ್ವೆ ನಡೆಯಲಿದೆ.

Popular posts