Friday, April 3, 2020

ಸ್ಲಿಮ್ ಆಗೋಕೆ ಸಿಂಪಲ್ ಟಿಪ್ಸ್

0

ನೀವು ಸಣ್ಣಗಾಗಲು ಶತ ಪ್ರಯತ್ನ ಪಟ್ಟಿದ್ದೀರ? ತೂಕವನ್ನು ಬೇಗ ಇಳಿಸಬೇಕೆಂದು ನಿಮಗೆ ಇಚ್ಛೆಯಿದ್ದು ಈ ಬಗ್ಗೆ ಪರಿಣಿತರಲ್ಲಿ ಕೇಳಿದ್ರೆ, ಅವರು ನೀಡೋ ಕಾಮನ್ ಉತ್ತರ ಅಂದ್ರೆ ಆಹಾರ ಕಡಿಮೆ ಮಾಡಿ, ವ್ಯಾಯಾಮ ಹೆಚ್ಚಿಸಿ ಅಂತ..! ಸ್ಲಿಮ್ ಆಗಲು ಸಿಕ್ಕಾಪಟ್ಟೆ ಹಣ ಖರ್ಚು ಮಾಡಿದ್ದೀರ? ನೀವು ಸ್ಲಿಮ್ ಆಗ್ಬೇಕೆ? ಅದಕ್ಕಿಲ್ಲಿದೆ ಸಿಂಪಲ್ ಟಿಪ್ಸ್. 

 ದೇಹದ ತೂಕವಿಳಿಸಲು ಇವನ್ನು ಸೇವಿಸಿ:

 1. ದಿನ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬೂದಗುಂಬಳ ಜ್ಯೂಸ್ ಅನ್ನು ಸೇವಿಸಿ. ಈರೀತಿ ಸೇವಿಸಿದರೆ ತಿಂಗಳಿಗೆ 2 ರಿಂದ 3 ಕೆಜಿಯವರೆಗೂ ತೂಕ ಇಳಿಸಬಹುದು.
 2. ದಿನ ನಿತ್ಯ ಕುಡಿಯುವ ನೀರಿಗೆ ನಿಂಬೆಹಣ್ಣು ಸೇರಿಸಿ ಕುಡಿದರೆ ದೇಹದ ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ದೇಹದಲ್ಲಿನ ಇಂಟಾಕ್ಸಿಕೆಂಟ್ಸ್​ ನ್ನು ಕೂಡ ಹೊರಹಾಕುತ್ತದೆ.
 3. ದಿನ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ನಿಂಬೆ ರಸ ಹಾಗು ಜೇನುತುಪ್ಪ ಸೇರಿಸಿ ಕುಡಿದರೆ ನಿಧಾನವಾಗಿ ದೇಹದಲ್ಲಿನ ಬೊಜ್ಜು ಕ್ರಮೇಣವಾಗಿ ಕರಗುತ್ತದೆ.
 4. ಗರಿಕೆ ಹುಲ್ಲಿನ ರಸ, ತುಳಸಿ ರಸ, ಬಿಳಿಎಳ್ಳಿನ ರಸ, ಶುಂಠಿ ರಸ ಎಲ್ಲವನ್ನು ಮಿಶ್ರಣ ಮಾಡಿ ಪ್ರತಿದಿನ ಒಂದು ಗ್ಲಾಸ್ ಕುಡಿಯುತ್ತಾ ಬಂದರೆ ಅಸಿಡಿಟಿ ಕಡಿಮೆಯಾಗುವುದರ ಜೊತೆಗೆ ದೇಹದ ತೂಕ ಇಳಿಸಲು ಸಹಾಯಮಾಡುತ್ತದೆ. ಅಲ್ಲದೆ ದೇಹವನ್ನು ತಂಪಾಗಿರಿಸುತ್ತದೆ.
 5. ಪ್ರತಿ ನಿತ್ಯ ಗ್ರೀನ್ ಟೀ ಸೇವಿಸಿದರೆ ದೇಹದ ತೂಕವನ್ನು ಕ್ರಮೇಣವಾಗಿ ಇಳಿಸಬಹುದು.
 6. ತರಕಾರಿ ಸಲಾಡ್..ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ.
 7. ಬೆಚ್ಚಗಿನ ನೀರಿಗೆ ನಿಂಬೆ ರಸ, ಪುದೀನ, ಜೀರಿಗೆ ಸೇರಿಸಿ ಕುಡಿಯುವುದರಿಂದ ದೇಹದ ತೂಕ ಇಳಿಸಬಹುದು.

ದೇಹದ ತೂಕಿವಿಳಿಸಲು ನಿಮ್ಮ ರುಟೀನ್ ಹೀಗಿರಲಿ:
1. ಮುಂಜಾನೆ ಅರ್ಧ ಗಂಟೆಯಿಂದ ಒಂದು ಗಂಟೆಯವರೆಗು ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.

 1. ದೇಹಕ್ಕೆ ಅವಶ್ಯಕ ಪೋಷಕಾಂಶವನ್ನು ನೀಡಲೇಬೇಕು.
 2. ಹಾಲು, ಧಾನ್ಯಗಳು, ಮೊಟ್ಟೆ, ಮತ್ತು ಫೈಬರ್ ಅಂಶವಿರುವ ತರಕಾರಿ ನಿಮ್ಮ ಆಹಾರದೊಂದಿಗಿರಲಿ.
 3. ತಿಂಡಿ ಹಾಗು ಊಟವನ್ನು ನಿಗದಿತ ಸಮಯಕ್ಕೆ ಮಾಡಲು ಅಭ್ಯಾಸ ಮಾಡಿಕೊಳ್ಳಿ.
 4. ಜಂಗ್ ಫುಡ್ಸ್, ಎಣ್ಣೆ ಪದಾರ್ಥಗಳನ್ನು ತಿನ್ನದಿರುವುದು ಒಳ್ಳೆಯದು.
 5. ಹಿತ ಮಿತವಾದ ಆಹಾರ ಸೇವನೆ ನಿಮ್ಮದಾಗಲಿ.
 6. ಹೆಚ್ಚು ನೀರು ಕುಡಿಯುವುದರಿಂದ ದೇಹದ ಬೊಜ್ಜು ಕರಗುತ್ತದೆ.
 7. ಒಂದೇ ಸಲ ಜಾಸ್ತಿ ತಿನ್ನುವುದರ ಬದಲು 2ಗಂಟೆಗೆ ಒಂದು ಸಲ ತನ್ನುವುದು ಒಳ್ಳೆಯದು.
 8. ದಿನಕ್ಕೆ 6 ರಿಂದ 7 ಗಂಟೆಯ ಕಾಲ ನಿದ್ರೆ ಮಾಡಲೇಬೇಕು. ನಿದ್ದೆಗೆಡುವುದರಿಂದಲೂ ದೇಹದ ತೂಕ ಹೆಚ್ಚುತ್ತದೆ.

 

 

 

 

 

ತೇಲುವ ಪೋಸ್ಟ್ ಆಫೀಸ್ ನೋಡಿದ್ದೀರಾ..?

0

ನಿಮ್ಗೆ ಗೊತ್ತಿರ್ಬಹುದು. ಇಡೀ ವಿಶ್ವದಲ್ಲಿ ಅತೀ ಹೆಚ್ಚು ಪೋಸ್ಟ್ ಆಫೀಸ್ ಇರೋ ದೇಶ ನಮ್ದು. ನಮ್ ಭಾರತದಲ್ಲಿ 1,54,965 ಪೋಸ್ಟ್ ಆಫೀಸ್ ಇವೆ. ಇಷ್ಟೊಂದು ಪೋಸ್ಟ್ ಆಫೀಸ್ ಗಳಲ್ಲಿ ಶೇ. 10.26 ಅಂದ್ರೆ 15,898 ಪೋಸ್ಟ್ ಆಫೀಸ್ ಗಳು ನಗರ ಪ್ರದೇಶಗಳಲ್ಲಿವೆ. ಬರೋಬ್ಬರಿ  ಶೇ. 89.74 ಅಂದ್ರೆ , 1,39,067 ಪೋಸ್ಟ್ ಆಫೀಸ್​​ಗಳು ಗ್ರಾಮೀಣ ಭಾಗಗಳಲ್ಲಿವೆ. ಸರಾಸರಿ ಲೆಕ್ಕ ನೋಡೋದಾದ್ರೆ ದೇಶದಲ್ಲಿ 1 ಪೋಸ್ಟ್ ಆಫೀಸ್ 7,753 ಜನರಿಗೆ ಸೇವೆ ಸಲ್ಲಿಸುತ್ತೆ.

ದೇಶದಲ್ಲಿ ಎಷ್ಟು ಪೋಸ್ಟ್ ಆಫೀಸ್ ಇದೆ. ಒಂದು ಪೋಸ್ಟ್ ಆಫೀಸ್ ಎಷ್ಟು ಮಂದಿಗೆ ಸೇವೆ ಒದಗಿಸುತ್ತೆ? ಅಂಕಿ-ಅಂಶದ ಕಥೆ ಬದಿಗಿರ್ಲಿ.‌ ಮಾಹಿತಿಗಿರ್ಲಿ ಅಂತ ಹೇಳಿದ್ವಿ ಅಷ್ಟೇ! ನಾವ್  ಹೇಳೋಕೆ ಹೊರಟಿರೋದು ವಿಶೇಷವಾದ ಪೋಸ್ಟ್ ಆಫೀಸ್ ಬಗ್ಗೆ. 

ಹೌದು, ಭಾರತದಲ್ಲಿ ತೇಲುವ ಪೋಸ್ಟ್ ಆಫೀಸ್ ಒಂದಿದೆ. ತೇಲುವ ಪೋಸ್ಟ್ ಆಫೀಸಾ..? ಹ್ಞೂಂ, ರೀ‌ ತೇಲುವ ಅಂಚೆ ಕಚೇರಿಯೇ.. ಜಮ್ಮು-ಕಾಶ್ಮಿರದ ಶ್ರೀನಗರದಲ್ಲಿ ಈ ತೇಲುವ ಪೋಸ್ಟ್ ಆಫೀಸ್ ಇರೋದು. ದಾಲ್ ಲೇಕ್​ಗೆ ಹೋದ್ರೆ ನೀವು ಈ ಪೋಸ್ಟ್ ಆಫೀಸ್ ನೋಡ್ಬಹುದು.‌ 2011ರ ಆಗಸ್ಟ್ ನಿಂದ ಇದು ಕಾರ್ಯಾರಂಭ ಮಾಡಿದೆ.‌ ಶ್ರೀನಗರದ ಕಡೆಗೆ ಹೋದ್ರೆ ಒಂದ್ಸಲ ಈ ಪೋಸ್ಟ್ ಆಫೀಸ್​ಗೆ ಹೋಗ್ಬನ್ನಿ. ಮಿಸ್ ಮಾಡ್ಬೇಡಿ.

ನೀವು ಗರಂ ಗರಂ ‘ತಂದೂರಿ ಚಹಾ’ ರುಚಿ ಕಂಡಿದ್ದೀರಾ..?

0

ಪ್ರತಿ ನಿತ್ಯ ಟೀ ಕುಡಿದೇ ಕುಡಿಯುತ್ತೇವೆ. ರೀಫ್ರೆಶ್ ಮೆಂಟ್ ಗೆ ಟೀ ಬೇಕೇ ಬೇಕು. ಟೀ ಕುಡಿದ್ರೆ ಒಂದು ರೀತಿಯ ಸ್ಟ್ರೆಸ್​ ಕಡಿಮೆ ಯಾಗತ್ತೆ. ಅದರಲ್ಲೂ ಮಸಾಲ ಟೀ ,ಲೆಮನ್ ಟೀ, ಬ್ಲಾಕ್ ಟೀ ಹೀಗೆ ಹಲವಾರು ಬಗೆಯ ಚಹಾ ಟೇಸ್ಟ್ ಮಾಡಿರ್ತೀವಿ.
ಆದ್ರೆ, ಎಲ್ಲಾದರೂ ‘ತಂದೂರಿ ಚಾಹಿ’ ಕುಡಿದಿದ್ದೀರಾ? ಈ ಸ್ಪೆಷಲ್ ಟೀಗಾಗಿ ನೀವು ಬೆಂಗಳೂರಿನ ರಾಜಾಜಿನಗರಕ್ಕೆ ಹೋಗ್ಬೇಕು. ಇಲ್ಲಿ ನೀವೆಲ್ಲೂ ಸವಿಯದ ವೆರಿ ವೆರಿ ಸ್ಪೆಷಲ್ ತಂದೂರಿ ಚಾಹಿ ಸಿಗುತ್ತೆ.
ಹೌದು, ರಾಜಾಜಿನಗರದಲ್ಲಿ ತಂದೂರಿ ಚಾಯ್ ಪಾಯಿಂಟ್ ಅಂತ ಒಂದು ಟೀ ಸ್ಟಾಲ್ ಇದೆ. ಇಲ್ಲಿನ ವಿಶೇಷತೆಯೇ ತಂದೂರಿ ಚಾಹಿ. ಇದರ ವಿಶೇಷತೆ ಏನಪ್ಪಾ ಅಂದ್ರೆ ಮಸಾಲಾ ಟೀ ಮಾಡಿ ಅದನ್ನು ಮಡಿಕೆಯಲ್ಲಿ ಇಟ್ಟು ಕೆಲವು ಗಂಟೆಗಳ ನಂತರ ಮತ್ತೆ ಇದನ್ನು ಮಡಿಕೆಯಲ್ಲಿ ಬಿಸಿ ಮಾಡಿ ಗ್ರಾಹಕರಿಗೆ ಕೊಡ್ತಾರೆ. ಎರಡನೇ ಬಾರಿ ಬಿಸಿ ಮಾಡುವುದರಿಂದ ಮಸಾಲೆ ಫ್ಲೇವರ್ ಹಾಗೂ ಮಡಿಕಿ ಫ್ಲೇವರ್ ಮಿಕ್ಸ್ ಆಗಿ ಮತ್ತೊಂದು ಡಿಫ್ರೆಂಟ್ ರುಚಿಗೆ ಸಿಗತ್ತೆ. ಇನ್ನೂ ಸ್ಪೆಷಲ್ ಏನಂದ್ರೆ, ಗ್ರಾಹಕರಿಗೆ ಮಾಮೂಲಿ ಲೋಟದಲ್ಲಿ ಈ ಟೀ ಕೊಡಲ್ಲ.. ಬದಲಾಗಿ ಮಣ್ಣಿನ ಲೋಟದಲ್ಲಿ ಕೊಡ್ತಾರೆ.
ಇನ್ನು, ಈ ತಂದೂರಿ ಟೀ ರುಚಿಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಬಹಳ ಒಳ್ಳೆಯದು .ಹಿಂದಿನ ಕಾಲದಲ್ಲಿ ಮಣ್ಣಿನ ಮಡಿಕೆ ಉಪಯೊಗಿಸಿ ಅಡುಗೆ ಮಾಡುತ್ತಿದ್ದರು. ಅದೇ ಕಾನ್ಸೆಪ್ಟ್ ಇಟ್ಟುಕೊಂಡು ಈ ಟೀ ತಯಾರಿಸಲಾಗುತ್ತಿದೆ.ಇದು ಸಕ್ಕರೆ ಕಾಯಿಲೆ ಇರುವ ಜನರಿಗೆ,ತುಂಬಾ ಒಳಿತಂತೆ.
ಈ ತಂದೂರಿ ಟೀ ಮಹಾರಾಷ್ಟ್ರದ ಪುಣೆಯಲ್ಲಿ ಸಿಕ್ಕಾಪಟ್ಟೆ ಫೇಮಸ್. ಇಲ್ಲಿ ಹೆಚ್ಚಾಗಿ ಈ ಟೀ ಮಾಡ್ತಾರೆ. ಅದೇ ಕಾನ್ಸೆಪ್ಟ್ ನಲ್ಲಿ ತಂದೂರಿ ಟೀ ಪಾಯಿಂಟ್ನವರು ಬೆಂಗಳೂರಿಗೆ ಈ ಸ್ಪೆಷಲ್ ಟೀಯನ್ನು ಇಂಟ್ರಡ್ಯೂಸ್ ಮಾಡಿದ್ದಾರೆ. ನೀವೊಮ್ಮೆ ಫ್ರೀ ಮಾಡ್ಕೊಂಡು ಅಲ್ಲಿಗೆ ಹೋಗಿ ಟೀ ಕುಡಿದ್ರೆ ಮತ್ತೆ ಮತ್ತೆ ಹೋಗ್ತಾನೇ ಇರ್ತೀರಿ.
-ಚರಿತ ಪಟೇಲ್ 

ಇಲ್ಲಿದೆ ಬೋನ್ಸಾಯ್​ ಗಿಡದ ಬಗ್ಗೆ ನೀವು ತಿಳಿಯದ ವಿಶೇಷತೆಗಳು

0

ಇತ್ತೀಚಿನ ದಿನಗಳಲ್ಲಿ ಯಾವುದೇ ಮಾಲ್​ಗಳಿಗೆ ಹೋದರೂ ಅಥವಾ ಸೂಪರ್ ಮಾರ್ಕೆಟ್​ಗಳಿಗೆ ಹೋದರೂ ಎಲ್ಲೆಡೆಯೂ ಬೋನ್ಸಯ್ ಗಿಡಗಳನ್ನು ನೋಡುತ್ತೇವೆ. ನೋಡಲು ಆರ್ಟಿಫಿಶಿಯಲ್​ನಂತೆ ಕಾಣುವ ಈ ಗಿಡದ ವೈಶಿಷ್ಟ್ಯತೆ ಏನು ಅಂತ ಎಷ್ಟೋ ಜನರಿಗೆ ಗೊತ್ತೇ ಇಲ್ಲ. 

ಬೋನ್ಸಯ್ ಗಿಡ ಮೊದಲು ಪ್ರಪಂಚಕ್ಕೆ ಪರಿಚಯಿಸಿದವರು ಜಪಾನಿಗರು. ದೊಡ್ಡ ದೊಡ್ಡ ಮರಗಳನ್ನು ಚಿಕ್ಕದಾಗಿಯೇ ಮನೆಗಳಲ್ಲಿ ಬೆಳೆಸಬಹುದು ಎಂದು ಪ್ರಪಂಚಕ್ಕೆ ತಿಳಿಸಿಕೊಟ್ಟವರು ಜಪಾನಿಗರು. ಇದನ್ನು ಬೆಳೆಸುವುದೂ ಒಂದು ಕಲೆ. ಇತ್ತೀಚಿನ ದಿನಗಳಲ್ಲಿ ಭಾರತೀಯರು ಬೋನ್ಸಾಯ್​ಗೆ ಮನಸೋತಿದ್ದು ತಮ್ಮ ತಮ್ಮ ಮನೆಗಳಲ್ಲಿ ಬೋನ್ಸಯ್ ಗಿಡಗಳನ್ನು ಬೆಳೆಸಲು ಶುರು ಮಾಡಿದ್ದಾರೆ. ಬೋನ್ಸಯ್ ಗಿಡಕ್ಕೆ ಅಂತಾ ವಿಶೇಷತೆ ಏನಿದೆ ಅಂತ ಕುತೂಹಲ ಮೂಡೋದು ಸಹಜ. ಬೋನ್ಸಾಯ್​ನ ವಿಶೇಷತೆ ಬಗ್ಗೆ ಕೇಳಿದ್ರೆ ಖಂಡಿತ ಆಶ್ಚರ್ಯವಾಗುತ್ತೆ!

ಬೋನ್ಸಯ್ ಗಿಡಕ್ಕೆ 1 ಸಾವಿರ ರೂಪಾಯಿಂದ 1 ಲಕ್ಷದ ವರೆಗೆ ಬೆಲೆ ಇದೆ. ಇದನ್ನು ಮನೆಯಲ್ಲಿ ಬೆಳೆಸುವು ಕಷ್ಟದ ವಿಷಯವೇನಲ್ಲ. ದಿನದ ಸ್ವಲ್ಪ ಹೊತ್ತು ಗಿಡಕ್ಕಾಗಿ ವಿನಿಯೋಗಿಸಿದ್ರೆ ನೀವೂ ಬೋನ್ಸಾಯ್​ ಬೆಳೆಸಬಹುದು. ಇದನ್ನು ಬೆಳೆಸುವುದರಿಂದ ಮನೆಗೆ ಹಾಗೂ ಮನಸ್ಸಿಗೆ ತುಂಬಾ ಪ್ರಯೋಜನವಿದೆ.

 • ಬೋನ್ಸಾಯ್ ಗಿಡವನ್ನು ಮನೆಯಲ್ಲಿ ಇಟ್ಟು ಪ್ರತಿದಿನ ಅದರ ಮುಂದೆ ಒಂದಿಷ್ಟು ಸಮಯ ಕಳೆಯುವುದರಿಂದ ರಕ್ತದ ಒತ್ತಡ ಕಡಿಮೆಯಾಗುತ್ತದೆ ಎಂದು ವೈದ್ಯರೇ ಹೇಳುತ್ತಾರೆ.
 • ಬೋನ್ಸಾಯ್ ಗಿಡ ಮನೆಯಲ್ಲಿ ಇರುವುದರಿಂದ ಮನಸ್ಸಿಗೆ ಹೆಚ್ಚು ಶಾಂತಿ ದೊರೆಯುತ್ತದೆ.
 • ಈ ಗಿಡವನ್ನು ವಾಸ್ತು ಗಿಡ ಎಂದೂ ಕರೆಯುತ್ತಾರೆ. ಈ ಗಿಡ ಮನೆಯಲ್ಲಿ ಇರುವುದರಿಂದ ನೆಗೆಟಿವ್ ಎನರ್ಜಿ ಕಡಿಮೆ ಆಗುತ್ತದೆ ಎಂಬುವುದು ಜಪಾನಿಗರ ನಂಬಿಕೆ.
 • ಬೊನ್ಸಾಯ್ ಗಿಡವನ್ನು ಮನೆಯೊಳಗೆ ಬೆಳೆಸುವುದರಿಂದ ಆಮ್ಲಜನಕ ಪ್ರಮಾಣವನ್ನು ಹೆಚ್ಚಿಸುತ್ತದೆ, ಹಾಗೂ ನಮ್ಮ ಸುತ್ತಮುತ್ತಲ ವತಾವರಣದ ಗಾಳಿಯನ್ನು ಶುದ್ಧೀಕರಿಸುತ್ತದೆ.
 • ಈ ಗಿಡ ಬೆಳೆಸುವುದರಿಂದ ನಿಧಾನವಾಗಿ ನಮ್ಮಲಿ ಸಹನಾ ಶಕ್ತಿ ಮತ್ತು ತಾಳ್ಮೆಯೂ ಹೆಚ್ಚುತ್ತದೆ.

ಬೋನ್ಸಾಯ್​​ ಗಿಡ ಬೆಳೆಸಲು ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಗಿಡವನ್ನು ಒಮ್ಮೆ ಮನೆಗೆ ತಂದಮೇಲೆ ಪ್ರತಿದಿನ ಸಮಯ ಸಿಕ್ಕಾಗ ನೀರು ಪೂರೈಸಿ. ಅತೀ ಹೆಚ್ಚು ಬಿಸಿಲು ಬೀಳುವಲ್ಲಿ ಗಿಡವನ್ನು ಇಡದಿರಿ. ಹೆಚ್ಚೇನೂ ಖರ್ಚಿಲ್ಲದೆ ಬೋನ್ಸಾಯ್​ ಬೆಳೆಸಬಹುದಾಗಿದ್ದು, ಮನಸ್ಸಿಗೆ ಆಹ್ಲಾದಕರವಾಗಿರುವುದಲ್ಲದೆ, ಮನೆಯ ಅಂದವನ್ನೂ ಹೆಚ್ಚಿಸುತ್ತದೆ.

ಕ್ಯಾರೆಟ್​ ಎಷ್ಟೆಲ್ಲಾ ಉಪಕಾರಿ ಗೊತ್ತಾ..?

0

ಕ್ಯಾರೆಟ್ ಅಂದ ಕೂಡಲೇ ನಮಗೆ ನೆನಪಾಗೋದು ಕ್ಯಾರೆಟ್ ಹಲ್ವ, ಕ್ಯಾರೆಟ್​ ಪಲ್ಯ ಸೇರಿದಂತೆ ಕ್ಯಾರೆಟ್​ನಿಂದ ತಯಾರಿಸೋ ಹಲವು ಖಾದ್ಯಗಳು. ಕ್ಯಾರೆಟ್​​ನ್ನು ದಿನನಿತ್ಯದ ಅಡುಗೆಗೆ ಸಾಮಾನ್ಯವಾಗಿ ಬಳಸುತ್ತೇವೆ. ಇನ್ನು ಕೆಲವರಿಗೆ ಕ್ಯಾರೆಟ್ ಹಸಿಯಾಗಿ ತಿನ್ನೋಕೆ ಇಷ್ಟವಾಗುತ್ತೆ. ಇನ್ನೊಂದಷ್ಟು ಜನ ಕ್ಯಾರೆಟ್​ನ್ನು ಅಷ್ಟಾಗಿ ನೆಚ್ಚಿಕೊಳ್ಳುವುದಿಲ್ಲ. ಸಾಂಬಾರಿನಲ್ಲಿ ಸಿಕ್ಕರೂ ಎತ್ತಿಡುವವರೂ ಇದ್ದಾರೆ. ಹಾಗೇ ಊಟದ ಜೊತೆಗೆ ಸೇರಿಸಿ ತಿನ್ನುವವರೂ ಇದ್ದಾರೆ. ಅಂತೂ ಕ್ಯಾರೆಟ್​ ಬಾಯಿಗೆ ಎಷ್ಟು ರುಚಿಯೋ ಆರೋಗ್ಯಕ್ಕೂ ಅಷ್ಟೇ ಸಹಕಾರಿ.

ಕ್ಯಾರೆಟ್​​ನಿಂದ ಆಗುವ ಪ್ರಯೋಜನಗಳೇನು ಗೊತ್ತಾ..?

 • ಕ್ಯಾರೆಟ್​ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್​ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಜನ ವಿಟಮಿನ್​ ಕೊರತೆಯಿಂದ ಟ್ಯಾಬ್ಲೆಟ್​ಗಳ ಮೊರೆ ಹೋಗುತ್ತಿದ್ದಾರೆ. ಆದರೆ ದಿನಕ್ಕೆ ಒಂದು ಕ್ಯಾರೆಟ್ ಸೇವಿಸಿದರೂ ನಿಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್ ಪಡೆಯಬಹುದು. ಪ್ರತಿದಿನ ಒಂದು ಕ್ಯಾರೆಟ್ ಸೇವಿಸುವುದರಿಂದ ದೇಹಕ್ಕೆ ಬೇಕಾಗಿರುವ ವಿಟವಿನ್ ‘ಎ` ಅಂಶ ದೊರೆಯುತ್ತದೆ.
 • ಪ್ರತಿದಿನ ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಸೇವಿಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಮತ್ತು ನೀವು ಯಂಗ್ ಆಗಿ ಕಾಣುವಂತೆ ಮಾಡುತ್ತದೆ.

 • ಕ್ಯಾರೆಟ್ ಸೇವನೆ ಕ್ಯಾನ್ಸರ್​ಗೂ ಉತ್ತಮ ಮದ್ದು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬಲಿಯಾಗುತ್ತಿರುವುದು ಚೆಸ್ಟ್ ಕ್ಯಾನ್ಸರ್​​ಗೆ. ಕ್ಯಾರೆಟ್ ಸೇವನೆಯಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮತ್ತು ಈ ತರಹದ ಖಾಯಿಲೆಗಳಿಂದ ನಮ್ಮನ್ನು ದೂರವಿರಿಸುತ್ತದೆ.
 • ಎಲ್ಲರು ಹೆದರುವುದು ತ್ವಚೆಯ ಟ್ಯಾನ್​ಗೆ. ಕ್ಯಾರೆಟ್ ಸೇವನೆಯಿಂದ ಸೂರ್ಯನ ಕಿರಣದಿಂದ ತ್ವಚೆಗೆ ಆಗುವ ಡ್ಯಾಮೇಜ್ ಅನ್ನು ತಡೆಯಬಹುದು.
 • ಕ್ಯಾರೆಟ್ ಸೇವನೆ ತ್ವಚೆಗೆ ಮಾತ್ರವಲ್ಲ ಹೃದಯಕ್ಕೂ ತುಂಬಾ ಒಳ್ಳೆಯದು. ಕ್ಯಾರೆಟ್​​ನಲ್ಲಿ ಕೊಬ್ಬಿನ ಅಂಶವನ್ನು ಕರಗಿಸುವ ಶಕ್ತಿ ಇದೆ. ದೇಹದಲ್ಲಿರುವ ಅನಗತ್ಯ ಕೊಬ್ಬು ನಿವಾರಣೆಗೆ ಕ್ಯಾರೆಟ್ ಸಹಕಾರಿ. ಇದು ದೇಹದ ರಕ್ತ ಸಂಚಾರಕ್ಕೂ ಅನುಕೂಲಕರವಾಗಿದೆ.
 • ಪ್ರತಿದಿನ ಬೆಳಗ್ಗೆ ಕ್ಯಾರೆಟ್ ಸೇವನೆಯಿಂದ ನಿಮ್ಮ ಹಲ್ಲುಗಳು ಗಟ್ಟಿಯಾಗುತ್ತವೆ ಮತ್ತು ಒಸಡುಗಳು ಬಲಗೊಳ್ಳುತ್ತವೆ.

 • ಕ್ಯಾರೆಟ್​​ನಲ್ಲಿ ಕಬ್ಬಿಣ ಅಂಶ ಹೆಚ್ಚಾಗಿರುತ್ತದೆ. ಕ್ಯಾರೆಟ್​​ ಸೇವನೆ ಸ್ಟ್ರೋಕ್(ಪಾಶ್ವವಾಯು) ಆಗುವುದನ್ನೂ ತಡೆಯುತ್ತದೆ.

ಕ್ಯಾರೆಟ್​ ಜ್ಯೂಸ್​ ರುಚಿಸದಿದ್ದರೆ, ಅದನ್ನು ಚೆನ್ನಾಗಿ ತೊಳೆದು ಹಸಿಯಾಗಿಯೂ ಸೇವಿಸಬಹುದು. ಹಾಗೇ ಕ್ಯಾರೆಟ್​ ದೋಸೆ ಸೇರಿ, ಕ್ಯಾರೆಟ್​ ಹಲ್ವ, ಕ್ಯಾರೆಟ್​ ಪಲ್ಯ ಮೊದಲಾದವುಗಳನ್ನೂ ಹೆಚ್ಚಾಗಿ ಬಳಸಿ.

ಹೆಣ್ಮಕ್ಕಳ ಫೇವರೇಟ್ ಗ್ಲಾಸ್​ಬೀಡ್ಸ್​ ಜ್ಯುವೆಲರಿ

0

ಫ್ಯಾಶನ್ ಅನ್ನೋ ದುನಿಯಾನೇ ಹಾಗೇ. ಇಲ್ಲಿ ದಿನಕ್ಕೊಂದು ಟ್ರೆಂಡ್ ಬರುತ್ತೆ ಹೋಗುತ್ತೆ. ಮತ್ತೆ ಅದೇ ಟ್ರೆಂಡ್ ರಿಪೀಟ್ ಆಗುತ್ತೆ. ಫ್ಯಾಶನ್ ಅನ್ನೋದು ಒಂಥರಾ ನಶೆ ಇದ್ದ ಹಾಗೇ. ಒಮ್ಮೆ ಅದರ ಹುಚ್ಚ ಹಿಡಿದ್ರೆ ಬಿಡೋದು ಬಹಳ ಕಷ್ಟ. ಅದರಲ್ಲೂ ಯುವಜನರಿಗೆ ಫ್ಯಾಶನ್ ಅನ್ನೋ ಮೋಹ ಹೆಚ್ಚು. ಅದರಲ್ಲೂ ನಮ್ಮ ಹೆಣ್ಮಕ್ಕಳ ಕಥೆ ಕೇಳ್ಬೇಕಾ? ಹಾಕೋ ಓಲೆ, ಧರಿಸೋ ಬಟ್ಟೆ ,ಸರಗಳಲ್ಲಿ ಏನ್ ಹೊಸದು ಬಂದಿದೆ ಅಂತಾ ಹುಡುಕುತ್ತಲೇ ಇರ್ತೀವಿ. ಅದರಲ್ಲೂ ಫ್ಯಾಶನ್ ಆಭರಣಗಳ ಕಡೆ ಒಲವು ಸ್ವಲ್ಪ ಜಾಸ್ತಿನೇ..ಹೆಣ್ಣು ಮಕ್ಕಳಿಗೆ ಹೆಚ್ಚು ಇಷ್ಟವಾಗೋದು ಗ್ಲಾಸ್ ಬೀಡ್ಸ್ ಆಭರಣಗಳು..
ಎಲ್ಲ ಧಿರಿಸುಗಳಿಗೂ ಒಪ್ಪುತ್ತೆ! : ಗ್ಲಾಸ್ ಬೀಡ್ಸ್ ಆಭರಣಗಳು ಎಲ್ಲಾ ಧಿರಿಸುಗಳಿಗೆ ಹಾಗೇ ಎಲ್ಲಾ ಸಂದರ್ಭಗಳಲ್ಲೂ ಒಪ್ಪುವಂತಹ ಫ್ಯಾಶನ್ ಆಭರಣಗಳು. ನೀವು ಗ್ಲಾಸ್ ಬೀಡ್ಸ್ ಆಭರಣಗಳನ್ನು ಸಾಂಪ್ರದಾಯಿಕ ಉಡುಗೆಗಳಿಗೂ ಧರಿಸಬಹುದು. ಇತ್ತ ಫ್ಯಾಶನ್ ಉಡುಗೆಗಳಿಗೂ ಧರಿಸಬಹುದು. 


ಆಯ್ಕೆ ಹೀಗಿರಲಿ: ಇನ್ನು ಗ್ಲಾಸ್ ಬೀಡ್ಸ್ ಆಭರಣಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಒಂದಷ್ಟು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಿ. ಸರದ ಮಣಿಗಳ ಕ್ವಾಲಿಟಿಗಳನ್ನು ಪರಿಶೀಲಿಸಿಕೊಳ್ಳಿ. ಆದಷ್ಟು ಎಲ್ಲ ಬಣ್ಣದ ಬಟ್ಟೆಗಳಿಗೆ ಒಪ್ಪುವಂತಹ ಬಣ್ಣದ ಸರಗಳನ್ನು ಆಯ್ದುಕೊಳ್ಳಿ. ಇನ್ನು ಸರದಲ್ಲಿ ಪೆಂಡೆಂಟ್ ಇದ್ದರೆ ಧರಿಸುವಾಗ ಅದರ ಲುಕ್ ಸಕತ್ತಾಗಿರುತ್ತೆ. ಪಾರ್ಟಿ ವೇರ್ ಬಟ್ಟೆಗಳಿಗೆ ಕೊಳ್ಳೋದಾದ್ರೆ ಪೆಂಡೆಂಟ್ ಇಲ್ಲದ ಸರಗಳೇ ಹೆಚ್ಚು ಸೂಕ್ತ. ಸಾಂಪ್ರದಾಯಿಕ ಉಡುಗೆಗಳಿಗೆ ಪೆಂಡೆಂಟ್ಸ್ ಇದ್ದರೆ ಚೆನ್ನ..ಸರದ ಜೊತೆ ಅದಕ್ಕೆ ಒಪ್ಪುವ ಓಲೆ ಇದ್ದರೆ ಇನ್ನೂ ಚೆನ್ನಾಗಿರುತ್ತೆ.
ನಿರ್ವಹಣೆ ಹೇಗೆ? 
ಗ್ಲಾಸ್ ಬೀಡ್ಸ್ ಅಂದರೆ ಬಿದ್ದರೆ ಒಡೆದು ಹೋಗುತ್ತೆ ಅನ್ನೋ ಭಯ ಬೇಡ. ಅದನ್ನು ನಿರ್ವಹಣೆ ಮಾಡೋದು ತುಂಬಾ ಸರಳ. ಬಳಸಿದ ಬಳಿಕ ಒಂದು ಕಾಟನ್ ಬಟ್ಟೆಯಲ್ಲಿ ಹಾಗೇ ಸುತ್ತಿ ಇಟ್ಟರೆ ಅಷ್ಟೇ ವರ್ಷವಾದ್ರೂ ಕೂಡ ಹೊಸತರಂತೆ ಪಳಪಳ ಹೊಳೆಯುತ್ತೆ ನಿಮ್ಮ ನೆಚ್ಚಿನ ಆಭರಣ.


ವಯಸ್ಸಿನ ಹಂಗಿಲ್ಲ
ಗ್ಲಾಸ್ ಬೀಡ್ಸ್ ಆಭರಣಗಳಿಗೆ ವಯಸ್ಸಿನ ಹಂಗಿಲ್ಲ. ಪುಟಾಣಿ ಮಕ್ಕಳಿಂದ ಹಿಡಿದು ಮಕ್ಕಳವರೆಗೂ ಯಾರೂ ಬೇಕಾದ್ರೂ ಈ ಆಭರಣಗಳು ಧರಿಸಬಹುದು. ಮಕ್ಕಳಿಗಾದ್ರೆ ಸಣ್ಣ ಗಾತ್ರದ ಬೀಡ್ಸ್ ಗಳು ಡಿಫ್ರೆಂಟ್ ಲುಕ್ ಕೊಡುತ್ತೆ.
ಹಾಗಾದ್ರೆ ಇನ್ಯಾಕೆ ತಡ ಅಲ್ವಾ? ನಿಮ್ಮ ನೆಕ್ಟ್ ಫ್ಯಾಶನ್ ಟ್ರೆಂಡ್ ಗ್ಲಾಸ್ ಬೀಡ್ಸ್ ಆಭರಣಗಳಾಗಿರಲಿ. ನಿಮ್ಮಿಷ್ಟದ ಆಭರಣ ಆಯ್ಕೆ ಮಾಡ್ಕೊಂಡು ಮಿರ ಮಿರ ಮಿಂಚಿ… ಒಂದಷ್ಟು ಮಂದಿಗೆ ನೀವೇ ಸ್ಟೈಲ್ ಐಕಾನ್ ಆಗಿ…
-ನವ್ಯ ಅಯ್ಯನಕಟ್ಟೆ

ದಾಳಿಂಬೆ ಹಣ್ಣಿನಿಂದ ದೂರವಾಗುತ್ತೆ ಒಣತ್ವಚೆ ಸಮಸ್ಯೆ

0

ಚಳಿಗಾಲದಲ್ಲಿ ಒಣಹವೆಯಿಂದ ಸಹಜವಾಗಿಯೇ ಕಿರಿಕಿರಿಯಾಗುತ್ತದೆ. ತ್ವಚೆಯನ್ನು ಮಾಯಿಶ್ಚರೈಸ್​ ಆಗಿರಿಸುವುದು, ಹೆಚ್ಚು ಹಣ್ಣಿನ ರಸಗಳನ್ನು ಸೇವಿಸುವುದು ಅಗತ್ಯ. ಚಳಿಗಾಲದಲ್ಲಿ ಹೆಚ್ಚು ಫ್ರೆಶ್​ ಹಣ್ಣುಗಳೂ ದೊರೆಯುತ್ತವೆ. ನಮ್ಮ ದೈನಂದಿನ ಆಹಾರದಲ್ಲಿ ಆದಷ್ಟು ಹೆಚ್ಚು ಹಣ್ಣಿನ ಸಲಾಡ್, ಹಣ್ಣಿನ ರಸವನ್ನು ಉಪಯೋಗಿಸುವುದು ಉತ್ತಮ. ದಾಳಿಂಬೆ ಎಲ್ಲರೂ ಇಷ್ಟಪಡುವ ಹಣ್ಣು. ದಾಳಿಂಬೆ ಹಣ್ಣು ಒಣಹವೆಯಲ್ಲಿ ಆರೋಗ್ಯಕರ ಮಾತ್ರವಲ್ಲದೆ, ಇದು ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್​ ಕೂಡಾ ಒದಗಿಸುತ್ತದೆ. ದಾಳಿಂಬೆ ಹಣ್ಣನ್ನು ನಿಮ್ಮ ದೈನಂದಿನ ಆಹಾರದಲ್ಲಿ ಎಲ್ಲಿ, ಹೇಗೆ ಬಳಸಿಕೊಳ್ಳಬೇಕು ಎನ್ನುವ ಕುರಿತು ಇಲ್ಲಿದೆ ಕೆಲವು ಸರಳ ಟಿಪ್ಸ್​:

 • ಒಂದು ದಾಳಿಂಬೆ ಹಣ್ಣು 230 ಕಾಲೊರಿ, 11 ಗ್ರಾಂನಷ್ಟು ಫೈಬರ್, ಹಾಗೂ ವ್ಯಕ್ತಿಯೊಬ್ಬನಿಗೆ ಬೇಕಾದ ಶೇ.50ರಷ್ಟು ವಿಟಮಿನ್​ನಲ್ಲಿ ಶೇ.20ನ್ನು ನಿಮಗೆ ಒದಗಿಸುತ್ತದೆ.
 • ದಾಳಿಂಬೆ ರಸ ಕುಡಿಯುವ ಬದಲು ಹಣ್ಣನ್ನು ಹಾಗೇ ತಿನ್ನುವುದು ಹೆಚ್ಚು ಉತ್ತಮ. ಹಣ್ಣು ರಸದ ರೂಪಕ್ಕೆ ಮಾರ್ಪಟ್ಟಾಗ ಹಣ್ಣಿನಲ್ಲಿರುವ ಫೈಬರ್ ಅಂಶ ಇಲ್ಲದಾಗುತ್ತದೆ.
 • ನಿಮ್ಮ ದೈನಂದಿನ ಆಹಾರದಲ್ಲಿ ಒಂದು ದಾಳಿಂಬೆ ಹಣ್ಣಾದರೂ ಸೇರಿಕೊಂಡಿರಲಿ. ಹಣ್ಣಿನ ಸಲಾಡ್​ನ ಮೇಲೆ ದಾಳಿಂಬೆ ಬೀಜಗಳನ್ನು ಸೇರಿಸಿ.

 • ನೀವೇನಾದರೂ ಐಸ್​ಕ್ರೀಂ ಸೇವಿಸುತ್ತಿದ್ದರೆ ಅದರ ಜೊತೆಗೂ ದಾಳಿಂಬೆ ಹಣ್ಣನ್ನು ಸೇರಿಸಿಕೊಳ್ಳಿ. ರುಚಿಯಾಗಿರುತ್ತದೆ ಮತ್ತು ಆರೋಗ್ಯಕ್ಕೂ ಉತ್ತಮ.
 • ಅತಿಯಾದ ಸಿಹಿ ಇಲ್ಲದ ದಾಳಿಂಬೆ ಹಣ್ಣು ಬಾಯಿಗೆ ಹಿತವಾಗಿ ರುಚಿಸುತ್ತದೆ. ಇದು ಹೃದಯದ ಆರೋಗ್ಯಕ್ಕೂ ಹೆಚ್ಚು ಸಹಕಾರಿ. ಹಾಗೇ ರಕ್ತದ ಒತ್ತಡ ನಿಯಂತ್ರಿಸುವುದಕ್ಕೂ ದಾಳಿಂಬೆ ಹಣ್ಣು ನೆರವಾಗುತ್ತದೆ.
 • ದಾಳಿಂಬೆ ಹಣ್ಣನ್ನು ಸೇವಿಸುವುದು ಅಜೀರ್ಣದ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ. ನೀವು ಸೇವಿಸುವ ಆಹಾರ ಜೀರ್ಣವಾಗಿ ಆರೋಗ್ಯಕರವಾಗಿರಲು ದಾಳಿಂಬೆ ಹಣ್ಣನ್ನು ಸೇವಿಸುವುದು ಉತ್ತಮ. ಆಹಾರದ ನಂತರ ಹಣ್ಣು ತಿನ್ನುವಾಗ ಸ್ವಲ್ಪ ದಾಳಿಂಬೆ ಬೀಜವನ್ನೂ ಸೇವಿಸಿ.
 • ಸ್ನಾಕ್ಸ್​, ಫಾಸ್ಟ್​ಫುಡ್​ನ್ನು ಚಳಿಗಾಲದಲ್ಲಿ ಆದಷ್ಟು ದೂರವಿರಿಸಿ. ಬದಲಿಗೆ ದಾಳಿಂಬೆ ಹಣ್ಣು ಅಥವಾ ರಸ ಕುಡಿಯಿರಿ.
 • ಪಲಾವ್​, ಚಿತ್ರಾನ್ನದಂತಹ ಅನ್ನದ ಬ್ರೇಕ್​ಫಾಸ್ಟ್​ ಸೇವಿಸುವಾಗ ಒಂದಷ್ಟು ದಾಳಿಂವೆ ಬೀಜಗಳೂ ಇರಲಿ. ಚಿತ್ರಾನ್ನ, ಪಲಾವ್ ಜೊತೆ (ಸರ್ವ್​ ಮಾಡುವ ಮೊದಲು) ಒಂದಷ್ಟು ದಾಳಿಂಬೆ ಬೀಜವನ್ನೂ ಸೇರಿಸಿ. ಒಣಹವೆಗೆ ಆಹಾರ ಡ್ರೈ ಎನಿಸುವುದನ್ನು ಇದು ತಪ್ಪಿಸುತ್ತದೆ.

 • ನಿಮ್ಮ ಲಂಚ್​ ಬಾಕ್ಸ್​ನಲ್ಲೂ ದಾಳಿಂಬೆಗೆ ಜಾಗವಿರಲಿ. ಚಳಿಗಾಲದಲ್ಲಿ ತ್ವಚೆ ಹೆಚ್ಚು ಒಣಗುವುದರಿಂದ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮೂರು ಹೊತ್ತೂ ಆಹಾರದಲ್ಲಿ ಸ್ವಲ್ಪ ದಾಳಿಂಬೆ ಹಣ್ಣು ಸೇವಿಸುವುದು ಉತ್ತಮ.
 • ದಾಳಿಂಬೆ ಹಣ್ಣು ಸೇವಿಸುವುದರಿಂದ ನಿಮ್ಮ ತ್ವಚೆ ಒಣಗುವುದನ್ನು ತಪ್ಪಿಸಬಹುದು. ನಿಯಮಿತವಾಗಿ ದಾಳಿಂಬೆ ಹಣ್ಣನ್ನು ಸೇವಿಸುತ್ತಾ ಬಂದಲ್ಲಿ ತ್ವಚೆ ಮಾಯಿಶ್ಚರೈಸ್ ಆಗಿರುತ್ತದೆ.
 • ತ್ಚಚೆ ಸುಕ್ಕುಗಟ್ಟುವುದನ್ನು ತಡೆಯಲು ದಾಳಿಂಬೆ ಹಣ್ಣು ಹೆಚ್ಚು ಉಪಕಾರಿ. ವಯಸ್ಸಾದಂತೆ ರಿಂಕಲ್ಸ್​ ಮೂಡುವುದು ಸಾಮಾನ್ಯ. ನೈಸರ್ಗಿಕವಾಗಿ ಇದನ್ನು ಸಂಪೂರ್ಣವಾಗಿ ತಡೆಯುವುದು ಅಸಾಧ್ಯವಾದರೂ ದಾಳಿಂಬೆ ಸೇವಿಸುವುದರಿಂದ ನಿಮ್ಮ ತ್ವಚೆ ಹೆಚ್ಚು ಆರೋಗ್ಯಕರವಾಗಿರುತ್ತದೆ. ಹಾಗೇ ದಾಳಿಂಬೆ ರಸ ಸೇವಿಸುವುದು ನಿಮ್ಮ ತ್ವಚೆಯ ಕಾಂತಿ ಹೆಚ್ಚಿಸುತ್ತದೆ.

ಚಳಿಗಾಲದಲ್ಲಿ ಡ್ರೈಸ್ಕಿನ್ ಸಮಸ್ಯೆಗೆ ಇಲ್ಲಿದೆ ಸುಲಭ ಉಪಾಯ..!

0

ಚಳಿಗಾಲ ಅಂದ್ರೆ ಸಾಕು ಎಲ್ಲರಿಗೂ ತ್ವಚೆಯದ್ದೆ ಚಿಂತೆ. ಒಣಗುವ ಚರ್ಮದಿಂದ ಮುಕ್ತಿ ಪಡೆಯುವುದು ಹೇಗೆ ಎಂಬುದೇ ಎಲ್ಲರ ತಲೆನೋವು. ಎಷ್ಟೋ ಜನರು ಇದರಿಂದ ಪರಿಹಾರ ಪಡೆಯಲು ವೈದ್ಯರ ಮೊರೆ ಹೋಗುತ್ತಾರೆ. ಮತ್ತೆ ಕೆಲವರು ಪಾರ್ಲರ್ ಗಳ ಕಡೆ ಹೊಗುತ್ತಾರೆ. ನಮ್ಮ ಚರ್ಮವನ್ನು ಚಳಿಗಾಲದಲ್ಲಿ ಮೃದುವಾಗಿರಿಸಲು ನಮ್ಮ ಮನೆಯಲ್ಲಿರುವ ಸಾಮಾನ್ಯ ಸಾಮಾಗ್ರಿಗಳೇ ಸಾಕು.

ಪ್ರತಿ ರಾತ್ರಿ ಕೇವಲ 2 ನಿಮಿಷ ಸಮಯಕೊಟ್ಟರೆ ಸಾಕು ನಮ್ಮ ತ್ವಚೆಯನ್ನು ಚಳಿಗಾಲದಲ್ಲಿಯೂ ಸಹ ಸುಂದರವಾಗಿಟ್ಟುಕೊಳ್ಳಬಹುದು.

 • ಮಲಗುವ ಮುನ್ನ ಹಾಲಿನ ಕೆನೆಯನ್ನು ಮುಖಕ್ಕೆ ಉಜ್ಜಿ ಮರುದಿನ ಬೆಳ್ಳಗ್ಗೆ ತೊಳೆಯಿರಿ. ಹಾಲಿನ ಕೆನೆಯಲ್ಲಿ ಜಿಡ್ಡಿನ ಅಂಶ ಇರುವುದರಿಂದ ಇದು ನಿಮ್ಮ ಮಖಕ್ಕೆ ಮೃದುತ್ವದ ಜೊತೆ ಕಾಂತಿಯನ್ನು ಕೊಡುತ್ತದೆ.
 • ಎರಡು ದಿನಕೊಮ್ಮೆ ತಲೆಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮಲಗಿ. ಇದು ಚಳಿಗಾಲದಲ್ಲಿ ತ್ವಚೆ ಹಾಗೂ ಕೂದಲಿಗೆ ಉತ್ತಮ .ಹಣ್ಣಿನ ಸಿಪ್ಪೆಯಿಂದ ಬೆಳ್ಳಗ್ಗೆ ಮತ್ತು ಸಂಜೆ ಮಸಾಜ್ ಮಾಡುತ್ತಿರಿ. ಇದರಿಂದ ನಿಮ್ಮ ತ್ವಚೆಯನ್ನು ನೀವು ಕಾಪಾಡಿಕೊಳ್ಳಬಹುದು.
 • ಆದಷ್ಟು ನಿಮ್ಮ ತ್ವಚೆಯನ್ನು ಒಣಹವೆಗೆ ಒಡ್ಡದಂತೆ ನೋಡಿಕೊಳ್ಳಿ. ಸಾಕ್ಸ್, ಸ್ವೆಟರ್, ಮಫ್ಲರ್ ಗಳನ್ನು ಹೆಚ್ಚಾಗಿ ಬಳಸಿ.
 • ಚಳಿಗಾಲದಲ್ಲಿ ಮೇಕಪ್ ಅನ್ನು ಆದಷ್ಟು ಅವಾಯ್ಡ್ ಮಾಡಿ. ಕೋಲ್ಡ್ ಕ್ರೀಮ್ ಬಳಸಿ.
 • 2 ವೀಲರ್ ಗಳಲ್ಲಿ ಹೋಗುವಾಗ ಮುಖ ಮತ್ತು ಕೂದಲನ್ನು ಆದಷ್ಟು ಕವರ್ ಮಾಡಿ.
 • ನಿಮ್ಮ ದೈನಂದಿನ ಆಹಾರದಲ್ಲಿ ಡ್ರೈ ಫ್ರೂಟ್ಸ್ ಹಾಗೂ ಸೊಪ್ಪು ತರಕಾರಿಯನ್ನು ಹೆಚ್ಚು ಸೇವಿಸಿ.

 

ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಎಸ್​​ಬಿಐ

0

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಸೆಲೆಕ್ಟೆಡ್​ ಮೆಚ್ಯುರಿಟೀಸ್​ ಮೇಲೆ ಫಿಕ್ಸ್​ಡ್​ ಡೆಪಾಸಿಟ್ ​ನ ಬಡ್ಡಿದರವನ್ನು ಹೆಚ್ಚಿಸಿದೆ. ಇಂದಿನಿಂದ ಪರಿಷ್ಕೃತ ಬಡ್ಡಿದರ ಫಿಕ್ಸ್​ಡ್​ ಡೆಪೋಸಿಟ್​ ಖಾತೆಗೆ ಅನ್ವಯವಾಗಲಿದೆ ಅಂತ ಎಸ್​ಬಿಐ ತನ್ನ ಅಧಿಕೃತ ವೆಬ್​ಸೈಟ್​​ನಲ್ಲಿ ತಿಳಿಸಿದೆ.
ಶೇ.0.05 ರಿಂದ 0.10 ಅಥವಾ ಬೇಸಿಸ್​ ಪಾಯಿಂಟ್​ ಪ್ರಕಾರ 5-10ರಷ್ಟು ಹೆಚ್ಚಳವಾಗಿದೆ. ಬೇಸಿಸ್ ಪಾಯಿಂಟ್ ಶೇ. 0.01ಗೆ ಸಮಾನಾಗಿದೆ. ಈ ನಿಯಮ 1 ಕೋಟಿ ರೂಪಾಯಿಗಿಂತ ಕಡಿಮೆ ಠೇವಣಿ ಇಟ್ಟಿರುವ ಗ್ರಾಹಕರಿಗೆ ಅನ್ವಯವಾಗಲಿದೆ.

ಆಲೂ ಸಿಪ್ಪೆಯಲ್ಲಿ ಅಡಗಿದೆ ಬ್ಯೂಟಿ

0

ಮಳೆಗಾಲ ಮುಗೀತು ಬೇಸಿಗೆ ಬಂತು.‌ ಬಿಸಿಲಿಗೆ ಮುಖದ ಟ್ಯಾನ್ ಜಾಸ್ತಿಯಾಯ್ತು ಅಂತ ಬ್ಯೂಟಿ‌ ಪಾರ್ಲರ್ ಗೆ ಹೋಗಿ ಸುಮ್ನೆ ದುಡ್ಡು ಖರ್ಚು ಮಾಡ್ತಿದ್ದೀರಾ? ಸುಮ್ನೆ ಟ್ಯಾನ್ ಗೆಲ್ಲಾ ಯಾಕೆ ದುಡ್ಡು ವೇಸ್ಟ್ ಮಾಡ್ತೀರಿ,‌ಮನೇಲಿ ಆಲೂಗಡ್ಡೆ ಇರಲ್ವಾ?

ಹ್ಞೂಂ, ಆಲೂಗಡ್ಡೆ ಸಿಪ್ಪೆಯಿಂದ ಟ್ಯಾನ್  ತೆಗೆಯೋಕೆ ಸಾಧ್ಯ ಇದೆ. ಅದ್ಹೇಗೇ ಅಂತೀರಾ? ಆಲೂ ಸಿಪ್ಪೆ ತೆಗೀರಿ. ಸ್ವಲ್ಪ ನೀರು ಸೇರಿಸಿ ,ಮಿಕ್ಸಿಗೆ ಹಾಕಿ ರುಬ್ಬಿ. ಅದಾದ್ಮೇಲೆ ರುಬ್ಬಿದ ಸಿಪ್ಪೆಗೆ ಜೇನುತುಪ್ಪ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಹಾಗೇ ಬಿಡಿ. ಆಮೇಲೆ ಬೆಚ್ಚಗಿರೋ ನೀರಿಂದ ತೊಳೆದುಕೊಳ್ಳಿ. ಹೀಗೆ ಒಂದ್ ದಿನ ಮಾಡಿದ್ರೆ ನೋ ಯೂಸ್. ವಾರಕ್ಕೆ ಒಂದೆರಡು ಬಾರಿ ಮಾಡಿ ನೋಡಿ, ನಿಮ್ಮ ಟ್ಯಾನ್ ಕ್ಲೀಯರ್ ಆಗಿ, ನಿಮ್ಮ ಮುಖದ ತ್ವಚೆ ಹೆಚ್ಚುತ್ತೆ.

Popular posts